ಅಪ್ಪು 50 ಸಾವಿರದ ಬಟ್ಟೆ ಬಿಟ್ಟು ಬರಿ 600 ರೂಪಾಯಿಯ ಬಟ್ಟೆಯನ್ನು ಧರಿಸುತ್ತಿದ್ದರು ಯಾಕೆ ಗೊತ್ತೆ, ನಿಜಕ್ಕೂ ಎಂತ ಸಾಮಾಜಿಕ ಕಳಕಳಿ ನೋಡಿ..

0

ಪುನೀತ್ ಸರಳರಲ್ಲಿ ಸರಳ, ತಾನೊಬ್ಬ ಕನ್ನಡ ಚಿತ್ರರಂಗದ ಮೇರು ನಟನ ಮಗ, ನಾನು ಸ್ಟಾರ್ ಹೀರೋ ಅಂತೆಲ್ಲಾ ಅಂದುಕೊಂಡೆ ಇಲ್ಲಾ. ನಟನೆಯನ್ನಷ್ಟೇ ಆರಾಧಿಸುತ್ತಿದ್ದರು, ಹಾಗೆ ಹಿರಿಯ ಪತ್ರಕರ್ತರ ಅಥಾವ ಯಾರೇ ಹಿರಿಯರು ಅವರ ಮುಂದೆ ಬಂದರು ಪ್ರೀತಿಯಿಂದ ಮಾತನಾಡಿಸುತ್ತಿದ್ದರು,ಕಾಲಿಗೆ ಬಿದ್ದು ನಮಸ್ಕರಿಸುತ್ತಿದ್ದರು. ಇದು ರಾಜ್ ಕುಟುಂಬದ ಮಕ್ಕಳ ಸಂಸ್ಕಾರ. ಪುನೀತ್ ರಾಜ್‌ಕುಮಾರ್ ಕೇವಲ ತೆರೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ನಾಯಕನೇ, ಬದುಕಿನಲ್ಲಿ ಒಮ್ಮೆಯಾದರೂ ಪುನೀತ್ ರನ್ನು ಭೇಟಿಯಾದವರು ಸದಾ ಅವರ ಸರಳತೆ ಮತ್ತು ಸಭ್ಯತೆಯ ಬಗ್ಗೆಯೇ ಸ್ಮರಿಸುತ್ತಾರೆ. ಕನ್ನಡಿಗರ ಪ್ರತಿ ಮನೆಯ ಮಗನಂತೆ ಇದ್ದರು, ಅಪ್ಪು ಅದೆಷ್ಟು ಫಿಟ್ ಆಗಿದ್ದರೂ ಅನ್ನೋದು  ತಿಳಿದಿರುವ ವಿಚಾರ. ವಯಸ್ಸು ಎನ್ನುವುದು ಕೇವಲ ಒಂದು ಸಂಖ್ಯೆ ಎಂದು ತಮ್ಮ ಫಿಟ್ನೆಸ್ ನಿಂದ ಪ್ರೊವ್ ಮಾಡಿದ್ದರು.
  
ಅಪ್ಪು ಅವರು ಹೊಸ ಸಿನೆಮಾ ಮಾಡ್ತಿದ್ದಾರಂತೆ. ಅಪ್ಪು ಸರ್ ಸಿನಿಮಾ ಡೈರೆಕ್ಟರ್ ಅವರಂತೆ ಅಪ್ಪು ಅವರ ಹೀರೋಯಿನ್ ಫಿಕ್ಸ್ ಆದರಂತೆ. ಹೀಗೆ ಅಪ್ಪು ಅವರು ಸಿನಿಮಾದಲ್ಲಿ ನಟಿಸಲಿ, ಜಾಹಿರಾತಿನಲ್ಲೆ ನಟಿಸಲಿ, ಹಾಡಲಿ, ಕುಣಿಯಲಿ, ಹೋಟೆಲ್ ಗೆ ಹೋಗಲಿ, ದೇವಸ್ಥಾನ ಕ್ಕೆ ಹೋಗಲಿ, ಸೈಕ್ಲಿಂಗ್ ಮಾಡಲಿ, ಟ್ರೆಕಿಂಗ್ ಹೋಗಲಿ. ಏನೇ ಮಾಡಿದರೂ ಅದು ಅವರ ಅಭಿಮಾನಿಗಳ ಪಾಲಿಗೆ ಹಬ್ಬlವೇ ಸರಿ. ಅವರ ಪ್ರತಿ ಆಗುಹೋಗುಗಳನ್ನ ಹಿಂಬಾಲಿಸುತ್ತಿದ್ದರು.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜೊತೆಗೆ ಆತ್ಮೀಯ ಒಡನಾಟ ಇದ್ದವರ ಪೈಕಿ ಹೆಬ್ಬುಲಿ ಚಿತ್ರದ ನಿರ್ದೇಶಕ ಕೃಷ್ಣ ಕೂಡ ಒಬ್ಬರು. ಪುನೀತ್ ಜೊತೆಗೆ “ರಾಜ್ ದಿ ಶೋಮ್ಯಾನ್” ಸಿನಿಮಾದಲ್ಲಿ ಕೃಷ್ಣ ಕೆಲಸ ಮಾಡಿದ್ದರು, ಎಲ್ಲವೂ ಅಂದುಕೊಂಡಂತೆ ನೆಡೆದಿದ್ದರೆ ಪುನೀತ್ ರಾಜ್‌ಕುಮಾರ್ ಗೆ ನಿರ್ದೇಶಕ ಕೃಷ್ಣ ಆಕ್ಷನ್ ಕಟ್ ಹೇಳಬೇಕಿತ್ತು ಆದರೆ ಅಷ್ಟರಲ್ಲಿ ಕ್ರೂರ ವಿಧಿ ಅಟ್ಟಹಾಸ ಮೆರೆಯಿತು.

ಮುಂಚೆ ಒಂದೊಂದು ಮೀಟಿಂಗ್ ಗೆ ಒಂದೊಂದು ಬಟ್ಟೆ ಹಾಕಿ ಕೊಳ್ಳುತ್ತಿದ್ದರು, ಆ ರೀತಿಯಲ್ಲಿ ಇದ್ದವರು ನಂತರ ತುಂಬಾ ಸಿಂಪಲ್ ಆಗಿಬಿಟ್ಟರು. ದುಬಾರಿ ಬಟ್ಟೆ ಹಾಕಿಕೊಂಡು ರಾಂಗ್ ಎಕ್ಸಾಂಪಲ್ ಆಗಬಾರದು ಅಂತ ನಿರ್ಧಾರ ಮಾಡಿದ್ದರು. ಕೃಷ್ಣ ಅವರು ಪುನೀತ್ ಅವರನ್ನು ಭೇಟಿ ಮಾಡಲು ಹೋದಾಗ ಕೇವಲ 600 ರೂಪಾಯಿ ಪ್ಯಾಂಟ್ ಹಾಕಿಕೊಂಡಿದ್ದರು.ಹಾಗೂ ಅವರು ತುಂಬಾ ಸಿಂಪ್ಲಿಫೈ ಆಗಿದ್ದರು, ತಮ್ಮನ್ನು ನೋಡಿ ಫ್ಯಾನ್ಸ್ ಕೂಡ ಮಾಡಬಾರದು ಎನ್ನುತ್ತಿದ್ದರಂತೆ, ಕಡಿಮೆ ವಯಸ್ಸಿಗೆ ಈ ರೀತಿಯ ಮೆಚ್ಯುರಿಟಿ ಇತ್ತು ಅವರಿಗೆ.. . ಅವರ ಈ ಗುಣವೇ ನಂಗೆ ತುಂಬಾ ಇಷ್ಟ. ಅದಕ್ಕೆ ನಾನು ಅವರನ್ನು ಸೂಪರ್ ಹ್ಯೂಮನ್ ಎಂದು ಕರೆಯುತ್ತಿದ್ದೆ ಎಂದು ನಿರ್ದೇಶಕ  ಕೃಷ್ಣ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ

Leave A Reply

Your email address will not be published.

error: Content is protected !!