ಹಳ್ಳಿ ಮೇಷ್ಟ್ರು ಚಿತ್ರದಲ್ಲಿ ಕಪ್ಪೆರಾಯ ಪಾತ್ರ ಸಿಕ್ಕಿದ್ದು ಹೇಗೆ ಗೊತ್ತಾ?

0

ಕೆಲವೊಮ್ಮೆ ಎಲ್ಲಾ ಇದ್ದು ಏನೂ ಇಲ್ಲಾ ಅನ್ನೋ ಕೊರಗು ಹುಟ್ಟಿ ಕೊಳ್ಳುತ್ತದೆ. ಆದರೆ ಕೆಲವೊಬ್ಬರು ತಮ್ಮ ನ್ಯೂನತೆಗಳನ್ನೆ ಅವಕಾಶ ಅಂದು ಕೊಂಡು ವಿಭಿನ್ನವಾಗಿ ಬದುಕಿ ತೋರಿಸುತ್ತಾರೆ. ನಮ್ಮ ಕನ್ನಡ ಚಿತ್ರರಂಗದದಲ್ಲೂ ಸಹ ಇಂತಹ ಕಲಾವಿದರು ಸಾಕಷ್ಟು ಜನರು ಇದ್ದಾರೆ. ಆದರೆ ಅವರಿಗೆ ಅವಕಾಶ ಕಡಿಮೆ ಆದಾಗ ಏನು ಮಾಡಬೇಕು ಎಂದು ತಿಳಿಯದೆ ಜೀವನದಲ್ಲಿ ಕುಗ್ಗಿ ಹೋಗುತ್ತಾರೆ.

ಆದರೆ ಈ ವ್ಯಕ್ತಿಯ ಕಥೆ ಬಹಳ ವಿಭಿನ್ನವಾಗಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಹಳ್ಳಿ ಮೇಷ್ಟ್ರು ಸಿನಿಮಾ ಕೇಳಿದ್ರೆ ಥಟ್ ಅಂತ ನೆನಪಾಗೋದು ಕಪ್ಪೆರಾಯ ಪಾತ್ರದ ನಟ.ಕನ್ನಡ ಚಿತ್ರರಂಗದ ಆಲ್ ಟೈಮ್ ಫೆವರೆಟ್ ಎಂದು ಖ್ಯಾತಿ ಪಡೆದ ಈ ಹಳ್ಳಿಮೇಷ್ಟ್ರು ಸಿನಿಮಾದಲ್ಲಿ ಹೀರೋಯಿನ್ ಜೊತೆಗೆ ಒಂದು ಸಣ್ಣ ಮಕ್ಕಳ ಗುಂಪೊಂದು ಇತ್ತು ಆ ಗುಂಪಿನಲ್ಲಿ ಹೆಚ್ಚು ಪ್ರೇಕ್ಷಕರನ್ನ ಗಮನ ಸೆಳೆದದ್ದು ಕಪ್ಪೆರಾಯ ಪಾತ್ರದಲ್ಲಿ ನಟನೆ ಮಾಡಿದ ಹುಡುಗ.

ಸಿನಿಮಾದಲ್ಲಿ ನಾಯಕಿಯ ಹಿಂದೆ ಪರಿಮಳ ಪರಿಮಳ ಅಂತ ಓಡಾಡುವ ಮತ್ತು ರವಿಚಂದ್ರನ್ ಅವರ ಜೊತೆ ಶಾಲೆಯಲ್ಲಿ ನೆಡೆಯುವ ತಮಾಷೆಯ ದೃಶ್ಯಗಳು ಈಗಲೂ ಈ ಸಿನಿಮಾ ನೋಡಿದರೆ ನಗು ಬರುತ್ತದೆ. ಈ ಕಪ್ಪೆರಾಯ ಪಾತ್ರವನ್ನು ನಿಭಾಯಿಸಿರುವ ಇವರ ನಿಜವಾದ ಹೆಸರು ಫಕೀರಪ್ಪ ದೊಡ್ಮನಿ ಅಂತ. ಇವರು ಮೂಲತಃ ಹಾವೇರಿ ಜಿಲ್ಲೆಯ ಚಿಕ್ಕ ಲಿಂಗದ ಗ್ರಾಮಕ್ಕೆ ಸೇರಿದವರು.

ಇವರು ಬಡ ಕೃಷಿಕರ ಕುಟುಂಬದಲ್ಲಿ ಜನಿಸಿದರು. ಇವರು ಇರುವ ಎತ್ತರ ನೋಡಿದರೆ ಕೇವಲ 2.5 ಅಡಿ ಮಾತ್ರ ಆಗಿತ್ತು. ಇದರಿಂದ ಆದ ಅವಮಾನವನ್ನು ಸಹಿಸಿಕೊಳ್ಳಲು ಆಗದೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದರೆನ್ನುವುದು ಬೇಸರದ ಸಂಗತಿ. ನ೦ತರ ಇವರು ತಮ್ಮ ಜೀವನದಲ್ಲಿ ಮೈನಸ್ ಪಾಯಿಂಟ್ ಅನ್ನೇ ಪ್ಲಸ್ ಪಾಯಿಂಟ್ ಆಗಿ ಮಾಡಿಕೊಂಡರು.

ಇವರು ಮೊದಲು ನಾಟಕದಲ್ಲಿ ಪಾತ್ರ ಮಾಡುತ್ತಿದ್ದರು. ಇವರ ಅಭಿನಯ ಹಿಡಿಸಿದ ಕೆಲವರು ಸಿನಿಮಾ ರಂಗಕ್ಕೆ ಪ್ರವೇಶ ಮಾಡಲು ಸಹಾಯ ಮಾಡಿದ್ದರು. ಈ ವ್ಯಕ್ತಿ ನೋಡಲು ಹಾಸ್ಯ ಪಾತ್ರಕ್ಕೆ ಸರಿ ಹೊಂದುವಂತೆ ಇದ್ದ ಕಾರಣ ಫಕೀರಪ್ಪ ಅವರಿಗೆ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ನಟನೆ ಮಾಡಲು ಅವಕಾಶ ಸಿಕ್ಕಿತು, ಹಳ್ಳಿ ಮೇಷ್ಟ್ರು ನಮ್ಮ ಯಜಮಾನ್ರು, ಸೇರಿದಂತೆ 16 ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಇನ್ನು ಇವರು 2017 ರಲ್ಲಿ ಕವಿತಾ ಎನ್ನುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಫಕೀರಪ್ಪ ನ ಪತ್ನಿ ಕೂಡ 3 ಅಡಿ ಮಾತ್ರವೇ ಇತ್ತು ಹೀಗಾಗಿ ಇಬ್ಬರೂ ಕೂಡ ಒಪ್ಪಿ ಮದುವೆ ಆಗಿದ್ದರು. ಇನ್ನು ಸದ್ಯಕ್ಕೆ ಸಿನಿಮಾ ರಂಗದಿಂದ ದೂರ ಉಳಿದಿರುವ ಫಕೀರಪ್ಪ ಅವರು ತಮ್ಮ ಊರಿನಲ್ಲಿ ಕೃಷಿ ಕೆಲಸ ಮಾಡುತ್ತಾ ಸಂತೋಷವಾಗಿ ಜೀವನ ನೆಡೆಸುತ್ತಿದ್ದಾರೆ.

Leave A Reply

Your email address will not be published.

error: Content is protected !!