ಮನಸ್ಸು ಬಯಸಿದ ಊಟ ತಿಂಡಿ ಸಿಕ್ಕಾಗ ಖುಷಿಯಿಂದ ಸೇವಿಸುತ್ತೆವೆ. ಆದರೆ ಅದರ ಪರಿಣಾಮ ಹೊಟ್ಟೆಯ ಉಬ್ಬರ ಸಮಸ್ಯೆಯನ್ನು ಉಂಟುಮಾಡಿ, ಪದೇ ಪದೇ ಗ್ಯಾಸ್ ಬಿಡುಗಡೆಯಾಗುವುದು, ಇದರಿಂದ ಸಾಕಷ್ಟು ಸಾಕಷ್ಟು ಇರಿಸು ಮುರಿಸು ಸಮಸ್ಯೆ ಉಂಟಾಗುವುದು. ಸಾಮಾನ್ಯವಾಗಿ ಹೆಚ್ಚಾಗಿ ಊಟ ಮಾಡಿದ ನಂತರ ಎದುರಾಗುವ ಸಮಸ್ಯೆಯೆಂದರೆ ಅದು ಹೊಟ್ಟೆ ಉಬ್ಬರ. ಊಟದ ನಂತರ ಹೊಟ್ಟೆಯಲ್ಲಿ ಅತೀವವಾದ ಅನಿಲ ಉತ್ಪಾದನೆ ಅಥವಾ ಜೀರ್ಣಾಂಗದ ಮಾಂಸ ಖಂಡಗಳ ಅನಿಯಮಿತವಾದ ಚಲನೆ ಸಹಜವಾಗಿಯೇ ಹೊಟ್ಟೆ ಉಬ್ಬರ ಅಥಾವ ಹೊಟ್ಟೆಯ ಗ್ಯಾಸ್ ಸಮಸ್ಯೆಗೆ ಕಾರಣವಾಗುತ್ತದೆ.
ಈ ಸಮಸ್ಯೆ ಹೆಚ್ಚಾಯಿತು ಎಂದರೆ ಹೊಟ್ಟೆ ತೊಳೆಸಿದಂತಾಗಿ ವಾಕರಿಕೆ ಬರುವಂತಾಗುತ್ತದೆ. ಹೊಟ್ಟೆ ನೋವು ಸಹ ಬರಬಹುದು. ಇದರಿಂದ ದೇಹದ ಅಸ್ವಸ್ಥತೆ ಹೆಚ್ಚಾಗಿ ನಮ್ಮ ಪ್ರತಿ ದಿನದ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತದೆ.ಊಟದ ನಂತರ ನಿಮ್ಮ ಹೊಟ್ಟೆಯ ಜೀರ್ಣಾಂಗದಲ್ಲಿ ಹೆಚ್ಚಾದ ಘನಾಹಾರ, ದ್ರವಾಹಾರ ಮತ್ತು ಅನಿಲಗಳು ಹೊಟ್ಟೆಯನ್ನು ಊದಿಸಿಕೊಳ್ಳುವಂತೆ ಮಾಡಿ ಹೊಟ್ಟೆ ಉಬ್ಬರವನ್ನು ಉಂಟು ಮಾಡುತ್ತದೆ. ಇಂತಹ ಸಮಸ್ಯೆಗೆ ಸರಳ ಮನೆ ಮದ್ದುಗಳು ಯಾವುದೆಂದು ತಿಳಿಯೋಣ.
ನಿಂಬೆ ರಸಂ ಮಾಡುವ ವಿಧಾನ:ಇದನ್ನು ಮಾಡಲು ಬೇಕಾಗುವ ಸಾಮಗ್ರಿಗಳು ಒಂದು ನಿಂಬೆ ಹಣ್ಣು, ಕರಿಬೇವು, ಒಂದು ಚಮಚ ಸಾಸಿವೆ, ಇಂಗು, ನಾಲ್ಕು ಒಣ ಮೆಣಸಿನಕಾಯಿ, ಬೆಲ್ಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪ ಎಣ್ಣೆ ಒಗ್ಗರಣೆಗೆ.
ಎರಡು ಕಪ್ ನೀರಿಗೆ ನಿಂಬೆ ಹಣ್ಣಿನ ರಸವನ್ನು ಹಿಂಡಿಕೊಳ್ಳಬೇಕು, ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನಂತರ ಬೆಲ್ಲ ಹಾಕಿ ಚನ್ನಾಗಿ ಮಿಕ್ಸ್ ಮಾಡಬೇಕು. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಸ್ವಲ್ಪ ಸಾಸಿವೆ ಹಾಕಿ ಅದಕ್ಕೆ ಕತ್ತರಿಸಿದ ಒಣ ಮೆಣಸಿನಕಾಯಿ ನಂತರ ಕರಿ ಬೇವು ಹಾಕಿ ಒಗ್ಗರಣೆ ಹಾಕಿ, ನಿಂಬೆ ರಸದ ಮಿಶ್ರಣಕ್ಕೆ ಹಾಕಬೇಕು ನಂತರ ಇದು ಸೇವಿಸಲು ರೆಡಿಯಾಗಿರುತ್ತದೆ.