ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ಇವತ್ತಿನ ಮಾಹಿತಿಯಲ್ಲಿ ನಾವು ನಿಮಗೆ ಅತಿ ಮುಖ್ಯವಾದ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇನೆ ಅಂದರೆ ಮನೆ ಇಲ್ಲದವರಿಗೆ ಸರ್ಕಾರದ ಕಡೆಯಿಂದ ಒಂದು ಹೊಸದಾಗಿ ನನ್ನ ಮನೆ ವಸತಿ ಯೋಜನೆಯನ್ನು ಮಾಡಿದ್ದಾರೆ ಹಾಗಾದರೆ ಮನೆ ಇಲ್ಲದವರು ನನ್ನ ಮನೆ ವಸತಿ ಯೋಜನೆ ಮೂಲಕ ತಮ್ಮ ಮನೆಯನ್ನು ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿಯನ್ನು ಮುಂದೆ ತಿಳಿಸುತ್ತ ಹೋಗುತ್ತೇವೆ ಬನ್ನಿ
ಅರ್ಜಿಯನ್ನು ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸುವಾಗ ಬೇಕಾಗುವಂತಹ ದಾಖಲಾತಿಗಳು ಏನೇನು ಅದೇ ರೀತಿಯಾಗಿ ನನ್ನ ಮನೆ ವಸತಿ ಯೋಜನೆಗೆ ಇರುವಂತ ಅರ್ಹತೆಗಳು ಏನೇನು ನಿಯಮಗಳು ಏನೇನು ಎಂಬುದರ ಬಗ್ಗೆ ಮಾಹಿತಿಯನ್ನು ಇವತ್ತಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇವೇ ಈ ಮಾಹಿತಿಯನ್ನು ಶುರು ಮಾಡೋಣ ಸರ್ಕಾರದ ಕಡೆಯಿಂದ ಮನೆ ಇಲ್ಲದವರಿಗೆ ಒಂದು ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ ಅಂತ ಹೇಳಬಹುದು.
ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆಯಲ್ಲಿದವರಿಗೆ ಆನ್ಲೈನ್ ಮುಖಾಂತರ ಅಪ್ಲಿಕೇಶನ್ ಹಾಕಬೇಕು. ಹೊಸ ಮನೆ ಇಲ್ಲದವರಿಗೆ ಈ ಯೋಜನೆ ಮಾಡಿದ್ದು ಇದರ ಬಗ್ಗೆ ನೀವು ಕಂಪ್ಲೀಟ್ ಮಾಹಿತಿಯನ್ನು ನೋಡಿಕೊಳ್ಳಬೇಕೆಂದರೆ ಈ ಒಂದು ಆಫೀಶಿಯಲ್ ವೆಬ್ಸೈಟ್ ಗೆ ಬರಬೇಕಾಗುತ್ತದೆ.ರಾಜೀವ್ ಗಾಂಧಿ ವಸತಿ ನಿಗಮ ಅಂತ ಓಪನ್ ಮಾಡಿಕೊಂಡಾದಮೇಲೆ ನಿಮಗೆ ಒಂದು ಆನ್ಲೈನ್ ಅರ್ಜಿ ನನ್ನ ಮನೆ ವಸತಿ ಯೋಜನೆ ಅಂತ ಈ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಇಲ್ಲಿ ನಿಮಗೆ ಕಂಪ್ಲೀಟ್ ಆಗಿ ಮಾಹಿತಿ ಕಾಣಿಸುತ್ತದೆ ಅದಕ್ಕೆ ನೀವು ಅರ್ಜಿ ಸಲ್ಲಿಸಬೇಕು.
ಯಾವ ಜಾಗದಲ್ಲಿ ನಿಮಗೆ ಪ್ಲಾಟ್ ಮಾಹಿತಿ ಪ್ಲಾಟ್ ಯಾವ ರೀತಿ ಬುಕಿಂಗ್ ಮಾಡಿಕೊಳ್ಳುವುದು ಕೂಡ ಸಿಗುತ್ತದೆ ನನ್ನ ಮನೆ ವಸತಿ ಯೋಜನೆಗೆ ಅರ್ಜಿ ಸಲ್ಲಿಸುವವರು ಹೆಚ್ಚಿನ ಮಾಹಿತಿಗಾಗಿ ಇಂಫಾರ್ಮೇಷನ್ ಕೂಡ ನಂಬರ್ ಕೊಟ್ಟಿದ್ದಾರೆ ಇವರಿಗೆ ಕಾಂಟ್ಯಾಕ್ಟ್ ಕೂಡ ಮಾಡಬಹುದು ಈಗ ನನ್ನ ಮನೆ ವಸತಿ ಯೋಜನೆಯ ಅರ್ಜಿ ಸಲ್ಲಿಸುವಂತಹ ವಿಧಾನ ಮತ್ತೆ ಅರ್ಜಿಕೆ ಬೇಕಾಗಿರುವಂತಹ ಅರ್ಹತೆ ಮತ್ತು ಸಲ್ಲಿಸುವಂತಹ ದಾಖಲಾತಿಗಳ ಬಗ್ಗೆ ನೋಡುವುದಾದರೆ,
ಇಲ್ಲಿ ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕಾಗಿರುತ್ತದೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಆಗಿರಬಹುದು ಅಥವಾ ರಾಮನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಕನಿಷ್ಠವಾಗಿ 5 ವರ್ಷಗಳ ವಾಸವಾಗಿ ಇರಬೇಕಾಗುತ್ತದೆ ರೇಷನ್ ಕಾರ್ಡ್ ಹೊಂದಿರಬೇಕಾಗಿರುತ್ತದೆ ಮತ್ತು ಚುನಾವಣಾ ಗುರುತಿನ ಚೀಟಿ ಕೂಡ ಹೊಂದಿರಬೇಕಾಗುತ್ತದೆ.
ಅರ್ಜಿ ಸಲ್ಲಿಸಬಯಸುವವರು ವಸತಿ ರಹಿತರಾಗಿರಬೇಕು ತನ್ನ ಹಾಗೂ ಕುಟುಂಬದ ಹೆಸರಿನಲ್ಲಿ ಯಾವುದೇ ನಿವೇಶನ/ಮನೆಗಳನ್ನು ಹೊಂದಿರಬಾರದು.
ಬೆಂಗಳೂರು ನಗರ ಜಿಲ್ಲೆಯ ನಿವಾಸಿಗಳಿಗೆ ವಾರ್ಷಿಕ ಆದಾಯ ಮಿತಿ ರೂ.3.00 ಲಕ್ಷ ಹಾಗೂ ಇತರ ಜಿಲ್ಲೆಗಳ ವಾಸಿಗಳಿಗೆ ರೂ.2.00 ಲಕ್ಷ ಒಳಗಿರಬೇಕು,ಜಾತಿ/ಆದಾಯ ಪ್ರಮಾಣ ಪತ್ರ ಪ್ರತಿ ಕುಟುಂಬಕ್ಕೆ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಲು ಅವಕಾಶವಿದೆ. ವಿಕಲಚೇತನರಾಗಿದ್ದಲ್ಲಿ – ವಿಕಲಚೇತನ ಪ್ರಮಾಣ ಪತ್ರ ಸಲ್ಲಿಸಬೇಕು. ನಂತರ ನೀವೇನಾದರೂ ಅರ್ಹತೆಯನ್ನು ಪಡೆದುಕೊಂಡಿದ್ದರೆ ನೀವು ಮುಂಚಿತವಾಗಿ 3000 ಹಣವನ್ನು ಪಾವತಿಸಬೇಕಾಗುತ್ತದೆ
ಈ ಅಪ್ಲಿಕೇಶನ್ ಅನ್ನು ಹಾಕಲು ನೀವು ಸುಲಭವಾಗಿ ನಿಮ್ಮ ಹತ್ತಿರದಲ್ಲಿರುವಂತಹ ಆನ್ಲೈನ್ ಅಂಗಡಿಗೆ ಭೇಟಿ ಕೊಟ್ಟು ನೀವು ಅಲ್ಲಿ ಈ ಅಪ್ಲಿಕೇಶನ್ ಅನ್ನು ಹಾಕಬಹುದು. ಈ ಮನೆ ಯೋಜನೆಯವನ್ನು ಸುವರ್ಣ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಿ.