ರುಚಿಯಾದ ಒಂದು ಉಂಡೆ ತಿನ್ನಿ ಲೈಫ್ ಅಲ್ಲೇ ರಕ್ತ ಕಡಿಮೆ ಆಗುವುದಿಲ್ಲ, ಕ್ಯಾಲ್ಸಿಯಮ್ ಕೊರತೆ, ಮಂಡಿ, ಸೊಂಟ, ಕೈ ಕಾಲು ನೋವು ಬರುವುದೇ ಇಲ್ಲಾ. ನಾವು ಪ್ರತಿದಿನ ಊಟ ಮಾಡುತ್ತೇವೆ ತರಕಾರಿಗಳನ್ನು ತಿನ್ನುತ್ತೇವೆ ಆದರೂ ಒಂದಲ್ಲ ಒಂದು ಸಮಸ್ಯೆಗಳಿಂದ ಯಾವಾಗಲೂ ಮನಸ್ಸಿಗೆ ಬೇಜಾರು, ಕೆಲಸ ಮಾಡಲು ಮನಸ್ಸೆ ಇರುವುದಿಲ್ಲ,ನಿದ್ದೆ ಸರಿಯಾಗಿ ಬರುವುದಿಲ್ಲ,
ಸೊಂಟ ನೋವು, ತಲೆ ನೋವು, ಸಿಟ್ಟು ಬರುವುದು, ಮುಖದಲ್ಲಿ ಕಳೆ ಇರುವುದಿಲ್ಲ, ಬೆಳಗ್ಗೆ ಎದ್ದ ಕೂಡಲೇ ತಲೆ ಸುತ್ತು ಬರುವುದು, ಸ್ವಲ್ಪ ಕೆಲಸ ಮಾಡಿದರೂ ಸುಸ್ತು ಆಗುವುದು ಕಾಲಲ್ಲಿ ಜೋಮು ಹಿಡಿಯುವುದು, ಹೀಗೆಲ್ಲಾ ಆಗಲು ಕಾರಣ ರಕ್ತ ಹೀನತೆ. ರಕ್ತದಲ್ಲಿ R,B,C ಕೌಂಟ್ ಕಡಿಮೆ ಆದಾಗ ಅಥವಾ ರಕ್ತ ಹೀನತೆ ಪೋಷಕಾಂಶಗಳ ಕೊರತೆಯಿಂದ ಈ ರೀತಿ ಆಗುತ್ತದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ.
ರಕ್ತದಲ್ಲಿ R,B,C ಕೌಂಟ್ ಕಡಿಮೆಯಿಂದ ಹೆಚ್ಚಿನ ರೋಗಗಳಿಗೆ ನಾವು ದಾರಿ ಮಾಡಿಕೊಡದೆ ರಕ್ತ ಹೀನತೆಯನ್ನು ಕಡಿಮೆ ಮಾಡಿಕೊಂಡು ಯಾವಾಗಲೂ ಖುಷಿ ಆಗಿರಲು ಮನೆ ಮದ್ದು ಇದೆ ಅದೇನೆಂದು ತಿಳಿಯೋಣ. ಒಂದು ಬೌಲ್ ಆಕ್ರೋಟ್ ಅಥವಾ ವಾಲ್ನಟ್ ಇದನ್ನು ಹೆಚ್ಚು ಎಲ್ಲರೂ ಬಳಸಬೇಕು ಇದರಲ್ಲಿ ಕಾಪರ್, ಪ್ರೋಟಿನ್, ಮೆಗ್ನೀಷಿಯಂ ಇದೆ. ಮಹಿಳೆಯರು ಇದನ್ನು ಹೆಚ್ಚು ಉಪಯೋಗಿಸುವುದರಿಂದ ಕ್ಯಾನ್ಸರ್ ನಿಂದ ದೂರ ಇರಬಹುದು.
ಎಲ್ಲಾ ವಯಸ್ಸಿನವರು ಆಕ್ರೋಟ್ ಬಳಸಬೇಕು ಇದರಿಂದ ಬುದ್ಧಿ ಚುರುಕಾಗುತ್ತದೆ. ಒಂದು ಬೌಲ್ ಬಿಳಿ ಎಳ್ಳು, ಬಿಳಿ ಎಳ್ಳಲ್ಲಿ ಐರನ್, ಕ್ಯಾಲ್ಸಿಯಮ್, ಮೆಗ್ನೀಷಿಯಂ ಇರುತ್ತದೆ. ಬಿಳಿ ಎಳ್ಳಿನ ಬದಲು ಕರಿ ಎಳ್ಳನ್ನು ಕೂಡ ಬಳಸಬಹುದು.ನಂತರ ಒಂದು ಬೌಲ್ ಪುಡಿ ಮಾಡಿದ ಬೆಲ್ಲ ತೆಗೆದುಕೊಳ್ಳಬೇಕು .
ಮಾಡುವ ವಿಧಾನ :ಮೊದಲು ಎಳ್ಳನ್ನು ಉರಿದ,ತಣ್ಣಗಾದ ನಂತರ ಪುಡಿ ಮಾಡಿಕೊಳ್ಳಬೇಕು. ಈ ಪುಡಿಗೆ ಆಕ್ರೋಟ್ ಅನ್ನು ಹಾಕಿ ಮಿಕ್ಸರ್ ಅಲ್ಲಿ ಪೌಡರ್ ಮಾಡಬೇಕು. ಇದಕ್ಕೆ ಬೆಲ್ಲ ಮತ್ತು ಎರಡು ಚಮಚ ಶುದ್ಧವಾದ ತುಪ್ಪ ಹಾಕಿ ಕಲಸಿ ಉಂಡೆ ಮಾಡಬೇಕು. ಈ ಉಂಡೆಯನ್ನು ತಿನ್ನುವುದರಿಂದ ನಿಶಕ್ತಿ ಹೋಗುತ್ತದೆ ಮತ್ತು ಮುಖದಲ್ಲಿ ಕಳೆ ಬರುತ್ತದೆ ದೇಹಕ್ಕೆ ಶಕ್ತಿ ಕೊಡುತ್ತದೆ. ಈ ಉಂಡೆಯನ್ನು ಪ್ರತಿದಿನ ಒಂದು ತಿಂದು ಹಾಲು ಕುಡಿಯಬೇಕು, ದಿನದಲ್ಲಿ ಯಾವಾಗಲಾದರೂ ತಿನ್ನಬಹುದು ಬೆಳಿಗ್ಗೆ ತಿನ್ನುವುದರಿಂದ ಸರಿಯಾಗಿ ಜೀರ್ಣ ಆಗುತ್ತದೆ. ಆರೋಗ್ಯವಾಗಿ ಇದ್ದವರು ಕೂಡ ಈ ಉಂಡೆ ತಿನ್ನಬಹುದು.
ಇದಲ್ಲದೆ ಅಂಜುರವನ್ನು ರಾತ್ರಿ ನೆನೆಹಾಕಿ ಬೆಳಿಗ್ಗೆ ತಿನ್ನಬಹುದು. ಮತ್ತು ಒಣ ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ತಿನ್ನಬಹುದು, ದಾಳಿಂಬೆ ಜ್ಯೂಸ್ ಮಾಡಿಕೊಂಡು ಕುಡಿಯಬಹುದು. ಮೊಳಕೆಯೊಡದ ಕಾಳುಗಳನ್ನು ತಿನ್ನಬೇಕು, ಈ ರೀತಿ ಮಾಡುವುದರಿಂದ ರಕ್ತಹೀನತೆ ಕಡಿಮೆ ಮಾಡಿ ಆರೋಗ್ಯ ವೃದ್ಧಿಸಿಕೊಳ್ಳಬಹುದು.