WhatsApp Group Join Now
Telegram Group Join Now

ಸಾಮಾನ್ಯವಾಗಿ ಸಮಾಜಸೇವೆಯಲ್ಲಿ ಅಥವಾ ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಂತಹ ವ್ಯಕ್ತಿಗಳು ಸಿನಿಮಾಗಳನ್ನು ನೋಡುವುದು ಬಹಳ ವಿರಳ ಆ ಪೈಕಿ ನಮ್ಮ ಕನ್ನಡದ ಮನೆಮಗಳು ಕನ್ನಡತಿ ಸುಧಾಮೂರ್ತಿಯವರು ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಕರ್ನಾಟಕದಲ್ಲಿ ಮನೆಮಾತಾಗಿದ್ದಾರೆ

ಸುಧಾಮೂರ್ತಿ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಸುಧಾಮೂರ್ತಿಯವರು ತಮ್ಮ ಇನ್ಫೋಸಿಸ್ ಫೌಂಡೇಶನ್ ನ ಮೂಲಕ ಕರ್ನಾಟಕ ಭಾರತ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ತಮ್ಮ ಸಾಮಾಜಿಕ ಸೇವೆಗಳನ್ನು ಸಮಾಜದ ಒಳಿತಿಗಾಗಿ ನೀಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನೆಮಾತಾಗಿರುವುದೂ ಖಂಡಿತ

ಕರ್ನಾಟಕದ ಅಥವಾ ಭಾರತದ ಯಾವುದೇ ವಿಪತ್ತಿನ ಸಂದರ್ಭದಲ್ಲಿ ಮತ್ತು ಪ್ರವಾಹಗಳು ಬಂದಂತಹ ಸಂದರ್ಭದಲ್ಲಿ ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ಸುಧಾಮೂರ್ತಿಯವರು ಎಂದಿಗೂ ಒಂದು ಹೆಜ್ಜೆ ಮುಂದಡಿ ಇಟ್ಟೇ ಇರುತ್ತಾರೆ

ಸುಧಾಮೂರ್ತಿ ಅವರು ಸಾಮಾಜಿಕ ಚಟುವಟಿಕೆಗಳು ಮಾತ್ರವಲ್ಲದೆ ತಮ್ಮನ್ನು ತಾವು ಬರವಣಿಗೆಯ ಮೂಲಕ ತಾವೊಬ್ಬ ಉತ್ತಮ ಲೇಖಕಿ ಎಂಬುದನ್ನು ಕೂಡ ನಿರೂಪಿಸಿದ್ದಾರೆ
ನನ್ನ ಮೆಚ್ಚಿನ ಕಥೆಗಳು, ಏರಿಳಿತದ ಹಾದಿಯಲ್ಲಿ, ಮನದಮಾತು, ಗೊಪೇಶನ ದಿನಚರಿ, Grandma’s bag of stories, 3000 stiches ಹೀಗೆ ಇನ್ನೂ ಅನೇಕ ಪುಸ್ತಕಗಳನ್ನು ಬರೆಯುವ ಮೂಲಕ ಒಬ್ಬ ಉತ್ತಮ ಲೇಖಕಿಯಾಗಿ ಯೂ ಕೂಡ ಹೊರಹೊಮ್ಮಿದ್ದಾರೆ

ಇಂತಹ ನಮ್ಮ ನಿಮ್ಮೆಲ್ಲರ ಪ್ರೀತಿಯ ಸುಧಮ್ಮ ಹೀಗೊಂದು ಹೊಸ ವಿಷಯವನ್ನು ನಮ್ಮಲ್ಲಿ ಹಂಚಿಕೊಂಡಿದ್ದಾರೆ ಅದು ಏನೆಂದರೆ ಮೊನ್ನೆಯಷ್ಟೇ ತೆರೆ ಕಂಡಂತಹ ರಮೇಶ್ ಅರವಿಂದ್ ಅವರು ನಿರ್ದೇಶಿಸಿ ನಟಿಸಿರುವಂತಹ ಕನ್ನಡದ ಹೊಚ್ಚ ಹೊಸ ಚಲನಚಿತ್ರ (100) ಒನ್ ಹಂಡ್ರೆಡ್ ಚಿತ್ರವನ್ನು ವೀಕ್ಷಿಸಿ ಅವರು ತಮ್ಮ ಅಭಿಪ್ರಾಯವನ್ನು ಸಮಾಜದ ಮುಂದೆ ಇಟ್ಟಿದ್ದಾರೆ

ಸುಧಾಮೂರ್ತಿ ಅವರು ಹೇಳುವಂತೆ ಈ ಚಿತ್ರವು ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ತಲುಪಿಸುವಲ್ಲಿ ಸಫಲವಾಗಿದೆ ಅಷ್ಟೇ ಅಲ್ಲದೆ ಅತಿ ಹೆಚ್ಚು ಮೊಬೈಲ್ ಫೋನ್ ಗಳಿಗೆ ಮತ್ತು ಲ್ಯಾಪ್ಟಾಪ್ ಗಳಿಗೆ ಹೊಗ್ಗಿ ಕೊಂಡಂತಹ ಜನರು ಅಥವಾ ಮಕ್ಕಳು ಜಗತ್ತಿನ ಹಲವಾರು ಜನರ ಜೊತೆ ತಮ್ಮ ಬಾಂಧವ್ಯವನ್ನು ಬೆಸೆಯುತ್ತಿದ್ದಾರೆ ಈ ಬಾಂಧವ್ಯ ಬಾಂಧವ್ಯ ವಾಗಿ ಅಷ್ಟೇ ಉಳಿಯದೆ ತಮ್ಮ ಪರಿವಾರಗಳ ಕೆಡುಕುಗಳಿಗೆ ಕಾರಣವಾಗುತ್ತದೆ ಎಂಬ ಸಂದೇಶವನ್ನು ಈ ಚಿತ್ರ ಚಿತ್ರಿಸಿದೆ ಅಷ್ಟೇ ಅಲ್ಲದೆ ಅಪರಿಚಿತ ವ್ಯಕ್ತಿಯೊಂದಿಗೆ ನಮ್ಮ ಅಂತರಾಳವನ್ನು ತೋಡಿಕೊಳ್ಳುವುದು ಸರಿಯಲ್ಲ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ

ಹಾಗಾಗಿ ಈ ಚಿತ್ರವು ಸಮಾಜದಲ್ಲಿನ ಇತ್ತೀಚಿನ ಬೆಳವಣಿಗೆಗಳು ಹಾಗೂ ಸೈಬರ್ ಕ್ರೈಮ್ ಗಳಂತಹ ಸಮಸ್ಯೆಗಳನ್ನು ತಡೆಯಲು ನೀಡಿರುವ ಒಂದು ಉತ್ತಮ ಸಂದೇಶವಾಗಿದೆ ಎಂದು ತಾವು ಅಭಿಪ್ರಾಯ ಪಟ್ಟಿದ್ದಾರೆ ಎಲ್ಲರೂ ಚಿತ್ರಮಂದಿರಗಳಿಗೆ ಹೋಗಿ ಚಿತ್ರವನ್ನು ನೋಡಿ ತಮ್ಮ ಜೀವನದಲ್ಲಿ ತಾವು ಮಾಡುತ್ತಿರುವ ತಪ್ಪುಗಳನ್ನು ಸರಿಪಡಿಸಿ ಕೊಳ್ಳಬೇಕಾಗಿ ವಿನಂತಿಸಿದ್ದಾರೆ ಈ ಕಾರಣಗಳಿಂದಾಗಿ ತಾವು ಈ ಚಿತ್ರಕ್ಕೆ ಇಷ್ಟು ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿರುವುದು ಆಗಿಯೂ ಮೀಡಿಯಾದವರ ಮುಂದೆ ಹೇಳಿದ್ದಾರೆ

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: