WhatsApp Group Join Now
Telegram Group Join Now

ದಾಳಿಂಬೆ ಹಣ್ಣು ತುಂಬಾ ರುಚಿಕರ ಹಾಗೂ ಹಲವಾರು ರೀತಿಯ ಆರೋಗ್ಯ ಲಾಭಗಳನ್ನು ಹೊಂದಿರುವಂತಹ ಹಣ್ಣು. ಇದರ ಬೀಜಗಳು ಕಡು ಕೆಂಪಾಗಿ ಜೋಡಿಸಿಕೊಂಡು ಇರುವುದು. ದಾಳಿಂಬೆಯಲ್ಲಿ ಹಲವಾರು ರೀತಿಯ ಲಾಭಗಳ ಬಗ್ಗೆ ನಮಗೆಲ್ಲರಿಗೂ ತಿಳಿದೇ ಇದೆ. ನಾವು ದಾಳಿಂಬೆ ಜ್ಯೂಸ್ ಅನ್ನು ನಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ನಮಗೆ ಸಿಗುವುದು ಖಂಡಿತ. ಈ ಲೇಖನದಲ್ಲಿ ನಾವು ಪ್ರತೀ ದಿನ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ನಮ್ಮ ದೇಹಕ್ಕೆ ಉಂಟಾಗುವ ಆರೋಗ್ಯಕರ ಲಾಭಗಳ ಕುರಿತು ತಿಳಿದುಕೊಳ್ಳೋಣ.

ಬ್ಲಡ್ ಪ್ರಶರ್ ಅಥವಾ ಅಧಿಕ ರಕ್ತದೊತ್ತಡ ಸಮಸ್ಯೆ ಎಂದರೆ ಅದು ಸಾಮಾನ್ಯಕ್ಕಿಂತಲೂ ರಕ್ತದ ಒತ್ತಡವು ಹೆಚ್ಚಾಗಿ ಇರುವುದು. ಅಧಿಕ ರಕ್ತದೊತ್ತಡ ಸಮಸ್ಯೆಯಿಂದಾಗಿ ಹೃದಯಾಘಾತವಾಗಿ ವಿಶ್ವದೆಲ್ಲೆಡೆಯಲ್ಲಿ ಅತೀ ಹೆಚ್ಚಿನ ಸಾವು ಸಂಭವಿಸುತ್ತಿದೆ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಹಾಗಾಗಿ ದಾಳಿಂಬೆ ಬೀಜಗಳಲ್ಲಿ ಅಧಿಕ ವಿಟಮಿನ್, ಖನಿಜಾಂಗಳು ಮತ್ತು ನಾರಿನಾಂಶವು ಅಧಿಕವಾಗಿ ಇದೆ. ದಾಳಿಂಬೆ ಜ್ಯೂಸ್ ಅನ್ನು ಆಹಾರ ಕ್ರಮದಲ್ಲಿ ನಿಯಮಿತವಾಗಿ ಅಳವಡಿಸಿಕೊಂಡರೆ ಅದರಿಂದ ಅಧಿಕ ರಕ್ತದೊತ್ತಡ ಸಮಸ್ಯೆ ದೂರ ಮಾಡಬಹುದು. ಇದರ ಸಿಪ್ಪೆ ತೆಗೆದು ಅದರ ಬೀಜಗಳನ್ನು ಬೇರ್ಪಡಿಸಿಕೊಂಡು ಜ್ಯೂಸ್ ಮಾಡಿ ಕುಡಿದರೆ ನಿಮಗೆ ಹಲವಾರು ಆರೋಗ್ಯ ಲಾಭಗಳು ಸಿಗುವುದು. ಅಷ್ಟೇ ಅಲ್ಲದೇ ಇದು ನಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ನ್ನು ತೆಗೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು. ದೇಹದಲ್ಲಿ ಇರುವಂತಹ ಹೆಚ್ಚುವರಿ ಸೋಡಿಯಂ ಅಂಶವನ್ನು ದಾಳಿಂಬೆಯು ಮೂತ್ರದ ಮೂಲಕ ಹೊರಗೆ ಹಾಕುವಂತೆ ಮಾಡುತ್ತದೆ. ಇದು ಉಪ್ಪು ಮತ್ತು ಕರಿದ ಆಹಾರ ಸೇವನೆ ಕಡಿಮೆ ಮಾಡುವಂತೆ ಮಾಡುವುದು. ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಕೂಡ ಇಲ್ಲ. ಈ ಮೂಲಕ ಹೃದಯ ಸಂಬಂಧಿತ ಕಾಯಿಲೆಗಳು ಬರದ ಹಾಗೆ ನೋಡಿಕೊಳ್ಳುತ್ತದೆ.

ಕ್ಯಾನ್ಸರ್ ಮತ್ತು ರಕ್ತನಾಳದ ಕಾಯಿಲೆಗಳಿಂದ ನಮ್ಮನ್ನು ದೂರ ಇಡುತ್ತದೆ. ಇತ್ತೀಚಿನ ಸಂಶೋಧನೆಯ ಪ್ರಕಾರ ದಾಳಿಂಬೆ ಜ್ಯೂಸ್ ಇದು ಹೃದಯದ ರಕ್ತ ನಾಳಗಳನ್ನು ಶುದ್ಧ ಮಾಡುತ್ತದೆ. ತೂಕ ಇಳಿಸಿಕೊಳ್ಳಬೇಕೆನ್ನುವವರು ದಾಳಿಂಬೆ ಜ್ಯೂಸ್ ಸೇವಿಸಿ. ಒಂದು ಮಿಡಿಯಂ ಗ್ಲಾಸ್ ದಾಳಿಂಬೆ ಜ್ಯೂಸ್ ನೀವು ಸೇವಿಸಿದ್ದಲ್ಲಿ, ಅದು ಒಂದು ಹೊತ್ತಿಗೆ ಬೇಕಾಗುವ ಊಟದಷ್ಟು ಶಕ್ತಿ ನೀಡುತ್ತದೆ. ಹಾಗಾಗಿ ತುಂಬಾ ಹಸಿವಾದ ಸಂದರ್ಭದಲ್ಲಿ ಅನ್ನ ಸೇವಿಸುವ ಬದಲು ಜ್ಯೂಸ್ ಕುಡಿಯಬಹುದು. ಇದರಿಂದ ಹೊಟ್ಟೆಯೂ ತುಂಬುತ್ತದೆ. ದೇಹಕ್ಕೆ ಬೇಕಾದ ಪೋಷಕಾಂಶವೂ ದೊರೆಯುತ್ತದೆ. ದಾಳಿಂಬೆ ರಸ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ದಾಳಿಂಬೆ ರಸದ ಸೇವನೆಯಿಂದ ಹೊಟ್ಟೆಯ ಸಮಸ್ಯೆ ಇದ್ದರೆ ಕಡಿಮೆಯಾಗುತ್ತದೆ. ಈ ವೇಳೆ ಜ್ಯೂಸ್ ಕುಡಿಯುವಾಗ ಅದಕ್ಕೆ ಕೊಂಚ ಕಪ್ಪುಪ್ಪು, ಕಪ್ಪುಮೆಣಸಿನ ಪುಡಿ ಸೇರಿಸಿದ್ದಲ್ಲಿ ಹೊಟ್ಟೆ ನೋವಿಗೆ ಉತ್ತಮವಾಗಿರುತ್ತದೆ.

ವಯಸ್ಸಾದಂತೆ ಮುಖ ಸುಕ್ಕುಗಟ್ಟಲು ಶುರುವಾಗುತ್ತದೆ. ಮುಖದ ಮೇಲೆ ನೆರಿಗೆಗಳು ಏಳಲು ಶುರುವಾಗುತ್ತದೆ. ಈ ಸಮಸ್ಯೆ ತಡೆಯಬೇಕೆಂದಿದ್ದಲ್ಲಿ ದಾಳಿಂಬೆ ಜ್ಯೂಸ್ ನಿಯಮಿತವಾಗಿ ಸೇವಿಸಬೇಕು. ಕಣ್ಣು ನೋವು ಕಣ್ಣು ಕಪ್ಪುಗಟ್ಟುವುದು ಇತ್ಯಾದಿ ಸಮಸ್ಯೆಗಳಿಗೆ ದಾಳಿಂಬೆ ರಾಮಬಾಣವಾಗಿದೆ. ದಾಳಿಂಬೆ ಸೇವನೆಯಿಂದ ಕಣ್ಣಿನ ಸಮಸ್ಯೆ ಪರಿಹಾರವಾಗುತ್ತದೆ. ದೇಹದಲ್ಲಿ ರಕ್ತ ಕಡಿಮೆಯಾಗಿದ್ದಲ್ಲಿ, ದಾಳಿಂಬೆ ಜ್ಯೂಸ್ ಸೇವಿಸಿ. ದಾಳಿಂಬೆಯಲ್ಲಿ ದೇಹಕ್ಕೆ ಬೇಕಾಗುವಷ್ಟು ಐರನ್ ಅಂಶ ಇರುವುದರಿಂದ ಇದು ದೇಹವನ್ನ ಶಕ್ತಿಯುವತವಾಗಿರಿಸುವಲ್ಲಿ ಸಹಕಾರಿಯಾಗಿದೆ.

ನಿತ್ಯವೂ ದಾಳಿಂಬೆ ರಸದ ಸೇವನೆಯಿಂದ ರೋಗ ನಿರೋಧಕ ಶಕ್ತಿಯ ಮಟ್ಟ ಹೆಚ್ಚುತ್ತದೆ. ಇದರಲ್ಲಿರುವ ಉರಿಯೂತ ನಿವಾರಕ ಸಂಯುಕ್ತಗಳು ರೋಗ ನಿರೋಧಕ ಶಕ್ತಿಯ ಕುಂದುವ ಮೂಲಕ ಎದುರಾಗುವ ಹಲವಾರು ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತದೆ. ಅಲ್ಲದೇ ಈ ರಸದಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಎಲ್ಲಾ ಕಾರಣಗಳಿಂದ ಪ್ರತೀ ನಿತ್ಯ ಅಲ್ಲದೆ ಹೋದರೂ ವಾರಕ್ಕೆ ಒಮ್ಮೆ ಆದರೂ ನಾವು ದಾಳಿಂಬೆ ರಸವನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಈ ರೀತಿಯ ಇನ್ನೂ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: