WhatsApp Group Join Now
Telegram Group Join Now

ಕರ್ನಾಟಕದ ಹೆಮ್ಮೆಯ ರಾಜಕಾರಣಿ, ರಾಜಕೀಯ ಮುತ್ಸದ್ದಿ, ಮಾಜಿ ಪ್ರಧಾನಮಂತ್ರಿಯಾದ ಹೆಚ್.ಡಿ.ದೇವೇಗೌಡರ ಜೀವನದ ಬಗ್ಗೆ ಹಾಗೂ ಅವರ ಕುಟುಂಬದ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

ಹೆಚ್.ಡಿ.ದೇವೇಗೌಡರು ಮೇ 18, 1933 ರಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ದೊಡ್ಡೇಗೌಡ ತಾಯಿ ದೇವಮ್ಮ. ಮಧ್ಯಮವರ್ಗದ ಕೃಷಿ ಕುಟುಂಬದಲ್ಲಿ ಜನಿಸಿದ ಇವರು ಹಾಸನದ ಲಕ್ಷ್ಮಮ್ಮ ವೆಂಕಟಸ್ವಾಮಿ ಕಾಲೇಜಿನಲ್ಲಿ ಡಿಪ್ಲೊಮಾ ಇನ್ ಸಿವಿಲ್ ಇಂಜಿನಿಯರಿಂಗ್ ಮುಗಿಸಿದರು. 1953 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರುವುದರ ಮೂಲಕ ತಮ್ಮ ರಾಜಕೀಯ ಜೀವನಕ್ಕೆ ಪ್ರವೇಶಿಸಿದರು. 1962 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಧಾನಸಭೆಗೆ ಸ್ಪರ್ಧಿಸಲು ಆಗಿನ ಕಾಂಗ್ರೆಸ್ ಸರ್ಕಾರ ಇವರಿಗೆ ಟಿಕೆಟ್ ನೀಡಿರಲಿಲ್ಲ. ಟಿಕೆಟ್ ಸಿಗದಿದ್ದಕ್ಕೆ ದೇವೇಗೌಡರು ಸ್ವತಂತ್ರ ಅಭ್ಯರ್ಥಿಯಾಗಿ ವಿಧಾನಸಭೆಗೆ ಸ್ಪರ್ಧಿಸಿದರು ಹಾಗೂ ಕಾಂಗ್ರೆಸ್ ಪಕ್ಷವನ್ನು ತೊರೆದರು. ಇವರ ಜನಮನ್ನಣೆ ಎಷ್ಟಿತ್ತೆಂದರೆ ಮೊದಲ ಪ್ರಯತ್ನದಲ್ಲಿಯೇ ವಿಧಾನಸಭೆಗೆ ಆಯ್ಕೆಯಾದರು. ದೇವೇಗೌಡರ ಅವಿರತ ಶ್ರಮದಿಂದಾಗಿ ಹೇಮಾವತಿ ಯೋಜನೆಯ ಕನಸು ನನಸಾಯಿತು. ಅಂದಿನಿಂದ ಇಂದಿನವರೆಗೆ ರೈತರಪರ ಪ್ರಬಲ ಗಟ್ಟಿದನಿ ಎತ್ತುತ್ತಿರುವ ಇವರು ಮಣ್ಣಿನ ಮಗ ಎಂದು ಖ್ಯಾತಿ ಪಡೆದಿದ್ದಾರೆ. ಇಂದಿರಾಗಾಂಧಿ ಪ್ರಧಾನಿಯಾದ ಸಂದರ್ಭದಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಈ ಸಮಯದಲ್ಲಿ ದೇವೇಗೌಡರು ಹತ್ತೂವರೆ ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದರು ಹಾಗೂ ಕರ್ನಾಟಕದ 14 ನೇ ಮುಖ್ಯಮಂತ್ರಿಯಾಗಿ ಡಿಸೆಂಬರ್ 1994 ರಿಂದ ಮೇ 1996 ರವರೆಗೆ ಸೇವೆ ಸಲ್ಲಿಸಿದ್ದಾರೆ. ಇವರಿಗೆ ದೇವೇಗೌಡರು ದೇಶದ 12 ನೇ ಪ್ರಧಾನಮಂತ್ರಿಯಾಗಿ 1996 ರಿಂದ 1997 ರವರೆಗೆ ಸೇವೆಯನ್ನು ಸಲ್ಲಿಸಿದ್ದಾರೆ. ಜೆಡಿಎಸ್ ಪಕ್ಷದ ಸಂಸ್ಥಾಪಕರಾಗಿರುವ ಇವರು ರೈತರ ಪರ ಕೆಲಸ ಮಾಡುತ್ತಾ ಬಂದಿದ್ದಾರೆ.

ಇವರು 1954 ರಲ್ಲಿ ಚನ್ನಮ್ಮ ಎನ್ನುವವರನ್ನು ವಿವಾಹವಾದರು. ದೇವೇಗೌಡರಿಗೆ ಆರು ಜನ ಮಕ್ಕಳಿದ್ದಾರೆ. ನಾಲ್ಕು ಜನ ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು. ಮೊದಲನೆಯವರು ಹೆಚ್. ಡಿ. ಬಾಲಕೃಷ್ಣ ಗೌಡ ಇವರು ರಾಜಕೀಯದಿಂದ ದೂರ ಉಳಿದಿದ್ದು ಕೆಎಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಹೆಂಡತಿ ಕವಿತಾ ಹೊನ್ನಪ್ಪ ಇವರ ಮಗ ಕುನಾಲ್. ಕೆಲವು ವರ್ಷಗಳ ಹಿಂದಷ್ಟೇ ಅದ್ದೂರಿಯಾಗಿ ಮಗನ ಮದುವೆ ಮಾಡಿದ್ದಾರೆ. ಎರಡನೆಯವರು ಹೆಚ್.ಡಿ.ರೇವಣ್ಣ ಇವರು ಕೇವಲ ಏಳನೇ ತರಗತಿಯವರೆಗೆ ಓದಿದ್ದಾರೆ. ಇವರ ಹೆಂಡತಿ ಭವಾನಿ ರೇವಣ್ಣ ಇವರಿಗೆ ಪ್ರಜ್ವಲ್ ರೇವಣ್ಣ ಹಾಗೂ ಸೂರಜ್ ರೇವಣ್ಣ ಇಬ್ಬರು ಮಕ್ಕಳಿದ್ದಾರೆ. ಸೂರಜ್ ರೇವಣ್ಣನವರಿಗೆ ಮದುವೆಯಾಗಿದ್ದು ಪ್ರಜ್ವಲ್ ರೇವಣ್ಣನವರು ಹಾಸನ ಜಿಲ್ಲೆಯಿಂದ ಎಂ.ಪಿಯಾಗಿ ಆಯ್ಕೆಯಾಗಿದ್ದಾರೆ. ಮೂರನೆಯವರು ಹೆಚ್.ಡಿ.ಕುಮಾರಸ್ವಾಮಿ, ಇವರು ಬಿಎಸ್ಸಿ ಓದಿದ್ದಾರೆ ಇವರು ಎರಡು ಬಾರಿ ಮದುವೆಯಾಗಿದ್ದು ಮೊದಲನೆಯವರು ಅನಿತಾ ಕುಮಾರಸ್ವಾಮಿ, ಇವರು ಎಂಜಿನಿಯರಿಂಗ್ ಓದಿದ್ದಾರೆ . ಎರಡನೆಯವರು ರಾಧಿಕಾ ಕುಮಾರಸ್ವಾಮಿ. ಕುಮಾರಸ್ವಾಮಿಯವರಿಗೆ ನಿಖಿಲ್ ಮತ್ತು ಶಮಿಕಾ ಎಂಬ ಇಬ್ಬರು ಮಕ್ಕಳಿದ್ದಾರೆ. ನಿಖಿಲ್ ಅವರು ಕಳೆದ ವರ್ಷ ರೇವತಿಯವರನ್ನು ವಿವಾಹವಾಗಿದ್ದಾರೆ. ನಾಲ್ಕನೆಯವರು ಹೆಚ್. ಡಿ. ರಮೇಶ್ ಇವರು ವಿಕಿರಣ ಶಾಸ್ತ್ರಜ್ಞರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ, ಇವರ ಹೆಂಡತಿ ಸೌಮ್ಯ ರಮೇಶ್. ಐದನೆಯವರು ಅನುಸೂಯ ಮಂಜುನಾಥ್ ಇವರು ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಪತಿ ಮಂಜುನಾಥ್ ಹೃದ್ರೋಗ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊನೆಯವರು ಶೈಲಜಾ ಇವರು ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ ಇವರ ಪತಿ ಹೆಚ್.ಎಸ್.ಚಂದ್ರಶೇಖರ್ ಇವರು ಮೂಳೆ ಶಸ್ತ್ರಚಿಕಿತ್ಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಎಚ್.ಡಿ.ದೇವೇಗೌಡರು ಕರ್ನಾಟಕದಿಂದ ಆಯ್ಕೆಯಾದ ಮೊದಲ ಪ್ರಧಾನಿಯಾಗಿದ್ದಾರೆ ಹಾಗೂ ಕರ್ನಾಟಕದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನ ಮನ್ನಣೆ ಪಡೆದಿದ್ದಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: