WhatsApp Group Join Now
Telegram Group Join Now

ನೀವು ನಿಮ್ಮ ಮನೆಯಲ್ಲಿ ನೆಲವನ್ನು ಸ್ವಚ್ಛಗೊಳಿಸುವುದಕ್ಕೆ ಹಲವಾರು ರೀತಿಯ ಕೆಮಿಕಲ್ಸ್ ಗಳನ್ನು ಬಳಕೆ ಮಾಡುತ್ತೀರಿ ಫಿನಾಯಿಲ್ ಗಳನ್ನು ಬಳಕೆ ಮಾಡುತ್ತೀರಿ ಕೆಲವರು ಆಸಿಡ್ ಅನ್ನು ಕೂಡ ಬಳಕೆ ಮಾಡುತ್ತಾರೆ. ಮನೆಯಲ್ಲಿ ಚಿಕ್ಕಮಕ್ಕಳು ಇರುವಂಥವರು ಈ ರೀತಿಯ ಕೆಮಿಕಲ್ಸ್ ಗಳನ್ನು ಬಳಸಿ ನೆಲವನ್ನು ಒರೆಸಿ ಅದರ ಮೇಲೆ ಮಕ್ಕಳನ್ನು ಆಡುವುದಕ್ಕೆ ಬಿಟ್ಟರೆ ಮಕ್ಕಳು ನೆಲದ ಮೇಲೆ ಅಂಬೆಗಾಲಿಡುತ್ತಾ ಓಡಾಡಿ ಕೈಯಿಂದ ನೆಲವನ್ನು ಮುಟ್ಟಿ ಆ ಕೈಯನ್ನು ಬಾಯಿಯಲ್ಲಿ ಹಾಕಿಕೊಂಡಾಗ ಅಥವಾ ಕೆಲವು ತಿನ್ನುವಂತಹ ಪದಾರ್ಥಗಳನ್ನು ನೆಲದಮೇಲೆ ಬೀಳಿಸಿ ಅದನ್ನ ತೆಗೆದುಕೊಂಡು ತಿಂದರೆ ಅಥವಾ ಕೆಮಿಕಲ್ಸ್ ಅನ್ನ ಬಳಸಿ ನೆಲ ಒರಿಸಿದಾಗ ಅದೇ ಗಾಳಿ ಮನೆಯನ್ನೆಲ್ಲ ಆವರಿಸಿಕೊಳ್ಳುತ್ತದೆ ಅದನ್ನೇ ಉಸಿರಾಡುತ್ತೇವೆ.

ಅದೇ ನೆಲದ ಮೇಲೆ ಓಡಾಡಿ ಅದೇ ನೆಲದ ಮೇಲೆ ಹಾಸಿಗೆಯನ್ನು ಹಾಸಿ ಮಲಗಿಕೊಳ್ಳುತ್ತೇವೆ ಇದರಿಂದ ಅನೇಕ ದುಷ್ಪರಿಣಾಮಗಳು ಉಂಟಾಗುತ್ತವೆ. ಹಾಗಾಗಿ ಆ ದುಷ್ಪರಿಣಾಮಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಬಹಳ ಸುಲಭವಾದ ಉಪಾಯ ಇದೆ. ಮನೆಯಲ್ಲಿ ಯಾವುದೇ ಕಾರಣಕ್ಕೂ ಇರುವೆ ಬರಬಾರದು ಗೆದ್ದಿಲು ಬರಬಾರದು ಜಿರಳೆಗಳು ಓಡಾಡಬಾರದು ಶುದ್ಧವಾಗಿರಬೇಕು ಸ್ವಚ್ಛವಾಗಿರಬೇಕು ಎಂದರೆ ನೀವು ನೆಲ ಒರೆಸುವಾಗ ತಣ್ಣನೆಯ ನೀರನ್ನು ಬಳಕೆ ಮಾಡಬಾರದು ಅದರ ಬದಲಿಗೆ ಬಿಸಿಯಾದ ನೀರನ್ನು ಬಳಕೆ ಮಾಡಬೇಕು. ಆ ಬಿಸಿನೀರಿಗೆ ಎರಡರಿಂದ ಮೂರು ಹನಿ ನೀಲಗಿರಿ ಎಣ್ಣೆ ಎರಡು ಮೂರು ಹನಿ ಬೇವಿನ ಎಣ್ಣೆ ಹಾಕಿ ಮಿಶ್ರಣ ಮಾಡಿ ಆ ಮಿಶ್ರಣದಿಂದ ನೆಲವನ್ನು ಓರಿಸಬೇಕು ಹೀಗೆ ಮಾಡುವುದರಿಂದ ನೀವು ಎರಡು-ಮೂರು ದಿನ ಆದಮೇಲೆ ಯಾವುದೇ ಸಿಹಿಯನ್ನು ಕೆಳಗೆ ಚೆಲ್ಲಿದರು ಇರುವೆ ಬರುವುದಿಲ್ಲ

ಗೋದ್ದ ಮುತ್ತಿ ಕೊಳ್ಳುವುದಿಲ್ಲ ಜಿರಳೆ ಬರುವುದಿಲ್ಲ ಹಲ್ಲಿಗಳು ಓಡಾಡುವುದಿಲ್ಲ.
ನೀಲಗಿರಿ ಎಣ್ಣೆ ಸಸ್ಯ ಉತ್ಪನ್ನ ಇದರಿಂದ ಆರೋಗ್ಯಕ್ಕೆ ಯಾವುದೇ ರೀತಿಯಾದಂತಹ ಹಾನಿ ಉಂಟಾಗುವುದಿಲ್ಲ ಅದೇ ರೀತಿ ಬೇವಿನ ಎಣ್ಣೆ. ಬೇವಿನ ಎಣ್ಣೆಯಿಂದ ಕೂಡ ಯಾವುದೇ ರೀತಿಯಾದಂತಹ ದುಷ್ಪರಿಣಾಮ ಉಂಟಾಗುವುದಿಲ್ಲ. ಇದನ್ನು ಹಾಕಿ ನೆಲವನ್ನು ಒರಿಸಿದಾಗ ಮಕ್ಕಳು ನೆಲದ ಮೇಲೆ ಓಡಾಡಿದಾಗ ನೆಲದ ಮೇಲೆ ಬಿದ್ದ ವಸ್ತುವನ್ನು ತೆಗೆದುಕೊಂಡು ತಿಂದಾಗ ಅಥವಾ ನೀವು ನೆಲದ ಮೇಲೆ ಮಲಗಿದ್ದಾಗ ಯಾವುದೇ ರೀತಿಯ ದುಷ್ಪರಿಣಾಮ ಉಂಟಾಗುವುದಿಲ್ಲ.

ಒಂದು ವೇಳೆ ನೀವು ಆಸಿಡ್ ಅನ್ನು ಬಳಸಿ ನೆಲವನ್ನು ಒರಿಸಿ ಆ ನೆಲದ ಮೇಲೆ ಮಲಗಿಕೊಂಡಾಗ ಖಂಡಿತವಾಗಿ ಚರ್ಮರೋಗ ಕಾಣಿಸಿಕೊಳ್ಳುತ್ತದೆ. ಆದರೆ ಬೇವಿನ ಎಣ್ಣೆ ನೀಲಗಿರಿ ಎಣ್ಣೆಯನ್ನು ಬಳಸಿದಾಗ ಯಾವುದೇ ರೀತಿಯಾದಂತಹ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ಹಾಗಾಗಿ ನೀವು ಮನೆಯಲ್ಲಿ ಸ್ವಚ್ಛಗೊಳಿಸುವಾಗ ಕೆಮಿಕಲ್ಸ್ ಗಳನ್ನು ಬಳಸುವುದನ್ನು ಕಡಿಮೆ ಮಾಡಿ ನೈಸರ್ಗಿಕ ಉತ್ಪನ್ನಗಳನ್ನು ಬಳಸುವುದರಿಂದ ನೀವು ಕೂಡ ನಿಮ್ಮ ಕುಟುಂಬದವರಿಗೆ ಆರೋಗ್ಯದಿಂದ ಇರಬಹುದು. ಈ ಮಾಹಿತಿಯನ್ನು ನೀವು ತೆಗೆದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: