ಈ ಹುಬ್ಬು-ಕಾಮನಬಿಲ್ಲಿಗೆ ಭಾರೀ ನಂಟು. ನಿಮಗೂ ಗೊತ್ತಿರಬೇಕು. ಕಾಮನಬಿಲ್ಲಿನಂತಹ ಹುಬ್ಬು ಕುರಿತಂತೆ ಸಾಕಷ್ಟು ಪದ್ಯ, ಕವಿತೆ, ಹಾಡುಗಳೇ ಬಂದುಹೋಗಿವೆ. ಕಪ್ಪಗಿನ ಕಾಮನಬಿಲ್ಲಿನಾಕಾರದ ಹುಬ್ಬು ಹೆಣ್ಣುಮಕ್ಕಳ ಸೌಂದರ್ಯದ ಸಂಕೇತಗಳಲ್ಲಿ ಒಂದು. ತಿದ್ದು ತೀಡಿದಂತಹ ಹುಬ್ಬುಗಳು ಬೇಕೆಂದು ಹಲುಬುವ ಹೆಣ್ಣುಮಕ್ಕಳಿಲ್ಲ.
ಕಾಮನಬಿಲ್ಲಿನಂತಹ ಹುಬ್ಬು ಕಥೆ, ಸಿನಿಮಾದಲ್ಲಿನ ನಾಯಕಿಯರಿಗೆ ಸೀಮಿತ. ನಮ್ಮಂಥವರಿಗಲ್ಲಎಂದು ಕೊರಗುವ ಕಾಲ ಇದಲ್ಲ. ಹುಬ್ಬಲ್ಲಿ ಕೂದಲು ಇಲ್ಲದವರಿಗೆ, ಇರುವ ಕೂದಲನ್ನು ಇನ್ನಷ್ಟು ದಟ್ಟವಾಗಿ ಬೆಳೆಸಲು, ಕೂದಲು ಉದುರದಿರಲು ಪ್ರತಿಯೊಂದಕ್ಕೂ ಪರಿಹಾರವಿದೆ. ಈ ಲೇಖನದ ಮೂಲಕ ನಾವು ಕಣ್ಣಿನ ಹುಬ್ಬು ದಟ್ಟವಾಗಿ, ಕಪ್ಪಾಗಿ ಬೆಳೆಯಲು ಏನು ಮಾಡಬಹುದು ಎನ್ನುವುದನ್ನು ನೋಡೋಣ.
ಮೊದಲು ಹುಬ್ಬಿನ ಕೂದಲು ಬೆಳೆಯದಿರಲು ಕಾರಣಗಳೇನು? ನಂತರ ಅದಕ್ಕೆ ಪರಿಹಾರವೇನು ಎಂದು ತಿಳಿದುಕೊಳ್ಳೋಣ. ಹುಬ್ಬಿಗೆ ಒಂದೊಳ್ಳೆ ಆಕಾರ ಕೊಡುವವರು ಬ್ಯೂಟಿಷನ್ ಗಳು. ಆದರೆ ಅವರು ಕೂದಲನ್ನು ಥ್ರೆಡ್ಡಿಂಗ್ ಮಾಡುವಾಗ ಕೆಲವರಿಗೆ ಆ ನೋವನ್ನು ಸಹಿಸಲು ಸಾಧ್ಯವಾಗುವುದಿಲ್ಲ. ಅದಕ್ಕೆ ಮನೆಯಲ್ಲಿಯೇ ಪ್ಲಕ್ಕಿಂಗ್ ಮಾಡುತ್ತಾರೆ. ಹೀಗೆ ಕೂದಲನ್ನು ಪ್ಲಕ್ಕಿಂಗ್, ಥ್ರೆಡ್ಡಿಂಗ್ ಮಾಡುವಾಗ ಕೂದಲನ್ನು ಪದೆ ಪದೆ ಎಳೆದು ಕೂದಲಿನ ಕಿರುಚೀಲಗಳು ಶಾಶ್ವತವಾಗಿ ಹಾನಿಗೊಳಗಾಗುತ್ತವೆ.
ಹೊಸ ಕೂದಲು ಹುಟ್ಟುವುದಿಲ್ಲ. ಇನ್ನೂ ಚರ್ಮದ ಕಾಯಿಲೆಗಳು. ಎಸ್ಜಿಮಾ, ಸೋರಿಯಾಸಿಸ್, ಕೂದಲಿನ ಕೋಶದಲ್ಲಿ ಸೋಂಕಿನಂತಹ ಚರ್ಮದ ಕಾಯಿಲೆಗಳು ನಿಮ್ಮ ಹುಬ್ಬುಗಳ ಸುತ್ತ ತುರಿಕೆ, ಕೆಂಪು ಬಣ್ಣದ ಮೃದು ಬಾವು ಮತ್ತು ಉರಿಯೂತ ಉಂಟುಮಾಡುತ್ತದೆ. ಹೀಗಾದಾಗ ನಿಮ್ಮ ಕೂದಲು ಸ್ವಭಾವಿಕವಾಗಿ ಉದುರುತ್ತದೆ. ಮೂರನೆಯದಾಗಿ ಥೈರಾಯ್ಡ್ ಗ್ರಂಥಿಯು ಹಾರ್ಮೋನುಗಳನ್ನು ಬಿಡುಗಡೆ ಮಾಡುವುದರಿಂದ ಇದು ದೇಹದ ಅನೇಕ ಕಾರ್ಯಗಳನ್ನು ನಿಯಂತ್ರಿಸುತ್ತದೆ. ಇದು ಕೂದಲು ಉದುರುವುದಕ್ಕೆ ಕಾರಣವಾಗುತ್ತದೆ.
ಪೋಷಕಾಂಶಗಳ ಕೊರತೆ ನೆತ್ತಿಯ ಮೇಲೆ ಕೂದಲು ಉದುರುತ್ತಿದ್ದರೆ ಅದಕ್ಕೆ ಕಾರಣ ಪೋಷಕಾಂಶಗಳ ಕೊರತೆ. ಹುಬ್ಬುಗಳ ಮೇಲೂ ಇದು ಅದೇ ಪರಿಣಾಮವನ್ನು ಬೀರುತ್ತದೆ. ಕಬ್ಬಿಣ, ಸತು, ಪ್ರೊಟೀನ್, ವಿಟಮಿನ್ ಡಿ, ವಿಟಮಿನ್ ಬಿ 12, ಒಮೆಗಾ -3 ಕೊಬ್ಬಿನಾಮ್ಲ ಇರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕು. ದೈಹಿಕ ಒತ್ತಡವೂ ನಿಮ್ಮ ಹುಬ್ಬುಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ನೀವು ವಯಸ್ಸಾದಂತೆ ನಿಮ್ಮ ತಲೆ ಮತ್ತು ಹುಬ್ಬುಗಳ ಕೂದಲು ಉದುರುತ್ತವೆ.
ಹಾಗಾದ್ರೆ ದಟ್ಟವಾಗಿ ಹಾಗೂ ಕಪ್ಪಾಗಿ ಕಣ್ಣಿನ ಹುಬ್ಬುಗಳು ಬೇಳೆಯಲು ಮನೆಯಲ್ಲಿ ನಾವೇನು ಮಾಡಬೇಕು? ಎಂದು ನೋಡುವುದಾದರೆ, ಒಂದು ಈರುಳ್ಳಿಯನ್ನು ತೆಗೆದುಕೊಂಡು ಅದರ ಸಿಪ್ಪೆ ತೆಗೆದು ಮಿಕ್ಸಿ ಜಾರಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಒಂದು ಬೌಲ್ ಗೆ ನಮಗೆ ಬೇಕಾದಷ್ಟು ಅಂದರೆ ಸುಮಾರು ಒಂದು ಟೀ ಚಮಚ ಶ್ಟು ಈರುಳ್ಳಿ ಪೇಸ್ಟ್ ತೆಗೆದುಕೊಂಡು ಅದಕ್ಕೆ ಮನೆಯಲ್ಲೇ ಮಾಡಿದ ಅರಿಶಿನದ ಪುಡಿಯನ್ನು ಎರಡು ಚಿಟಿಕೆ ಆಗುವಷ್ಟು ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು.
ನಂತರ ಇದನ್ನು ನಿಮ್ಮ ಹುಬ್ಬಿಗೆ (eye brows) ಸರಿಯಾಗಿ ಸ್ವಲ್ಪ ಒತ್ತಿ ಹಚ್ಚಬೇಕು ಹೀಗೇ ಮಾಡುವುದರಿಂದ ನಮ್ಮ ಚರ್ಮ ಈರುಳ್ಳಿ ರಸವನ್ನು ಹೀರಿಕೊಂಡು ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹೀಗೇ ಹಚ್ಚಿ ಒಂದು ತಾಸು ಹಾಗೆಯೇ ಬಿಡಬೇಕು ನಂತರ ತಣ್ಣೀರಿನಲ್ಲಿ ಮುಖ ತೊಳೆಯಬೇಕು. ಈ ರೀತಿಯಾಗಿ ಪ್ರತೀ ದಿನ ಒಂದು ತಿಂಗಳು ಮಾಡಿದರೆ ಕಣ್ಣಿನ ಹುಬ್ಬುಗಳು ದಟ್ಟವಾಗಿ ಹಾಗೂ ಕಪ್ಪಾಗಿ ಬೆಳೆಯುತ್ತದೆ.
ಈರುಳ್ಳಿಯಲ್ಲಿ ಸಲ್ಫರ್, ಮಿನರಲ್ಸ್, ವಿಟಮಿನ್ ಬಿ ಮತ್ತು ಸಿ ಅಂಶಗಳು ಹೆಚ್ಚಾಗಿ ಇರುವುದರಿಂದ ಇದು ಕೂದಲು ಉದುರುವಿಕೆಗೆ ಬಹಳ ಸಹಾಯಕಾರಿ. ಕೂದಲು ಉದುರುವ ಜಾಗದಲ್ಲಿ ಹಚ್ಚಿದರೆ ದಟ್ಟವಾಗಿ ಕೂದಲು ಬೆಳೆಯುತ್ತದೆ. ಹಾಗಾಗಿ ಇರುಳಿಯನ್ನು ನಮ್ಮ ಹುಬ್ಬುಗಳ ಬೆಳವಣಿಗೆಗೆ ಕೂಡಾ ಬಳಕೆ ಮಾಡಲಾಗುತ್ತದೆ.
ವಿ ಸೂ:- ಈ ಮಿಶ್ರಣವನ್ನು ಚಿಕ್ಕ ಮಕ್ಕಳಿಗೆ ಹಚ್ಚಬಾರದು. 15 ವರ್ಷ ಮೇಲ್ಪಟ್ಟ ಮಹಿಳೆಯರು , ಪುರುಷರು ಇಬ್ಬರೂ ಸಹ ಈ ಮಿಶ್ರಣವನ್ನು ಬಳಸಬಹುದು.