ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸಾಮಾನ್ಯವಾಗಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನಾವಿಂದು ಗ್ಯಾಸ್ಟ್ರಿಕ್ ಉಂಟಾಗುವುದಕ್ಕೆ ಕಾರಣ ಏನು ಅದರ ಲಕ್ಷಣ ಮತ್ತು ಅದನ್ನು ಕಡಿಮೆ ಮಾಡುವುದಕ್ಕೆ ಯಾವ ರೀತಿಯಾಗಿ ಮನೆಮದ್ದನ್ನು ಬಳಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಗ್ಯಾಸ್ಟ್ರಿಕ್ ಉಂಟಾಗುವುದಕ್ಕೆ ಮೂಲಕಾರಣ ಹೊಟ್ಟೆಯಲ್ಲಿ ಆಮ್ಲತೆ ಉಂಟಾಗುವುದು ಆಮ್ಲ ಎಂದರೆ ಆಸಿಡ್. ಅಸಿಡಿಕ್ ಆಹಾರವನ್ನು ಹೆಚ್ಚಿಗೆ ತಿನ್ನುವುದರಿಂದ ಗ್ಯಾಸ್ಟ್ರಿಕ್ ಉಂಟಾಗುತ್ತದೆ. ಕೇವಲ ಆಹಾರ ತಿನ್ನುವುದರಿಂದ ಮಾತ್ರ ಗ್ಯಾಸ್ಟ್ರಿಕ್ ಹೆಚ್ಚಾಗುವುದಿಲ್ಲ ಜೊತೆಗೆ ಅಸಿಡಿಕ್ ಉಂಟಾಗುವಂತಹ ಮನಸ್ಥಿತಿಯನ್ನು ಇಟ್ಟುಕೊಳ್ಳುವಂತದ್ದು ಅಸಿಡಿಕ್ ಉಂಟಾಗುವುದಕ್ಕೆ ಕಾರಣವಾಗಿರುತ್ತದೆ.
ಆಹಾರ ವಿಹಾರ ಮತ್ತು ವಿಚಾರ ಕ್ರಮಗಳಿಂದಲೂ ಆಸಿಡ್ ವೃದ್ಧಿ ಆಗುವಂತಹ ಅರ್ಥಾತ್ ಪಿತ್ತ ಹೆಚ್ಚಾಗುವಂತಹ ಸಂಭವ ಇರುತ್ತದೆ. ಪಿತ್ತ ವೃದ್ಧಿ ಆಗುವಂತಹ ಆಹಾರ ಪದಾರ್ಥಗಳು ಕರಿದ ಹುರಿದ ಆಹಾರ ಪದಾರ್ಥ ಖಾರ ಆಹಾರ ಪದಾರ್ಥ ಮಾಂಸಾಹಾರ ಪದಾರ್ಥ ಮತ್ತು ಮಧ್ಯಪಾನ ಯಾವಾಗೆಂದರೆ ಆವಾಗ ತಿನ್ನುವುದು ಇವು ಪಿತ್ತ ವೃದ್ಧಿಕಾರಕ ಆಹಾರ ಪದಾರ್ಥಗಳು. ಪಿತ್ತ ವೃದ್ಧಿಕರ ವಿಹಾರ ಯಾವುದು ಎಂದರೆ ಬಿಸಿಲಿನಲ್ಲಿ ಹೆಚ್ಚು ಹೊತ್ತು ಕೆಲಸ ಮಾಡುವಂತದ್ದು. ಆಯುರ್ವೇದದ ಪ್ರಕಾರ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುವುದಕ್ಕೆ ಕೇವಲ ಆಹಾರ ಪದಾರ್ಥ ಮಾತ್ರ ಕಾರಣವಲ್ಲ ವಿಹಾರವು ಕಾರಣವಾಗುತ್ತದೆ ಅದರ ಜೊತೆ ವಿಚಾರವು ಕಾರಣವಾಗುತ್ತದೆ.
ಕಾಮ ಕ್ರೋಧ ಮೋಹ ಮದ ಮತ್ಸರ ಯಾವಾಗ ಮನಸ್ಸಿನಲ್ಲಿ ಬರುತ್ತದೆ ಆಗ ಮನಸ್ಸಿನಲ್ಲಿ ಪಿತ್ತವೃದ್ಧಿ ಆಗುತ್ತದೆ. ಮನಸ್ಸಿನಲ್ಲಿ ಪಿತ್ತ ವೃದ್ಧಿ ಆದಾಗ ಅದೇ ಗುಣಧರ್ಮಗಳು ದೇಹಕ್ಕೆ ಬರುತ್ತವೆ. ಗ್ಯಾಸ್ಟ್ರಿಕ್ ಎನ್ನುವುದು ಕೇವಲ ದೈಹಿಕ ಕಾಯಿಲೆ ಅಲ್ಲ ಇದು ಮಾನಸಿಕವಾಗಿಯೂ ಬರುತ್ತದೆ. ನೀವು ಉದ್ವೇಗಕ್ಕೆ ಒಳಗಾದಾಗ ಸಿಟ್ಟು ಮಾಡಿಕೊಂಡರೆ ಕ್ರೋದ ಮಾಡಿಕೊಂಡರೆ ಅಸೂಯೆ ಪಟ್ಟರೆ ಗ್ಯಾಸ್ಟ್ರಿಕ್ ಹೆಚ್ಚಾಗುತ್ತದೆ.
ಇನ್ನು ಗ್ಯಾಸ್ಟ್ರಿಕ್ ಲಕ್ಷಣಗಳು ಯಾವ ರೀತಿಯಾಗಿರುತ್ತದೆ ಎಂದರೆ ಹೊಟ್ಟೆಯಲ್ಲಿ ಉರಿ ಸಂಕಟ ಕಾಣಿಸಿಕೊಳ್ಳುತ್ತದೆ. ಹೊಟ್ಟೆ ಉಬ್ಬರಿಸುತ್ತದೆ ಗಾಬರಿ ಗಾಬರಿಯಾಗುತ್ತದೆ ತಲೆ ಚಕ್ರ ಬರುತ್ತದೆ ಕಣ್ಣು ಮಂಜು ಬಂದಂತೆ ಆಗುತ್ತದೆ. ಸುಸ್ತಾಗುತ್ತದೆ ಎದೆ ಹೊಡೆದುಕೊಳ್ಳುತ್ತದೆ ಒಂದೊಂದು ಸಾರಿ ಒಂದೊಂದು ರೀತಿಯಾಗಿ ಕಾಣಿಸಿಕೊಳ್ಳುತ್ತದೆ. ಗ್ಯಾಸ್ಟಿಕ್ ಗೆ ಸುಲಭ ಪರಿಹಾರ ನಾಭಿ ಚಿಕಿತ್ಸೆ. ಗ್ಯಾಸ್ಟ್ರಿಕ್ ಉಂಟಾದಾಗ ಉಗುರು ಬೆಚ್ಚಗಿನ ಎಣ್ಣೆಯಿಂದ ಹೊಟ್ಟೆಯ ಮೇಲೆ ಮಸಾಜ್ ಮಾಡಿಕೊಳ್ಳಬೇಕು.
ಅಂಗಾತ ಮಲಗಿಕೊಂಡು ನಾಭಿಗೆ ಎಳ್ಳು ಎಣ್ಣೆ ಅಥವಾ ಬಾದಾಮಿ ಎಣ್ಣೆ ಅಥವಾ ಎರಡು ಹನಿ ತುಪ್ಪವನ್ನು ಹಾಕಿ ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಪ್ರತಿದಿನ ಎರಡು ಹನಿ ಎಣ್ಣೆ ಅಥವಾ ತುಪ್ಪವನ್ನು ಹಚ್ಚಿಕೊಂಡು ಹತ್ತು ನಿಮಿಷ ಮಲಗಿಕೊಳ್ಳಬೇಕು ನಂತರ ಸ್ನಾನ ಮಾಡಬೇಕು ಈ ರೀತಿ ಮಾಡುವುದರಿಂದ ನಾಭಿಯ ಒಳಗೂ ಸ್ವಲ್ಪ ಪ್ರಮಾಣದಲ್ಲಿ ಎಣ್ಣೆ ಹೋಗುತ್ತದೆ ಜೊತೆಗೆ ಸುತ್ತಮುತ್ತಲಿನ ಮಾಂಸಖಂಡಕ್ಕೆ ಶಕ್ತಿ ದೊರೆಯುತ್ತದೆ ಮತ್ತು ಹಿಗ್ಗುವಿಕೆ ಕುಗ್ಗುವಿಕೆ ವೃದ್ಧಿ ಆಗುತ್ತದೆ.
ಗ್ಯಾಸ್ಟ್ರಿಕ್ಗೆ ನಾಭಿ ಚಿಕಿತ್ಸೆ ಪಡೆದುಕೊಂಡರೆ ಅದರ ಜೊತೆಗೆ ಇನ್ನೂ ಅನೇಕ ಪ್ರಯೋಜನಗಳು ಉಂಟಾಗುತ್ತವೆ ಲಿವರಿಗೆ ಸಹಾಯ ಆಗುತ್ತದೆ ಕರುಳಿಗು ಸಹಾಯವಾಗುತ್ತದೆ ಹೆಣ್ಣುಮಕ್ಕಳ ಗರ್ಭ ಕೋಶಕ್ಕೂ ಸಹಾಯ ಆಗುತ್ತದೆ. ಹಾಗಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾದಾಗ ನಾವು ಮೇಲೆ ತಿಳಿಸಿರುವ ಪರಿಹಾರವನ್ನು ಮಾಡಿಕೊಳ್ಳುವುದು ಸೂಕ್ತ. ನೀವು ಕೂಡ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಎದುರಿಸುತ್ತಿದ್ದರೆ ನಾವು ಹೇಳಿರುವ ಮಾರ್ಗಗಳನ್ನು ಅನುಸರಿಸಿ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.