ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಸಾಮಾನ್ಯವಾಗಿ ಶೀತ ಕೆಮ್ಮು ಕಫ ಆಗುತ್ತಿರುವುದನ್ನು ಎಲ್ಲಾ ಕಡೆಗಳಲ್ಲಿಯೂ ನಾವು ನೋಡುತ್ತಿದ್ದೇವೆ. ವಾತಾವರಣದಲ್ಲಿನ ಏರುಪೇರಿನಿಂದಾಗಿ ಇರಬಹುದು ಅಥವಾ ನಾವು ಸೇವಿಸುವಂತಹ ಆಹಾರದಿಂದ ನಮ್ಮಲ್ಲಿ ಶೀತ ಕೆಮ್ಮು ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ಕೆಮ್ಮು ಕಾಣಿಸಿಕೊಂಡಾಗ ಜನರು ಹೆಚ್ಚಾಗಿ ತುಳಸಿ ರಸವನ್ನು ಬಳಸುತ್ತಾರೆ ಶುಂಠಿ ಕಷಾಯವನ್ನು ಬಳಸುತ್ತಾರೆ. ನಾವಿಂದು ಒಣಕೆಮ್ಮು ಕಾಣಿಸಿಕೊಂಡಾಗ ಯಾವ ಮನೆಮದ್ದನ್ನು ಮಾಡಿದರೆ ಅದು ಬೇಗ ಕಡಿಮೆಯಾಗುತ್ತದೆ ಎಂಬುದು ಕುರಿತಾದ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇವೆ.
ಕೆಮ್ಮಿನಲ್ಲಿ ಎರಡು ವಿಧ ಒಂದು ಶುಷ್ಕ ಕೆಮ್ಮು ಮತ್ತು ಆರ್ದ್ರ ಕೆಮ್ಮು. ಶುಷ್ಕ ಕೆಮ್ಮು ಎಂದರೆ ಅದು ಒಣ ಕೆಮ್ಮು ಕಫ ಇರುವುದಿಲ್ಲ ಒಣಕೆಮ್ಮು ಕಾಣಿಸಿಕೊಂಡಂತೆ ಸಮಯದಲ್ಲಿ ಕಫ ಇರುವ ಕೆಮ್ಮಿಗೆ ಕೊಡುವಂತಹ ಔಷಧಿಯನ್ನು ಕೊಟ್ಟರೆ ಅದು ಕೆಲಸ ಮಾಡುವುದಿಲ್ಲ. ಹಾಗಾದರೆ ಒಣಕೆಮ್ಮಿಗೆ ಯಾವ ಮನೆಮದ್ದನ್ನು ಬಳಸಬೇಕು ಎಂದರೆ ಕಲ್ಲುಸಕ್ಕರೆ ವಂಶ ಲೋಚನ ಇದು ಗ್ರಂಥಿ ಅಂಗಡಿಗಳಲ್ಲಿ ಸಿಗುತ್ತದೆ ಸಿಕ್ಕರೆ ಒಳ್ಳೆಯದು ಇಲ್ಲದಿದ್ದರೆ ಅದನ್ನ ಬಿಡಬೇಕು ನಂತರ ಏಲಕ್ಕಿ ಚಕ್ಕೆ ಇವುಗಳನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಅದನ್ನು ತುಳಸಿ ರಸದ ಜೊತೆಗೆ ದಿನದಲ್ಲಿ ನಾಲ್ಕರಿಂದ ಐದು ಬಾರಿ ಎರಡೆರಡು ಎಂಎಲ್ ಕುಡಿಯುತ್ತಾ ಬಂದರೆ ಒಣಕೆಮ್ಮು ಕೇವಲ ಮೂರು ದಿನದಲ್ಲಿ ಸಂಪೂರ್ಣವಾಗಿ ಕಡಿಮೆಯಾಗುತ್ತದೆ.
ಒಣಕೆಮ್ಮಿಗೆ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ಸಿಗುವ ಪ್ರತಿಯೊಬ್ಬರೂ ಬಳಸಬಹುದಾದ ಜೇನುತುಪ್ಪವನ್ನು ಬಳಸಬಹುದು. ಮಲಗುವ ಸಮಯದಲ್ಲಿ ಎರಡು ಚಮಚ ಜೇನುತುಪ್ಪವನ್ನು ಸ್ವಲ್ಪ ಬಿಸಿ ಮಾಡಿಕೊಂಡು ಸೇವನೆ ಮಾಡಬೇಕು ಅಥವಾ ಸ್ವಲ್ಪ ಉಗುರು ಬೆಚ್ಚಗಿನ ನೀರಿಗೆ ಎರಡು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ ಕುಡಿಯುವುದರಿಂದ ಬಹಳ ಸುಲಭವಾಗಿ ಒಣಕೆಮ್ಮು ಕಡಿಮೆಯಾಗುತ್ತದೆ. ಇನ್ನು ಕೆಮ್ಮು ಕಾಣಿಸಿಕೊಂಡಾಗ ಶುಂಠಿಯನ್ನು ಬಳಸಬಹುದು ಶುಂಠಿಯಲ್ಲಿ ಕೆಮ್ಮನ್ನು ಕಡಿಮೆ ಮಾಡುವಂತಹ ಔಷಧೀಯ ಗುಣಗಳಿವೆ.
ಕೆಮ್ಮು ಕಾಣಿಸಿಕೊಂಡಾಗ ಶುಂಠಿಯನ್ನು ಹಸಿಯಾಗಿ ಚೂರು ಮಾಡಿಕೊಂಡು ಸೇವಿಸಬಹುದು ಅಥವಾ ಶುಂಠಿ ಬಳಸಿ ಚಹಾ ತಯಾರಿಸಿ ಅದನ್ನು ಕುಡಿಯುವ ಸಮಯದಲ್ಲಿ ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಮಿಶ್ರಣಮಾಡಿ ಕುಡಿಯುವುದರಿಂದ ಗಂಟಲಿನ ಸಮಸ್ಯೆ ಕಡಿಮೆಯಾಗುತ್ತದೆ ಮತ್ತು ಒಣ ಕೆಮ್ಮು ಬೇಗನೆ ಕಡಿಮೆಯಾಗುತ್ತದೆ. ನಿಮಗೆ ಒಣಕೆಮ್ಮು ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷ ಮಾಡದೆ ನಾವು ಮೇಲೆ ತಿಳಿಸಿರುವ ಸುಲಭವಾಗಿ ಮಾಡಬಹುದಾದ ಮನೆಮದ್ದುಗಳನ್ನು ಮಾಡಿಕೊಳ್ಳುವ ಮೂಲಕ ಕೆಮ್ಮನ್ನು ನಿರ್ಮೂಲನೆ ಮಾಡಿಕೊಳ್ಳಿ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ಈ ಮಾಹಿತಿಯನ್ನು ತಿಳಿಸಿರಿ.