ಕೆಲವರಿಗೆ ಸರ್ಕಾರಿ ಕಛೇರಿಗಳಲ್ಲಿ ಕೆಲಸ ಮಾಡಬೇಕೆಂಬ ಮಹದಾಸೆ ಇರುತ್ತದೆ ಆದರೆ ಈಗಿನ ಪರಿಸ್ಥಿತಿಯಲ್ಲಿ ಸರ್ಕಾರಿ ಹುದ್ದೆಗಳು ಸಿಗುವುದೆ ಕಷ್ಟವಾಗಿದೆ. ಕರ್ನಾಟಕ ಸರ್ಕಾರದ ಕಂದಾಯ ಭವನದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಅರ್ಹತೆ ಇರುವವರು ಅರ್ಜಿ ಸಲ್ಲಿಸುವ ಮೂಲಕ ಉದ್ಯೋಗವನ್ನು ಪಡೆಯಬಹುದಾಗಿದೆ ಹಾಗಾದರೆ ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಕರ್ನಾಟಕ ರಾಜ್ಯದ ಕಂದಾಯ ಭವನದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ದಲಾಯತ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಸಾಮಾನ್ಯ ವರ್ಗದವರಿಗೆ 3 ಹುದ್ದೆಗಳು ಪರಿಶಿಷ್ಟ ಜಾತಿಗೆ 1 ಹುದ್ದೆ, ಪರಿಶಿಷ್ಟ ಪಂಗಡದವರಿಗೆ 1 ಹುದ್ದೆ, ಪ್ರವರ್ಗ-2 ಎ ವರ್ಗದವರಿಗೆ 1 ಹುದ್ದೆ, ಪ್ರವರ್ಗ-3ಎ ವರ್ಗದವರಿಗೆ ಒಂದು ಹುದ್ದೆ ಇದ್ದು ಒಟ್ಟು ಇಲಾಖೆಯಲ್ಲಿ ಏಳು ಹುದ್ದೆಗಳಿವೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 17,000 ರೂಪಾಯಿಯಿಂದ 28,000 ರೂಪಾಯಿವರೆಗೆ ವೇತನ ಇರುತ್ತದೆ. ಇವುಗಳಿಗೆ 10ನೆ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು. ನೇರ ನೇಮಕಾತಿಯ ಮೂಲಕ ಆಯ್ಕೆಮಾಡಲಾಗುತ್ತದೆ ಯಾವುದೆ ಪರೀಕ್ಷೆಗಳು ಇರುವುದಿಲ್ಲ.
ಅರ್ಜಿ ಸಲ್ಲಿಸಲು ಇದೆ ತಿಂಗಳು 25ನೆ ತಾರೀಖು ಕೊನೆಯ ದಿನಾಂಕವಾಗಿದೆ. ಅರ್ಜಿಯನ್ನು ನೆಟ್ ನಿಂದ ಡೌನ್ ಲೋಡ್ ಮಾಡಿಕೊಂಡು ಭರ್ತಿ ಮಾಡಿ ವಿಲೇಖನಾಧಿಕಾರಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಕಂದಾಯ ಭವನ ಏಳನೆ ಮಹಡಿ, ಕೆ ಜಿ ರಸ್ತೆ ಬೆಂಗಳೂರು 560 009 ಈ ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆ ಮೂಲಕ ಕಳುಹಿಸಬೇಕು. ಸಾಮಾನ್ಯ ವರ್ಗದವರಿಗೆ ಹಾಗೂ ಇತರೆ ಹಿಂದುಳಿದ ವರ್ಗದವರಿಗೆ 150 ರೂಪಾಯಿ ಅರ್ಜಿ ಶುಲ್ಕ ಇರುತ್ತದೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಅರ್ಜಿ ಶುಲ್ಕವನ್ನು ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ಗಳಲ್ಲಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು, ಸಾಮಾನ್ಯ ವರ್ಗದವರಿಗೆ ಗರಿಷ್ಠ 35 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ವರ್ಗದವರಿಗೆ ಗರಿಷ್ಟ 40ವರ್ಷ, 2 ಎ, 2 ಬಿ, 3 ಎ, 3 ಬಿ ವರ್ಗದವರಿಗೆ ಗರಿಷ್ಠ 38 ವರ್ಷ ವಯಸ್ಸಿನವರೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಫಾರ್ಮ್ ನಲ್ಲಿ ಹತ್ತನೆ ಕ್ಲಾಸಿನ ಅಂಕಪಟ್ಟಿಯಲ್ಲಿ ಇರುವಂತೆ ಅಭ್ಯರ್ಥಿಯ ಹೆಸರು, ತಾಯಿಯ ಹೆಸರು, ತಂದೆಯ ಹೆಸರು, ಪತಿ ಅಥವಾ ಪತ್ನಿಯ ಹೆಸರು, ಪೋಷಕರ ಹೆಸರು, ಅಂಚೆ ವಿಳಾಸ ಪಿನ್ ಕೋಡ್, ದೂರವಾಣಿ ಸಂಖ್ಯೆ, ಜನ್ಮ ದಿನಾಂಕ, ಎಸ್ಎಸ್ಎಲ್ ಸಿ ತೆರ್ಗಡೆಯಾದ ವರ್ಷ, ಶಾಲೆಯ ಹೆಸರು, ಅರ್ಜಿ ಶುಲ್ಕ ಪಾವತಿಸಿದ ವಿವರ, ಸ್ಥಳ, ದಿನಾಂಕ, ಅಭ್ಯರ್ಥಿಯ ಸಹಿ, ಪಾಸ್ ಪೋರ್ಟ್ ಸೈಜಿನ ಫೋಟೋವನ್ನು ಅಂಟಿಸಬೇಕು ಮೇಲೆ ಹೇಳಿದ ವಿಳಾಸಕ್ಕೆ ಅರ್ಜಿ, ಆಧಾರ್ ಕಾರ್ಡ್, ಎಸ್ಎಸ್ಎಲ್ ಸಿ ಮಾರ್ಕ್ಸ್ ಕಾರ್ಡ್ ಗಳನ್ನು ಕಳುಹಿಸಬೇಕಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಉದ್ಯೋಗ ಹುಡುಕುತ್ತಿರುವ ಯುವಕ ಯುವತಿಯರಿಗೆ ತಿಳಿಸಿ.