ದೇವರ ಮನೆಯಲ್ಲಿ ಮಣ್ಣಿನಿಂದ ಮಾಡಿದ ದೇವಾನುದೇವತೆಗಳ ವಿಗ್ರಹ ವಿಗ್ರಹವನ್ನು ಇಟ್ಟು ಪೂಜೆ ಮಾಡುವುದರಿಂದ ಆರ್ಥಿಕ ಸಮಸ್ಯೆ ದೂರವಾಗಿ ಧನಾಗಮನವಾಗುತ್ತದೆ. ಆಗ್ನೇಯ ದಿಕ್ಕಿನಲ್ಲಿ ಮಣ್ಣಿನಿಂದ ಮಾಡಿರುವ ಹಕ್ಕಿಯನ್ನು ಇಡಬೇಕು ಹಾಗೆ ಈಶಾನ್ಯ ದಿಕ್ಕಿನಲ್ಲಿ ಮಣ್ಣಿನ ಹೂಜಿಯನ್ನು ಇಡುವುದರಿಂದ ಸಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶ ಮಾಡುತ್ತದೆ.
ಬೌದ್ಧಿಕ ಆಧ್ಯಾತ್ಮಿಕ ಮಾನಸಿಕ ತೊಂದರೆಯಿಂದ ಬಳಲುತ್ತಾ ಇರುವವರು ಮಣ್ಣಿನ ಹೂಜೆಯಲ್ಲಿ ಗಿಡಕ್ಕೆ ನೀರನ್ನು ಹಾಕಬೇಕು, ಮಣ್ಣಿನ ಮಡಿಕೆಯಲ್ಲಿ ನೀರು ಕುಡಿದರೆ ಬುಧ ಮತ್ತು ಚಂದ್ರನ ಕೃಪೆಗೆ ಪಾತ್ರರಾಗುತ್ತೀರಿ. ಮನಸ್ಸಿಗೊಪ್ಪವ ನೌಕರಿ ಪಡೆಯುವುದಕ್ಕೆ ಮಣ್ಣಿನ ಹೂಜೆಯಲ್ಲಿ ನೀರನ್ನು ತುಂಬಿ ಅದನ್ನ ಅರಳಿ ಮರಕ್ಕೆ ಹಾಕಬೇಕು ಇದು ಮಣ್ಣಿಗೆ ಇರುವ ಮಹತ್ವದ ಸಾರವನ್ನು ಹೇಳುತ್ತದೆ.ಮಣ್ಣಿನ ಪಾತ್ರೆಯಲ್ಲಿ ನೀರನ್ನು ತುಂಬಿ ಮನೆ ಈಶಾನ್ಯ ದಿಕ್ಕಿನಲ್ಲಿ ಇಡುವುದರಿಂದ ನೆಗೆಟಿವ್ ಎನರ್ಜಿ ದೂರವಾಗುತ್ತದೆ. ಮಣ್ಣಿನ ಅಲಂಕಾರಿಕ ವಸ್ತುಗಳನ್ನ ಆಗ್ನೇಯ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.
ವೆಲ್ತ್ ಫ್ರಾಗ್ ಸಂಪತ್ತಿನ ಅದೃಷ್ಟಕ್ಕೆ ಪ್ರಸಿದ್ಧವಾದ ಅತ್ಯುತ್ತಮ ಸಂಕೇತವಾಗಿದೆ ಈ ಎರಡು ಶುಭ ಪ್ರಾಣಿಗಳು ಸಂಯೋಜಿಸಲ್ಪಟ್ಟಿದ್ದು ಅವು ಸ್ಥಿರತೆ ಮತ್ತು ವಿಜಯವನ್ನು ತರುತ್ತದೆ ಇದು ಮನೆಯಲ್ಲಿ ಅದೃಷ್ಟವನ್ನು ಬದಲಾಯಿಸುವುದಕ್ಕೆ ಇಡಬಹುದಾದಂತಹ ಉತ್ತಮ ವಾಸ್ತು ವಸ್ತುವಾಗಿದೆ. ಅದೇ ರೀತಿ ಕೆಲವು ವಸ್ತುಗಳನ್ನು ನೀವು ಜೊತೆಯಲ್ಲಿಟ್ಟುಕೊಂಡರೆ ಸಾಕು ನಿಮಗೆ ಅದೃಷ್ಟ ದೊರೆಯುತ್ತದೆ ಅವು ಯಾವುದೆಂದರೆ ಕುದುರೆ ಕಾಲಿನ ಲಾಳವನ್ನು ಇಟ್ಟುಕೊಂಡರೆ ಬಹಳ ಒಳ್ಳೆಯದು
ಇದನ್ನು ಮನೆಯ ಬಾಗಿಲಿಗೆ ಅಥವಾ ನೀವು ವ್ಯಾಪಾರ ಮಾಡುವಂತಹ ಸ್ಥಳದಲ್ಲಿ ಇಟ್ಟರೆ ನಿಮಗೆ ಖಂಡಿತವಾಗಿ ಶುಭವಾಗುತ್ತದೆ ಅದೃಷ್ಟ ಒದಗಿ ಬರುವುದಕ್ಕೆ ಸಾಧ್ಯವಾಗುತ್ತದೆ ಇದನ್ನು ನಿಮ್ಮ ಬೀಗದ ಕೈಗೆ ಕೂಡ ನೇತಾಕಬಹುದು ಅಥವಾ ಸದಾಕಾಲ ಜೊತೆಯಲ್ಲಿ ಇಟ್ಟುಕೊಳ್ಳಬೇಕು. ಹೊಸ ಪರ್ಸ್ ಅಥವಾ ಹೊಸ ಬ್ಯಾಗ್ ತೆಗೆದುಕೊಂಡಿದ್ದರೆ ಅದರಲ್ಲಿ ಒಂದು ನಾಣ್ಯ ಹಾಕಿ ಇದು ಹೇಗೆ ನಿಮ್ಮ ಆರ್ಥಿಕ ಸ್ಥಿತಿಯನ್ನು ಬದಲಾಯಿಸುತ್ತದೆ ಬದಲಾವಣೆಯಲ್ಲಿ ಜಾದು ಮಾಡುತ್ತದೆ ಎಂದು ನೀವೇ ನೋಡಿ ಆಶ್ಚರ್ಯ ಪಡುತ್ತೀರಿ ಯಾಕೆಂದರೆ ಈ ಪರಿಹಾರವನ್ನು ಮಾಡುವುದರಿಂದ ಹಣವು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಅಂತ ಹೇಳುತ್ತಾರೆ.
ನೀವು ಉದ್ಯೋಗ ಅರಸಿ ಸಂದರ್ಶನಕ್ಕೆ ಹೋಗುವಾಗ ನಿಮ್ಮ ಪರ್ಸನ್ನು ಸ್ವಚ್ಛ ಮಾಡಿ ಅದರಲ್ಲಿ ಅರಳಿಮರದ ಎಲೆಯನ್ನು ಇಟ್ಟುಕೊಳ್ಳಿ ಆದರೆ ಯಾವುದೇ ಕಾರಣಕ್ಕೂ ಕೂಡ ಎಲೆಯು ಹರಿದಿರುವಂಥದ್ದು ಅಥವಾ ಮುರಿದು ಹೋಗಿರೋ ಬಾರದು ಅದನ್ನು ಖಚಿತಪಡಿಸಿಕೊಳ್ಳಿ ಇದು ಸಾಕಷ್ಟು ಲಾಭವನ್ನು ಕೊಡುತ್ತದೆ. ವಾಸ್ತು ಪ್ರಕಾರ ನಿಮ್ಮ ಮನೆಯನ್ನ ಯಾವಾಗಲೂ ಸ್ವಚ್ಛವಾಗಿ ಸುಚ್ಚಿಯಾಗಿ ಗಲೀಜು ಇಲ್ಲದೆ ಇರುವ ರೀತಿಯಲ್ಲಿ ಇಟ್ಟುಕೊಳ್ಳಬೇಕು ಬೇಡದೆ ಇರುವಂತಹ ವಸ್ತುಗಳನ್ನ, ಹರಿದ ಬಟ್ಟೆಗಳನ್ನ, ಒಡೆದು ಹೋಗಿರುವಂತಹ ವಸ್ತುಗಳನ್ನು ನಿಮ್ಮ ಪರ್ಸತ್ವ ನಿಮ್ಮ ಬ್ಯಾಗ್ ನಲ್ಲಿ ಸಂಗ್ರಹ ಮಾಡಬಾರದು
ಇದು ಬಹಳ ಋಣಾತ್ಮಕ ಶಕ್ತಿಯನ್ನು ಆಕರ್ಷಣೆ ಮಾಡುತ್ತದೆ, ನಿಮ್ಮಲ್ಲಿರುವ ಹಣ ವ್ಯರ್ಥವಾಗಿ ಹರಿದು ಹೋಗುತ್ತವೆ ಅಂತ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ನೀವು ಮನೆಯಲ್ಲಿ ಅಥವಾ ಪರ್ಸ್ ನಲ್ಲಿ ನವಿಲುಗರಿಯನ್ನು ಹಳದಿ ಬಟ್ಟೆಯಲ್ಲಿ ಅಥವಾ ಕೆಂಪು ಬಣ್ಣದ ಬಟ್ಟೆಯಲ್ಲಿ ಸುತ್ತಿ ಸುಲಭವಾಗಿ ಸಿಗುವ ತರ ಇಟ್ಟುಕೊಳ್ಳಬೇಕು ಇದು ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆ ಎಲ್ಲಿಲದಂತಹ ಅದೃಷ್ಟವನ್ನು ತಂದುಕೊಡುತ್ತದೆ ನಿಮ್ಮ ಮನೆಗೆ ಯಾವುದೇ ರೀತಿ ದೃಷ್ಟಿ ಬಾರದಂತೆ ಇದು ನಿಮ್ಮನ್ನು ಕಾಪಾಡುತ್ತದೆ.
ಅರಿಶಿಣದ ಅಕ್ಕಿಯನ್ನು ಶುಭ ಕಾರ್ಯಕ್ಕೆ ಮತ್ತು ಮಂಗಳ ಕಾರ್ಯಕ್ಕೆ ಉಪಯೋಗಿಸುತ್ತಾರೆ ಹಾಗಾಗಿ ಸಾಧ್ಯವಾದಲ್ಲಿ ನಿಮ್ಮ ಜೊತೆ ಯಾವಾಗಲೂ ಅರಿಶಿನ ಬಣ್ಣದ ಬಟ್ಟೆ ಇಟ್ಟುಕೊಳ್ಳಿ. ಅರಿಶಿನ ಬಣ್ಣದ ಕರ್ಚಿಫ್ ಅನ್ನು ಉಪಯೋಗಿಸಿ ಅಥವಾ ಅರಿಶಿನ ಬಣ್ಣದ ಬಟ್ಟೆಯನ್ನು ಹಾಕಿಕೊಳ್ಳಿ ಇದರಿಂದ ಗುರು ಗ್ರಹ ಸಂಪೂರ್ಣವಾಗಿ ಅನುಗ್ರಹವಾಗಿ ನಿಮ್ಮ ಜೀವನಕ್ಕೆ ಗುರುವಿನ ಆಶೀರ್ವಾದ ಸಿಗುತ್ತದೆ ಅಂತ ಹೇಳಲಾಗುತ್ತದೆ.
ಅದೇ ರೀತಿ ಬಾಳೆ ಗಿಡದ ಬೇರನ್ನು ನಿಮ್ಮ ಬಳಿ ಇಟ್ಟುಕೊಂಡರೆ ಶುಭವಾಗುತ್ತದೆ ಇದರಿಂದ ಗುರುದೋಷ ದೂರವಾಗುತ್ತದೆ ನಿತ್ಯ ಈ ವಸ್ತುವನ್ನು ಜೇಬಿನಲ್ಲಿ ಅಥವಾ ಪರ್ಸಿನಲ್ಲಿ ಇಟ್ಟುಕೊಳ್ಳುವುದರಿಂದ ಸಾಕಷ್ಟು ಒಳ್ಳೆಯದಾಗುತ್ತದೆ. ಸದಾಕಾಲ ಜೊತೆಗಿರುವ ಪತ್ನಿಯನ್ನು ಚೆನ್ನಾಗಿ ನೋಡಿಕೊಂಡರೆ ದೇವಿ ಲಕ್ಷ್ಮಿ ಆಶೀರ್ವಾದ ಸಿಗುತ್ತದೆ ಹಾಗಾಗಿ ಶುಕ್ರವಾರ ಸಂಜೆ ಮನೆಗೆ ಹಿಂತಿರುಗುವಾಗ ಅವರ ಆಯ್ಕೆಯ ಉಡುಗೊರೆ ಅಥವಾ ಸಿಹಿ ತಿಂಡಿ ತಂದು ಅವರಿಗೆ ಕೊಡಬೇಕು ಇದರಿಂದ ನಿಮ್ಮ ಪತ್ನಿಯ ಸಂತೋಷವನ್ನು ಕಂಡು ಲಕ್ಷ್ಮಿ ದೇವಿಯು ಕೂಡ ಸಂತೋಷವಾಗುತ್ತಾಳೆ ಹಾಗೂ ನಿಮ್ಮನ್ನು ಆಶೀರ್ವದಿಸಿ ಮನೆಯಲ್ಲಿ ಸುಖ ಸಮೃದ್ಧಿ ಸಂತೋಷವನ್ನು ನೆಲೆಯಿಸುತ್ತಾಳೆ.
ಉತ್ತಮ ಹಣ ಸಂಪಾದಿಸಿದ ನಂತರವೂ ನಿಮ್ಮ ಹಣವನ್ನು ಕೂಡಿಡುವುದಕ್ಕೆ ಸಾಧ್ಯ ವಾಗುತ್ತಿಲ್ಲ ಅಂತಾದರೆ ಶುಕ್ರವಾರ ಲಕ್ಷ್ಮಿ ದೇವಿಗೆ ಕರ್ಪೂರದಾರತಿಯನ್ನು ಮಾಡಿ ಮತ್ತು ಅದರಲ್ಲಿ ಸ್ವಲ್ಪ ಕುಂಕುಮವನ್ನು ಹಾಕಿ ಆರತಿಯಾದ ನಂತರ ಅದನ್ನು ಒಂದು ಪೇಪರ್ ನಲ್ಲಿ ಕಟ್ಟಿ ನಿಮ್ಮ ಪರ್ಸಿನಲ್ಲಿ ಇಟ್ಟುಕೊಳ್ಳಿ ಹೀಗೆ ಮಾಡುವುದರಿಂದ ಹಣದ ಉಳಿತಾಯವಾಗುತ್ತದೆ. ಕೈಯಲ್ಲಿ ವೀಳ್ಯದೆಲೆ ಅಡಿಕೆ ಮತ್ತು ತಾಮ್ರದ ನಾಣ್ಯವನ್ನು ಹಿಡಿದುಕೊಂಡು ತಾಯಿ ಲಕ್ಷ್ಮಿ ದೇವಿಯನ್ನು ಪ್ರಾರ್ಥಿಸಿ ನಂತರ ಈ ವಸ್ತುವನ್ನು ಪರ್ಸಿನಲ್ಲಿ ಇಟ್ಟುಕೊಳ್ಳಿ. ಹೆಚ್ಚಿನದಾಗಿ ಎಲ್ಲರೂ ರಾತ್ರಿ ಎಲ್ಲಾ ದೀಪವನ್ನು ಆರಿಸಿ ಮಲಗುತ್ತಾರೆ
ಇದರಿಂದ ಅವರು ಕತ್ತಲೆಯಲ್ಲಿ ಆಳವಾದ ನಿದ್ರೆಯನ್ನು ಮಾಡುತ್ತಾರೆ ಆದರೆ ಶುಕ್ರವಾರ ಈ ರೀತಿ ಮಾಡಬಾರದು ಶುಕ್ರವಾರ ಈಶಾನ್ಯ ದಿಕ್ಕಿನಲ್ಲಿ ಮಧ್ಯಮ ಬೆಳಕನ್ನು ಹೊಂದಿರುವ ತುಪ್ಪದ ದೀಪವನ್ನು ಬೆಳಗಿಸಿ ಇದನ್ನು ಮಾಡುವುದರಿಂದ ತಾಯಿ ಲಕ್ಷ್ಮಿ ದೇವಿಯು ಮನೆಗೆ ಬರುತ್ತಾಳೆ.
ಗೋಮಾತೆಗೆ ಸೇವೆ ಮಾಡುವ ಮನೆಗೆ ಲಕ್ಷ್ಮಿ ದೇವಿಯು ವಿಶೇಷ ಆಶೀರ್ವಾದ ನೀಡುತ್ತಾಳೆ ಅಂತ ನಂಬಲಾಗಿದೆ. ಶುಕ್ರವಾರ ಹಸುವಿಗೆ ಪಾಲಕ್ ಸೊಪ್ಪುಕೊಡುವುದು ಒಳ್ಳೆಯದು. ಶುಕ್ರವಾರ ಲಕ್ಷ್ಮಿ ದೇವಿಯ ವಿಗ್ರಹ ಅಥವಾ ಚಿತ್ರದ ಮೇಲೆ ಗುಲಾಬಿ ಮಲ್ಲಿಗೆಯ ಸುಗಂಧ ದ್ರವ್ಯ ಅಥವಾ ಹಾರವನ್ನು ಅರ್ಪಿಸುವುದರಿಂದ ಲಕ್ಷ್ಮೀದೇವಿ ಸಂತಸಗಂಡು ಆಶೀರ್ವಾದವನ್ನು ದಯಪಾಲಿಸುತ್ತಾಳೆ ಪರಿಣಾಮವಾಗಿ ಹಣವು ನಿಮ್ಮ ಮನೆಗೆ ಪ್ರವೇಶಿಸುತ್ತದೆ.
ನಿಮ್ಮ ಮನೆಯಿಂದ ನಕಾರಾತ್ಮಕ ಶಕ್ತಿ ನಾಶವಾಗಬೇಕೆಂದರೆ ಶುಕ್ರವಾರ ಸಂಜೆಯ ಸಮಯದಲ್ಲಿ ತುಪ್ಪದ 5 ಮುಖದ ದೀಪದಿಂದ ಲಕ್ಷ್ಮಿ ದೇವಿಗೆ ಆರತಿ ಮಾಡಿ.ಉದಬತ್ತಿ ಇದು ಆಶ್ಚರ್ಯವಾದರೂ ಇದು ಸತ್ಯ ಮನೆಗೊಂದು ತುಳಸಿ ಗಿಡ ಅಥವಾ ಬೃಂದಾವನ ಇರುವ ಹಾಗೆ ಮನೆಯಲ್ಲಿ ಸದಾ ಅಗರಬತ್ತಿ ಇರಲೇಬೇಕು ಹಿಂದಿನ ಕಾಲದಲ್ಲಿ ಮನೆಗಳಲ್ಲಿ ಅರಮನೆಗಳಲ್ಲಿ ದೂಪದ ಹೋಗೆ ಹಾಕುತ್ತಿದ್ದರು ಇದು ಕ್ರಿಮಿ ಕೀಟಗಳನ್ನ ನಾಶ ಮಾಡುವುದಲ್ಲದೆ ಮನೆಯನ್ನು ಸುಗಂಧ ಮಯವಾಗಿರುತ್ತದೆ ಹಾಗೆಯೇ ಮನೆಯಲ್ಲಿ ಅದೃಷ್ಟದ ವಾತಾವರಣವನ್ನು ಸೃಷ್ಟಿಸಿ.