ಅಡುಗೆಗೆ ಬಳಸುವ ಸಾಂಬಾರು ಪದಾರ್ಥಗಳಲ್ಲಿ ಉದ್ದಿನಬೇಳೆಯು ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಕೆಲವರಿಗೆ ಉದ್ದಿನಬೇಳೆಯನ್ನು ಹೆಚ್ಚು ಸೇವಿಸಬಾರದು ಎಂಬ ತಪ್ಪು ಕಲ್ಪನೆಯಿದೆ. ಉದ್ದಿನಬೇಳೆಯನ್ನು ಸೇವಿಸುವುದರಿಂದ ಯಾವೆಲ್ಲಾ ಆರೋಗ್ಯಕರ ಪ್ರಯೋಜನಗಳಿವೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ನಾವು ದಿನನಿತ್ಯ ಅಡುಗೆಗೆ ಬಳಸುವ ಉದ್ದಿನಬೇಳೆ ಲೈಂಗಿಕ ಶಕ್ತಿಯನ್ನು ವರ್ಧನೆ ಮಾಡಲು ಹಾಗೂ ಮಾಂಸಖಂಡಗಳ ವರ್ಧನೆಗೆ ಸಹಾಯಕಾರಿಯಾಗಿದೆ. ಕೆಲವರು ಉದ್ದಿನಬೇಳೆಯನ್ನು ಸೇವಿಸಬಾರದು ಅದು ನಂಜು ಎಂದು ಹೇಳುತ್ತಾರೆ ಆದರೆ ಆಯುರ್ವೇದದಲ್ಲಿ ಉದ್ದಿನ ಬೇಳೆಯನ್ನು ಸೇವಿಸುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ ಎಂದು ಹೇಳಲಾಗಿದೆ. ಉದ್ದಿನ ಬೇಳೆಯಲ್ಲಿ ಪ್ರೊಟೀನ್, ಫೈಬರ್ ಅಂಶ ಹೆಚ್ಚಾಗಿದ್ದು ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಆಯುರ್ವೇದದ ಪ್ರಕಾರ ಎರಡು ರೀತಿಯ ಆಹಾರಗಳು ಇರುತ್ತವೆ ವ್ಯಾಧಿ ಕಾಲದಲ್ಲಿ ಬಿಡುವ ಆಹಾರ, ಆರೋಗ್ಯ ಕಾಲದಲ್ಲಿ ಸೇವಿಸುವ ಆಹಾರ, ಉದ್ದಿನಬೇಳೆಯು ಆರೋಗ್ಯ ಕಾಲದಲ್ಲಿ ಸೇವಿಸುವ ಆಹಾರದ ಗುಂಪಿಗೆ ಸೇರುತ್ತದೆ. ದೋಸೆ, ಇಡ್ಲಿ, ವಡಾ, ಪಡ್ಡು ತಯಾರಿಸಲು ಉದ್ದಿನಬೇಳೆ ಅವಶ್ಯವಾಗಿ ಬೇಕಾಗುತ್ತದೆ.
ಆಯುರ್ವೇದದಲ್ಲಿ ಉದ್ದಿನ ಬೇಳೆಗೆ ಮಹತ್ವದ ಸ್ಥಾನವಿದ್ದು ಮಾಷ ಎಂದು ಕರೆಯುತ್ತಾರೆ, ಉದ್ದಿನಬೇಳೆ ಶರೀರಕ್ಕೆ ಬಲವನ್ನು ಕೊಡುತ್ತದೆ. ಉದ್ದಿನ ಬೇಳೆಯಿಂದ ಶರೀರಕ್ಕೆ ಗುಡ್ ಫ್ಯಾಟ್ ಹಾಗೂ ಪ್ರೋಟಿನ್ ಸಿಗುತ್ತದೆ. ಉದ್ದಿನಬೇಳೆಯು ಮಾಂಸ ಹೊಂದಿರುವ ಗುಣವನ್ನು ಹೊಂದಿರುತ್ತದೆ ಆದ್ದರಿಂದ ಸಸ್ಯಹಾರಿಗಳು ಉದ್ದಿನಬೇಳೆಯನ್ನು ಸೇವಿಸುವುದರಿಂದ ಅವರಿಗೆ ಅಗತ್ಯ ಪ್ರೋಟೀನ್ ಗಳು ದೊರೆಯುತ್ತದೆ. ಚಿಕ್ಕ ಮಕ್ಕಳು ವಯಸ್ಸಿಗೆ ಸರಿಯಾಗಿ ಬೆಳವಣಿಗೆ ಆಗದೆ ಇದ್ದರೆ ಅವರು ಉದ್ದಿನಬೇಳೆಯನ್ನು ಆಹಾರದಲ್ಲಿ ಸೇವಿಸುವುದರಿಂದ ಪೌಷ್ಟಿಕಾಂಶ ದೊರೆಯುತ್ತದೆ. ಉದ್ದಿನಬೇಳೆ ಲೈಂಗಿ ಕ ಶಕ್ತಿಯನ್ನು ಹೆಚ್ಚಿಸುತ್ತದೆ. ಲೈಂಗಿಕ ಸಮಸ್ಯೆಯನ್ನು ಉದ್ದಿನಬೇಳೆ ನಿವಾರಿಸುತ್ತದೆ.
ಮಲಬದ್ಧತೆ ಸಮಸ್ಯೆ ಇರುವವರು ಉದ್ದಿನಬೇಳೆಯನ್ನು ಸೇವಿಸಬೇಕು. ಆಹಾರದಲ್ಲಿ ಉದ್ದಿನಬೇಳೆಯನ್ನು ಕಡ್ಡಾಯವಾಗಿ ಸೇರಿಸಬೇಕು ಹಾಗೂ ಉದ್ದಿನಬೇಳೆಯನ್ನು ಮೃದುವಾಗುವಂತೆ ಚೆನ್ನಾಗಿ ಬೇಯಿಸಿ ಬಟ್ಟೆಯಲ್ಲಿ ಕಟ್ಟಿ ಹಿಂಡಿ ಬಿಸಿ ಹಾಲಿನಲ್ಲಿ ಅದ್ದಿ ಮಾಂಸಖಂಡ ವೀಕ್ ಆಗಿರುವ ಮಕ್ಕಳ ಮಾಂಸಖಂಡಕ್ಕೆ ಉದ್ದಿನ ಬೇಳೆಯ ಸ್ವೇದ ಅಂದರೆ ಶಾಖವನ್ನು ಕೊಡಬೇಕು. ಅತಿಯಾಗಿ ಆಸಿಡಿಟಿ ಇರುವವರು ಉದ್ದಿನಬೇಳೆಯನ್ನು ಹೆಚ್ಚು ಸೇವಿಸಬಾರದು. ಉದ್ದಿನ ಬೇಳೆಯ ಬಗ್ಗೆ ನಿಮಗಿರುವ ತಪ್ಪುಕಲ್ಪನೆಯನ್ನು ಹೋಗಲಾಡಿಸಿ ಉದ್ದಿನಬೇಳೆಯನ್ನು ಹೆಚ್ಚು ಸೇವಿಸಿ ಆರೋಗ್ಯವಾಗಿರಿ.