ಸೋಪನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಅಂಗಡಿಯಲ್ಲಿ ದುಡ್ಡು ಕೊಟ್ಟು ತರಲಾಗುವುದು. ಆದರೆ ಎಲ್ಲಾ ಸೋಪುಗಳು ಒಳ್ಳೆಯದಲ್ಲ. ಕೆಲವು ಸೋಪುಗಳಿಗೆ ರಾಸಾಯನಿಕಗಳನ್ನು ಹಾಕಲಾಗುತ್ತದೆ. ಬಣ್ಣಕ್ಕಾಗಿ ಹಾಕಬಹುದು ಅಥವಾ ಘಮ ಘಮ ಪರಿಮಳ ಬರಬೇಕು ಎಂದು ಹಾಕಬಹುದು. ಆದರೆ ಮನೆಯಲ್ಲಿ ಸೋಪನ್ನು ತಯಾರಿಸಬಹುದು. ಆದ್ದರಿಂದ ನಾವು ಇಲ್ಲಿ ಮನೆಯಲ್ಲಿ ಸೋಪನ್ನು ತಯಾರಿಸುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಕಹಿಬೇವಿನ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದು ಕಹಿ ಎಂದು ಇದನ್ನು ಬಳಕೆ ಮಾಡುವವರು ಕಡಿಮೆ. ಇದನ್ನು ಎಲ್ಲರೂ ವರ್ಷಕ್ಕೆ ಒಂದು ಬಾರಿ ಅಂದರೆ ಯುಗಾದಿ ಹಬ್ಬಕ್ಕೆ ಬಳಸಲಾಗುತ್ತದೆ. ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದು ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ. ಹಾಗೆಯೇ ಇದು ಯಾವುದೇ ರೀತಿಯ ಚರ್ಮದ ವ್ಯಾಧಿಗಳಿದ್ದರೂ ಅವುಗಳನ್ನು ದೂರ ಮಾಡುತ್ತದೆ. ಹಾಗೆಯೇ ಅರಿಶಿನ ಕೂಡ ಕ್ರಿಮಿ ಕೀಟಗಳನ್ನು ದೂರ ಮಾಡುತ್ತದೆ. ಹಾಗೆಯೇ ವಿಟಮಿನ್ ಇ ಮಾತ್ರೆ ಇದು ಕೂಡ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ.
ಮೊದಲು ಒಂದಿಷ್ಟು ಕಹಿಬೇವಿನ ಸೊಪ್ಪನ್ನು ತೆಗೆದುಕೊಳ್ಳಬೇಕು. ನಂತರದಲ್ಲಿ ಅದನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಬೇಕು. ನಂತರ ಅದನ್ನು ಒಂದು ಪಾತ್ರೆಗೆ ಹಾಕಿ ಸೋಸಿಕೊಳ್ಳಬೇಕು. ಸೋಸಿಕೊಂಡ ಪಾತ್ರೆಗೆ ಒಂದು ಚಮಚ ಅರಿಶಿನ ಹಾಕಬೇಕು. ಹಾಗೆಯೇ ಔಷಧಿ ಅಂಗಡಿಯಲ್ಲಿ ವಿಟಮಿನ್ ಇ ಮಾತ್ರೆ ದೊರಕುತ್ತದೆ. ನಂತರದಲ್ಲಿ ವಿಟಮಿನ್ ಈ ಮಾತ್ರೆಯನ್ನು ಹಾಕಬೇಕು. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಬೇಕು. ಬೇರೆ ಸೋಪನ್ನು ಬೇಕಾದರೂ ತೆಗೆದುಕೊಳ್ಳಬಹುದು. ಇಲ್ಲಿ ಪಿಯರ್ಸ್ ಸೋಪನ್ನು ತೆಗೆದುಕೊಳ್ಳಲಾಗಿದೆ. ಹಾಗೆಯೇ ಇದರ ಜೊತೆಗೆ ಗ್ಲಿಸರಿನ್ ಸೋಪನ್ನು ತೆಗೆದುಕೊಳ್ಳಲಾಗಿದೆ.
ಹಾಗೆಯೇ 60ಗ್ರಾಮ್ ನ ಗ್ಲಿಸರಿನ್ ಸೋಪನ್ನು ತೆಗೆದುಕೊಂಡು ಚೂರಾಗಿ ಕಟ್ ಮಾಡಿ ಕುದಿಯುವ ನೀರಿನಲ್ಲಿ ಹಾಕಬೇಕು. ಒಂದು ಪ್ಲೇಟ್ಗೆ ಈ ಚೂರುಗಳನ್ನು ಹಾಕಿ ಕುದಿಸಬೇಕು. ಆಗ ಅದು ಕರಗುತ್ತದೆ. ನಂತರ ಎಲ್ಲವನ್ನೂ ಮಿಶ್ರಣ ಮಾಡಿ ಸೋಪಿನಾಕಾರದ ತಪ್ಪಲೆಗೆ ಹಾಕಿ ಫ್ರೀಜರ್ ನಲ್ಲಿ ಇಡಬೇಕು. ಹೀಗೆಯೇ ಅನೇಕ ರೀತಿಯಲ್ಲಿ ಮಾಡಬಹುದು. ಹೀಗೆ ಟೊಮೆಟೊ ಸೋಪನ್ನು, ಆರೆಂಜ್ ಪೀಲ್ ಸೋಪನ್ನು, ಬಟಾಟೆ ಸೋಪನ್ನು ಕೂಡ ತಯಾರಿಸಬಹುದು. ಈ ರೀತಿಯಾಗಿ ನೈಸರ್ಗಿಕವಾಗಿ ಮನೆಯಲ್ಲಿ ಸೋಪನ್ನು ಮಾಡಿಕೊಂಡು ಬಳಸಬೇಕು. ಏಕೆಂದರೆ ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲ.