WhatsApp Group Join Now
Telegram Group Join Now

Yash Radhika Pandit: ಸ್ನೇಹಿತರೆ, ಆಗಸ್ಟ್ 30ನೇ ತಾರೀಖಿ ರಕ್ಷಾಬಂಧನದ ಸಂಭ್ರಮಕ್ಕೆ ಇಡಿ ಸ್ಯಾಂಡಲ್ವುಡ್ನ ತಾರೆಯರೇ ಸಾಕ್ಷಿಯಾಗಿದ್ದರು. ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಪ್ರೀತಿಯ ಅಣ್ಣಂದಿರಿಗೆ ರಾಖಿ ಕಟ್ಟಿ ಸಿಹಿ ತಿನ್ನಿಸಿ ಆಶೀರ್ವಾದ ಪಡೆದುಕೊಂಡಂತಹ ಸಾಲು ಸಾಲು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಸಿಹಿ ನೆನಪುಗಳನ್ನು ಅಭಿಮಾನಿಗಳೊಟ್ಟಿಗೆ ಹಂಚಿಕೊಂಡರು,

ಹೀಗಿರುವಾಗ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಜೂನಿಯರ್ ರಾಧಿಕಾ ಪಂಡಿತ್ (Radhika Pandit) ಹಾಗೂ ರಾಕಿಂಗ್ ಸ್ಟಾರ್ ಯಶ್ (Yash) ಯೆಂದ ಕರೆಯಲ್ಪಡುವ ಐರ ಮತ್ತು ಯಥರ್ವರ ಕೆಲ ಫೋಟೋಗಳು ಭಾರಿ ವೈರಲ್ ಆಗುತ್ತಿದ್ದು, ಒಂದೇ ರೀತಿ ಇರುವ ಗುಲಾಬಿ ಬಣ್ಣದ ಉಡುಪನ್ನು ಧರಿಸಿ ಬಹಳನೇ ಸಾಂಪ್ರದಾಯಿಕವಾಗಿ ತಮ್ಮ ಮನೆಯ ಆವರಣದಲ್ಲಿ ಅಚ್ಚ ಹಸಿರಿನಿಂದ ಕೂಡಿರುವಂತಹ ಜಾಗದಲ್ಲಿ ಕುಳಿತು ಐರ ತನ್ನ ಪ್ರೀತಿಯ ತಮ್ಮ ಯಥರ್ವಾರಿಗೆ ಆರತಿ ಬೆಳಗ್ಗೆ ರಾಕಿ ಕಟ್ಟುತ್ತಿರುವ ಕೆಲ ಫೋಟೋಗಳು

ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗಿವೆ. ಹೌದು ಸ್ನೇಹಿತರೆ ಎರಡು ಮುದ್ದಿನ ಮಕ್ಕಳ ತಾಯಿ ಆಗಿರುವಂತಹ ರಾಧಿಕಾ ಪಂಡಿತ್ (Radhika Pandit) ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಕ್ಕಳ ರಕ್ಷಾಬಂಧನ ಹಬ್ಬ ಆಚರಣೆಯ ಕೆಲ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದು, “ಕೆಲವೊಮ್ಮೆ ಸಹೋದ್ಯೋಗಿಗಳು, ಕೆಲವೊಮ್ಮೆ ಪ್ರತಿಸ್ಪರ್ಧಿಗಳು, ಕೆಲವೊಮ್ಮೆ ರಕ್ಷಕರು ಆದರೆ ಯಾವಾಗಲೂ ಒಬ್ಬರಿಗೊಬ್ಬರು ಇರುತ್ತಾರೆ.

ಹೀಗೆ ಎಲ್ಲಾ ಒಡಹುಟ್ಟಿದವರಿಗೆ ರಕ್ಷಾ ಬಂಧನ ಹಬ್ಬದ ಶುಭಾಶಯಗಳು” ಎಂದು ತಮ್ಮ ಮುದ್ದಿನ ಮಕ್ಕಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದ್ದು, ಸ್ಟಾರ್ ಸೆಲೆಬ್ರಿಟಿಗಳ(Celebrities) ಮಕ್ಕಳಲ್ಲಿ ಇರುವಂತಹ ಬಾಂಧವ್ಯವನ್ನು ಕಂಡಂತಹ ಸೆಲೆಬ್ರಿಟಿಗಳು ಹಾಗೂ ನೆಟ್ಟಿಗರು(Netizens) ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: