WhatsApp Group Join Now
Telegram Group Join Now

vrushaba rasi: ವೃಷಭ ರಾಶಿಯ ಅಧಿಪತಿ ಶುಕ್ರ, ಶುಕ್ರ ಎಂದರೆ ಹಣ ಐಶ್ವರ್ಯ ಮತ್ತು ಸೌಂದರ್ಯ. ವೃಷಭ ರಾಶಿಯಲ್ಲಿ ಹುಟ್ಟಿದವರು ಹಣ ಮತ್ತು ಆಸ್ತಿಯನ್ನು ಕಂಡರೆ ತುಂಬಾ ಇಷ್ಟಪಡುತ್ತಾರೆ ಹಣವನ್ನು ಗಳಿಸಲು ಬಹಳ ಶ್ರಮವನ್ನು ಪಡುತ್ತಾರೆ. ಇವರ ವಿಶ್ವಾಸಾರ್ಹ ನಡತೆ ಹಾಗೂ ಕಠಿಣ ಪರಿಶ್ರಮದಿಂದ ಮುಂದೆ ಬರಲು ಪ್ರಯತ್ನಿಸುತ್ತಾರೆ. ತಾಳ್ಮೆ ಹಾಗೂ ಇವರ ಗುರಿಯಿಂದಾಗಿ ಇವರು ಮಾಡುವ ಕೆಲಸದಲ್ಲಿ ತುಂಬಾ ಶ್ರದ್ಧೆ ಹಾಗೂ ನಿಷ್ಠೆಯನ್ನು ತೋರುತ್ತಾರೆ.

ವೃಷಭ ರಾಶಿಯಲ್ಲಿ ಹುಟ್ಟಿದವರಿಗೆ ಸ್ನೇಹಿತರು ಜಾಸ್ತಿ ಇವರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ತುಂಬಾ ಸ್ನೇಹಮಯಿಯಾಗಿ ನೋಡಿಕೊಳ್ಳುತ್ತಾರೆ ಜನರನ್ನು ಮೇಲು-ಕೀಳು ಎನ್ನದೆ ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಾರೆ ಇವರಿಗೆ ಬಡವ ಶ್ರೀಮಂತ ಎಂಬ ಭೇದವಿರುವುದಿಲ್ಲ ಎಲ್ಲರನ್ನೂ ಒಂದೇ ರೀತಿಯಾಗಿ ಕಾಣುತ್ತಾರೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬಂತೆ ಅಹಂಕಾರ ಹಾಗೂ ದರ್ಪ ಹೊಂದಿದವರ ಎದುರು ಇವರು ಕೂಡ ಹಾಗೆ ವರ್ತಿಸುತ್ತಾರೆ.

ಇವರು ಕಲೆಯಲ್ಲಿ ತುಂಬಾ ನಿಪುಣರಾಗಿರುತ್ತಾರೆ ಇವರಿಗೆ ಬ್ಯಾಂಕಿನ ಕೆಲಸ ಹಾಗೂ ಶಾಲೆಯ ಟೀಚರ್ ಕೆಲಸ ಈ ರೀತಿಯ ಹುದ್ದೆಗಳು ತುಂಬಾ ಯಶಸ್ಸನ್ನು ತಂದುಕೊಡುತ್ತದೆ ಇವರು ತುಂಬ ಕೀರ್ತಿವಂತರಾಗಿರುತ್ತಾರೆ ಇನ್ನೊಬ್ಬರು ಇವರನ್ನು ನೋಡಿದ ತಕ್ಷಣ ಆಕರ್ಷಣೆಗೊಳ್ಳುವಂತಹ ಒಂದು ವ್ಯಕ್ತಿತ್ವ ಇವರದ್ದಾಗಿರುತ್ತದೆ.

ಶುಕ್ರ ಗ್ರಹ ಸೌಂದರ್ಯ ಮತ್ತು ಪ್ರೀತಿಯ ಸಂಕೇತ ಎಂದು ಹೇಳಲಾಗುತ್ತದೆ ವೃಷಭ ರಾಶಿಯಲ್ಲಿ ಹುಟ್ಟಿದವರು ಐಷಾರಾಮಿ ಜೀವನವನ್ನು ಬಯಸುತ್ತಾರೆ ಹಣ ಎಂದರೆ ತುಂಬಾ ಪ್ರೀತಿ ಪಡುವಂತಹ ಇವರು ಹಣವನ್ನು ಕಲೆಕ್ಟ್ ಮಾಡುವುದರಲ್ಲಿ ನಿರತರಾಗಿರುತ್ತಾರೆ. ಯಾರ ಮಾತಿಗೂ ಬಗ್ಗದ ಇವರು ಸ್ವಂತಿಕೆಯಿಂದ ಬದುಕುತ್ತಾರೆ. ತಮಗೆ ಹೇಗೆ ತೋಚುತ್ತೋ ಹಾಗೆ ಬದುಕುತ್ತಾರೆ.

ಯಾವಾಗಲೂ ಕೂಡ ನಗುನಗುತ್ತಾ ಇರುತ್ತಾರೆ ಹಾಗೂ ತುಂಬಾ ಉತ್ಸಾಹಿಗಳಾಗಿರುತ್ತಾರೆ. ಎಲ್ಲ ವಿಷಯದಲ್ಲಿಯೂ ಕೂಡ ಕಲಿಯಬೇಕು ಎನ್ನುವ ಆಸಕ್ತಿ ಇವರಲ್ಲಿ ಇರುತ್ತದೆ. ಕಲಿಕೆಗೆ ಮಹತ್ವವನ್ನು ಕೊಡುವ ಇವರು ಮುಂದೊಂದು ದಿನ ಸಾಧನೆಯನ್ನು ಕೂಡ ಮಾಡುತ್ತಾರೆ. ಇವರ ವೀಕ್ನೆಸ್ ಅಂತ ಹೇಳಿದ್ರೆ ಇವರು ಸ್ವಲ್ಪ ಸೋಮಾರಿಗಳಾಗಿರುತ್ತಾರೆ. ಹಾಗೂ ಮೊಂಡು ಹಠವನ್ನು ಹೊಂದಿರುತ್ತಾರೆ.

ಯಾವಾಗಲೂ ಹಣ ಆಸ್ತಿ ಸೌಂದರ್ಯ ಹಾಗೂ ಐಷಾರಾಮಿ ಜೀವನದ ಬಗ್ಗೆ ಯೋಚಿಸುತ್ತಿರುತ್ತಾರೆ ಮೇಲ್ನೋಟಕ್ಕೆ ಇವರು ತುಂಬಾ ಶಾಂತವಾಗಿರುತ್ತಾರೆ ಆದರೆ ಇವರಿಗೆ ಕೋಪ ಜಾಸ್ತಿ ಬರುತ್ತದೆ ಇವರ ಹಠವೇ ಇವರಿಗೆ ಮುಳುವಾಗುತ್ತದೆ ಪ್ರತಿಯೊಂದರಲ್ಲೂ ಕೂಡ ತಾವು ಹೇಳಿದ ಹಾಗೆ ನಡೆಯಬೇಕು ತಾವು ಹೇಳಿದ್ದೆ ಎಲ್ಲರೂ ಕೇಳಬೇಕು ಎನ್ನುವ ಹಠ ಇವರದ್ದಾಗಿರುತ್ತದೆ. ಬೇರೆ ಯಾರ ಮಾತಿಗೂ ಬಗ್ಗದ ಇವರು ತಮ್ಮ ಸ್ವಂತ ಬುದ್ಧಿಯಿಂದ ಎಲ್ಲ ನಿರ್ಧಾರವನ್ನು ತೆಗೆದುಕೊಂಡು ಜೀವನವನ್ನು ನಡೆಸಿಕೊಂಡು ಹೋಗುತ್ತಾರೆ.

ಬಡವರನ್ನು ವಯಸ್ಕರನ್ನು ಕಂಡರೆ ಇವರಿಗೆ ತುಂಬಾ ಪ್ರೀತಿ ಬಹಳ ಗೌರವದಿಂದ ನಡೆದುಕೊಳ್ಳುತ್ತಾರೆ ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಾರೆ ಉದಾರ ಬುದ್ಧಿ ಉಳ್ಳವರು ವೃಷಭ ರಾಶಿಯಲ್ಲಿ ಹುಟ್ಟಿದವರು. ಇನ್ನು ಕುಟುಂಬದ ವಿಚಾರಕ್ಕೆ ಬಂದರೆ ತಮ್ಮ ಕುಟುಂಬವನ್ನು ಪ್ರೀತಿ ಹಾಗೂ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಒಟ್ಟಿನಲ್ಲಿ ವೃಷಭ ರಾಶಿಯಲ್ಲಿ ಹುಟ್ಟಿದವರು ತುಂಬಾ ಅದೃಷ್ಟವಂತರು ಎಂದು ಹೇಳಲಾಗುತ್ತದೆ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: