WhatsApp Group Join Now
Telegram Group Join Now

ಸ್ನೇಹಿತರೆ, ಚಿನ್ನಾರಿ ಮುತ್ತನ ಪ್ರೀತಿಯ ಪತ್ನಿ ಸ್ಪಂದನ(Spandana) ಅವರ ಅಗಲಿಕೆ ಚಿನ್ನೇಗೌಡರ (Chinne Gowda) ಕುಟುಂಬಕ್ಕೆ ಮತ್ತು ಇಡೀ ಕನ್ನಡ ಸಿನಿಮಾ ರಂಗಕ್ಕೆ ಅಪಾರವಾದ ನೋವು ತಂದೊಡ್ಡಿದೆ. ಬಹಳ ಆರೋಗ್ಯವಾಗಿ, ಲವಲವಿಕೆಯಿಂದ ಓಡಾಡಿಕೊಂಡು ಗಂಡನ ಪ್ರತಿ ಸಿನಿಮಾಗಳಿಗೂ ಸಪೋರ್ಟ್ ಮಾಡುತ್ತಾ ಬೆನ್ನೆಲುಬಾಗಿ ನಿಂತಿದ್ದಂತಹ ಸ್ಪಂದನ ಅವರು ಆಗಸ್ಟ್ ಏಳನೇ ತಾರೀಕು ಥೈಲ್ಯಾಂಡ್(Thailand) ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ಲಘು ಹೃದಯಘಾತವಾಗಿ ಬಾರದ ಲೋಕಕ್ಕೆ ತೆರಳಿದ್ದಾರೆ.

ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಂತಹ ತಮ್ಮ ಹೆಂಡತಿಯ ಅಗಲಿಕೆಯ ನೋವಿನಿಂದ ಹೊರಬರುವ ಪ್ರಯತ್ನ ಮಾಡುತ್ತಿರುವಂತಹ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ(Vijay Raghavendra) ಶೂಟಿಂಗ್ ಕೆಲಸಗಳಲ್ಲಿ ಸಕ್ರಿಯರಾಗುವುದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ಪೋಸ್ಟ್ಗಳನ್ನು ಹಂಚಿಕೊಳ್ಳುತ್ತ ತಮ್ಮ ಹೃದಯದಾಳದಲ್ಲಿರುವಂತಹ ನೋವನ್ನು ಹೊರಹಾಕುತ್ತಿದ್ದಾರೆ. ಹೀಗಿರುವಾಗ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಂದನ ಹಾಗೂ ವಿಜಯ್ ರಾಘವೇಂದ್ರ ಅವರ ಕುರಿತಾದ ಸಾಕಷ್ಟು ವಿಚಾರಗಳು ಬಾರಿ ವೈರಲಾಗುತ್ತಿದ್ದು, ಇದೀಗ ಅವರ ಮನೆ ಕುರಿತಾದ ಮಾಹಿತಿ ಒಂದು ಬಾರಿ ವೈರಲ್ ಆಗುತ್ತಿದೆ.

ಹೌದು ಕಳೆದ ಕೆಲವು ದಿನಗಳ ಹಿಂದೆ ವಿಜಯ್ ರಾಘವೇಂದ್ರ ತಮ್ಮ ಪತ್ನಿಗೋಸ್ಕರ ಹೊಸ ಮನೆ ಒಂದನ್ನು ಖರೀದಿಸಿದ್ದರು. ಅಲ್ಲದೆ ತಮ್ಮ ಆತ್ಮೀಯರು ಬಂಧು ಬಳಗದವರನ್ನೆಲ್ಲ ಕರೆದು ಅದ್ದೂರಿಯಾಗಿ ಗೃಹಪ್ರವೇಶ ಕಾರ್ಯಕ್ರಮವನ್ನು ಮಾಡಿ ಆ ಸಂಭ್ರಮವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು, ಆದರೆ ಈಗ ಮನೆ ತುಂಬಾ ಜಿಂಕೆಯಂತೆ ಓಡಾಡಿಕೊಂಡಿದ್ದಂತಹ ಸ್ಪಂದನ (Spandana) ಅವರೇ ಇಲ್ಲದಂತಾಗಿದ್ದಾರೆ.

ಸದ್ಯ ವಿಜಯ್ ರಾಘವೇಂದ್ರ(Vijay Raghavendra) ಅವರ ಹೊಸ ಮನೆ ಗೃಹಪ್ರವೇಶದ ಸಮಯದಲ್ಲಿ ತೆಗೆಯಲಾದ ಹಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದ್ದು, ಈ ಪುಟದ ಮುಖಾಂತರ ಚಿನ್ನಾರಿ ಮುತ್ತ(Chinnari mutta) ತಮ್ಮ ಪತ್ನಿಗಾಗಿ ಖರೀದಿಸಿದ ಹೊಸ ಮನೆ ಹೇಗಿದೆ ಎಂಬುದನ್ನು ಕಣ್ತುಂಬಿಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: