Vaishnavi Gowda Niveditha Gowda : ರಾಗಿ ಮುದ್ದೆಯನ್ನು ಹೀಗೂ ತಿನ್ನಬಹುದು ಎಂದು ತೋರಿಸಿಕೊಟ್ಟ ನಿವೇದಿತಾ ಮತ್ತು ವೈಷ್ಣವಿ ಗೌಡ! ಕೈ ಬಳಸದೆ ಇವ್ರು ರಾಗಿ ಮುದ್ದೆ ಹೇಗೆ ಚಪ್ಪರಿಸಿ ತಿಂದ್ರು ನೋಡಿ?ನಟಿ ವೈಷ್ಣವಿ ಗೌಡ (Vaishnavi Gowda) ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಸೀರಿಯಲ್ನ ಸನ್ನಿಧಿ ಪಾತ್ರದ ಮೂಲಕ ಮನೆ ಮಗಳಾಗಿದ್ದವರು. ಅದರಂತೆ ನಿವೇದಿತಾ ಗೌಡ ಬಿಗ್ ಬಾಸ್ ಮನೆಯ ಬೇಬಿ ಡಾಲ್ (baby doll) ಆಗಿ ಹೊರಹೊಮ್ಮುವ ಮೂಲಕ ಜನಪ್ರಿಯತೆ ಪಡೆದುಕೊಂಡಂತಹ ನಟಿ.

ಹೌದು ಗೆಳೆಯರೇ ಕೆಲ ಸೆಲೆಬ್ರಿಟಿಗಳು ಬೆಳ್ಳಿತೆರೆಯ ಮೂಲಕ ಬಹು ದೊಡ್ಡ ಮಟ್ಟದ ಸ್ಟಾರ್ ಗಿರಿ ಪಡೆದುಕೊಂಡರೆ ಈ ಇಬ್ಬರು ಕಿರುತೆರೆಯ ಕಾರ್ಯಕ್ರಮಗಳ ಮೂಲಕವೇ ಫೇಮಸ್ ಆದವರು. ಸದಾ ಕಾಲ ಒಂದಲ್ಲ ಒಂದು ಮನೋರಂಜನೆಯನ್ನು ಹೊತ್ತು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಪ್ರೇಕ್ಷಕರ ಮುಂದೆ ಬರುವಂತಹ ವೈಷ್ಣವಿ ಹಾಗೂ ನಿವೇದಿತಾ ಗೌಡ (Nivedita Gowda) ಈ ಹಿಂದೆ ಯೂಟ್ಯೂಬ್ (YouTube) ಚಾನೆಲ್ನಲ್ಲಿ ಮಾಡಲಾಗಿದ್ದಂತಹ ವಿಡಿಯೋ ಒಂದು ಬಾರಿ ವೈರಲ್ ಆಗಿತ್ತು.

Vaishnavi Gowda Niveditha Gowda

ಹೌದು ಗೆಳೆಯರೇ ನಟಿ ನಿವೇದಿತಾ ಗೌಡ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಕಾಣಿಸಿಕೊಂಡಂತಹ ವೈಷ್ಣವಿ ಗೌಡ (Vaishnavi Gowda) ಕೈ ಬಳಸದೆ ಮುದ್ದೆ ತಿನ್ನುವ ಚಾಲೆಂಜ್ ಒಂದನ್ನು ಹಾಕಿದರು. ಈ ವಿಡಿಯೋ ಲಕ್ಷಾಂತರ ವ್ಯೂಸ್ ಪಡೆಯುವ ಮೂಲಕ ಬಾರಿ ವೈರಲಾಗಿತ್ತು. ಅಲ್ಲದೆ ಕೆಲ ಟ್ರೋಲಿಗಿರು ಇವರಿಬ್ಬರ ತರ್ಲೆ ತುಂಟಾಟವನ್ನು ಟ್ರೋಲ್ ಕೂಡ ಮಾಡಿದ್ದರು.

ಸ್ವತಃ ನಿವೇದಿತ ಗೌಡ ಅವರ ತಮ್ಮ ಮನೆಯಲ್ಲಿ ಬಹಳ ಕಷ್ಟಪಟ್ಟು ಮುದ್ದೆ (Ragi ball) ತಯಾರಿಸಿ ಅದನ್ನು ಡೈನಿಂಗ್ ಟೇಬಲ್ ಮೇಲೆ ಇಟ್ಟು ವೈಷ್ಣವಿ ಹಾಕಿದ್ದ ಚಾಲೆಂಜ್ challenge ಅನ್ನು ಅಕ್ಸೆಪ್ಟ್ ಮಾಡಿ ಇಬ್ಬರು ತಮ್ಮ ಕೈಗಳನ್ನು ಹಿಂದಕ್ಕೆ ಕಟ್ಟಿ ಕೇವಲ ಬಾಯನ್ನು ಬಳಸಿ ಮುದ್ದೆ ತಿನ್ನಲು ಪ್ರಯತ್ನ ಮಾಡಿದರು. ಈ ಮಧ್ಯೆ ಅವರ ತಮಾಷೆಯ ಡೈಲಾಗ್ಗಳು ಜನರ ಆಕರ್ಷಣೆಗೆ ಗ್ರಾಸವಾಗಿತ್ತು.

ಅಲ್ಲದೆ ಇದರ ನಡುವೆ ಅವರ ಹಾರರ್ ಸ್ಟೋರಿಗಳ ಕುರಿತಾದ ಮಾಹಿತಿಯನ್ನೆಲ್ಲಾ ಹಂಚಿಕೊಂಡ ನಿವೇದಿತ ಗೌಡ “ಚಂದನ್ ಶೂಟಿಂಗಾಗಿ ರಾತ್ರಿ ಮನೆಗೆ ಬಾರದ ಸಮಯದಲ್ಲಿ ನಿವೇದಿತಾ ಗೌಡ (Nivedita Gowda) 8:00 ಸಮಯಕ್ಕೆ ಫುಡ್ ಆರ್ಡರ್ ಮಾಡಿರುತ್ತಾರೆ. ಅದನ್ನು ತೆಗೆದುಕೊಳ್ಳಲು ತಮ್ಮ ರೂಮಿನಿಂದ ಕೆಳಗಡೆ ಬಂದಾಗ ಸೋಫಾ ಹಿಂದೆ ಸರಿದಂತೆ ಭಾಸವಾಗುತ್ತದೆ, ಅದರ ಜೊತೆಗೆ ಕರೆಂಟ್ ಕೂಡ ಹೋಗಿ ಯುಪಿಎಸ್ (UPS) ಡೌನ್ ಆಗುತ್ತಾ ಬರುತ್ತಿತ್ತು.

ಇದರಿಂದ ಹೆದರಿದ ನಿವೇದಿತ ಗೌಡ (Nivedita Gowda) ಚಂದನ್ ಶೆಟ್ಟಿಗೆ (Chandan Shetty) ಕರೆ ಮಾಡಿ ಸೋಫಾ ಸರಿಸಿದ್ದ ಎಂದು ಕೇಳಿದರಂತೆ. ಆಗ ಇಲ್ಲ ನಾನೇನು ಮಾಡಲಿಲ್ಲ ಎಂದು ಚಂದನ್ ಹೇಳಿದ್ದಕ್ಕೆ ನನಗೆ ಬಹಳ ಭಯವಾಗ್ತಿದೆ ನಾನು ಅಮ್ಮನ ಮನೆಗೆ ಹೋಗ್ತೀನಿ ಎಂದಿದ್ದಕ್ಕೆ ಚಂದನ್ ಒಪ್ಪಿಗೆ ಸೂಚಿಸಿಪದ್ರಂತೆ.

ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಕರೆಂಟ್ (current) ಮತ್ತೆ ಬಂದು ನಿವೇದಿತಾ ಗೌಡ ಅವರನ್ನು ಮನೆ ಬಿಟ್ಟು ಹೋಗುವುದನ್ನು ತಡೆದಂತಾಗುತ್ತದೆ. ಹೀಗೆ ಇಬ್ಬರು ತಮ್ಮ ಜೀವನದಲ್ಲಿ ಅನುಭವವಾದ ಹಾರರ್ ಘಟನೆಗಳ (horror story) ಕುರಿತು ವಿಡಿಯೋದಲ್ಲಿ ಮೆಲುಕು ಹಾಕಿದರು. ಹೀಗೆ ಕಥೆ ಹೇಳುತ್ತಾ ಕೈ ಬಳಸದೆ ಮುದ್ದೆ ತಿನ್ನುವ ಚಾಲೆಂಜ್ನಲ್ಲಿ ಗೆದ್ದದ್ದು ನಮ್ಮೆಲ್ಲರ ಪ್ರೀತಿಯ ಸನ್ನಿಧಿ ವೈಷ್ಣವಿ ಗೌಡ (Vaishnavi Gowda).

By

Leave a Reply

Your email address will not be published. Required fields are marked *

error: Content is protected !!
Footer code: