ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಹಳೆಯ ಪದ್ಧತಿಯಂತೆ ಪರೀಕ್ಷೆ ನಡೆಯಲಿದೆ. ಈ ವಿಚಾರದಲ್ಲಿ ಯಾವುದೇ ಗೊಂದಲವು ಬೇಡ. ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಈ ಹಿಂದಿನ ಪದ್ಧತಿಯಂತೆ ಪ್ರತಿ ವಿಷಯಕ್ಕೂ 80 ಅಂಕದಂತೆ ಲಿಖಿತ ಪರೀಕ್ಷೆ ನಡೆಯಲು ತೀರ್ಮಾನಿಸಲಾಗಿದೆ. ಹಳೇ ಪ್ರಶ್ನೆ ಪತ್ರಿಕೆ ಪದ್ಧತಿಯಲ್ಲಿಯೇ ಈ ಶೈಕ್ಷಣಿಕ ವರ್ಷದ ಪರೀಕ್ಷೆ ಇರಲಿದ್ದು ಈ ಮಾದರಿಯಲ್ಲಿಯೇ ಶಿಕ್ಷಕರು ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು ಎಂದು ಸಚಿವರು ತಿಳಿಸಿದ್ದಾರೆ.
ಕಳೆದ ವರ್ಷ ಕೊರೊನಾ ಸೋಂಕು ಇತ್ತು. ಪರೀಕ್ಷೆ ನಡೆಸುವ ಪರಿಸ್ಥಿತಿಯಲ್ಲಿ ಶಿಕ್ಷಣ ಇಲಾಖೆ ಇರಲಿಲ್ಲ ಪಿ ಯು ಸಿ ವಿದ್ಯಾರ್ಥಿಗಳ ಪರೀಕ್ಷೆ ರದ್ದು ಮಾಡಲಾಗಿತ್ತು. ಆದರೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಗ್ರೇಡಿಂಗ್ ನೀಡುವ ವಿಚಾರದಲ್ಲಿ ಗೊಂದಲ ಏರ್ಪಟ್ಟಿತ್ತು. ಹೀಗಾಗಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿ ಬಹು ಆಯ್ಕೆ ಪ್ರಶ್ನೆ ಪತ್ರಿಕೆ ನೀಡಲಾಗಿತ್ತು.
ಈ ಶೈಕ್ಷಣಿಕ ವರ್ಷದಲ್ಲಿ ಕೇವಲ 40 ದಿನ ಕಡಿಮೆ ಆಗಿದೆ. ಪೂರ್ಣ ಪ್ರಮಾಣದಲ್ಲಿ ಪಠ್ಯ ಕ್ರಮ ಮುಗಿಸಲು ಎಲ್ಲ ಶಾಲೆಗಳಿಗೆ ಸೂಚಿಸಲಾಗಿದೆ. ಹೀಗಾಗಿ ಈ ವರ್ಷ ಹಿಂದಿನ ಪದ್ಧತಿಯಂತೆ ಲಿಖಿತ ಪರೀಕ್ಷೆ ನಡೆಯಲಿದೆ ಎಂದು ಸಚಿವರಾದ ಬಿ ಸಿ ನಾಗೇಶ್ ಸ್ಪಷ್ಟ ಪಡಿಸಿದ್ದಾರೆ ಒಂದು ವೇಳೆ ಕೊರೊನಾ ಮೂರನೇ ಅಲೆ ಬಂದ ಪಕ್ಷದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷಾ ಪದ್ಧತಿ ಬದಲಾವಣೆ ಬಗ್ಗೆ ಚಿಂತನೆ ನಡೆಸಲಾಗುವುದು. ಸದ್ಯದ ಪರಿಸ್ಥಿತಿಯಲ್ಲಿ 80/20 ಮಾದರಿ ಲಿಖಿತ ಪರೀಕ್ಷೆಯನ್ನು ನೆಡೆಸಲು ತೀರ್ಮಾನಿಸಿದ್ದೇವೆ. ಈ ಬಗ್ಗೆ ಯಾವುದೇ ಗೊಂದಲ ಬೇಡ ಮಕ್ಕಳನ್ನು ಪರೀಕ್ಷೆಗೆ ತಯಾರಿ ಮಾಡಬೇಕು ಎಂದು ಸಚಿವರು ಹೇಳಿದ್ದಾರೆ.
ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಕೊರೊನಾ ಹಿನ್ನಲೆ ಎಲ್ಲಿ ಪಠ್ಯ ಕ್ರಮವನ್ನು ತರಾತುರಿಯಲ್ಲಿ ಮುಗಿಸಲು ಸಮಸ್ಯೆ ಎದುರಾಗುತ್ತಿದ್ದ ಕಾರಣ ಶೇಕಡ 20 ರಷ್ಟು ಪಠ್ಯಕ್ರಮ ಕಡಿತ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿತ್ತು. ಶಿಕ್ಷಕರು ಈಗಾಗಲೇ ಬೋಧನೆ ಮಾಡಿರುವ ಪಠ್ಯಕ್ರಮ ಹೊರತುಪಡಿಸಿ ಡಿಸೆಂಬರ್ – ಮಾರ್ಚ್ ಅವಧಿಯಲ್ಲಿ ಬೋಧನೆ ಮಾಡಬೇಕಿರುವ ಅಧ್ಯಾಯಗಳನ್ನು ತೆಗೆಯಲಾಗಿದೆ.
ಕೋವಿಡ್ ಹಿನ್ನಲೆಯಲ್ಲಿ ರಾಜ್ಯದಲ್ಲಿ ಈ ವರ್ಷ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ತಡವಾಗಿ ಆರಂಭವಾಗಿದೆ, ಈ ಎಲ್ಲ ಅಂಶಗಳಿಗೆ ಶಿಕ್ಷಕರಿಗೆ ಬೋಧನೆ ಅವಧಿ ಕಡಿಮೆ ಆಗಿದೆ. ಈ ಅವಧಿಯಲ್ಲಿ ಲಭ್ಯವಿರುವ ಪಠ್ಯಕ್ರಮವನ್ನು ಬೋಧನೆ ಮಾಡುವುದು ಕಷ್ಟ ಎಂಬ ಅಭಿಪ್ರಾಯಗಳು ಶಿಕ್ಷಕರಿಂದ ಕೇಳಿ ಬಂದಿತ್ತು, ಅಲ್ಲದೆ ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಪಠ್ಯಕ್ರಮ ಕಡಿತ ಮಾಡಲಾಗಿದೆ.
ಎಸ್ ಎಸ್ ಎಲ್ ಸಿ ಪರೀಕ್ಷೆ ಮಾರ್ಚ್ ತಿಂಗಳಿನ ಕೊನೆಯ ವಾರ ಅಥವಾ ಏಪ್ರಿಲ್ ತಿಂಗಳಿನ ಮೊದಲ ಅಥವಾ ಎರಡನೇ ವಾರದಲ್ಲಿ ನಡೆಯಬಹುದು. ಹಾಗೂ ಹಾಜರಾತಿ ವಿಷಯದಲ್ಲಿ ಶೇಕಡ 75% ಅಷ್ಟು ಖಡಾಖಂಡಿತವಾಗಿ ಇರಬೇಕೆಂದು ಆದೇಶ ನೀಡಿದ್ದಾರೆ.