ಶಿವಮೊಗ್ಗ ಪ್ರಧಾನ ಜಿಲ್ಲಾ ಸತ್ರ ನ್ಯಾಯಾದೀಶರ ಕಛೇರಿಯು ತಮ್ಮಲ್ಲಿ ಖಾಲಿ ಇರುವ ಒಟ್ಟು 07 ಆದೇಶ ಜಾರಿದಾರ ಹುದ್ದೆಗಳಿಗೆ ಅಧಿಸುಚನೆಯನ್ನು ಹೊರಡಿಸಿದ್ದು ಸಂಪೂರ್ಣ ಮಾಹಿತಿ ಈ ಕೆಳಕಂದಂತಿದೆ

ಅಧಿಸುಚನೆಯ ಪ್ರಕಾರ ಈ ಹುದ್ದೆಗೆ ಶೈಕ್ಷಣಿಕ ಅರ್ಹರ್ತೆಯನ್ನು ನೋಡುವುದಾದರೆ ಅರ್ಜಿದಾರನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವಂತಹ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಿರ್ನಣಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು ಅಷ್ಟೇ ಅಲ್ಲದೇ ವಾಹನ ಚಾಲನ ಪರವಾನಾಗಿ ಹೊಂದಿರುವವರಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ

ವಯೋಮಿತಿ : ಅರ್ಜಿದಾರನು ಅರ್ಜಿ ಸಲ್ಲಿಕೆಯ ನಿಗಧಿ ಪಡಿಸಿದ ಕೊನೆಯ ದಿನಾಂಕದಂದು 18 ವರ್ಷ ಪೂರೈಸಿರಬೇಕು ಗರಿಷ್ಟ ವಯೋಮಿತಿಯು 35 ವರ್ಷದ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ OBC ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದ್ದು ಗರಿಷ್ಟ 38 ವರ್ಷದ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ SC ಮತ್ತು ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದ್ದು ಗರಿಷ್ಟ 40 ವರ್ಷದ ವರೆಗಿನವರು ಅರ್ಜಿ ಸಲ್ಲಿಸಬಹುದಾಗಿದೆ

ವೇತನ ಶ್ರೇಣಿ :ರೂ. 19,950/- ರಿಂದ ರೂ 37,950/- ರ ವರೆಗೆ ವೇತನ ಶ್ರೇಣಿಯನ್ನು ನಿಗಾಧಿಪಡಿಸಲಾಗಿದೆ
ಇನ್ನು ಅರ್ಜಿಯನ್ನು ಸಲ್ಲಿಸುವವರು ಸಂಸ್ಥೆಯ ಅಧಿಕೃತ ವೆಬ್ ಸೈಟ್ ಮೂಲಕ ಆನ್ ಲೈನ್ ಅರ್ಜಿಗಳನ್ನು ಅಗತ್ಯ ದಾಖಲೆಗಳ ಮೂಲಕ ಸಲ್ಲಿಸಬೇಕಾಗುತ್ತದೆ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ

ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಅರ್ಜಿ ಶುಲ್ಕ ರೂ 200/- ಆಗಿರುತ್ತದೆ ಮತ್ತು OBC ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ 100/- ಆಗಿರುತ್ತದೆ ಅಲ್ಲದೇ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ವಿನಾಯತಿ ನೀಡಿರುವುದರಿಂದ ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡುವ ಅಗತ್ಯವಿರುವುದಿಲ್ಲ ಇನ್ನು ಅರ್ಜಿ ಶುಲ್ಕವನ್ನು ಆನ್ ಲೈನ್ ಮುಖಾಂತರ ಪಾವತಿಸಬೇಹುದು ಮತ್ತು ಅಧಿಕೃತ ವೆಬ್ ಸೈಟ್ ನಲ್ಲಿಯೇ ಚಲನ್ ಅನ್ನು ಡೌನ್ಲೋಡ್ ಮಾಡಿಕೊಂಡು ಯಾವುದೇ ಸ್ಟೇಟ್ ಬ್ಯಾಂಕ್ ಶಾಖೆಗಳಲ್ಲಿ ಪಾವತಿ ಮಾಡಬಹುದಾಗಿದೆ

ಇನ್ನು ಅರ್ಜಿ ಸಲ್ಲಿ ಸಲ್ಲಿಸಲು ಪ್ರಾರಂಭ ದಿನಾಂಕ 23/ನವೆಂಬರ್/2021 ರಿಂದ ಆನ್ ಲೈನ್ ಅರ್ಜಿ ಗಳನ್ನು 30ನೇ ಡಿಸೆಂಬರ್ 2021 ರ ವರೆಗೂ ಸಲ್ಲಿಸಬಹುದಾಗಿದೆ ಮತ್ತು ಚಲನ್ ಮೂಲಕ ಪಾವತಿ ಮಾಡಲು 31ನೇ ಡಿಸೆಂಬರ್ 2021 ದಿನಾಂಕದ ವರೆಗೂ ಅವಕಾಶವಿದೆ

By admin

Leave a Reply

Your email address will not be published. Required fields are marked *

error: Content is protected !!
Footer code: