Spandana Vijay Raghavendra: ಸ್ನೇಹಿತರೆ, ಸ್ಯಾಂಡಲ್ ವುಡ್ನ ಮುದ್ದಾದ ಜೋಡಿಗಳೆನಿಸಿಕೊಳ್ಳುತ್ತಿದ್ದ ವಿಜಯ್ ರಾಘವೇಂದ್ರ ಹಾಗೂ ಸ್ಪಂದನ ಅವರ ಮೇಲೆ ಅದ್ಯಾರ ಕೆಟ್ಟ ಕಣ್ಣು ಬಿತ್ತೋ ಗೊತ್ತಿಲ್ಲ. ಮೊನ್ನೆ ಮಧ್ಯರಾತ್ರಿ ಸ್ಪಂದನ(Spandana) ಅವರು ಹೃದಯಘಾತದಿಂದಾಗಿ ಮಲಗಿದವರು ಮತ್ತೆ ಇಹಲೋಕಕ್ಕೆ ತ್ಯಜಿಸಿ ಬಿಟ್ಟಿದ್ದಾರೆ. ಪತ್ನಿಯೇ ಸರ್ವಸ್ವವೆಂದುಕೊಂಡಿದ್ದ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ (Vijay Raghavendra) ಅವರಿಗೆ ಸದ್ಯಕ್ಕೆ ದಿಕ್ಕೇ ತೋಚದಂತಾಗಿದೆ. ಥೈಲ್ಯಾಂಡ್ನ ಬ್ಯಾಂಕಾಕ್ನಿಂದ ವಿಜಯ್ ರಾಘವೇಂದ್ರ ಮತ್ತು ಸ್ಪಂದನ (Spandana) ಅವರ ಗೆಳತಿಯರು
ಮೃತ.ದೇಹವನ್ನು ಹೊತ್ತು ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ಗೆ ಇಂದು ರಾತ್ರಿ ಹನ್ನೆರಡು ಗಂಟೆಗೆ ಬಂದು ಇಳಿಯಲಿದ್ದಾರೆ. ನಾಳೆ ಮಧ್ಯಾಹ್ನ 1 ಗಂಟೆಯವರೆಗೂ ಮಲ್ಲೇಶ್ವರಂನಲ್ಲಿ ಇರುವಂತಹ ಶಿವರಾಂ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಆನಂತರ ಶ್ರೀರಾಂಪುರದ ಬಳಿ ಇರುವ ಹರಿಶ್ಚಂದ್ರ ಘಾಟ್ನಲ್ಲಿ ಸ್ಪಂದನ ಅವರ ಅಂತ್ಯಕ್ರಿಯೆ ಕಾರ್ಯಗಳು ನೆರವೇರಲಿದೆ.
ಈ ಒಂದು ಸುದ್ದಿ ಸದ್ಯ ಸ್ಯಾಂಡಲ್ವುಡ್ಗೆ ಬರ ಸಿಡಿಲು ಬಡಿದಂತಾಗಿದ್ದು, ಪ್ರತಿಯೊಬ್ಬರು ತಮ್ಮ ಹಾಗೂ ಸ್ಪಂದನ ಅವರ ನಡುವೆ ಇದ್ದಂತಹ ಒಡನಾಟಗಳ ಕುರಿತು ಮಾತನಾಡುತ್ತ ಸಾ.ವಿಗೆ ಕಂಬನಿ ಮಿಡಿದಿದ್ದಾರೆ. ಅವರ ಗೆಳೆಯರೊಂದಿಗೆ ಸ್ಪಂದನ ಹಾಗೂ ಮಗ ಶೌರ್ಯವರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಕಳೆದ ತಿಂಗಳು ಅಂದರೆ ಜುಲೈ 24 ನೇ ತಾರೀಕಿನಂದಷ್ಟೇ ಸ್ಪಂದನ ತಮ್ಮ ಪತಿಯ ಸ್ನೇಹಿತರನ್ನು ಖಾಸಗಿ ರೆಸ್ಟೋರೆಂಟ್ ಒಂದರಲ್ಲಿ ಭೇಟಿ ಮಾಡಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು.
ಆ ಫೋಟೋಗಳನ್ನು ನಟ ವಿಜಯ ರಾಘವೇಂದ್ರ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದರು, ಹೀಗೆ 24 ನೇ ತಾರೀಕು ಪತಿಯೊಂದಿಗೆ ಹಾಗೂ ಪತಿಯ ಸ್ನೇಹಿತರೊಂದಿಗೆ ಬಹಳ ಲವಲವಿಕೆಯಿಂದ ಸಮಯ ಕಳೆದಂತಹ ಸ್ಪಂದನ (Spandhana) ಅವರು ಕಳೆದ ಮೂರು ನಾಲ್ಕು ದಿನಗಳ ಹಿಂದೆ ಪ್ರವಾಸಕ್ಕೆಂದು ತೆರಳಿ ಮತ್ತೆ ವಾಪಸ್ ಬಂದದ್ದು ಶ’ವವಾಗಿ. ಇವರ ಅಗಲಿಕೆಯ ನೋವನ್ನು ಬರಿಸುವಂತಹ ಶಕ್ತಿಯನ್ನು ಆ ಭಗವಂತ ವಿಜಯ ರಾಘವೇಂದ್ರ (Vijay Raghavendra) ಮತ್ತು ಕುಟುಂಬಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸೋಣ. ಇದನ್ನೂ ಓದಿ ವಿಜಯ ರಾಘವೇಂದ್ರ ಮತ್ತು ಸ್ಪಂದನ ಮದುವೆ ಹೇಗಾಯಿತು ಗೊತ್ತಾ? ನಿಜ ಈ ವಿಡಿಯೋ ನೋಡಿದ್ರೆ ಕಣ್ಣಲ್ಲಿ ನೀರು ಬರತ್ತೆ ಕಣ್ರೀ