Shwetha Changappa : ಎಸ್ ನಾರಾಯಣ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದ ಸುಮತಿ (Sumathi) ಎಂಬ ಧಾರಾವಾಹಿಯ ಮೂಲಕ 2003ರಲ್ಲಿ ಬಣ್ಣದ ಬದುಕಿಗೆ ಪ್ರವೇಶ ಮಾಡಿದ ನಟಿ ಶ್ವೇತಾ ಚಂಗಪ್ಪ(Swetha Changappa) ಬರೋಬ್ಬರಿ 20 ವರ್ಷಗಳಿಂದ ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವಂತಹ ನಟಿ. ಸಹನಟಿಯಾಗಿ, ಪೋಷಕನಟಿಯಾಗಿ, ವಿಲನ್ ಆಗಿ, ಆಂಕರ್ರಾಗಿ, ಟೆಲಿವಿಷನ್ ಆರ್ಟಿಸ್ಟ್ ಆಗಿ ಬೇಡಿಕೆಯನ್ನು ಹೊಂದಿದ್ದಾರೆ.
ಮೂಲತಹ ಕೊಡಗಿನ ಸೋಮವಾರಪೇಟೆಯವರಾದ ಶ್ವೇತಾ ಚಂಗಪ್ಪ(Swetha Changappa) ವಿದ್ಯಾಭ್ಯಾಸ ಮುಗಿಸಿದ ನಂತರ ಮಾಡಲಿಂಗ್ನತ್ತ ಗಮನ ಹರಿಸುತ್ತಾರೆ. ಹೀಗೆ ಕನ್ನಡ ಕಿರುತೆರೆಯಲ್ಲಿ ಅಭಿನಯಿಸುವ ಅವಕಾಶವನ್ನು ಗಿಟ್ಟಿಸಿಕೊಂಡು ಕಾದಂಬರಿ, ಅರುಂಧತಿ ಎಂಬ ಎರಡೆರಡು ಸೀರಿಯಲ್ಗಳಲ್ಲಿ ಬಣ್ಣ ಹಚ್ಚಿದರು. ಹೀಗೆ ಬಹು ದೊಡ್ಡ ಮಟ್ಟದ ಸಕ್ಸಸ್ ಕಂಡ ಈ ನಟಿಗೆ ಯಾರಿಗುಂಟು ಯಾರಿಗಿಲ್ಲ ಎಂಬ ಟಿವಿ ಕಾರ್ಯಕ್ರಮ ನಡೆಸಿಕೊಡುವ ಅವಕಾಶ ದೊರಕುತ್ತದೆ. ಆನಂತರ ಕುಣಿಯೋಣ ಬಾರ, ಡಾನ್ಸ್ ಡಾನ್ಸ್ ಜೂನಿಯರ್ಸ್ ಹಾಗೂ ಮಜಾ ಟಾಕೀಸ್ನಂತಹ ಕಿರುತೆರೆ ರಿಯಾಲಿಟಿ ಶೋನಲ್ಲಿ ಸಕ್ರಿಯರಾದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಂಗಿಗಾಗಿ (Thangigagi) ಸಿನಿಮಾದಲ್ಲಿ ಹಾಗೂ ವಿಷ್ಣುವರ್ಧನ್ ಅವರ ವರ್ಷ(Varsha) ಸಿನಿಮಾದಲ್ಲಿ ಸಹನಟಿಯಾಗಿ ಅಭಿನಯಿಸುವ ಅವಕಾಶವನ್ನು ಪಡೆದು ತಮ್ಮ ಅಮೋಘ ಅಭಿನಯದ ಮೂಲಕ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಇದರ ಜೊತೆಜೊತೆಗೆ ಕನ್ನಡದ ಅತಿ ದೊಡ್ಡ ಕಿರುತೆರೆ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 2 ಪ್ರವೇಶ ಮಾಡಿ ತಮ್ಮ ವ್ಯಕ್ತಿತ್ವದ ಪರಿಚಯ ಮಾಡಿಕೊಳ್ಳುವಲ್ಲಿ ಯಶಸ್ವಿಯಾದ ಶ್ವೇತಾ ಚಂಗಪ್ಪ.
ಸೃಜನ್ ಲೋಕೇಶ್ ಅವರ ಕಾಮಿಡಿ ಶೋ ಮಜಾ ಟಾಕೀಸ್(Maja Talkies) ನ ರಾಣಿಯಾಗಿ ಮತ್ತಷ್ಟು ಪ್ರಖ್ಯಾತಿ ಪಡೆದಿದ್ದಾರೆ. ಇನ್ನು ಇವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ ಕೊಡಗು ಮೂಲದ ಉದ್ಯಮಿ ಕಿರಣ್ ಅಪ್ಪಚ್ಚು(Kiran Appachu) ಎಂಬುವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಮುದ್ದಾದ ಜೋಡಿಗೆ ಜಿಯಾನ್(Keegan) ಎಂಬ ಮಗನಿದ್ದು ಆಗಾಗ ತಮ್ಮ ಫ್ಯಾಮಿಲಿ ಫೋಟೋಗಳನ್ನು ಶ್ವೇತಾ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿರಯತ್ತಾರೆ. (ಇದನ್ನು ಓದಿ)