WhatsApp Group Join Now
Telegram Group Join Now

ಶಿವ ಶಿವ ಎಂದರೆ ಭಯವಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ ಎನ್ನುವ ಮಾತಿನಂತೆ ಭಗವಂತ ಶಿವನ ಮಹಿಮೆ ಅಪಾರ. ತನ್ನ ಜಡೆಯಲ್ಲಿ ಗಂಗೆಯನ್ನು ಇರಿಸಿಕೊಂಡ ಜಟಾಧಾರಿಯಾದ ಶಿವನಿಗೆ ಢಮರುಗವೆಂದರೆ ಅತಿಪ್ರಿಯ. ಪ್ರತಿ ವರ್ಷದಂತೆ ಈ ವರ್ಷ ಮಾರ್ಚ್ ನಲ್ಲಿ ಶಿವರಾತ್ರಿ ವಿಶೇಷ ದಿನದ ಸಮಯ ಹಾಗೂ ದಿನದ ಮಹತ್ವವನ್ನು ಈ ಲೇಖನದಲ್ಲಿ ನೋಡೋಣ

ಈ ವರ್ಷದಂದು ಮಹಾಶಿವರಾತ್ರಿ ಪಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಬಂದಿದೆ. ಮಹಾಶಿವರಾತ್ರಿಯಂದು ಶಿವನನ್ನು ವಿಶೇಷವಾಗಿ ಭಕ್ತಿ ಭಾವದಿಂದ ಪೂಜೆ ಮಾಡಲಾಗುತ್ತದೆ. ಪ್ರತಿದಿನವೂ ಶಿವನನ್ನು ಪೂಜಿಸಬಹುದು ಆದರೆ ವಿಶೇಷವಾಗಿ ಶಿವನನ್ನು ಪೂಜಿಸುವ ದಿನವೆ ಶಿವರಾತ್ರಿ. ಶಿವರಾತ್ರಿಯ ದಿನದಂದು ಶಿವನನ್ನು ಭಕ್ತಿಯಿಂದ ಪೂಜಿಸಿ ಉಪವಾಸ ಮಾಡುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಬೇಕು.

ಶಿವರಾತ್ರಿಯಂದು ಭಕ್ತಾದಿಗಳು ಜಾಗರಣೆ ಮಾಡುತ್ತಾರೆ. ಶಿವರಾತ್ರಿಯಂದು ಇಡಿ ರಾತ್ರಿ ಉಪವಾಸ ಮಾಡಿ ಶಿವ ನಾಮವನ್ನು ಜಪಿಸುವುದೆ ಶಿವರಾತ್ರಿಯ ವಿಶೇಷತೆಯಾಗಿದೆ. ಮಹಾಶಿವರಾತ್ರಿಯು ಮಾರ್ಚ್ 8, 2024 ಶುಕ್ರವಾರದಂದು ನಡೆಯುತ್ತದೆ. ಮಹಾಶಿವರಾತ್ರಿಯ ಸಮಯವನ್ನು ನೋಡುವುದಾದರೆ ಮಾರ್ಚ್ ಎಂಟನೆ ತಾರೀಖು ಶುಕ್ರವಾರ ರಾತ್ರಿ 9 ಗಂಟೆ 55 ನಿಮಿಷದಿಂದ ಮಾರ್ಚ್ 9ನೆ ತಾರೀಖು ಶನಿವಾರ ಸಂಜೆ 6 ಗಂಟೆ ಹದಿನೇಳು ನಿಮಿಷಕ್ಕೆ ಮುಕ್ತಾಯವಾಗುತ್ತದೆ.

ಸಮಸ್ತ ಜಗತ್ತನ್ನು ದಹಿಸಲು ಸಿದ್ಧವಾಗಿದ್ದ ಹಾಲಾಹಲವನ್ನು ತನ್ನ ಗಂಟಲಿನಲ್ಲಿ ಇಟ್ಟುಕೊಂಡ ನೀಲಕಂಠೇಶ್ವರ, ತನ್ನ ಸಹಧರ್ಮಿಣಿಗಾಗಿ ತನ್ನ ಶರೀರದ ಅರ್ಧ ಭಾಗವನ್ನು ಬಿಟ್ಟುಕೊಟ್ಟ ಅರ್ಧನಾರೀಶ್ವರ, ಮಹೇಶ್ವರ ಮುಂತಾದ ಹೆಸರುಗಳಿಂದ ಕರೆಯುವ ಭಗವಂತ ಶಿವನ ಅನುಗ್ರಹ ಪಡೆಯಲು ಶಿವರಾತ್ರಿಯಂದು ಭಕ್ತಿ ಭಾವದಿಂದ ಶಿವನನ್ನು ಆರಾಧಿಸಬೇಕು. ಶಿವನು ಲಿಂಗದ ರೂಪದಲ್ಲಿ ಉದ್ಭವಿಸಿದ ದಿನವನ್ನು ಮಹಾಶಿವರಾತ್ರಿ ಎಂದು ಆಚರಿಸಲಾಗುತ್ತದೆ ಎಂದು ಹೇಳುತ್ತಾರೆ.

ಭಗವಂತ ಶಿವನಿಗೆ ಪತ್ರೆ ಶ್ರೇಷ್ಠವಾಗಿದೆ. ಉಪವಾಸ ಮಾಡುವ ಮೊದಲ ದಿನ ಹಾಗೂ ನಂತರದ ದಿನ ಮಾಂಸಹಾರವನ್ನು ಸೇವಿಸಬಾರದು. ಬೆಳಗ್ಗೆ ಬೇಗ ಎದ್ದು ತಲೆ ಸ್ನಾನ ಮಾಡಿಕೊಂಡು ಭಗವಂತ ಶಿವನ ದರ್ಶನ ಮಾಡಿ ಶಿವ ನಾಮ ಸ್ಮರಣೆ ಮಾಡಿ ಉಪವಾಸ ಮಾಡಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಭಗವಂತ ಶಿವನ ಆಶೀರ್ವಾದ ಎಲ್ಲರಿಗೂ ಸಿಗಲಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: