WhatsApp Group Join Now
Telegram Group Join Now

ನಮ್ಮ ಶಿವಪುರಾಣದಲ್ಲಿ ಕೆಲವು ವಸ್ತುಗಳ ಬಗ್ಗೆ ವರ್ಣಿಸಿದ್ದಾರೆ. ಮನುಷ್ಯನು ಯಾವ ವಸ್ತುವನ್ನು ದಾನ ಮಾಡಿದರೆ ಅವನ ಕಷ್ಟ ಪರಿಹಾರವಾಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ನಾವು ಇಲ್ಲಿ ತಿಳಿಸಿ ಕೊಡುತ್ತಿದ್ದೇವೆ.

ಕೆಲವೊಮ್ಮೆ ಮನುಷ್ಯರನ್ನು ಯಾವ ರೀತಿಯ ಸಮಸ್ಯೆ ಆವರಿಸಿಕೊಳ್ಳುತ್ತದೆ ಎಂದರೆ ಅವುಗಳಿಂದ ಆಚೆ ಬರಲು ತುಂಬಾ ಕಷ್ಟ ಪಡುಬೇಕಾಗುತ್ತದೆ. ತಮ್ಮ ಸಮಸ್ಯೆಗಳ ಬಗ್ಗೆ ಬೇರೆಯವರ ಬಳಿ ಹೇಳಿಕೊಳ್ಳಲು ಆಗುತ್ತಿರುವುದಿಲ್ಲ. ಅಂತವರು ತಮ್ಮ ಕಷ್ಟವನ್ನು ಹರಿಹರಿಸಿಕೊಳ್ಳಲು ಶಿವನನ್ನು ಆರಾಧನೆ ಮಾಡಿ. ಶಿವನ ಮೇಲೆ ನಂಬಿಕೆ ಇದ್ದರೆ ನೀವು ನಿಮ್ಮ ಕಷ್ಟ ಪರಿಹಾರಗೊಳ್ಳಲು ಸೋಮವಾರದಂದು ಶಿವನನ್ನು ಆರಾಧನೆ ಮಾಡಿ ಇದರಿಂದ ನಿಮ್ಮ ಕಷ್ಟಗಳು ದೂರವಾಗುತ್ತದೆ.

ಮೊದಲಿಗಿರುವಂತಹ ದಾನ ಉಪ್ಪು, ಉಪ್ಪು ದಾನ ಮಾಡಿದರೆ ನಾವು ನಮ್ಮಲ್ಲಿ ಅನುಭವಿಸುತ್ತಿರುವ ತೊಂದರೆಯನ್ನು ದೂರ ಮಾಡಿಕೊಳ್ಳಬಹುದು. ನಿಮ್ಮ ಕಷ್ಟಗಳನ್ನು ಇನ್ನೊಬ್ಬರ ಬಳಿ ಹಂಚಿಕೊಳ್ಳಲು ಆಗದೆ ಒದ್ದಾಡುತ್ತಿರುವ ಸಂದರ್ಭದಲ್ಲಿ ನೀವು ಸೋಮವಾರದಂದು ಉಪ್ಪನ್ನು ದಾನ ಮಾಡಿದರೆ ನಿಮಗೆ ಒಳ್ಳೆಯದಾಗುತ್ತದೆ. ಎರಡನೆಯ ವಸ್ತು ಬೆಲ್ಲ, ಒಂದು ವೇಳೆ ನೀವು ಬೆಲ್ಲವನ್ನು ದಾನ ಮಾಡಿದರೆ ನಿಮ್ಮ ಕುಟುಂಬವು ಚೆನ್ನಾಗಿರುತ್ತದೆ. ಒಂದು ವೇಳೆ ಗಂಡ ಹೆಂಡತಿಯ ಸಂಬಂಧದ ನಡುವೆ ಜಗಳಗಳು ಆಗುತ್ತಿದ್ದರೆ ಅಥವಾ ಪ್ರೀತಿ ಕಡಿಮೆ ಆಗಿದ್ದರೆ ಇಂಥ ಸಂದರ್ಭದಲ್ಲಿ ಬೆಲ್ಲವನ್ನು ದಾನ ಮಾಡಿ ಶಿವನನ್ನು ಪ್ರಾರ್ಥಿಸಬೇಕು.

ಮೂರನೇ ವಸ್ತು ಎಳ್ಳು, ವ್ಯಕ್ತಿ ಆತ್ಮವಿಶ್ವಾಸದಲ್ಲಿ ಏರುಪೇರು ಆಗುತ್ತಿದ್ದರೆ ಅಂತವರು ಎಳ್ಳುನ್ನು ದಾನ ಮಾಡಬೇಕು ಹೀಗೆ ಮಾಡುವುದರಿಂದ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ಎಷ್ಟೇ ತುಂಬಾ ಬುದ್ಧಿವಂತನಾಗಿದ್ದರೂ ಕೂಡ ಕೆಲವೊಮ್ಮೆ ಆತ್ಮವಿಶ್ವಾಸ ನಮ್ಮ ಕೈ ಹಿಡಿಯುವುದಿಲ್ಲ ಇಂತಹ ಸ್ಥಿತಿ ಎದುರಾಗಬಾರದು ಎಂದರೆ ಸೋಮವಾರದ ದಿನ ಶಿವನಿಗೆ ಎಳ್ಳನ್ನು ದಾನ ಮಾಡಬೇಕು. ಕಪ್ಪು ಬಣ್ಣದ ಎಳ್ಳುನ್ನು ದಾನ ಮಾಡುವುದಾದರೆ ನೀವು ಶನಿವಾರದಂದು ದಾನ ಮಾಡಿ.

ನಾಲ್ಕನೇ ವಸ್ತು ತುಪ್ಪ, ತುಪ್ಪವನ್ನು ದಾನ ಮಾಡುವುದರಿಂದ ಮನುಷ್ಯನ ರೋಗಗಳು ವಾಸಿಯಾಗುತ್ತದೆ. ರೋಗಗಳಿಂದ ಮನುಷ್ಯನ ಶರೀರದ ರಕ್ಷಣೆ ಕೂಡ ಆಗುತ್ತದೆ ಮತ್ತು ಮನೆಯಲ್ಲಿರುವಂತಹ ಮಕ್ಕಳು ನೆಗಡಿ ಶೀತ ಕೆಮ್ಮು ಇಂತಹ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದರೆ ಅವರ ಕೈಯಿಂದ ತುಪ್ಪವನ್ನು ಸ್ಪರ್ಶ ಮಾಡಿಸಿ ನಂತರ ದಾನ ಮಾಡಿ. ನೀವೇನಾದರೂ ಹಸುವಿನ ತುಪ್ಪವನ್ನು ದಾನ ಮಾಡಿದರೆ ಅದು ತುಂಬಾ ಶ್ರೇಷ್ಠವಾದದ್ದು. ಮಹಾದೇವನಿಗೆ ತುಪ್ಪದ ಅಭಿಷೇಕ ಮಾಡುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ ಮತ್ತು ಲಕ್ಷ್ಮಿ ದೇವಿಯ ಕೃಪೆಯು ನಿಮಗೆ ಪ್ರಾಪ್ತಿಯಾಗುತ್ತದೆ. ಮಹಾದೇವನಿಗೆ ಪಂಚಾಮೃತದ ಅಭಿಷೇಕ ಮಾಡುತ್ತಾರೆ ಇವುಗಳಲ್ಲಿ ತುಪ್ಪದ ಅಭಿಷೇಕ ಕೂಡ ಇದೆ ಹಾಗಾಗಿ ನೀವು ಶಿವನಿಗೆ ತುಪ್ಪವನ್ನು ಅರ್ಪಿಸಿರಿ. ಈ ರೀತಿ ಮಾಡುವುದರಿಂದ ಶಿವನು ನಿಮ್ಮ ಮನಸ್ಸಿನ ಎಲ್ಲಾ ಇಚ್ಛೆಯನ್ನು ನೆರವೇರಿಸುತ್ತಾನೆ.

ಮುಂದಿನ ವಸ್ತು ಧಾನ್ಯಗಳು, ಉಪವಾಸ ಅಂತ್ಯ ಮಾಡುವ ಸಂದರ್ಭದಲ್ಲಿ ಆಗ ಬ್ರಾಹ್ಮಣರಿಗೆ ದವಸ ಧಾನ್ಯವನ್ನು ದಾನ ಮಾಡುತ್ತಾರೆ. ದವಸಧಾನ್ಯವನ್ನು ದಾನ ಮಾಡುವುದರಿಂದ ತಾಯಿ ಅನ್ನಪೂರ್ಣೇಶ್ವರಿ ದೇವಿಯ ಕೃಪೆ ನಿಮ್ಮ ಪಾಲಾಗುತ್ತದೆ. ತಾಯಿ ಅನ್ನಪೂರ್ಣೇಶ್ವರಿ ಶಿವನ ಅರ್ಧಾಂಗಿಯು ಆಗಿದ್ದಾಳೆ ಮತ್ತು ಯಾರು ಶಿವನಿಗೆ ಗೌರವವನ್ನು ಕೊಡುತ್ತಾರೋ ಅಂತವರ ಮನೆಯಲ್ಲಿ ಯಾವತ್ತಿಗೂ ದವಾಸದಾನ್ಯ ಕಡಿಮೆಯಾಗುವುದಿಲ್ಲ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: