Shivana Suchane for Good Time ಸೋಮವಾರದಂದು ನಿಮಗೂ ಕೂಡ ಈ ರೀತಿಯ 7 ಸಂಕೇತಗಳು ಸಿಕ್ಕರೆ ನಿಮ್ಮ ಜೀವನದಲ್ಲೂ ಕೂಡ ಒಳ್ಳೆಯ ಸಮಯ ಬಂತೇಂದರ್ಥ. ಅದು ಯಾವುದು ಎಂದು ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ.

ಸೋಮವಾರ ದೇವರ ದೇವನಾದ ಮಹಾದೇವನ ವಾರವಾಗಿದೆ, ಈ ದಿನ ಒಳ್ಳೆಯ ಮನಸ್ಸಿನಲ್ಲಿ ಏನೇ ಬೇಡಿಕೊಂಡರು ಶಿವನು ನಿಮ್ಮ ಆಸೆಯನ್ನು ಈಡೇರಿಸುತ್ತಾನೆ. ಶಿವನು ತನ್ನ ಭಕ್ತರಲ್ಲಿ ಹಲವಾರು ಪ್ರಕಾರದ ಭೋಜನಗಳಾಗಲಿ, ವಜ್ರ ವೈಡೂರ್ಯವನ್ನು ಅಪೇಕ್ಷೆ ಮಾಡುವುದಿಲ್ಲ. ಒಳ್ಳೆಯ ಮನಸ್ಸಿನಿಂದ ಒಂದು ಹನಿ ನೀರನ್ನ ಶಿವನಿಗೆ ಅರ್ಪಿಸಿದರು ಕೂಡ ಶಿವನು ನಿಮ್ಮ ಭಕ್ತಿಗೆ ಒಲಿಯುತ್ತಾನೆ. ಯಾವ ವ್ಯಕ್ತಿಯ ಮೇಲೆ ಬೋಲೆನಾಥನ ಕೃಪೆ ಇರುತ್ತದೆ ಅಂತವರು ಸರಳ ಜೀವನವನ್ನು ಬಯಸುತ್ತಾರೆ ಇಂತಹ ವ್ಯಕ್ತಿಗಳು ಸುಳ್ಳನ್ನು ಹೇಳುವುದಿಲ್ಲ ಹಾಗೂ ಇವರ ಮನಸ್ಸಿನಲ್ಲಿ ಯಾವುದೇ ರೀತಿಯ ಕಪಟ ಭಾವನೆಗಳು ಇರುವುದಿಲ್ಲ.

ಮಾದೇವನನ್ನು ಪೂಜಿಸುವವರಿಗೆ ಪಶು ಪಕ್ಷಿಗಳೆಂದರೆ ಬಹಳ ಪ್ರೀತಿ ಆಗಿರುತ್ತದೆ. ಎಷ್ಟೇ ಶ್ರೀಮಂತರಾಗಿದ್ದರು ಅಥವಾ ಎಷ್ಟೇ ಜ್ಞಾನಿಯಾದ್ದರು ಕೂಡ ಅಹಂಕಾರ ಪಡುವುದಿಲ್ಲ ಮತ್ತು ಇವರು ಪರೋಪಕಾರಿ ಜೀವನವನ್ನು ನಡೆಸುತ್ತಾರೆ. ಯಾವ ವ್ಯಕ್ತಿ ಬಡವನಾಗಿದ್ದರೂ ಕೂಡ ದಾನ ಮಾಡುತ್ತಾನೋ ಅಂತಹವರು ಶಿವನ ಕೃಪೆಗೆ ಬೇಗ ಪಾತ್ರರಾಗುತ್ತಾರೆ ಆದರೆ ಇವರಿಗೆ ಬಹಳ ಬೇಗ ಸಿಟ್ಟು ಬರುತ್ತದೆ. ಒಂದು ವೇಳೆ ನೀವು ಕೂಡ ಸೋಮವಾರದಂದು ಶಿವನಿಗೆ ಬಿಲ್ವಪತ್ರೆ ಹಣ್ಣು ಕಾಯಿಯನ್ನು ಅರ್ಪಿಸಿದರೆ ನೀವು ಕೂಡ ಶಿವನ ಕೃಪೆಗೆ ಪಾತ್ರರಾಗಿ ನಿಮ್ಮ ಕಷ್ಟಗಳು ನಿವಾರಣೆಯಾಗುತ್ತದೆ ಮತ್ತು ನಿಮ್ಮಲ್ಲಿರುವಂತಹ ಕೆಟ್ಟ ಗುಣಗಳನ್ನು ಶಿವನು ತೊಡೆದು ಹಾಕುತ್ತಾನೆ.

ನಾವು ಹೇಳುವಂತಹ ಏಳು ಸಂಕೇತಗಳು ನಿಮ್ಮ ಜೀವನದಲ್ಲಿ ಬರುತ್ತಿದ್ದರೆ ನಿಮಗೆ ಒಳ್ಳೆಯದಾಗುತ್ತದೆ ಎಂದರ್ಥ. ನಿಮ್ಮ ಕಷ್ಟಗಳು ಕೊನೆಗೊಂಡು ನಿಮಗೆ ಸುಖ ಶಾಂತಿ ಸಮೃದ್ಧಿ ಸಿಗುತ್ತದೆ. ಮೊದಲನೆಯ ಸಂಕೇತ ಬ್ರಹ್ಮ ಮುಹೂರ್ತದ ಸಮಯದಲ್ಲಿ ಎದ್ದಾಗ ಚಂದ್ರನ ದರ್ಶನವಾದರೆ ತುಂಬಾ ಒಳ್ಳೆಯದು ಅದು ಸೋಮವಾರ‌ ದಿನದಂದು ಆದರೆ ಮತ್ತು ಶ್ರೇಷ್ಠ. ಚಂದ್ರನು ಶಿವನಮಸ್ತಕದ ಮೇಲೆ ವಾಸ ಮಾಡಿದ್ದಾನೆ ಮತ್ತು ಚಂದ್ರನು ಇಡೀ ಜಗತ್ತಿಗೆ ತಂಪನ್ನು ಕೊಡುತ್ತಾನೆ. ಸೋಮವಾರದಂದು ಬ್ರಹ್ಮ ಮುಹೂರ್ತದಲ್ಲಿ ಚಂದ್ರನ ದರ್ಶನವಾದರೆ ನಿಮ್ಮ ಜೀವನದಲ್ಲಿ ಒಳ್ಳೆಯ ಸಮಯ ಶುರುವಾಗುತ್ತಿದೆ ಎಂದು ಅಂದುಕೊಳ್ಳಬಹುದು.

ಎರಡನೆಯ ಸಂಕೇತ ಶುಭ್ರ ಬಣ್ಣದ ನಂದಿಯ ದರ್ಶನವಾದರೆ ಒಳ್ಳೆಯದು. ನಂದಿ ಶಿವನ ವಾಹನವಾಗಿದೆ, ಎಲ್ಲಿ ಶಿವ ಇರುತ್ತಾನೊ ಅಲ್ಲಿ ನಂದಿ ಕೂಡ ಇರುತ್ತದೆ. ಶುಭ್ರವಾದ ನಂದಿಯ ದರ್ಶನ ಸೋಮವಾರದಂದು ಆದರೆ ಬಹಳ ಪುಣ್ಯ. ಸೋಮವಾರದಲ್ಲಿ ನಿಮಗೆ ನಂದಿ ಕಾಣಿಸಿಕೊಂಡರೆ ನಿಮಗೆ ಆಶೀರ್ವಾದ ನೀಡಲು ಬಂದಿದ್ದಾರೆ ಎಂದು ಭಾವಿಸಬಹುದು.

ಮೂರನೇ ಸಂಕೇತ ನಾಗದೇವನ ದರ್ಶನ. ಭಗವಂತನಾದ ಶಿವನು ತನ್ನ ಕೊರಳಲ್ಲಿ ನಾಗದೇವನಾದ ವಾಸುಕಿಯನ್ನು ಧರಿಸಿಕೊಂಡಿರುತ್ತಾರೆ ಈ ಕಾರಣದಿಂದಾಗಿ ಸೋಮವಾರದಂದು ನಿಮಗೆ ನಾಗದೇವರ ದರ್ಶನವಾದರೆ ಒಳ್ಳೆಯ ಸೂಚನೆ ಎಂದರ್ಥ. ನಾಗದೇವರ ದರ್ಶನವಾದರೆ ಯಾವುದೇ ರೀತಿಯ ಧನ ಸಂಪತ್ತಿನ ತೊಂದರೆ ಇದ್ದರೆ ನಿವಾರಣೆ ಆಗುತ್ತದೆ. ಶಿವನ ಕೃಪೆಯಿಂದ ನಿಮಗೆ ಬರುವಂತಹ ದರಿದ್ರತೆಗಳು ದೂರವಾಗುತ್ತದೆ.

ನಾಲ್ಕನೆಯ ಸಂಕೇತ ಏಕಾಂತದಲ್ಲಿ ಕುಳಿತುಕೊಂಡಿರುವಾಗ ಸ್ತ್ರೀ ಮತ್ತು ಪುರುಷರ ಜೋಡಿ ದರ್ಶನ ವಾಗುವುದು. ಸೋಮವಾರದ ದಿನ ಯಾವುದಾದರೂ ವೃಕ್ಷದ ಕೆಳಗಡೆ ಅಥವಾ ಯಾವುದಾದರೂ ಶಿವನ ದೇವಸ್ಥಾನದ ಬಳಿ ಪುರುಷ ಮತ್ತು ಸ್ತ್ರೀ ಜೋಡಿ ಕುಳಿತುಕೊಂಡಿರುವುದನ್ನು ನೋಡಿದರೆ ಇದನ್ನು ನೀವು ಶುಭ ಸಂಕೇತ ಎಂದು ತಿಳಿದುಕೊಳ್ಳಬಹುದು. ಈ ರೀತಿ ಏನಾದರೂ ನೀವು ನೋಡಿದರೆ ನಿಮಗೆ ಒಳ್ಳೆಯ ಜೀವನ ಸಂಗಾತಿ ಸಿಗುತ್ತಾಳೆ ಎನ್ನುವ ಶುಭ ಸಂಕೇತ. 5ನೇ ಸಂಕೇತ ಕಪ್ಪು ಬಣ್ಣದ ಶ್ವಾನದ ದರ್ಶನವಾಗುವುದು. ಒಂದು ವೇಳೆ ಸೋಮವಾರದ ದಿನ ನಿಮ್ಮ ಮನೆಯ ಮುಂದೆ ಕಪ್ಪು ಬಣ್ಣದ ಶ್ವಾನ ಬಂದರೆ ಅದನ್ನು ಶುಭ ಸಂಕೇತ ಎಂದು ಹೇಳಿದ್ದಾರೆ.

ಆರನೆಯ ಸಂಕೇತ ಮಣ್ಣಿನ ಗಡಿಗೆ ಕಾಣುವುದು. ಸೋಮವಾರದ ದಿನ ಹಾಲು ಅಥವಾ ನೀರು ತುಂಬಿದ ಮಣ್ಣಿನ ಗಡಿಗೆ ಕಾಣಿಸಿದರೆ ಇದು ಶುಭ ಸಂಕೇತ. ಏಳನೇ ಸಂಕೇತ ಬಸ್ಮವನ್ನು ಹಚ್ಚಿಕೊಂಡಿರುವ ವ್ಯಕ್ತಿಯ ದರ್ಶನ. ಬಸ್ಮ ಎಂದರೆ ಶಿವನಿಗೆ ಬಹಳ ಪ್ರಿಯವಾದದ್ದು ಒಂದು ವೇಳೆ ಸೋಮವಾರದ ದಿನ ಬಸ್ಮವನ್ನು ಹಚ್ಚಿಕೊಂಡಂತಹ ವ್ಯಕ್ತಿಗಳು ನಿಮಗೆ ಕಾಣಿಸಿದರೆ ಬಹಳ ಉತ್ತಮ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

By admin

Leave a Reply

Your email address will not be published. Required fields are marked *

error: Content is protected !!
Footer code: