ಮಕರ ಸಂಕ್ರಾಂತಿ ಹಬ್ಬ ಇದೆ ಸೋಮವಾರದಂದು ನಡೆಯುತ್ತದೆ. ಸಂಕ್ರಾಂತಿಯ ದಿನ ವಿಶೇಷವಾಗಿದ್ದು ಅಂದು ನಾವು ಮಾಡುವ ಕೆಲವು ಕೆಲಸಗಳಿಂದ ದೇವರ ಆಶೀರ್ವಾದ ಸಿಗಲಿದೆ ಹಾಗಾದರೆ ಮಕರ ಸಂಕ್ರಾಂತಿಯ ವಿಶೇಷತೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಮಕರ ಸಂಕ್ರಾಂತಿ ಹಬ್ಬ ಜನವರಿ 15 ಸೋಮವಾರದಂದು ಇದೆ, ಈ ದಿನ ಭಗವಂತನಾದ ಸೂರ್ಯದೇವನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ನಮ್ಮ ದೇಶದಲ್ಲಿ ಬೆಳೆಗಳ ಆಗಮನವಾದ ಪ್ರತೀಕವಾಗಿ ಸಂಕ್ರಾಂತಿ ಹಬ್ಬವನ್ನು ರೈತರೆಲ್ಲರೂ ಸಂಭ್ರಮದಿಂದ ಆಚರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಜಗಳ ಸಾಮಾನ್ಯವಾಗಿ ಬಿಟ್ಟಿದೆ ಅಣ್ಣ ತಮ್ಮ ಗಂಡ ಹೆಂಡತಿ ಜಗಳಗಳು ಆಗಾಗ ಬರುತ್ತಲೆ ಇರುತ್ತದೆ. ನಾವು ಅಭಿವೃದ್ಧಿಯನ್ನು ಕಾಣುತ್ತಿದ್ದೇವೆ ಎಂದರೆ ನಮ್ಮ ಸುತ್ತಲಿನವರಿಗೆ ಅಸೂಯೆ ಶುರುವಾಗುತ್ತದೆ.
ದುಡಿಯುತ್ತಿರುವ ಹಣ ವೇಗವಾಗಿ ಖರ್ಚಾಗುತ್ತಿದ್ದರೆ, ರೋಗಗಳು ಬಾಧಿಸುತ್ತಿದ್ದರೆ ಸಂಕ್ರಾಂತಿ ದಿನದಂದು ನೀರಿಗೆ ಕಪ್ಪು ಎಳ್ಳನ್ನು ಸೇರಿಸಿ ಸ್ನಾನ ಮಾಡಿದರೆ ಶನಿ ದೇವರ ಆಶೀರ್ವಾದ ಸಿಗುತ್ತದೆ ಹಾಗೂ ಏಳು ಅಶ್ವ ಯಜ್ಞಗಳ ಪುಣ್ಯ ಫಲ ಸಿಗುತ್ತದೆ ಜೊತೆಗೆ ಹೀಗೆ ಮಾಡಿದರೆ ತಾಯಿ ಲಕ್ಷ್ಮೀ ದೇವಿಯ ಕೃಪೆ ಇರುತ್ತದೆ, ಸೂರ್ಯ ದೇವನ ಆಶೀರ್ವಾದ ಕೂಡ ಸಿಗುತ್ತದೆ. ಮನೆಯಲ್ಲಿರುವ ಸಾಮಾನ್ಯ ಕಟ್ಟಿಗೆಗಳನ್ನು ತೆಗೆದುಕೊಂಡು ಹವನ ಮಾಡಬೇಕು 108 ಬಾರಿ ಗಾಯತ್ರಿ ಮಂತ್ರವನ್ನು ಜಪ ಮಾಡುವ ಮೂಲಕ ಆಹುತಿಯನ್ನು ಕೊಟ್ಟರೆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರುತ್ತದೆ, ಆದಾಯ ಹೆಚ್ಚಾಗುತ್ತದೆ.
ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚುತ್ತದೆ. ಮನೆಗೆ ಧನ ಸಂಪತ್ತಿನ ಆಗಮನವಾಗುತ್ತದೆ ಆದ್ದರಿಂದ ಪ್ರತಿದಿನ ಬೆಳಗ್ಗೆ ಸ್ನಾನ ಮಾಡಿ ಗಾಯತ್ರಿ ಜಪ ಮಾಡಬೇಕು. ಸೂರ್ಯ ದೇವನಿಗೆ ಪೂಜೆ ಮಾಡಲು ಮಕರ ಸಂಕ್ರಾಂತಿಯ ದಿನ ಒಳ್ಳೆಯ ದಿನವಾಗಿದೆ. ಸೂರ್ಯ ದೇವರಿಗೆ ತಾಮ್ರದ ಲೋಟಕ್ಕೆ ನೀರನ್ನು ಹಾಕಿ ಕೆಂಪು ಚಂದನ ಕೆಂಪು ಬಣ್ಣದ ಹೂಗಳು, ಕಪ್ಪು ಎಳ್ಳನ್ನು ಹಾಕಿ ಹರಿಗೆಯನ್ನು ಕೊಡಬೇಕು ಇದರಿಂದ ಗೌರವ ಘನತೆ ಹೆಚ್ಚುತ್ತದೆ ಹಾಗೂ ಶರೀರವು ಸೂರ್ಯನ ರೀತಿ ಹೊಳೆಯುತ್ತದೆ.
ಶನಿ ದೇವರು ಸೂರ್ಯ ದೇವರ ಆಜ್ಞೆಗಳನ್ನು ಪೂರೈಸುತ್ತಾರೆ, ಮಕರ ಸಂಕ್ರಾಂತಿಯ ದಿನದಂದು ಸೂರ್ಯದೇವನ ಪೂಜೆ ಮಾಡುವುದರಿಂದ ಮನಸ್ಸಿನ ಇಚ್ಛೆಗಳು ಈಡೇರುತ್ತವೆ. ಮದುವೆಯಾದ ಮಹಿಳೆಯರು ಮಕರ ಸಂಕ್ರಾಂತಿಯ ದಿನದಂದು ತಮ್ಮ ಗಂಡನ ಆಯಸ್ಸು ವೃದ್ಧಿಗಾಗಿ ಒಬ್ಬರಿಗೊಬ್ಬರು ಕುಂಕುಮ ಅರಿಶಿಣವನ್ನು ಹಚ್ಚಿ ಬಟ್ಟೆಯನ್ನು ಕೊಡುತ್ತಾರೆ. ಬಳೆ ಕುಂಕುಮ ಅರಿಶಿಣ ಈ ರೀತಿಯ 14 ವಸ್ತುಗಳನ್ನು ಮನೆಗೆ ತರಬೇಕು. ಮಕರ ಸಂಕ್ರಾಂತಿಯ ದಿನದಂದು ಎಳ್ಳು ಕಂಬಳಿ ಕೆಂಪು ಬಣ್ಣದ ಬಟ್ಟೆಗಳು ಕೆಂಪು ಬಣ್ಣದ ಮಿಠಾಯಿಗಳು ಕಡ್ಲೆಕಾಳು ಅಕ್ಷತೆಗಳನ್ನು ದಾನ ಮಾಡಬಹುದು. ಕಪ್ಪು ಎಳ್ಳು, ಉದ್ದಿನಬೇಳೆ ಹಾಲನ್ನು ದಾನ ಮಾಡುವುದರಿಂದ ರಾಹು ಕೇತು ಸೂರ್ಯದೇವರ ಆಶೀರ್ವಾದ ಸಿಗುತ್ತದೆ, ವ್ಯಕ್ತಿ ಶ್ರೀಮಂತನೂ ಆಗುತ್ತಾನೆ.
ಮಕರ ಸಂಕ್ರಾಂತಿಯ ದಿನದಂದು ಗೋಮಾತೆಗೆ ಹುಲ್ಲನ್ನು ತಿನ್ನಿಸಬೇಕು, ಇರುವೆಗಳಿಗೆ ಸಕ್ಕರೆಯನ್ನು ಹಾಕಬೇಕು, ಮೀನುಗಳಿಗೆ ಆಹಾರ ಹಾಕಬೇಕು, ಮಕ್ಕಳಿಗೆ ಬೆಲ್ಲವನ್ನು ತಿನ್ನಿಸಬೇಕು ಇದನ್ನು ಶುಭ ಎಂದು ತಿಳಿಯಲಾಗುತ್ತದೆ. ಮಕರ ಸಂಕ್ರಾಂತಿಯ ದಿನದಂದು ಕಪ್ಪುಎಳ್ಳನ್ನು ಒಂದು ಮುಷ್ಟಿ ತೆಗೆದುಕೊಂಡು ತಲೆಯ ಮೇಲೆ ಉಲ್ಟಾ ಏಳು ಬಾರಿ ತಿರುಗಿಸಿ ಉತ್ತರ ದಿಕ್ಕಿಗೆ ಎಸೆದುಬಿಡಿ ಇದರಿಂದ ಮನೆಯಲ್ಲಿ ಕಾಡುತ್ತಿರುವ ರೋಗಗಳು ನಿವಾರಣೆಯಾಗುತ್ತದೆ ಮುಕ್ತಿ ಸಿಗುತ್ತದೆ.
ಮಕರ ಸಂಕ್ರಾಂತಿ ದಿನ ಪಿತ್ರ ದೇವರನ್ನು ಉಳಿಸಿಕೊಳ್ಳಬೇಕಾದರೆ ಒಂದು ಲೋಟ ನೀರು ತೆಗೆದುಕೊಂಡು ಕೆಂಪು ಬಣ್ಣದ ಸಿಂಧೂರ ಅಥವಾ ಹೂವನ್ನು ಹಾಕಿ ದೇವರಿಗೆ ತಾಮ್ರದ ಲೋಟದಿಂದ ಹರಿಗೆಯನ್ನು ನೀಡಬೇಕು. ಸಂಕ್ರಾಂತಿಯ ದಿನ ಸೂರ್ಯದೇವನ ಪೂಜೆ ಮಾಡುವುದು ಅತ್ಯಂತ ಶ್ರೇಷ್ಠವಾಗಿದೆ. ಸಂಕ್ರಾಂತಿ ದಿನದಂದು ಎಳ್ಳುಗಳನ್ನು ದಾನ ಮಾಡಬೇಕು. ಎಳ್ಳು ಬೆಲ್ಲದಿಂದ ಕೂಡಿದ್ದ ಲಡ್ಡುಗಳನ್ನ ತಿನ್ನುವುದರಿಂದ ಆರೋಗ್ಯ ಸಮಸ್ಯೆ ಬರುವುದಿಲ್ಲ, ಗೋವುಗಳಿಗೆ ತಿನ್ನಿಸುವುದರಿಂದ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು