WhatsApp Group Join Now
Telegram Group Join Now

Sanju Basayya: ಸ್ನೇಹಿತರೆ, ಕಳೆದ ಕೆಲ ದಿನಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಜು ಬಸಯ್ಯ (Sanju Basayya) ಮತ್ತು ಪಲ್ಲವಿ ಬಳ್ಳಾರಿ (Pallavi Ballari) ದಂಪತಿಗಳು ತಮ್ಮ ಮುದ್ದಾದ ಫೋಟೋಗಳ ಮೂಲಕ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿರುತ್ತಾರೆ. ಹೀಗಿರುವಾಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಂತಹ ಜೋಡಿ ನಂಬರ್ ಒನ್(Jodi No.1) ಕಾರ್ಯಕ್ರಮದ ಸ್ಪರ್ಧಿಗಳಾಗಿ ಭಾಗವಹಿಸುತ್ತಿರುವಂತಹ ಸಂಜು ಮತ್ತು ಪಲ್ಲವಿ ಅವರ ಮೊದಲ ದಿನದ ಎಪಿಸೋಡ್ ಜನರ ಆಕರ್ಷಣೆಗೆ ಗುರಿಯಾಗಿದ್ದು,

ತಮ್ಮ ಲವ್ ಸ್ಟೋರಿ ಹೇಗೆ ಶುರುವಾಯಿತು? ಹಾಗೂ ಅದರಿಂದ ತಾವು ಅನುಭವಿಸಿದಂತಹ ದುಃಖ ಏನು? ಎಂಬುದಲ್ಲವನ್ನು ನೆನಪು ಹಾಕುತ್ತ ಸಂಜು ವೇದಿಕೆಯ ಮೇಲೆ ಕಣ್ಣೀರು ಹಾಕಿದರು. ಹೌದು ಗೆಳೆಯರೇ “ಬಹಳಷ್ಟು ಜನ ನನ್ನನ್ನು ಹೀಯಾಳಿಸಿ ಅವಮಾನ ಮಾಡಿದರು. ಇದರಿಂದ ಪಲ್ಲವಿ ನನಗೆ ಸಂಗಾತಿಯಾಗಿ ಸಿಗುತ್ತಾಳೆ ಅನ್ನೋ ನಂಬಿಕೆ ನನಗಿರಲಿಲ್ಲ. ರೈತರು ಅಂದು ದುಡಿದು, ನಾಳೆ ತಿನ್ನಬೇಕು, ಕೆಲಸದಲ್ಲಿ ಇದ್ದವರಿಗೆ ಹುಡುಗಿಯರು ಸಿಗುತ್ತಿಲ್ಲ ಇನ್ನು ನನಗೆ ಯಾರು ಹೆಣ್ಣು ಕೊಡುತ್ತಾರೆ?

ಎಂದು ಯೋಚನೆ ಮಾಡುತ್ತಿರುವಾಗ ಅನೇಕರು ನನ್ನನ್ನು ಬಾರಿ ಹೀಯಾಳಿಸುತ್ತಿದ್ದರು. ಇಂದು ನಾನು ಬದುಕಿ ವೇದಿಕೆಯ ಮೇಲೆ ನಿಂತಿದ್ದೇನೆ ದುಡಿಯುತ್ತಿದ್ದೇನೆ, ಜೀವನ ಮಾಡುತ್ತಿದ್ದೇನೆ ಅಂದ್ರೆ ಅದಕ್ಕೆ ನನ್ನ ತಂದೆ ಹಾಗೂ ಪತ್ನಿ ಪಲ್ಲವಿನೆ ಕಾರಣ. ಪ್ರೀತಿಸಿದರೆ ನಿಜವಾದ ಪ್ರೀತಿ ಮಾಡಿ ನಿಮ್ಮ ಚಟಕೊಸ್ಕರ ಎಂದು ಪ್ರೀತಿ ಮಾಡಬೇಡಿ” ಎನ್ನುತ್ತಾ ವೇದಿಕೆಯ ಮೇಲೆ ಸಂಜು ಬಸಯ್ಯ(Sanju Basayya) ಕಣ್ಣೀರು ಹಾಕುತ್ತ ತಮ್ಮ ಲವ್ ಸ್ಟೋರಿಯ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ತೆಗೆಯಲಾದಂತಹ ಕೆಲವು ಫೋಟೋಗಳು ನೆಟ್ಟಿಗರನ್ನು ಆಕರ್ಷಿಸುತ್ತಿದ್ದು, ಅಭಿಮಾನಿಗಳು ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ತಮ್ಮ ಪ್ರೀತಿಯನ್ನು ತೋರ್ಪಡಿಸಿದ್ದಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: