ನೀವು ಅದೃಷ್ಟವಂತರಾಗಿದ್ರೆ ಇಂತಹ ಕನಸು ಬೀಳುತ್ತಂತೆ

0

ರಾತ್ರಿ ಕನಸು ಕಾಣುವುದು ಸಹಜ. ಕನಸಿನಲ್ಲಿ ಅನೇಕ ವಿಷಯಗಳು ಬರುತ್ತವೆ. ಕೆಲವು ಕನಸುಗಳು ಭಯ ಹುಟ್ಟಿಸುತ್ತವೆ. ಒಮ್ಮೊಮ್ಮೆ ಕೆಟ್ಟ ಕನಸುಗಳು ಒಮ್ಮೊಮ್ಮೆ ಒಳ್ಳೆಯ ಕನಸುಗಳು ಬರುತ್ತವೆ. ಯಾವ ರೀತಿಯ ಕನಸು ಬಂದರೆ ಒಳ್ಳೆಯದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಕೆಲವು ಕನಸುಗಳು ನೆನಪಿನಲ್ಲಿ ಉಳಿಯುತ್ತದೆ, ಇನ್ನು ಕೆಲವು ಕನಸುಗಳು ಮರೆತು ಹೋಗುತ್ತದೆ. ಕನಸಿನಲ್ಲಿ ಕೆಲವು ವಿಷಯಗಳನ್ನು ನೋಡಿದರೆ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಯಾರೆ ಆಗಲಿ ಕನಸಿನಲ್ಲಿ ಕೆಲವು ಜೀವಿಗಳನ್ನು ನೋಡಿದರೆ ಅದೃಷ್ಟದ ಬಾಗಿಲು ತೆರೆಯಲಿದೆ ಒಳ್ಳೆಯದಾಗಲಿದೆ ಎಂದರ್ಥವಾಗಿದೆ. ಕೆಲವು ಕನಸುಗಳು ಎಲ್ಲರಿಗೂ ಬೀಳುವುದಿಲ್ಲ ಅಂತಹ ಕನಸುಗಳು ಬಿದ್ದರೆ ಅವರು ಅದೃಷ್ಟವಂತರು. ಬಿಳಿ ಬಣ್ಣದ ಸಿಂಹವು ಪ್ರಗತಿಯ ಸಂಕೇತವಾಗಿದೆ. ಕನಸಿನಲ್ಲಿ ಬಿಳಿ ಬಣ್ಣದ ಸಿಂಹ ಕಂಡುಬಂದರೆ ವೃತ್ತಿಜೀವನದಲ್ಲಿ ಒಳ್ಳೆಯದಾಗುತ್ತದೆ ಎಂದು ಅರ್ಥ. ಪ್ರತಿ ವಿಷಯದಲ್ಲೂ ಯಶಸ್ಸು ಸಿಗುತ್ತದೆ, ಶುಭ ಫಲಗಳು ಲಭ್ಯವಾಗುತ್ತದೆ. ಕೆಲಸ ಮತ್ತು ವ್ಯವಹಾರದಲ್ಲಿ ಪ್ರಗತಿ ಇದೆ ಎಂದು ಅರ್ಥ.

ಅದೆ ರೀತಿ ಕನಸಿನಲ್ಲಿ ಬಿಳಿ ಆನೆ ಕಂಡರೆ ಮಂಗಳಕರ ಎಂದು ಪರಿಗಣಿಸಲಾಗುತ್ತದೆ, ಬಿಳಿ ಆನೆ ಇಂದ್ರನ ವಾಹನವಾಗಿದೆ. ಕನಸಿನಲ್ಲಿ ಬಿಳಿ ಆನೆ ಕಂಡರೆ ಅವರ ಜೀವನದಲ್ಲಿ ದೊಡ್ಡ ಬದಲಾವಣೆ ಆಗುತ್ತದೆ ಹಾಗೂ ಅವರ ಎಲ್ಲ ಆಸೆಗಳು ಈಡೇರುತ್ತದೆ. ಕನಸಿನಲ್ಲಿ ಬಿಳಿ ಹಾವನ್ನು ನೋಡಿದರೂ ಒಳ್ಳೆಯದಾಗುತ್ತದೆ. ಅವರ ಅದೃಷ್ಟವು ರಾತ್ರಿ ಕಳೆದು ಬೆಳಗ್ಗೆ ಅನ್ನುವಷ್ಟ್ರಲ್ಲಿ ಅದೃಷ್ಟ ಬರುತ್ತದೆ. ಇವರು ಬೋಲೆನಾಥನ ಆಶೀರ್ವಾದದಿಂದ ಎಲ್ಲ ದುಃಖ ಹಾಗೂ ತೊಂದರೆಗಳಿಂದ ಪರಿಹಾರ ಪಡೆಯುತ್ತಾರೆ. ಯಾರಾದರೂ ತಮ್ಮ ಕನಸಿನಲ್ಲಿ ಬಿಳಿ ನವಿಲನ್ನು ನೋಡಿದರೆ ನಿಮ್ಮ ಅದೃಷ್ಟ ಖುಲಾಯಿಸಿತು ಎಂದರ್ಥ. ಇದು ಅತ್ಯಂತ ಮಂಗಳಕರ ಎಂಬ ಅರ್ಥವಾಗಿದೆ. ಇವರು ತಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸುತ್ತಾರೆ. ಪರಿಶ್ರಮಕ್ಕೆ ತಕ್ಕಂತೆ ಫಲ ದೊರೆಯುತ್ತದೆ.

ಕನಸಿನಲ್ಲಿ ಬರುವುದೆಲ್ಲವು ನಿಜ ಆಗುವುದಿಲ್ಲ ಆದರೆ ಬೆಳಗಿನ ಸಮಯದಲ್ಲಿ ಕನಸು ಕಂಡರೆ ಅದು ನಿಜವಾಗುತ್ತದೆ ಎಂಬ ನಂಬಿಕೆ ಇದೆ. ಕೆಲವು ಬಾರಿ ಕನಸಿನಲ್ಲಿ ಕಂಡಿದ್ದೆ ನಿಜವಾಗಲಿ ಎಂದು ಬಯಸುತ್ತೇವೆ ಕೆಲವೊಮ್ಮೆ ಈ ಕನಸು ಮಾತ್ರ ನಿಜವಾಗಬಾರದು ಎಂದು ಹೇಳುತ್ತೇವೆ. ಕೆಲವರು ಕನಸನ್ನು ಅತಿಯಾಗಿ ನಂಬುತ್ತಾರೆ ಇನ್ನು ಕೆಲವರು ಕನಸನ್ನು ನಂಬುವುದೆ ಇಲ್ಲ. ಕನಸನ್ನು ನಂಬುವುದು ಬಿಡುವುದು ಅವರವರ ವೈಯಕ್ತಿಕ ವಿಚಾರವಾಗಿದೆ. ಕೆಲವು ಕನಸುಗಳು ನಿಜವಾಗುತ್ತವೆ ಇನ್ನು ಕೆಲವು ಕನಸುಗಳು ಕನಸಿನಲ್ಲಿ ಹಾಗೆ ಯಾಕೆ ಬಂದಿರುವುದೆಂದು ನಮಗೆ ತಿಳಿಯುವುದಿಲ್ಲ. ಕೆಲವರಿಗೆ ಕೆಟ್ಟ ಕನಸಿನಿಂದ ಭಯಪಡುತ್ತಿರುತ್ತಾರೆ ಮನಸ್ಸು ನಿರಾಳತೆಯಿಂದ ಇಟ್ಟುಕೊಂಡು ಮಲಗುವುದರಿಂದ ಕಡಿಮೆಯಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave A Reply

Your email address will not be published.

error: Content is protected !!