WhatsApp Group Join Now
Telegram Group Join Now

ಸ್ನೇಹಿತರೆ, ಖಡಕ್ ಪೊಲೀಸ್ ಆಫೀಸರ್ ಎಂಬ ಹೆಸರು ಕೇಳಿದ ಹಾಗೆ ನಮ್ಮೆಲ್ಲರ ತಲೆಗೂ ಬರುವಂತಹ ಮೊದಲ ಹೆಸರೇ ರವಿ ಡಿ ಚನ್ನಣ್ಣನವರ್(Ravi D Channannavar), ತಮ್ಮ ಅದ್ಭುತ ಕಾರ್ಯವೈಕರಿ ಹಾಗೂ ಯುವಕರನ್ನು ಉರಿದುಂಬಿಸುವಂತಹ ಗುಣಕ್ಕೆ ಸಾವಿರಾರು ಸಂಖ್ಯೆಯ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಸ್ವತಃ ರವಿ ಡಿ ಚನ್ನಣ್ಣನವರ್(Ravi D Channannavar) ಅವರೇ ಹೇಳಿದ ಹಾಗೆ ಅವರ ಬಾಲ್ಯ ಇತರರಂತೆ ಶ್ರೀಮಂತಿಕೆಯಿಂದ ತುಂಬಿರಲಿಲ್ಲ,

ಬದಲಿಗೆ ಪ್ರತಿದಿನ ಮನೆ ಮನೆಗೂ ಹೋಗಿ ಪೇಪರ್ ಹಾಕಿ ತಮ್ಮ ದಿನವನ್ನು ಪ್ರಾರಂಭ ಮಾಡುತ್ತಿದ್ದಂತಹ ಹುಡುಗ ಇಂತಹ ವ್ಯಕ್ತಿ ಪೊಲೀಸ್ ಆಫೀಸರ್ ಆದದ್ದು ಹೇಗೆ? ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ 7೦3ನೇ ರಾಂಕ್ ಗಳಿಸಿದ್ದಾದರೂ ಹೇಗೆ? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟ್ಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವಾಗ ಕುತೂಹಲವಿದ್ದರೆ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ರವಿ ಡಿ ಚೆನ್ನಣ್ನನವರು ಮೂಲತಃ ಗದಗ ಜಿಲ್ಲೆಯಲ್ಲಿರುವ ನೀಲಗುಂದ ಗ್ರಾಮದವರು ಸಾಮಾನ್ಯ ಕೃಷಿ ಕುಟುಂಬವಾದಂತಹ ದ್ಯಾಮಪ್ಪ ಚೆನ್ನಣ್ಣನವರ್ (Dyamappa Channannavar) ಮತ್ತು ರತ್ನಮ್ಮ(Ratnamma) ದಂಪತಿಗಳಿಗೆ ಜುಲೈ 23, 1985 ರಂದು ಜನಿಸಿದರು. ಬಾಲ್ಯದಲ್ಲೇ ತೋಟಕ್ಕೆ ಹೋಗಿ ತಮ್ಮ ತಂದೆಯೊಂದಿಗೆ ಸೇರಿ ಕೃಷಿ ಕೆಲಸ ಮಾಡಲಾರಂಭಿಸಿದವರು ಹೀಗೆ ತಮ್ಮ ಊರಲ್ಲಿಯೇ ಪಿಯುಸಿ ಮುಗಿಸಿದಂತಹ ರವಿ ಡಿ ಚನ್ನಣ್ಣನವರ್(Ravi D Channannavar)

ಮುಂದಿನ ಶಿಕ್ಷಣಕ್ಕಾಗಿ ದಾರವಾಡಿಗೆ ಬರುತ್ತಾರೆ, ಅಲ್ಲಿಂದ 2೦೦7ರಲ್ಲಿ ಹೈದ್ರಾಬಾದ್ ಗೆ ತೆರಳಿ, ಐಎಎಸ್ ಪರೀಕ್ಷೆಯ ತರಬೇತಿಯನ್ನು ಪಡೆದುಕೊಂಡು ಮುಂದಿನ ವರ್ಷ ಅಂದರೆ 2008 ರಂದು ಯುಪಿಎಸ್ಸಿ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಕ್ಲಿಯರ್ ಮಾಡಿ ದೇಶಕ್ಕೆ 7೦3ನೇ ರಾಂಕ್ ಗಳಿಸಿ ಬೆಳಗಾವಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯ ಸ್ಥಾನವನ್ನು ಗಿಟ್ಟಿಸಿಕೊಂಡರು‌.

ಹೀಗೆ ಯಾವುದೋ ಪುಟ್ಟ ಗ್ರಾಮದಲ್ಲಿ ಜನಿಸಿದಂತಹ ರವಿ ಡಿ ಚನ್ನಣ್ಣನವರ್ ಅತಿ ಚಿಕ್ಕ ವಯಸ್ಸಿನಲ್ಲಿ ತೋಟಗಾರಿಕೆ, ಪೇಪರ್ ಹಾಕುವುದು, ಮನೆಯ ಸಣ್ಣಪುಟ್ಟ ಕೆಲಸಗಳನ್ನು ನೋಡಿಕೊಳ್ಳುವುದು ಈ ರೀತಿಯ ಎಲ್ಲಾ ಜವಾಬ್ದಾರಿಯೊಂದಿಗೆ ಯುಪಿಎಸ್ಸಿ ಪರೀಕ್ಷೆಯ ಮೊದಲ ಪ್ರಯತ್ನದಲ್ಲೇ ಸರ್ಕಾರಿ ಹುದ್ದೆಯನ್ನು ಗಿಟ್ಟುಸಿಕೊಂಡವರು. 2011ರಲ್ಲಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದಂತಹ ರವಿ ಡಿ ಚನ್ನಣ್ಣನವರ್(Ravi D Channannavar) ಧಾರವಾಡ, ಹೊಸಪೇಟೆ, ಹಾಸನ, ದಾವಣಗೆರೆ, ಶಿವಮೊಗ್ಗ, ಬೆಂಗಳೂರು

ರಾಜ್ಯದ ಇತರೆ ಜಿಲ್ಲೆಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಸದ್ಯ 2018ರಲ್ಲಿ ಬೆಂಗಳೂರಿಗೆ ವರ್ಗಾವಣೆಗೊಂಡು ತಮ್ಮ ಅದ್ಭುತ ಕಾರ್ಯ ವೈಖರಿಯ ಮೂಲಕ ಬೆಂಗಳೂರಿನ ಪಶ್ಚಿಮ ವಿಭಾಗದ ಉಪ್ಪಾರ್ಪೇಟೆ ಪೊಲೀಸ್ ಸ್ಟೇಷನ್ (Uppar pete police station) ನಲ್ಲಿ ಡಿಸಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗೆ ತಾವು ನಡೆದು ಬಂದ ದಾರಿಯನ್ನು ಯುವಕರ ಮನಸ್ಸಿಗೆ ನಾಟುವಂತೆ ಹೇಳುತ್ತಾ ಎಲ್ಲರಲ್ಲಿರೋ ಸಾಧಿಸುವಂತಹ ಛಲವಿರುತ್ತದೆ ಅದನ್ನು ಹುರಿದುಂಬಿಸಿ ಮುನ್ನಡೆಯಬೇಕಷ್ಟೆ ಎಂಬ ಸ್ಪೂರ್ತಿದಾಯಕ ಮಾತುಗಳ ಮೂಲಕ ಅದೆಷ್ಟೋ ಜನರ ಪಾಲಿಗೆ ಆದರ್ಶವಾಗಿದ್ದಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: