ಭಾರತ ಸರ್ಕಾರ ನೀಡುವ ಅತ್ಯುನ್ನತ ನಾಗರೀಕ ಪ್ರಶಸ್ತಿಗಳು

0

ಭಾರತ ಸರ್ಕಾರವು ಪ್ರತಿ ವರ್ಷವೂ ಸಮಾಜದಲ್ಲಿನ ಅತ್ಯುತ್ತಮ ಅಸಾಧಾರಣ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುತ್ತದೆ ಆ ಪೈಕಿ ಭಾರತ ರತ್ನ ಪ್ರಶಸ್ತಿ ಮೊದಲನೆಯದಾದರೆ ನಂತರದಲ್ಲಿ ಪದ್ಮ ಪ್ರಶಸ್ತಿಗಳನ್ನು ಕೊಡಲಾಗುತ್ತದೆ
ನಾವು ಈಗ ಭಾರತದ ಅತ್ಯುನ್ನತ ಪ್ರಶಸ್ತಿಗಳು ಆದಂತಹ ಭಾರತ ರತ್ನ ಪದ್ಮ ಪ್ರಶಸ್ತಿಗಳ ಬಗ್ಗೆ ತಿಳಿದುಕೊಳ್ಳೋಣ

ಮೊದಲಿಗೆ ಭಾರತ ರತ್ನ ಪ್ರಶಸ್ತಿ
ಭಾರತ ರತ್ನ ಪ್ರಶಸ್ತಿಯು ಭಾರತದಲ್ಲಿನ ಅತ್ಯುನ್ನತ ನಾಗರೀಕ ಗೌರವ
ಈ ಪ್ರಶಸ್ತಿಯನ್ನು 1954 ಜನವರಿ 2ರಂದು ಮಾಜಿ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರು ಪ್ರಾರಂಭಿಸಿದರು

ಭಾರತರತ್ನ ಪ್ರಶಸ್ತಿಯನ್ನು ಭಾರತದ ನಾಗರೀಕರು ಹಾಗೂ ಭಾರತೀಯರಲ್ಲ ದವರಿಗೂ ನೀಡಬಹುದಾಗಿದೆ ಭಾರತ ರತ್ನ ಪ್ರಶಸ್ತಿಯನ್ನು ಮಾನವ ಪ್ರಯತ್ನದಲ್ಲಿ ಯಾವುದೇ ಕ್ಷೇತ್ರದಲ್ಲಿ ಮಾಡುವಂತಹ ಅತ್ಯುನ್ನತ ಅಸಾಧಾರಣ ಸೇವೆಯನ್ನು ಗುರುತಿಸಿ ಕೊಡಲಾಗುವುದು ಭಾರತ ರತ್ನ ಪ್ರಶಸ್ತಿಗೆ ಶಿಫಾರಸು ಮಾಡುವ ಕೆಲಸವನ್ನು ಪ್ರಧಾನಮಂತ್ರಿಗಳು ರಾಷ್ಟ್ರಪತಿಯವರಿಗೆ ಮಾಡುತ್ತಾರೆ

ಒಂದು ವರ್ಷದಲ್ಲಿ ಮೂರು ಭಾರತ ರತ್ನ ಪ್ರಶಸ್ತಿಗಳನ್ನು ನೀಡಬಹುದಾಗಿದೆ ಇಲ್ಲಿಯವರೆಗೆ ಪ್ರಸ್ತುತ 48 ಅಸಾಧಾರಣ ಸಾಧಕರಿಗೆ ಭಾರತ ರತ್ನ ಪ್ರಶಸ್ತಿಯನ್ನು ಭಾರತ ಸರ್ಕಾರವು ನೀಡಿ ಗೌರವಿಸಿದೆ 2020 ಮತ್ತು 21 ನೇ ಸಾಲಿನಲ್ಲಿ ಯಾವುದೇ ಸಾಧಕರಿಗೆ ಭಾರತರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿಲ್ಲ
ಕೊನೆಯದಾಗಿ 2019 ನೇ ಇಸವಿಯಲ್ಲಿ ಭಾರತರತ್ನ ಪ್ರಶಸ್ತಿಯನ್ನು ಭೂಪೇನ್ ಹಜಾರಿಕಾ ಮತ್ತು ನಾನಾಜಿ ದೇಶಮುಖ್ ಅವರಿಗೆ ನೀಡಲಾಗಿದೆ

1954 ನೇ ಇಸವಿಯಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ಪ್ರಾರಂಭಿಸಿದಾಗ ಈ ಪ್ರಶಸ್ತಿಯನ್ನು ಪಡೆದುಕೊಂಡವರು ಸಿ ರಾಜಗೋಪಾಲಚಾರಿ, ಸಿವಿ ರಾಮನ್ ಮತ್ತು ಸರ್ವಪಲ್ಲಿ ರಾಧಾಕೃಷ್ಣನ್.
ಇಂದಿರಾಗಾಂಧಿಯವರು ಭಾರತ ರತ್ನ ಪ್ರಶಸ್ತಿಯನ್ನು ಪಡೆದ ಭಾರತದ ಮೊದಲ ಮಹಿಳೆಯಾಗಿದ್ದಾರೆ.
ಭಾರತರತ್ನ ಪ್ರಶಸ್ತಿಯನ್ನು ಪಡೆದುಕೊಂಡವರಿಗೆ ಏನೆಲ್ಲ ಸೌಲಭ್ಯಗಳು ಸಿಗಬಹುದು ಎಂಬುದರ ಬಗ್ಗೆ ನೋಡುವುದಾದರೆ

ಭಾರತ ರತ್ನ ಪ್ರಶಸ್ತಿ ಪುರಸ್ಕೃತರು ಭಾರತದ ಪ್ರಸ್ತುತ ರಾಷ್ಟ್ರಪತಿಗಳು ಅಂಕಿತ ಹಾಕಿದ ಪ್ರಶಸ್ತಿ ಪತ್ರವನ್ನು ಪಡೆಯುತ್ತಾರೆ ಈ ಪ್ರಶಸ್ತಿಯಲ್ಲಿ ಕೊಡುವ ಮೆಡಲ್ ಅಶ್ವತ್ಥ ಮರದ ಎಲೆಯ ರೂಪದಲ್ಲಿ ಇರುತ್ತದೆ ಇದು ಸುಮಾರು 5.8 ಸೆಂಟಿಮೀಟರ್ ಉದ್ದ 4.7 ಸೆಂಟಿ ಮೀಟರ್ ಅಗಲ ಹಾಗೂ 3.1 ಮಿಲಿಮೀಟರ್ ದಪ್ಪ ಇರುತ್ತದೆ ಹಾಗೂ ಇದು ಕಂಚಿನಿಂದ ಮಾಡಲ್ಪಟ್ಟಿರುತ್ತದೆ ಈ ಪದಕದ ಮುಂಭಾಗದಲ್ಲಿ 1.68 ಮೀಟರ್ ಅಗಲದ ಸೂರ್ಯನ ಪ್ರತಿಕೃತಿಯನ್ನು ಕೆತ್ತಲಾಗಿದೆ ಅದರ ಕೆಳಗೆ ಭಾರತರತ್ನ ಎಂಬ ಪದವನ್ನು ದೇವನಾಗರಿ ಲಿಪಿಯಲ್ಲಿ ಕೆತ್ತಲಾಗಿದೆ

ಭಾರತರತ್ನ ಪ್ರಶಸ್ತಿಯನ್ನು ಪಡೆದವರಿಗೆ ಪ್ರಶಸ್ತಿಯ ಜೊತೆ ಯಾವುದೇ ಹಣ ಸಿಗುವುದಿಲ್ಲ ಅಲ್ಲದೆ ಭಾರತರತ್ನ ಎಂಬ ಹೆಸರನ್ನು ತಮ್ಮ ಹೆಸರಿನ ಹಿಂದೆ ಅಥವಾ ಮುಂದೆ ಹಾಕಿಕೊಳ್ಳುವಂತಿಲ್ಲ
ಆದರೆ ಭಾರತರತ್ನ ಎಂಬ ಹೆಸರನ್ನು ತಮ್ಮ ಬಯೋಡೇಟಾ ಗಳಲ್ಲಿ ವಿಸಿಟಿಂಗ್ ಕಾರ್ಡ್ ಗಳಲ್ಲಿ ಬಳಸಿಕೊಳ್ಳಬಹುದು

ಭಾರತ ರತ್ನ ಪ್ರಶಸ್ತಿಯನ್ನು ಪಡೆದವರು ಯಾವ ಯಾವ ರಾಜ್ಯಗಳಲ್ಲಿ ಓಡಾಡುತ್ತಿರುತ್ತಾರೆ ಆ ರಾಜ್ಯಗಳಲ್ಲಿ ಅವರನ್ನು ಸ್ಟೇಟ್ ಗೆಸ್ಟ್ ಎಂದು ಪರಿಗಣಿಸಬೇಕಾಗುತ್ತದೆ ಅಲ್ಲದೆ ಇವರು ಡಿಪ್ಲೊಮ್ಯಾಟಿಕ್ ಪಾಸ್ ಪೋರ್ಟ್ ಗೆ ಅರ್ಹರಾಗಿರುತ್ತಾರೆ ಇದನ್ನು ರಾಜತಾಂತ್ರಿಕ ಪಾಸ್ಪೋರ್ಟ್ ಎಂದು ಕರೆಯಲಾಗುತ್ತದೆ

ನಂತರದಲ್ಲಿ ನೋಡುವುದಾದರೆ ಪದ್ಮ ಪ್ರಶಸ್ತಿ ಗಳು ಪದ್ಮ ಪ್ರಶಸ್ತಿಗಳ ಪೈಕಿ ನೋಡುವುದಾದರೆ ಮೊದಲಲ್ಲಿ ಪದ್ಮ ವಿಭೂಷಣ, ಎರಡನೆಯದಾಗಿ ಪದ್ಮ ಭೂಷಣ ನಂತರದಲ್ಲಿ ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಈ ಪ್ರಶಸ್ತಿಗಾಗಿ ಭಾರತದ ಎಲ್ಲಾ ರಾಜ್ಯಗಳಿಂದಲೂ ಹಲವಾರು ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದಂತಹ ವ್ಯಕ್ತಿಗಳ ಹೆಸರುಗಳನ್ನ ಶಿಫಾರಸ್ಸು ಮಾಡಲಾಗುತ್ತದೆ

ನಂತರದಲ್ಲಿ ಶಿಫರಸ್ಸು ಮಾಡಲಾದ ಹೆಸರುಗಳನ್ನು ಪ್ರಧಾನ ಮಂತ್ರಿಯವರ ಪದ್ಮ ಅವಾರ್ಡ್ ಕಮಿಟಿ ಯು ಶಾರ್ಟ್ ಲಿಸ್ಟ್ ಮಾಡುತ್ತದೆ ಆ ನಂತರದಲ್ಲಿ ಶಾರ್ಟ್ ಲಿಸ್ಟ್ ಆದ ಹೆಸರುಗಳನ್ನು ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿಯವರು ಗಮನಿಸಿ ಅಂತಿಮವಾಗಿ ನಿರ್ಣಯಿಸುತ್ತಾರೆ. ಪದ್ಮ ಪ್ರಶಸ್ತಿ ದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಯವರು ಪ್ರಶಸ್ತಿಯನ್ನು ನೀಡುತ್ತಾರೆ

ಪದ್ಮ ಪ್ರಶಸ್ತಿಗಳಲ್ಲಿ ನೀಡಲಾಗುವ ಮೆಡಲ್ ಗಳನ್ನು ಕಂಚಿನಿಂದ ಮಾಡಲಾಗಿದ್ದು ಜೊತೆಗೆ ಚಿನ್ನ ಮಿಶ್ರಿತ ಬೆಳ್ಳಿ ಯೂ ಸಹ ಅದರಲ್ಲಿ ಸೇರಿರುತ್ತದೆ, ಮೆಡಲ್ ನಾ ಮಧ್ಯ ಭಾಗದಲ್ಲಿ ಕಮಲದ ಚಿತ್ರವನ್ನು ಕೆತ್ತಲಾಗಿದ್ದುಕಮಲದ ಮೇಲಭಾಗದಲ್ಲಿ ಪದ್ಮ ಎಂಬ ಪದವನ್ನು ಹಾಗೂ ಕೆಳ ಭಾಗದಲ್ಲಿ ಆಯಾ ಪ್ರಶಸ್ತಿಗಳಿಗೆ ಅನುಗುಣವಾಗಿ ವಿಭೂಷಣ, ಭೂಷಣ ಹಾಗೂ ಶ್ರೀ ಎಂಬ ಪದಗಳನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿರುತ್ತದೆ.

ಅಲ್ಲದೇ ಈ ಪ್ರಶಸ್ತಿಗಳನ್ನೂ ಸಹ ಪುರಸ್ಕೃತರು ತಮ್ಮ ಹೆಸರಿನ ಮುಂಭಾಗದಲ್ಲಿ ಅಥವಾ ಹಿಂಭಾಗದಲ್ಲಿ ಹಾಕಿಕೊಳ್ಳುವಂತಿಲ್ಲ ಪ್ರಶಸ್ತಿಯನ್ನು ಸ್ವೀಕರಿಸಿದವರೆಂಬುದಷ್ಟೇ ಅವರ ಗರಿಮೆಯಾಗಿದ್ದು ಅವರು ಕೊಡುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ

Leave A Reply

Your email address will not be published.

error: Content is protected !!