WhatsApp Group Join Now
Telegram Group Join Now

Rathan Tata ಸ್ನೇಹಿತರೆ, ಟಾಟಾ ಸಂಸ್ಥೆ ಎಂಬ ಬೃಹತ್ತಾದ ಸಾಮ್ರಾಜ್ಯ ಒಂದನ್ನು ನಿರ್ಮಿಸಿ ಹಗಲಿರುಳೆನ್ನದೆ ಅದರ ಏಳಿಗೆಗಾಗಿ ದುಡಿದಿರುವಂತಹ ಮುಖ್ಯಸ್ಥ ಹಾಗೂ ಉದ್ಯಮಿ ರತನ್ ಟಾಟಾ(Ratan Tata) ಅವರ ಉತ್ತರಾಧಿಕಾರಿ ಯಾರಾಗಲಿದ್ದಾರೆ? ಎಂಬ ಲೆಕ್ಕಾಚಾರ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಟಾಟಾ ಇನ್ಸ್ಟಿಟ್ಯೂಟ್ ನಲ್ಲಿ ಜೋರಾಗಿಯೇ ನಡೆಯುತ್ತಿತ್ತು.

ಆದರೆ ಈಗ ಈ ಒಂದು ನೇಮಕ ಪ್ರಕ್ರಿಯೆಗೆ ಅಂತಿಮ ತೆರೆ ಬಿದ್ದಿದ್ದು ಅವರ ಕುಟುಂಬದ ಸದಸ್ಯರೇ ಆಗಿರುವಂತಹ ಮಾಯ ಟಾಟಾ(Maya Tata) ಅವರು ಇನ್ನು ಮುಂದೆ ಟಾಟಾ ಕಂಪನಿಯ ಜವಾಬ್ದಾರಿಯನ್ನು ತೆಗೆದುಕೊಳ್ಳಲಿರುವ ಮಾಹಿತಿ ಹೊರಬಿದ್ದಿದೆ. ಹೌದು ಗೆಳೆಯರೇ 85 ವರ್ಷದ ಉದ್ಯಮಿ ರತನ್ ಟಾಟಾ(Ratan Tata) ಈವರೆಗೂ ಮದುವೆಯೇ ಆಗಿಲ್ಲ,

ಸಹೋದರ ನಿಯೊಲ್ ಟಾಟಾ ಹಾಗೂ ಆಲೂ ಮಿಸ್ತ್ರಿ ದಂಪತಿಗಳ ಅವರ ಮಗಳೇ ಮಾಯ ಟಾಟಾ ಇವರಿಗೆ ಟಾಟಾ ಗ್ರೂಪ್ ಇನ್ಸ್ಟಿಟ್ಯೂಟ್ ನ ಉತ್ತರಧಿಕಾರಿಯಾಗುವಂತಹ ಸ್ಥಾನವನ್ನು ಇದೆ ಅಕ್ಟೋಬರ್ 29 ನೇ ತಾರೀಕು ನಡೆಯಲಿರುವ ಟಾಟಾ ಸಮೂಹದ ವಾರ್ಷಿಕ ಮಹಾಸಭೆಯಲ್ಲಿ ನಿರ್ಧಾರ ಮಾಡುವ ಸಾಧ್ಯತೆ ಇವೆ ಎಂಬ ಮಾಹಿತಿಯು ಮೂಲಗಳಿಂದ ತಿಳಿದುಬಂದಿದ್ದು,

ಹೆಚ್ಚಾಗಿ ಯಾವುದೇ ಸಭಾ ಸಮಾರಂಭಗಳಲ್ಲಿ ಅಥವಾ ಇನ್ನಿತರೆ ಖಾಸಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳದಂತಹ ಮಾಯ ಟಾಟಾ ಅವರನ್ನು ಸಂಪೂರ್ಣ ಟಾಟಾ ಸಂಸ್ಥೆಯ (Tata institute) ಮುಖ್ಯಸ್ಥೆಯನ್ನಾಗಿ ಮಾಡಲು ಕುಟುಂಬದವರು ನಿರ್ಧರಿಸಿರುವ ಮಾಹಿತಿ ತಿಳಿದು ಬಂದಿದೆ. ಹೀಗೆ ಎಲ್ಲವೂ ಅಂದುಕೊಂಡಂತೆ ನೆರವೇರಿದರೆ ಅಕ್ಟೋಬರ್ 29ನೇ ತಾರೀಖಿನ ನಂತರ ರತನ್ ಟಾಟಾ ನಿರ್ಮಿಸಿರುವ ಭದ್ರ ಕೋಟೆಗೆ ಮಾಯ ಟಾಟಾ(Maya Tata) ಒಡತಿಯಾಗಲಿದ್ದಾರೆ.

ಹೀಗೆ ಸದಾ ಕಾಲ ಉದ್ಯಮದಲ್ಲಿ ತೊಡಗಿಕೊಳ್ಳುತ್ತಾ ಹೊಸತನ್ನು ಅನ್ವೇಷಿಸುವ ಗುಣ ಹೊಂದಿದ್ದಂತಹ ರತನ್ ಟಾಟಾ(Ratan Tata) ಅವರು ಈವರೆಗೂ ಮದುವೆಯಾಗದ ಕಾರಣ ಅವರ ಸಂಪೂರ್ಣ ಆಸ್ತಿ ಹಾಗೂ ಕಂಪನಿಯ ಜವಾಬ್ದಾರಿ ಎಲ್ಲವೂ ಅವರ ಮಲ ಸಹೋದರನ ಪುತ್ರಿಯೇ ಸೇರಲಿದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: