ಪ್ರಿಯಕರನ ಜೊತೆಗಿನ ಚಲ್ಲಾಟಕ್ಕೆ ಗಂಡನಿಗೆ ಸ್ಕೆಚ್ ಹಾಕಿದ ಮಹಿಳೆ, ಅಷ್ಟಕ್ಕೂ ಗೋಡಂಬಿ ತೋಪಿನಲ್ಲಿ ನಡೆದದ್ದೇನು ಗೊತ್ತಾ? ನಿಜಕ್ಕೂ ಇಂತವರು ಇರ್ತಾರ

0

Kanada News ಸ್ನೇಹಿತರೆ, ಪ್ರತಿನಿತ್ಯದ ಟಿವಿ ನ್ಯೂಸ್ ಚಾನೆಲ್ಗಳಲ್ಲಿ ಪೇಪರ್ಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಅಕ್ರಮ ಸಂಬಂಧದಂತಹ ಪ್ರಕರಣಗಳು ನೋಡ ಸಿಗುತ್ತದೆ. ಹೀಗೆ ದಿನೆ ದಿನೇ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ವಿವಾಹಿತರೆ ಸಂಬಂಧದಿಂದಾಗಿ ಒಬ್ಬರಲ್ಲ ಒಬ್ಬರು ಮಣ್ಣು ಸೇರುತ್ತಿದ್ದಾರೆ. ಅಂತಹದ್ದೇ ಒಂದು ಘಟನೆ ಅನಕಾಪಲ್ಲಿ ಜಿಲ್ಲೆಯ ಗೋಲುಗುಂಡ ಮಂಡಲದ ಮಲ್ಲಂಪೇಟೆಯಲ್ಲಿ(Mallampete) ನಡೆದಿದ್ದು, ಸುದ್ದಿ ಕೇಳಿದ ಜನರು ಆತಂಕಕ್ಕೊಳಗಾಗಿದ್ದಾರೆ.

ಹೌದು ಗೆಳೆಯರೇ ಗಂಡನೊಂದಿಗೆ ಹಾಯಾದ ಕಾಲ ಕಳೆಯುವ ಸಲುವಾಗಿ ಜಾನಕಿ (Janaki) ಎಂಬಾಕೆ ಪತಿ ಗುಡಿವಾಳ ಅಪ್ಪಲನಾಯ್ಡುರನ್ನು(Appalanaidu) ಗೋಡಂಬಿ ತೋಟಕ್ಕೆ ಕರೆದುಕೊಂಡು ಹೋಗಿದ್ದಾಳೆ. ಹೆಂಡತಿ ಬಹಳ ದಿನಗಳ ನಂತರ ಈ ರೀತಿ ಆಸೆಪಟ್ಟಿದ್ದಾಳೆ. ಹೋಗಿ ಬರುವುದರಲ್ಲಿ ಏನಿದೆ ಎಂದು ಗಂಡನೂ ಖುಷಿಖುಷಿಯಾಗಿ ಮನೆಯಲ್ಲಿ ಊಟ ಮಾಡಿಕೊಂಡು ಹೆಂಡತಿಯೊಂದಿಗೆ ಹೋದನು.

ಹೀಗೆ ತೋಟಕ್ಕೆ ಹೋಗಿ ಮೋಜು ಮಾಡೋಣ ಎಂದು ಹೇಳಿ ಗಂಡನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ತಲೆಯನ್ನು ನೆವರಿಸುತ್ತಿರುತ್ತಾಳೆ. ಅಬ್ಬೊ ನನ್ನ ಮೇಲೆ ನಿನಗೆ ಎಷ್ಟು ಪ್ರೀತಿ ಎಂದು ಗಂಡ ಆಕೆಯನ್ನು ಕೊಂಡಾಡುತ್ತಿದ್ದನು. ಆದರೆ ಆಕೆ ಈ ರೀತಿ ಮಾಡುತ್ತಿರುವುದರ ಹಿಂದಿನ ದುರುದ್ದೇಶವನ್ನು ಅಪ್ಪಲ ನಾಯ್ಡುಗೆ ಗುರುತು ಹಿಡಿಯಲಿಲ್ಲ. ಹೀಗೆ ಹೆಂಡತಿಯ ಪ್ರೀತಿಯಲ್ಲಿ ಮೈಮರೆಯುತ್ತಿದ್ದಾಗ ಕೆಲವೇ ಕೆಲವು ನಿಮಿಷಗಳಲ್ಲಿ ಆತನ ಕಥೆಯನ್ನು ಮುಗಿಸಿ ಪೊಲೀಸರ ಬಳಿ ರಸ್ತೆ ಅಪಘಾತವೆಂದು ಹೈಡ್ರಾಮ ಮಾಡಿದ್ದಾಳೆ.

ಪ್ರಾಣಪಕ್ಷಿ ಹಾರಿ ಹೋಗುತ್ತಾ ಇದ್ದ ಹಾಗೆ ತಲೆಗೆ ಬಲವಾದ ರಾಡ್ನಿಂದ ಹೊಡೆದು ರಕ್ತ ಹರಿಯುವಂತೆ ಮಾಡಿ ಆತನ ಶವವನ್ನು ಮಾರ್ಗ ಮಧ್ಯೆ ಏಳೆದು ತಂದು ಹಾಕಿದ್ದಾಳೆ. ಅಲ್ಲದೆ ಪಕ್ಕದಲ್ಲಿ ದ್ವಿಚಕ್ರ ವಾಹನ ಒಂದು ಬಿದ್ದಿರುವ ರೀತಿ ದೃಶ್ಯವನ್ನು ಸೃಷ್ಟಿಸಿ ರಸ್ತೆ ಮಧ್ಯದಲ್ಲಿ ತಾನು ಸಹ ಸಣ್ಣಪುಟ್ಟ ಗಾಯಗಳನ್ನು ಮಾಡಿಕೊಂಡು ಅಳತೊಡಗಿದ್ದಾಳೆ. ಹೀಗೆ ದಾರಿ ಹೋಕರ ಸಹಾಯದಿಂದ ಆಸ್ಪತ್ರೆಗೆ ಮೃ’ತ ದೇಹವನ್ನು ರವಾನೆ ಮಾಡಲಾಯಿತು.

ಆದರೆ ರಣ ಹದ್ದಿನಂತೆ ಈ ಒಂದು ಪ್ರಕರಣದ ಕುರಿತು ಮಾಹಿತಿ ಕಲೆ ಹಾಕುತ್ತಾ ಹೋದಂತಹ ಪೊಲೀಸರಿಗೆ ಬೆಚ್ಚಿ ಬೀಳುವಂತಹ ಸಂಗತಿ ಕಾದಿತ್ತು. ಹೌದು ಗೆಳೆಯರೇ ತನ್ನ ಪ್ರಿಯಕರನನ್ನು ವರಿಸುವ ಸಲುವಾಗಿ ಗಂಡನಿಗೆ ಕಲ್ಲಿನಿಂದ ಹೊಡೆದು ಆತನ ಪ್ರಾಣ ಹಾರಿ ಹೋಗುವಂತೆ ಮಾಡಿ ಆನಂತರ ಅಪಘಾತ ಉಂಟಾದ ರೀತಿ ದೃಶ್ಯವನ್ನು ಸೃಷ್ಟಿಸಿ ಹೈಡ್ರಾಮ ಮಾಡುತ್ತಿರುವುದರ ಸತ್ಯ ಸಂಗತಿ ಹೊರಬಂದು ಸದ್ಯ ಜಾನಕಿ (Janaki) ಪೊಲೀಸರ ವಶದಲ್ಲಿದ್ದಾಳೆ.

Leave A Reply

Your email address will not be published.

error: Content is protected !!
Footer code: