Rajinikanth: ಸ್ನೇಹಿತರೆ, ಸದ್ಯ ತಮ್ಮ ಜೈಲರ್(Jailer) ಸಿನಿಮಾದಿಂದಾಗಿ ರಾಜ್ಯದಾದ್ಯಂತ ಸದ್ದು ಮಾಡುತ್ತಿರುವ ತಮಿಳುನಾಡು ಫಾದರ್ ರಜನಿಕಾಂತ್(Rajinikanth) ಅವರು ಇದೀಗ ತಮ್ಮ ಸರಳ ವ್ಯಕ್ತಿತ್ವದ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಹೌದು ಗೆಳೆಯರೇ ಇಂದು ಅಂದರೆ ಆಗಸ್ಟ್ 29ನೇ ತಾರೀಕಿನಂದು ಬೆಂಗಳೂರಿನ ಜಯನಗರದಲ್ಲಿರುವ ಬಿಎಂಟಿಸಿ ಡಿಪೋ(BMTC Depot)ಗೆ ಪ್ರಖ್ಯಾತ ಸೆಲೆಬ್ರೆಟಿಯಾಗಿದ್ದರೂ ಸಹ ಸಾಮಾನ್ಯ ಮನುಷ್ಯರಂತೆ ಭೇಟಿ ನೀಡಿ
ಅಲ್ಲಿನ ಸಿಬ್ಬಂದಿ ಹಾಗೂ ಜನರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲಾಗುತ್ತಿದ್ದಾರೆ. ಹೌದು ಗೆಳೆಯರೇ ಬೆಂಗಳೂರಿನ ಪ್ರತಿಷ್ಠಿತ ಏರಿಯಾ ಆದಂತಹ ಜಯನಗರದಲ್ಲಿ ಇರುವಂತಹ ಬಿ ಎಂ ಟಿ ಸಿ ಡಿಪೋ ನಂಬರ್ 4ಕ್ಕೆ ನಟ ರಜನಿಕಾಂತ್(Rajinikanth) ಯಾರಿಗೂ ಹೇಳದೆ ಬಹಳ ಸಿಂಪಲ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ರಜನಿಕಾಂತ್ ಅಲ್ಲಿಗೆ ಬರುತ್ತಾರೆ ಎಂಬುದರ ಸುಳಿವು ಯಾರಿಗೂ ಸಹ ಇರಲಿಲ್ಲ,
ಈ ಹಿಂದೆ ರಜನಿಕಾಂತ್ ಅವರು ಅದೇ ಡಿಪೋನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಅದರ ನೆನಪುಗಳನ್ನು ಮೇಲು ಹಾಕುವ ಸಲುವಾಗಿ ಯಾರಿಗೂ ಹೇಳದೆ ಗುಟ್ಟಾಗಿ ರಜನಿ(Rajini) ಬಂದು ಅಲ್ಲಿನ ಹಳೆಯ ಸ್ನೇಹಿತರು ಸಿಬ್ಬಂದಿ, ಬಸ್ ಕಂಡಕ್ಟರ್ ಹಾಗೂ ಚಾಲಕರೊಂದಿಗೆ ಮುಕ್ತವಾಗಿ ಮಾತನಾಡಿ ತಮ್ಮ ಹಳೆಯ ನೆನಪುಗಳನ್ನೆಲ್ಲ ರಿಫ್ರೇಶ್ ಮಾಡಿಕೊಂಡಿದ್ದಾರೆ. ಬೆಳಗ್ಗೆ 11:00 ಸುಮಾರಿಗೆ ರಜನಿಕಾಂತ್(Rajinikanth) ಕಾರಿನಲ್ಲಿ ಬಂದಿಳಿದು ತಮ್ಮ ಸ್ನೇಹಿತರೊಂದಿಗೆ ಡಿಪೋಗೆ ಎಂಟ್ರಿಕೊಟ್ಟು 10 ನಿಮಿಷಗಳ ಕಾಲ ಹೊರಗಡೆ ಬಾರದೆ,
ಅಲ್ಲಿನ ಕೆಲ ಕಾರ್ಯಗಳ ಕುರಿತೆಲ್ಲ ಮಾಹಿತಿ ಕಲೆ ಹಾಕುತ್ತಾ ಈಗ ಅಳವಡಿಸಲಾಗುತ್ತಿರುವ ಹೊಸ ನಿಯಮಗಳು ಹಾಗೂ ಸರಕಾರ ಫ್ರೀ ಬಸ್ ಬಿಟ್ಟ ನಂತರ ಏನೇನೆಲ್ಲ ಸೌಲಭ್ಯಗಳು ದೊರಕುತ್ತವೆ, ಹಾಗೂ ಏನೆಲ್ಲಾ ತೊಂದರೆಯಾಗುತ್ತಿದೆ? ಎಂಬುದನ್ನೆಲ್ಲ ಮನಗಂಡಿದ್ದಾರೆ. ಅಷ್ಟೇ ಅಲ್ಲದೆ ಸಾಮಾನ್ಯ ಜನತೆ ಹಾಗೂ ಬಿಎಂಟಿಸಿ (BMTC) ಸಿಬ್ಬಂದಿಗಳೊಂದಿಗೆ ಗ್ರೂಪ್ ಫೋಟೋ ಕ್ಲಿಕ್ಕಿಸಿಕೊಂಡು ತಮ್ಮ ಸರಳತೆ ಮೆರೆದಿದ್ದಾರೆ.
ಹೌದು ಗೆಳೆಯರೇ ರಜನಿಕಾಂತ್ ಅವರೊಂದಿಗೆ ಒಂದೇ ಒಂದು ಸೆಲ್ಫಿ ತೆಗೆಸಿಕೊಳ್ಳುವ ಸಲುವಾಗಿ ಸಾಕಷ್ಟು ಸೆಲೆಬ್ರಿಟಿಗಳ ಕಾದು ಕುಳಿತಿರುವಾಗ ರಜಿನಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬಿಎಂಟಿಸಿ ಡಿಪೋಗೆ ಬಂದು ತಮ್ಮ ಹಳೆ ದಿನಗಳ ಮೇಲುಕು ಹಾಕಿರುವುದು ಬಹಳ ವಿಶೇಷವಾಗಿ ಕಂಡುಬಂದಿದೆ. ಇವರ ಈ ಸರಳತೆಗೆ ವ್ಯಾಪಕ ಮೆಚ್ಚುಗೆಗಳು ಕೂಡ ವ್ಯಕ್ತವಾಗುತ್ತಿದ್ದು, ಅಭಿಮಾನಿಗಳಂತೂ ದಿಲ್ ಖುಷ್ ಆಗಿದ್ದಾರೆ.