ಆಕಾಶದಲ್ಲಿ ಹಾರುವ ಆಂಜನೇಯ ಸ್ವಾಮಿ ದೇವಸ್ಥಾನ, ಇಂದಿಗೂ ನಿಗೂಢವಾಗಿದೆ

0

ಪ್ರಪಂಚದಲ್ಲಿಯೆ ಏಕೈಕ ಹಾರುವ ಆಂಜನೇಯ ದೇವಸ್ಥಾನವಿದೆ. ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದ್ದು ತನ್ನಷ್ಟಕ್ಕೆ ತಾನೆ ಉದ್ಭವಗೊಂಡ ದೇವಸ್ಥಾನ ಇದಾಗಿದೆ. ಹಾಗಾದರೆ ಹಾರುವ ಆಂಜನೇಯ ದೇವಸ್ಥಾನದ ಬಗ್ಗೆ ಒಂದಷ್ಟು ನಿಗೂಢ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಸಾವಿರಾರು ವರ್ಷಗಳಿಂದ ಹಿಂಜಲಿ ಕಟ್ ಊರಿನಲ್ಲಿ ನೆಲೆಸುತ್ತಿರುವ ಜನರು ಹೇಳುವ ಪ್ರಕಾರ ಆಂಜನೇಯ ದೇವಸ್ಥಾನ ಹಾರುತ್ತದೆ ನಾವು ನೋಡಿದ್ದೇವೆ ಎಂದು ಹೇಳುತ್ತಾರೆ. ಈ ದೇವಸ್ಥಾನ ಒಡಿಸ್ಸಾ ರಾಜ್ಯದ ಹಿಂಜಲಿಕಟ್ ಎಂಬ ಹಳ್ಳಿಯಲ್ಲಿ ಆಂಜನೇಯ ದೇವಸ್ಥಾನ ಹಾಗೂ ಜಗನ್ನಾಥ ದೇವಸ್ಥಾನವಿದೆ ಎರಡು ದೇವಸ್ಥಾನಗಳು ತಮ್ಮಷ್ಟಕ್ಕೆ ಭೂಮಿಯಿಂದ ಉದ್ಭವಗೊಂಡಿದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

ಒಡಿಸ್ಸಾ ರಾಜ್ಯದಲ್ಲಿ ಇರುವ ಪೂರಿ ಜಗನ್ನಾಥ ದೇವಾಲಯ ಬೇರೆ ಹಿಂಜಲಿಕಟ್ ನಲ್ಲಿರುವ ಜಗನ್ನಾಥ ದೇವಾಲಯವೆ ಬೇರೆ ಪೂರಿ ಜಗನ್ನಾಥ ದೇವಾಲಯಕ್ಕೆ ಬರುವ ಭಕ್ತರು 176 ಕಿಲೋಮೀಟರ್ ಪ್ರಯಾಣ ಮಾಡಿ ಹಿಂಜಲಿಕಟ್ ನಲ್ಲಿರುವ ಜಗನ್ನಾಥ ದೇವಾಲಯ ಹಾಗೂ ಆಂಜನೇಯ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಆರ್ಕಲಜಿ ಡಿಪಾರ್ಟ್ಮೆಂಟ್ ಆಫ್ ಇಂಡಿಯಾ ಹೇಳಿರುವ ಪ್ರಕಾರ ಸುಮಾರು ಸಾವಿರ ವರ್ಷಗಳ ಹಿಂದೆ ದೊಡ್ಡ ಭೂಕಂಪವಾಗಿತ್ತು ಆಗ ಈ ಎರಡು ದೇವಸ್ಥಾನಗಳು ಭೂಮಿಯಿಂದ ಎದ್ದು ಬಂದವು.

ಆಂಜನೇಯ ಸ್ವಾಮಿಯು ಸಾವಿರ ವರ್ಷಗಳ ಹಿಂದೆ ಹಿಂಜಲಿಕಟ್ ಊರಿನ ಗುಪ್ತಶಂಕರ ಗುಹೆಯಲ್ಲಿ ಭಗವಂತ ಈಶ್ವರನ ಕುರಿತು ತಪಸ್ಸು ಮಾಡುತ್ತಾರೆ ಆಗ ಒಂದು ಶಿವಲಿಂಗ ಜಗನ್ನಾಥ ದೇವಾಲಯ ಹಾಗೂ ಹಾರುವ ದೇವಾಲಯ ಹುಟ್ಟಿಕೊಂಡಿತು ಎಂದು ಹೇಳುತ್ತಾರೆ. ಆಂಜನೇಯ ಸ್ವಾಮಿಯ ತಪಸ್ಸಿನ ಶಕ್ತಿಯಿಂದ ಈ ಎರಡು ದೇವಾಲಯಗಳು ಹುಟ್ಟಿಕೊಂಡಿವೆ ಎಂದು ಹಿಂಜಲಿಕಟ್ ಪುರಾವೆಯಿಂದ ತಿಳಿದು ಬಂದಿದೆ. ಗುಪ್ತಶಂಕರ ಗುಹೆಯಲ್ಲಿ ಆಂಜನೇಯ ಸ್ವಾಮಿ ತಪಸ್ಸು ಮಾಡಿ ಪ್ರತಿಷ್ಠಾಪನೆ ಮಾಡಿದ ಶಿವಲಿಂಗವನ್ನು ಇಂದಿಗೂ ನೋಡಬಹುದು.

ಸಾವಿರಾರು ಭಕ್ತರು ಈ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಾರೆ. ಈ ಗುಪ್ತಶಂಕರ ಗುಹೆ ನೇರವಾಗಿ ಹಿಮಾಲಯಕ್ಕೆ ಹೋಗುತ್ತದೆ ಆಂಜನೇಯ ಸ್ವಾಮಿ ಇಂದಿಗೂ ಗುಹೆಯ ಮೂಲಕ ಬಂದು ಶಿವಲಿಂಗಕ್ಕೆ ಪೂಜೆ ಮಾಡುತ್ತಾರೆ ಎಂದು ನಂಬುತ್ತಾರೆ. ಪ್ರತಿ ವರ್ಷ ಆರು ತಿಂಗಳ ಕಾಲ ಶಿವಲಿಂಗಕ್ಕೆ ಪೂಜೆ ಇರದೆ ಮುಚ್ಚಿಡಲಾಗುತ್ತದೆ ಆದರೆ ಆರು ತಿಂಗಳ ನಂತರ ನೋಡಿದರೆ ಪ್ರತಿದಿನ ಪೂಜೆ ಮಾಡಿದ ಹೂವುಗಳು ಹಾಗೂ ನೀರಿನಿಂದ ಅಭಿಷೇಕ ಮಾಡಿರುವುದು ಕಂಡುಬರುತ್ತದೆ ಹೀಗೆ ಪೂಜೆ ಮಾಡುವುದು ಆಂಜನೇಯ ಸ್ವಾಮಿ ಎಂದು ಭಕ್ತರು ನಂಬಿದ್ದಾರೆ.

1435 ನೇ ಇಸ್ವಿಯ ಓಡಿಸಾ ರಾಜ್ಯದ ರಾಜನಾದ ಕಪಿಲೇಂದ್ರ ಅವರು ತಮ್ಮ ಅರಮನೆ ಆಸ್ಥಾನದಲ್ಲಿ ಆಂಜನೇಯ ಸ್ವಾಮಿಯ ಹಾರುವ ದೇವಸ್ಥಾನದ ಚಿತ್ರ ಬಿಡಿಸಿದ್ದಾರೆ. 1870 ನೇ ಇಸ್ವಿಯಲ್ಲಿ ಮೊದಲ ಬಾರಿಗೆ ಮಧ್ಯರಾತ್ರಿಯಲ್ಲಿ ಹಿಂಜಲಿಕಟ್ ಹಳ್ಳಿಯ ಜನರು ಆಂಜನೇಯ ಸ್ವಾಮಿ ದೇವಾಲಯ ಹಾರುತ್ತಿರುವುದನ್ನು ಕಣ್ಣಾರೆ ನೋಡಿದ್ದಾರೆ, ನಂತರ ಹಳ್ಳಿಯ ಜನರು ಆಂಜನೇಯ ಸ್ವಾಮಿ ದೇವಾಲಯ ಹಾರುತ್ತಿರುವುದನ್ನು ನಾವು ನೋಡಿದ್ದೇವೆ ಎಂದು ಸ್ಟೇಟ್ ಮೆಂಟ್ ಕೊಡುತ್ತಾರೆ ತನಿಖೆ ನಡೆಯುತ್ತದೆ ಆದರೆ ಇದರ ಬಗ್ಗೆ ಸರಿಯಾದ ಸುಳಿವು ಸಿಗದೆ ತನಿಖೆ ಮುಚ್ಚಲಾಗುತ್ತದೆ.

2002ರಲ್ಲಿ ಆಂಜನೇಯ ದೇವಸ್ಥಾನದ ಎರಡು ಇಂಚು ಕಲ್ಲು ದೇವಸ್ಥಾನದಿಂದ 50 km ದೂರದಲ್ಲಿ ಬಿದ್ದಿರುವ ಸ್ಥಿತಿಯಲ್ಲಿ ಕಂಡುಬರುತ್ತದೆ ಇದರಿಂದ ಆಂಜನೇಯ ಸ್ವಾಮಿ ದೇವಾಲಯ ಹಾರುತ್ತದೆ ಎನ್ನುವುದಕ್ಕೆ ಸಾಕ್ಷಿ ಸಿಕ್ಕಂತಾಗುತ್ತದೆ ಆದರೂ ತನಿಖೆ ಮುಂದುವರೆಯುವುದಿಲ್ಲ ಇದಕ್ಕೆ ಕಾರಣ ಇಂದಿಗೂ ತಿಳಿದು ಬಂದಿಲ್ಲ ಏಕೆಂದರೆ ತನಿಖೆಯ ಹಿಂದಿರುವ ರಾಮಚಂದ್ರ ಅಯ್ಯಂಗಾರ್ ಅವರು ನಿಗೂಢವಾಗಿ ಸಾವನ್ನುಪುತ್ತಾರೆ.

ಹಿಂಜಲಿಕಟ್ ಊರಿನ ಜನರ ಪ್ರಕಾರ ಈ ದೇವಸ್ಥಾನ ಕೆಲವು ನಿರ್ದಿಷ್ಟ ರಾತ್ರಿಗಳಲ್ಲಿ ಮಾತ್ರ ಹಾರುತ್ತದೆ ಹಾಗೂ ಹಾರಿ ತನ್ನ ಹಳೆಯ ಜಾಗಕ್ಕೆ ಬಂದು ನಿಲ್ಲುತ್ತದೆ ಇದನ್ನು ನಾವು ಆಕಾಶದಲ್ಲಿಯೆ ನೋಡಬಹುದು ಎಂದು ಹೇಳಿದ್ದಾರೆ. ಹಿಂದೂ ಆಸ್ಟ್ರೋಲಜಿ ಪ್ರಕಾರ ಕೆಲವು ರಾತ್ರಿ ದೇವಸ್ಥಾನದ ಗುರುತ್ವಾಕರ್ಷಣ ಕೇಂದ್ರ ಬಹಳ ಕಡಿಮೆಯಾಗಿ ಹಾರುತ್ತದೆ ಇನ್ನೊಂದು ಆಸ್ಟ್ರಾಲಜಿ ರಿಸರ್ಚ್ ಪ್ರಕಾರ ಆಂಜನೇಯ ಚಿರಂಜೀವಿ ಆಗಿರುವುದರಿಂದ ಅವರ ತಪಸ್ಸು ಶಕ್ತಿಯಿಂದ ದೇವಸ್ಥಾನ ಹಾರುತ್ತದೆ ಎಂದು ಹೇಳಿದೆ.

ಈ ಕಳೆದ ಜೂನ್ ತಿಂಗಳಿನಲ್ಲಿ ಮಧ್ಯರಾತ್ರಿ ಹಿಂಜಲಿಕಟ್ ಹಳ್ಳಿಯಲ್ಲಿ ಆಕಾಶದಲ್ಲಿ ಪ್ರಕಾಶಮಾನವಾದ ಬೆಳಕೊಂದು ಹಾರುತ್ತಿರುವುದು ಕಂಡುಬರುತ್ತದೆ ಈ ಬೆಳಕು ದೇವಸ್ಥಾನಕ್ಕೆ ಸಂಬಂಧಪಟ್ಟಿರುವುದು ಎಂದು ಅಲ್ಲಿಯ ಜನರು ಹೇಳುತ್ತಾರೆ. ಈ ಬೆಳಕಿನ ನಿಗೂಢವನ್ನು ಪತ್ತೆಹಚ್ಚಲು ವಿಜ್ಞಾನಿಗಳು ಹರ ಸಾಹಸ ಪಡುತ್ತಿದ್ದಾರೆ. ನಿಗೂಢ ಸ್ಥಳಗಳ ಪಟ್ಟಿಯಲ್ಲಿ ಹಿಂಜಲಿಕಟ್ ಆಂಜನೇಯ ದೇವಸ್ಥಾನಕ್ಕೆ 26ನೆ ಸ್ಥಾನ ಸಿಕ್ಕಿದೆ. ಇಂತಹ ನಿಗೂಢ ಮಾಹಿತಿಯನ್ನು ನೀವು ತಿಳಿಯಿರಿ ಇನ್ನೊಬ್ಬರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: