ಸ್ನೇಹಿತರೆ, ನಟ ಪ್ರಜ್ವಲ್ ದೇವರಾಜ್ (Prajwal Devraj) ಅವರು ಸಿಕ್ಸರ್ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟು ಇಂದು ಬಹು ಬೇಡಿಕೆಯ ನಟರಾಗಿ ಹೊರಹೊಮ್ಮಿದ್ದಾರೆ. ಹೌದು ಗೆಳೆಯರೇ, ಮೊದಲ ಸಿನಿಮಾ ಹೇಳಿಕೊಳ್ಳುವಂತಹ ಯಶಸ್ಸು ನೀಡದೆ ಹೋದರು ಅದೇ ವರ್ಷ ಅಂದರೆ 2007ರಲ್ಲಿ ತೆರೆಕಂಡ ಗ್ಯಾಂಗ್ಸ್ಟರ್ ಕಥೆ ಆಧಾರಿತ ಗೆಳೆಯ (Geleya) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತು.
ಈ ಸಿನಿಮಾದ ಮೂಲಕ ತಮ್ಮ ತಂದೆಯಂತೆ ಹೆಸರು ಮಾಡಲು ಮೈಲಿಗಲ್ಲನ್ನು ಹಾಕಿಕೊಂಡಂತಹ ಪ್ರಜ್ವಲ್ ದೇವರಾಜ್ (Prajwal Devraj) ಮತ್ತೊಂದು ಹಿಂದಿರುಗಿ ನೋಡಲೇ ಇಲ್ಲ. ಹೌದು ಗೆಳೆಯರೇ ಈ ಚಿತ್ರದ ಬಳಿಕ ಗಂಗೆ ಬಾರೆ ತುಂಗೆ ಬಾರೆ, ಮೆರವಣಿಗೆ, ಜೀವ, ಗುಲಾಮ, ನನ್ನವನು, ಮುರುಳಿ ಮೀಟ್ಸ್ ಮೀರಾ, ಗೋಕುಲ ಕೃಷ್ಣ, ಸೂಪರ್ ಶಾಸ್ತ್ರಿ, ಗಲಾಟೆ, ಅಂಗಾರಕ, ಅರ್ಜುನ, ನೀನಾದೆ ನಾ, ಮಾದ ಮತ್ತು ಮಾನಸಿ, ಜಂಟಲ್ ಮ್ಯಾನ್, ಲೈಫ್ ಜೊತೆ ಒಂದ್ ಸೆಲ್ಫಿ, ಚೌಕ,
ಇನ್ಸ್ಪೆಕ್ಟರ್ ವಿಕ್ರಂ ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ನೀಡಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಇನ್ನು ಪ್ರಜ್ವಲ್ ದೇವರಾಜ್ (Prajwal Devraj) ಮತ್ತು ಮೇಘನಾ ರಾಜ್(meghana raj) ಅಭಿನಯದ ತತ್ಸಮ ತದ್ಭವ (tatsama tadbhava) ಸಿನಿಮಾ ಕೂಡ ಏನೇನು ಕೆಲವೇ ಕೆಲವು ದಿನಗಳಲ್ಲಿ ತೆರೆಕಾಣಲಿದೆ. ಇನ್ನು ಇವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ 2015 ರಲ್ಲಿ ರಾಗಿಣಿ ಚಂದ್ರನ್(Ragini Chandran) ಎಂಬುವರನ್ನು
ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಗಳು ಆಗಾಗ ತಮ್ಮ ಕ್ಯೂಟ್ ಫೋಟೋಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ. ಸದ್ಯ ಪ್ರಜ್ವಲ್ ದೇವರಾಜ್ (Prajwal Devraj) ತಮ್ಮ ಹೆಂಡತಿಗೆ ಒಂದೇ ಒಂದು ಪೀಸ್ ಕೇಕ್ ಅನ್ನು ನೀಡುವಂತೆ ಹೆಗಲಿಗೆ ಮುತ್ತಿಡುತ್ತಾ ಪೂಸಿ ಹೊಡೆಯುತ್ತಿರುವ ಫೋಟೋವನ್ನು ಹಂಚಿಕೊಂಡು ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿದ್ದಾರೆ.
ಈ ಫೋಟೋ ಸದ್ಯ instagram ನಲ್ಲಿ ಬಾರಿ ವೈರಲಾಗುತ್ತಿದ್ದು, ನೆಚ್ಚಿನ ಅಣ್ಣ ಅತ್ತಿಗೆಯರನ್ನು ಒಟ್ಟಾಗಿ ಕಂಡಂತಹ ಅಭಿಮಾನಿಗಳು ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ಪ್ರೀತಿಯನ್ನು ತೋರ್ಪಡಿಸುತ್ತಿದ್ದಾರೆ. Sanju Weds Geetha: ಸಂಜು ವೆಡ್ಸ್ ಗೀತಾ 2ಗೆ ಮುಹೂರ್ತ ಫಿಕ್ಸ್! ಸಿನಿಮಾದ ನಾಯಕಿ ರಮ್ಯಾನ ರಚಿತನಾ?