ವಿಧಾನಪರಿಷತ್ ಕಲಾಪದಲ್ಲಿ ಪಿಡಿಒ ಹುದ್ದೆಗಳ ನೇಮಕಾತಿಯ ಕುರಿತಾದಂತಹ ಮಾಹಿತಿ ಹೊರಬಿದ್ದಿದೆ. ಯಾವ ಜಿಲ್ಲೆಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಈ ಒಂದು ವಿಡಿಯೋ ಹುದ್ದೆಗಳ ನೇಮಕಾತಿಯ ಕುರಿತಾದಂತಹ ವಿಷಯದ ಕುರಿತು ಹೊರಡಿಸಿರುವ ಅಧಿಸೂಚನೆಯಲ್ಲಿ ಯಾವ ರೀತಿಯಾದಂತಹ ಮಾಹಿತಿ ಇದೆ ಎಂಬುದನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.
ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಕಲಾಪ ನಡೆಯುತ್ತಿದ್ದು ಪಿಡಿಯೋ ಹುದ್ದೆಗಳ ನೇಮಕಾತಿಯ ಕುರಿತು ಮಾಹಿತಿ ಬಂದಿದೆ ಇದರಡಿಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ನೇಮಿಸಲು ಅವಕಾಶ ಕಲ್ಪಿಸಲಾಗಿದೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಐದು ಸಾವಿರದ ಎರಡು ನೂರಾ ತೊಂಬತ್ನಾಲ್ಕು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಏಳು ನೂರಾ ಇಪ್ಪತ್ತೇಳು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆ ಖಾಲಿ ಇದ್ದು ನೇಮಕಾತಿಯ ಮಾಡುವ ಕುರಿತು ಪ್ರಸ್ತಾವನೆಯನ್ನು ಹೊರಡಿಸಲಾಗಿದೆ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಖಾಲಿ ಇರುವ ಹುದ್ದೆಗಳ ಜಿಲ್ಲಾವಾರು ಮಾಹಿತಿಯನ್ನು ನೋಡುವುದಾದರೆ ಬೆಂಗಳೂರು ಗ್ರಾಮಾಂತರದಲ್ಲಿ ನಾಲ್ಕು ಹುದ್ದೆಗಳು ಕೋಲಾರದಲ್ಲಿ ಇಪ್ಪತ್ಮೂರು ಹುದ್ದೆಗಳು ಶಿವಮೊಗ್ಗದಲ್ಲಿ ಮೂವತ್ತೊಂದು ಹುದ್ದೆಗಳು ಚಿತ್ರದುರ್ಗದಲ್ಲಿ ಮೂರು ಹುದ್ದೆಗಳು ರಾಮನಗರದಲ್ಲಿ ಮೂರು ಹುದ್ದೆಗಳು ಚಿಕ್ಕಬಳ್ಳಾಪುರದಲ್ಲಿ ಹದಿನೈದು ಹುದ್ದೆಗಳು ದಾವಣಗೆರೆಯಲ್ಲಿ ನಲವತ್ತೈದು ಹುದ್ದೆಗಳು ತುಮಕೂರಿನಲ್ಲಿ ಐವತ್ತೊಂದು ಹುದ್ದೆಗಳು ಉತ್ತರ ಕನ್ನಡದಲ್ಲಿ ನಲವತ್ತೆಂಟು ಹುದ್ದೆಗಳು ಗದಗದಲ್ಲಿ ಇಪ್ಪತ್ನಾಲ್ಕು ಹುದ್ದೆಗಳು ಬೆಳಗಾವಿಯಲ್ಲಿ ಮೂವತ್ತೆರಡು ಹುದ್ದೆಗಳು ಹಾವೇರಿಯಲ್ಲಿ ಮೂವತ್ತೆಂಟು ಹುದ್ದೆಗಳು ಖಾಲಿ ಇವೆ.
ಜೊತೆಗೆ ಬಾಗಲಕೋಟೆಯಲ್ಲಿ ಐದು ಹುದ್ದೆಗಳು ವಿಜಯಪುರದಲ್ಲಿ ಐದು ಹುದ್ದೆಗಳು ಚಿಕ್ಕಮಗಳೂರಿನಲ್ಲಿ ಇಪ್ಪತ್ತೇಳು ಹುದ್ದೆಗಳು ಉಡುಪಿಯಲ್ಲಿ ಹದಿನೇಳು ಹುದ್ದೆಗಳು ದಕ್ಷಿಣಕನ್ನಡದಲ್ಲಿ ಮೂವತ್ತೊಂದು ಹುದ್ದೆಗಳು ಕೊಡಗು ಇಪ್ಪತ್ನಾಲ್ಕು ಮಂಡ್ಯ ಹದಿನಾಲ್ಕು ಹಾಸನದಲ್ಲಿ ಹನ್ನೊಂದು ಮೈಸೂರಿನಲ್ಲಿ ಹನ್ನೊಂದು ಹುದ್ದೆಗಳು ಚಾಮರಾಜನಗರದಲ್ಲಿ ಇಪ್ಪತ್ತೇಳು ಹುದ್ದೆಗಳು ರಾಯಚೂರು ಮೂವತ್ನಾಲ್ಕು ಬೀದರ್ ಮೂವತ್ತೆರಡು ಬಳ್ಳಾರಿ ಐವತ್ಮುರು ಯಾದಗಿರಿ ಹದಿನೆಂಟು ಕಲಬುರ್ಗಿ ಅರವತ್ತೆಳು ಕೊಪ್ಪಳ ಹದಿನೇಳು ಈ ರೀತಿಯಾಗಿ ಒಟ್ಟು ಖಾಲಿ ಇರುವ ಏಳು ನೂರಾ ಇಪ್ಪತ್ತೇಳು ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಹೊರಬಿದ್ದಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗೂ ತಿಳಿಸಿರಿ.