Navaratri Pooje: ದುರ್ಗೆಯ ಒಂಬತ್ತು ಅವತಾರಗಳಿಗೆ ಕಥೆಯಾದ ಈ ನವರಾತ್ರಿ ಪ್ರತಿಯೊಬ್ಬರೂ ಕೂಡ ಆಚರಿಸುತ್ತಾರೆ. ನವರಾತ್ರಿಗೆ ವಿಶೇಷವಾದ ಮಹತ್ವವಿದೆ. ಮಹಿಷಾಸುರ ಮರ್ದಿನಿಯನ್ನ ಸಂಹಾರ ಮಾಡಿದ ದುರ್ಗೆಯ ಒಂಬತ್ತು ಅವತಾರಗಳ 9 ದಿನದ ಈ ಆಚರಣೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಐತಿಹಾಸಿಕವಾಗಿ ಬಂದಂತದ್ದು. ಈ ದಿನ ನಿಮಗೆ ನವರಾತ್ರಿಯ ವಿಶೇಷವಾದ ಸರಳವಾದ ಪೂಜೆಯ ವಿಧಾನವನ್ನು ಹೇಳಿಕೊಡುತ್ತೇವೆ. ತಪ್ಪದೇ ಈ ಲೇಖನವನ್ನು ಓದಿ.
ಬೆಳಿಗ್ಗೆ ಎದ್ದು ಸ್ನಾನದಿಗಳನ್ನ ಮುಗಿಸಿ, ದೇವರ ಮುಂದೆ ರಂಗೋಲಿಯನ್ನ ಹಾಕಿ ಅರಿಶಿಣ ಕುಂಕುಮವನ್ನು ಇಟ್ಟು ಹೂವನ್ನು ಹಾಕಬೇಕು. ಮೊದಲು ನಾವು ರಂಗೋಲಿ ಪೂಜೆಯನ್ನು ಮಾಡಿಕೊಳ್ಳಬೇಕು ನಂತರ ದುರ್ಗೆಯ ಫೋಟೋವನ್ನು ಗೆಜ್ಜೆ ವಸ್ತ್ರದೊಂದಿಗೆ ರಂಗೋಲಿಯ ಮೇಲೆ ಇಡಬೇಕು. ಹೂವಿನ ಹಾರವನ್ನೆಲ್ಲ ಹಾಕಿ ದೇವರ ಫೋಟೋವನ್ನು ಸುಂದರವಾಗಿ ಅಲಂಕರಿಸಬೇಕು.
ಒಂದು ವೇಳೆ ನಿಮ್ಮ ಮನೆಯಲ್ಲಿ ಚಾಮುಂಡೇಶ್ವರಿ ಫೋಟೋ ಇಲ್ಲ ಅಂತಾದ್ರೆ ಲಕ್ಷ್ಮಿ ಹಾಗೂ ಸರಸ್ವತಿಯ ಫೋಟೋವನ್ನು ಇಡಬಹುದು ಅದು ಇಲ್ಲ ಅಂತ ಆದವರು ಕೇವಲ ಕಳಸವನ್ನು ಇಟ್ಟು ಪೂಜಿಸಬಹುದು. ಇಲ್ಲಿ ಯಾವುದನ್ನ ಇಡ್ತೀವಿ ಅನ್ನೋದು ಮುಖ್ಯವಲ್ಲ. ನಮ್ಮ ಭಕ್ತಿಯೇ ಇಲ್ಲಿ ಮುಖ್ಯವಾಗುತ್ತದೆ. ಭಕ್ತಿಯೊಂದಿದ್ದರೆ ನೀವು ಯಾವ ಫೋಟವನ್ನು ಇಟ್ಟು ಪೂಜೆ ಮಾಡಿದರೂ ಕೂಡ ಆ ತಾಯಿ ದುರ್ಗಾ ಮಾತೆ ನಮ್ಮನ್ನು ಆಶೀರ್ವದಿಸುತ್ತಾಳೆ.
ಹಾಗೆ ದುರ್ಗಾ ಪಕ್ಕದಲ್ಲಿ ಗಣೇಶನ ಮೂರ್ತಿಯನ್ನು ಇಡಬೇಕು. ನಂತರ ದುರ್ಗಿಗೆ ಕನ್ನಡಿ ಹಾಗೂ ಕಳಸ ಇರಲೇಬೇಕು. ನೀವು ದೇವಿ ಪೂಜೆಯನ್ನು ಮಾಡುವಾಗ ಪ್ರಮುಖವಾಗಿ ಕಳಸ ಹಾಗೂ ಕನ್ನಡಿಯನ್ನು ಇಡಬೇಕು. ಇದು ದೇವಿಗೆ ಅತ್ಯಂತ ಪ್ರಿಯವಾದ ವಸ್ತು. ಇನ್ನು ಕೆಲವರು ಕೇಳುತ್ತಾರೆ ದೇವರ ಮನೆಯಲ್ಲಿ ಕಾಯಂ ಕಳಸವಿರುತ್ತದೆ ಮತ್ತೊಂದು ಕಳಸವನ್ನು ಇಡುವುದು ಹೇಗೆ ಅಂತ, ನೀವು ದೇವರು ಮನೆಯಲ್ಲಿ ಇಡುವುದು ಬೇರೆ ಕಳಸ ವ್ರತಗಳಲ್ಲಿ ಇಡುವ ಕಳಸ ಬೇರೆ ಆದ್ದರಿಂದ ದೇವಿಯನ್ನು ಕೂರಿಸಿದಾಗ ಕಳಸವನ್ನ ಇಟ್ಟು ಪೂಜೆ ಮಾಡಬೇಕು.
ಅಷ್ಟೇ ಅಲ್ಲದೆ ದೇವರ ಮುಂದೆ ಅಕ್ಕಿ ಬೆಲ್ಲ ಹೂವು ಹಣ್ಣುಗಳು ಫಲತಾಂಬೂಲ ಹಾಗೂ ಸೀರೆ ಬಳೆ ಹೂವುಗಳು ಇವೆಲ್ಲವನ್ನ ಇಡಬೇಕು. ಮುತ್ತೈದೆಯ ವಸ್ತುಗಳನ್ನೆಲ್ಲವನ್ನು ದೇವರ ಮುಂದೆ ಇಟ್ಟು ಪೂಜಿಸಬೇಕು. ನವರಾತ್ರಿ ಮೊದಲನೇ ದಿನದಂದು ಇಟ್ಟ ಕಲಶವನ್ನು ಒಂಬತ್ತನೇ ದಿನದವರೆಗೂ ಮುಟ್ಟಬಾರದು. ಹಾಗೆ ದೇವಿಯ ಪಕ್ಕದಲ್ಲಿ ಒಂದು ಅಖಂಡ ದೀಪವನ್ನು ಇಡಬೇಕು ಆ ದೀಪವು ಒಂಬತ್ತು ದಿನದವರೆಗೂ ಕೂಡ ನಂದಬಾರದು. ಆ ರೀತಿ ದೀಪವು ಉರಿಯುವ ಹಾಗೆ ನೋಡಿಕೊಳ್ಳಬೇಕು. 9 ದಿನವೂ ಕೂಡ ಬೆಳಿಗ್ಗೆ ಸಂಜೆ ದೇವಿ ಪೂಜೆಯನ್ನ ಮಾಡಿ ಮಂತ್ರವನ್ನ ಪಡಿಸಬೇಕು. 9ನೇ ದಿನದಂದು ಕಳಸವನ್ನು ವಿಸರ್ಜನೆ ಮಾಡಬೇಕು. ಈ ರೀತಿಯಲ್ಲಿ ಒಂಬತ್ತು ದಿನ ನವರಾತ್ರಿ ಪೂಜೆಯನ್ನು ಮಾಡಿ ದೇವಿಯ ಕೃಪೆಗೆ ಪಾತ್ರರಾಗಿ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ.
ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ಪ್ರಧಾನ ತಾಂತ್ರಿಕ್ ಶಿವಶಂಕರ ಪ್ರಸಾದ್
ಇವರು ಈ ಕೇರಳ ಭಗವತಿ ಅಮ್ಮನವರ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳುತ್ತಾರೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ,ಇಷ್ಟ ಪಟ್ಟವರು ನಿಮಗೆ ಸಿಗದಿರುವುದು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ, ಸಂತಾನ ಸಮಸ್ಯೆ ,ವ್ಯಾಪಾರ ವ್ಯವಹಾರಗಳ ಪ್ರಗತಿ ಆಗಬೇಕೇ ,ಹತ್ತಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ, ಭೂ ಪಿತ್ರಾರ್ಜಿತ ಆರ್ಥಿಕ ಆಸ್ತಿ ಬಗ್ಗೆ ತಿಳಿಯಬೇಕೆ ,ಸ್ತ್ರೀ ಪುರುಷ ವಶೀಕರಣ ದಂತಹ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 8197358456 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನಗಳಿಂದ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳಿಗೆ ಭೇಟಿ ಮಾಡಿ ಪರಿಹಾರ ಸಿಗ್ಲಿಲ್ಲವೆಂಬ ಕೊರಗು ಇದ್ದರೆ ಇವರಿಗೆ ಒಮ್ಮೆ ಕರೆ ಮಾಡಿ 8197358456