ಹೆಣ್ಮಕ್ಳು ಪಿರಿಯಡ್ಸ್ ಆದಾಗ ಪೂಜೆ ಮಾಡಬಹುದಾ? ಇಲ್ಲಿದೆ ಮಾಹಿತಿ

0

ಕೆಲವರಿಗೆ ಪಿರಿಯಡ್ಸ್ ಆದಾಗ ಪೂಜೆ ಮಾಡಬಹುದಾ ಎಂಬ ಗೊಂದಲ ಕಾಡುತ್ತದೆ, ಅಂತಹವರಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಹಿಂದಿನ ಕಾಲದಲ್ಲಿ ರಜಸ್ವಲೆ ಯಾದವರು ಏನನ್ನು ಮುಟ್ಟುತ್ತಿರಲಿಲ್ಲ. ಹೊರಗಡೆ ಕೂತು ಐದನೇಯ ದಿನ ಇಂದು ಒಳಗಡೆ ಬರುತ್ತಿದ್ದರು ಆದರೆ ಈಗಿನ ಕಾಲದಲ್ಲಿ ಯಾರು ರಜಸ್ವಲೆ ಆಗಿದ್ದಾರೆ ಅಂತಾನೆ ತಿಳಿಯೋದಿಲ್ಲ. ಆದರೆ ಈ ರೀತಿ ಪಾಲಿಸುವುದು ಎಷ್ಟು ತಪ್ಪು ಎಷ್ಟು ಒಪ್ಪು ಎಂಬುದರ ಬಗ್ಗೆ ಪೂರ್ತಿ ಮಾಹಿತಿಯನ್ನ ತಿಳಿಸಿಕೊಡುತ್ತೇವೆ.

ನಮ್ಮ ಪೂರ್ವಜರು ಏನಾದರೂ ಮಾಡಿದ್ದಾರೆ ಅಂದರೆ ಅದು ನಮ್ಮ ಒಳ್ಳೆಯದಕ್ಕೆ ಆಗಿರುತ್ತದೆ. ಮೊದಲಿನ ಕಾಲದಲ್ಲಿ ಯಾವುದೇ ರೀತಿಯ ಮಶಿನರಿಗಳು ಇರಲಿಲ್ಲ ಎಲ್ಲವೂ ಕೈಯಲ್ಲೇ ಮಾಡಬೇಕಿತ್ತು ಆದ್ದರಿಂದ ಹೆಂಗಸರು ತುಂಬಾ ಕಷ್ಟಪಡುತ್ತಿದ್ದರು ಮನೆಯಲ್ಲಿ ತುಂಬಾ ಕೆಲಸವಾಗುತ್ತಿತ್ತು ಆದ್ದರಿಂದ ಅವರಿಗೆ ಮುಟ್ಟಿನ ಸಮಯದಲ್ಲಿ ತೊಂದರೆ ಆಗಬಾರದು ಅಂತ ಅವರನ್ನ ನಾಲ್ಕು ದಿನ ಹೊರಗಡೆ ಕೂರಿಸಲಾಗುತ್ತಿತ್ತು.

ಕಾರಣ ಇರುವುದು ಇಷ್ಟೇ ಅವರು ಪ್ರಶಾಂತವಾಗಿ ನಾಲ್ಕು ದಿನ ರ ವಿಶ್ರಾಂತಿಯನ್ನು ತೆಗೆದುಕೊಂಡು ಬರಲಿ ಅಂತ ಅವರಿಗೆ ಚಾಪೆ ದಿಂಬು ಚೊಂಬು ಎಲ್ಲವನ್ನು ಕೊಟ್ಟು ಹೊರಗಡೆ ಕೂರಿಸುತ್ತಿದ್ದರು. ರಜಸಲೆಯಾದಾಗ ಬೆನ್ನು ನೋವು ಬರುವುದು ಸಹಜ ಇದರಿಂದ ಚಾಪೆಯ ಮೇಲೆ ಮಲಗುತ್ತಿದ್ದರು. ಅವರ ಬೆನ್ನು ನೋವಿಗೆ ಸಹಾಯವಾಗಲಿ ಅಂತ ಹೀಗೆ ಮಾಡುತ್ತಿದ್ದರು.

ವರ್ಷವಿಡಿ ಹೆಂಗಸರು ದುಡಿಯುತ್ತಾರೆ. ಆ ಮೂರು ದಿನವಾದರೂ ಅವರು ಊಟ ತಿಂಡಿಯನ್ನ ಸಮಯಕ್ಕೆ ಸರಿಯಾಗಿ ತೆಗೆದುಕೊಂಡು ವಿಶ್ರಾಂತಿಯನ್ನ ತೆಗೆದುಕೊಳ್ಳಲಿ ಎಂಬುದು ಇದರ ಉದ್ದೇಶವೇ ಹೊರತು ಯಾವುದೇ ಶಾಸ್ತ್ರ ಸಂಪ್ರದಾಯಗಳಿಗೆ ಅಲ್ಲ. ಪೂಜೆಯನ್ನ ಮಾಡುವುದಕ್ಕೆ ಭಕ್ತಿ ಬೇಕು. ರಜಸ್ವಲಯದ ಸಮಯದಲ್ಲಿ ಹೆಂಗಸರಿಗೆ ನೋವುಗಳು ಕಾಣಿಸಿಕೊಳ್ಳುವುದರಿಂದ ದೇವರ ಪೂಜೆಯನ್ನು ಮಾಡಬಾರದು ಅಷ್ಟೆಲ್ಲ ಕಷ್ಟಪಟ್ಟು ಮಾಡಬಾರದು ಎಂದು ಹಿರಿಯರು ಈ ರೀತಿಯಾದಂತಹ ಪದ್ಧತಿಯನ್ನು ಮಾಡಿದ್ದಾರೆ ನಮ್ಮ ಪೂರ್ವಜರು ಮಾಡಿದ ಪದ್ಧತಿಗೆ ಪ್ರತಿಯೊಂದು ಕೂಡ ಒಳ್ಳೆಯ ಕಾರಣಗಳಿವೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ.

Leave A Reply

Your email address will not be published.

error: Content is protected !!
Footer code: