WhatsApp Group Join Now
Telegram Group Join Now

ಭಾರತದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ 11,356 ಬಿಲಿಯನ್ ಹೆಚ್ಚಾಗಿದೆ ಹಾಗೆ ಪ್ರತಿ ವರ್ಷ 15.4% ಬೆಳೆವಣಿಗೆ ಆಗುತ್ತದೆ. ಈ ಬಿಸಿನೆಸ್ ಅನ್ನು ಎರಡು ರೀತಿಯಲ್ಲಿ ಮಾಡಬಹುದು.

ಹಾಲಿನ ಪದಾರ್ಥಗಳನ್ನು ತಯಾರಿ ಮಾಡುವುದು :
ಈ ಹಾಲಿನ ಪದಾರ್ಥಗಳನ್ನು ತಯಾರಿ ಮಾಡಿ, ಮಾರಾಟ ಮಾಡಲು ಹೆಚ್ಚಿನ ಬಂಡವಾಳ ಖರ್ಚಾಗುತ್ತದೆ.

ಹಾಲಿನ ಪದಾರ್ಥಗಳ ರಿಟೇಲ್ ಬಿಸಿನೆಸ್ ಮಾಡುವುದು :
ಇದಕ್ಕಾಗಿ, ತುಂಬಾ ಹೆಸರು ಮಾಡಿರುವ ಹಾಲಿನ ಬ್ರಾಂಡ್’ಗಳ ಫ್ರಾಂಚೈಸಿ ಖರೀದಿ ಮಾಡಬೇಕು. ಹಾಲಿನ ಉತ್ಪನ್ನಗಳಲ್ಲಿ ಹೆಚ್ಚು ಹೆಸರುವಾಸಿ ಆಗಿರುವುದು ನಂದಿನಿ ಬ್ರಾಂಡ್.

ನಂದಿನಿ ಬ್ರಾಂಡ್ ಫ್ರಾಂಚೈಸಿ ಬಿಸಿನೆಸ್ ಆರಂಭ ಮಾಡಲು :-
ಸಣ್ಣದಾಗಿ ಪ್ರಾರಂಭ ಮಾಡಲು 100 – 200 sq.ft. ಜಾಗ ಬೇಕು.
ಮೀಡಿಯಂ ಅಗಿ ಪ್ರಾರಂಭ ಮಾಡಲು 200 – 300 sq.ft. ಜಾಗ ಬೇಕು.
ಅಂಗಡಿ ಸ್ವಂತದ್ದೆ ಆದರೆ ಹೆಚ್ಚು ಅನುಕೂಲಕರ. ಇಲ್ಲದೆ ಹೋದರೆ, ಅಂಗಡಿ ಬಾಡಿಗೆ ಒಂದು ಬರ್ಡನ್ ( burden ) ಆಗುತ್ತದೆ.

ದಾಖಲೆಗಳು :-
ಟ್ರೆಡ್ ಲೈಸೆನ್ಸ್  ( Trade licence ).
ಜಿ.ಎಸ್.ಟಿ. ರಿಜಿಸ್ಟ್ರೇಷನ್  ( GST Registration ).
ಫುಡ್ ಲೈಸೆನ್ಸ್ ( Food licence ).
ರೆಂಟ್ ಅಗ್ರಿಮೆಂಟ್ ( Rent agreement ).

ಈ ದಾಖಲೆಗಳ ಜೊತೆ ಬ್ರಾಂಡ್ ಅವರ ಜೊತೆ ಅಗ್ರಿಮೆಂಟ್ ಮಾಡಿಕೊಳ್ಳಬೇಕು. ಮಾರ್ಕೆಟಿಂಗ್ ಟೀಮ್ ಬಂದು ಎಲ್ಲಾ ದಾಖಲೆಗಳನ್ನು, ಅಂಗಡಿಯನ್ನು, ಹತ್ತಿರದ ಫ್ರಾಂಚೈಸಿ, ಲೋಕೇಷನ್ ಈ ರೀತಿ ಎಲ್ಲವನ್ನು ಪರಿಶೀಲನೆ ಮಾಡುವರು. ವೇರಿಫಿಕೇಷನ್ ( Verification ) ನಂತರ ಫ್ರಾಂಚೈಸಿ ಸಿಗುತ್ತದೆ. ಅಗ್ರಿಮೆಂಟ್ ಸಮಯದಲ್ಲಿ ಬ್ರಾಂಡ್ ಫೀಸ್ ಕೊಡಬೇಕು. ಈ ಫೀಸ್ ರಿಫಂಡೆಬಲ್ ( refundable ) ಫ್ರಾಂಚೈಸಿ ಕ್ಯಾನ್ಸಲ್ ಆದ್ರೆ ಫೀಸ್ ಮರಳಿ ಸಿಗುತ್ತದೆ. ಫ್ರಾಂಚೈಸಿ ಕ್ಯಾನ್ಸಲ್ ಮಾಡುವುದಕ್ಕೆ 30 ದಿನದ ನೋಟಿಸ್ ಸಮಯ ಇರುತ್ತದೆ.

ಫ್ರಾಂಚೈಸಿ ಫೀಸ್ ಗ್ರಾಮೀಣ ಪ್ರದೇಶದಲ್ಲಿ ₹20,000 – ₹30,00.
ನಗರ ಪ್ರದೇಶದಲ್ಲಿ ₹50,000.
ಫ್ರಾಂಚೈಸಿ ಫೀಸ್ ಅವರಿಗೆ ಕೊಟ್ಟು ಅಗ್ರಿಮೆಂಟ್ ಪ್ರೊಸೀಜರ್ ( procedure ) ಮುಗಿದ ಮೇಲೆ ಮೆಟೀರಿಯಲ್ ಸಪ್ಲೈ ( Material supply ) ಮಾಡುವರು.

ಬಂಡವಾಳ :-
ಫ್ರಾಂಚೈಸಿ ಫೀಸ್ , ಅಂಗಡಿ ಬಾಡಿಗೆ, ರಾಕ್ಸ್ ( racks ), ಶೆಲ್ಫ್, ಫ್ರೀಜರ್ ( freezer ), ಲೈಸೆನ್ಸ್, ಸ್ಟಾಕ್ಸ್ ಎಲ್ಲಾ ಸೇರಿ 1 – 1.5 ಲಕ್ಷ ಬೇಕಾಗುತ್ತದೆ. ಇದರೊಂದಿಗೆ, ಐಸ್ ಕ್ರೀಮ್ ಅದಕ್ಕೆ ಬೇರೆ ಫ್ರೀಜರ್ ( freezer ) ಮತ್ತು ಸ್ಟಾಕ್ಸ್ ಬೇಕಾಗುತ್ತದೆ. ಅದರಿಂದ, ಒಟ್ಟು 2.5 ಲಕ್ಷ ಬೇಕಾಗುತ್ತದೆ.

ಇನ್ನು, ಮೀಡಿಯಂ ಅಂಗಡಿ ಸ್ಥಾಪನೆ ಮಾಡಲು 3.5 ಲಕ್ಷ ಬೇಕಾಗುತ್ತದೆ.
ಪ್ರಾಫಿಟ್ ಮಾರ್ಜಿನ್ ( Profit margin ) :-
ಹಾಲಿಂದ ₹1 – ₹2 ಸಿಗುತ್ತದೆ.

  • ಹಾಲು 5%.
  • ಹಾಲಿನ ಉತ್ಪನ್ನಗಳು 10%.
  • ಸಿಹಿ ವಸ್ತುಗಳು 15%.
  • ಐಸ್ ಕ್ರೀಮ್ 20%.

ಫ್ರಾಂಚೈಸಿ ಅಪ್ಲೈ ಮಾಡಲು ಆನ್ಲೈನ್ ವೆಬ್ಸೈಟ್ ಮುಖಾಂತರ ಮಾಡಬಹುದು. ನಂದಿನಿ ಬ್ರಾಂಡ್’ಗಿಂತ ಬೇರೆ ಬ್ರಾಂಡ್’ಗಳಿಗೆ ಹೆಚ್ಚಿನ ಪ್ರಾಫಿಟ್ ಮಾರ್ಜಿನ್ ಸಿಗುತ್ತದೆ.
ಅಮುಲ್ ( Amul ), ದೊಡ್ಲಾ ( Dodla ), ಆರೋಕ್ಯ ( Arokya ), ಟೋನ್ಡ್ ಮಿಲ್ಕ್  ( Toned milk ).

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: