WhatsApp Group Join Now
Telegram Group Join Now

Nagara panchami Astrology: ಈ ವರ್ಷದ ನಾಗರಪಂಚಮಿ ಹಲವಾರು ರಾಶಿಗಳಿಗೆ ಒಳ್ಳೆಯದನ್ನ ಮಾಡುತ್ತದೆ ಈ ವಿಶೇಷ ದಿನ ಆರ್ಥಿಕ ಬೆಳವಣಿಗೆ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಕೆಲವು ರಾಶಿಗಳಲ್ಲಿ ತರುತ್ತದೆ ಈ ಒಂದು ಒಳ್ಳೆಯ ದಿನವನ್ನು ವಿಜೃಂಭಣೆಯಿಂದ ಆಚರಿಸುವುದರಿಂದ ಎಲ್ಲರೂ ಕೂಡ ಒಳ್ಳೆಯ ಅದೃಷ್ಟ, ಧನ, ಸಂಪತ್ತನ್ನು ಪಡೆದುಕೊಳ್ಳಬಹುದು

ಹಿಂದೂ ಸಂಪ್ರದಾಯದಲ್ಲಿ ವಿಶೇಷ ದಿನವಾದ ನಾಗರ ಪಂಚಮಿ ಹಬ್ಬವನ್ನು ಈ ವರ್ಷ ಆಗಸ್ಟ್ 21ನೇ ತಾರೀಕಿನಂದು ಆಚರಿಸಲಾಯಿತು ಈ ದಿನ ನಾಗರಹಾವುಗಳಿಗೆ ಪೂಜೆ ಮಾಡುವ ಮೂಲಕ ಗೌರವ ನೀಡಲಾಗುತ್ತದೆ ನಾಗದೇವತೆಗಳ ಆಶೀರ್ವಾದದಿಂದ ಜನರು ಮಳೆ, ಬೆಳೆ ಹಾಗೂ ಸಮೃದ್ಧಿಯನ್ನು ಹೊಂದುತ್ತಾರೆ ಹೀಗೆ ಹಿಂದೂ ಧರ್ಮದಲ್ಲಿ ನಾಗರಪಂಚಮಿ ಹಬ್ಬಕ್ಕೆ ವಿಶೇಷವಾದ ಸ್ಥಾನಮಾನ ಇದೆ ಅಷ್ಟೇ ಅಲ್ಲದೆ ಈ ದಿನ ಶಿವನಿಗೆ ಅತ್ಯಂತ ಪ್ರಿಯವಾದ ದಿನ ಆದ್ದರಿಂದ ಈ ದಿನ ಮಹಾಶಿವ ನನ್ನ ಪೂಜಿಸುವುದರಿಂದ ದುಃಖಗಳೆಲ್ಲ ನಿವಾರಣೆಯಾಗುತ್ತವೆ ಎಂಬುದು ನಂಬಿಕೆ

ಈ ಹಬ್ಬವನ್ನು ಶ್ರಾವಣ ಮಾಸದ ಶುಕ್ಲಪಂಚಮಿ ದಿನದಂದು ಆಚರಿಸುತ್ತಾರೆ ಈ ಹಬ್ಬ ವಿಶೇಷವಾಗಿ ಮಾನವ ಮತ್ತು ಪ್ರಕೃತಿಯ ನಡುವಿನ ಸಂಬಂಧವನ್ನು ಎತ್ತಿ ತೋರಿಸುತ್ತದೆ ಇಂದಿನ ಈ ವಿಶೇಷ ದಿನದಂದು ಸರ್ಪವನ್ನು ಪೂಜಿಸುವುದರಿಂದ ಕಾಲ ಸರ್ಪದೋಷಗಳಿಂದ ಮುಕ್ತಿ ದೊರೆಯುತ್ತದೆ ಹಾಗೂ ಅವರ ಜೀವನದಲ್ಲಿ ಸಮೃದ್ಧಿ ದೊರೆಯುತ್ತದೆ ಎಂದು ಕೂಡ ನಂಬಿಕೆ ಇದೆ ಹಾಗಾದರೆ ಈ ವರ್ಷದ ನಾಗರ ಪಂಚಮಿ ಯಾವ ಯಾವ ರಾಶಿಯವರಿಗೆ ಯಾವ ರೀತಿಯ ಅದೃಷ್ಟ ತರಲಿದೆ ಎಂಬುದನ್ನು ಈ ಕೆಳಗೆ ನಾವು ತಿಳಿದುಕೊಳ್ಳಬಹುದು.

ಮೊದಲನೆಯದಾಗಿ ಮೇಷ ರಾಶಿ ಈ ಬಾರಿಯ ನಾಗರ ಪಂಚಮಿಯು ಮೇಷ ರಾಶಿಯವರಿಗೆ ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿಯನ್ನು ಕೊಡುತ್ತದೆ ಕೆಲಸದಲ್ಲಿ ಉನ್ನತ ಅಧಿಕಾರಿಗಳಿಂದ ಬೆಂಬಲವನ್ನ ಪಡೆಯುತ್ತಾರೆ ಹಾಗೂ ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿಯನ್ನ ಕಾಣುತ್ತಾರೆ ಉದ್ಯೋಗಾವಕಾಶಗಳು ಮೇಷ ರಾಶಿಯವರಿಗೆ ಒದಗಿ ಬರುತ್ತವೆ ಹಾಗೂ ಆರ್ಥಿಕ ಸಮಸ್ಯೆಯು ಪರಿಹಾರ ಗೊಳ್ಳುತ್ತದೆ ವಿಶೇಷವಾಗಿ ಮೇಷ ರಾಶಿಯ ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ.

ಇನ್ನು ವೃಶ್ಚಿಕ ರಾಶಿಯವರಿಗೆ ಹೊಸ ಯೋಜನೆಗಳನ್ನು ಆರಂಭಿಸಲು ಈ ದಿನ ತುಂಬಾ ಉತ್ತಮವಾಗಿರುತ್ತದೆ ವೃಶ್ಚಿಕ ರಾಶಿಯ ವ್ಯಾಪಾರಸ್ಥರು ತಮ್ಮ ಪ್ರಯತ್ನಗಳಿಂದ ಉತ್ತಮ ನಿರೀಕ್ಷೆ ಮಾಡಬಹುದು ಈ ನಾಗರ ಪಂಚಮಿಯ ದಿನ ವೃಶ್ಚಿಕ ರಾಶಿಯವರ ಪರವಾಗಿರುವುದರಿಂದ ವೃಶ್ಚಿಕ ರಾಶಿಯವರು ತುಂಬಾ ಅದೃಷ್ಟವಂತರಾಗಿರುತ್ತಾರೆ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕಾಣುತ್ತೀರಿ ಮತ್ತು ಪ್ರೀತಿ ಪಾತ್ರರೊಂದಿಗೆ ಹೊಂದಾಣಿಕೆಯಿಂದ ಇರುತ್ತೀರಿ ವಿಶೇಷವಾಗಿ ಉದ್ಯಮಿಗಳು ದೊಡ್ಡ ದೊಡ್ಡ ವ್ಯವಹಾರಗಳನ್ನ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ.

ನಂತರ ಧನು ರಾಶಿ ಧನು ರಾಶಿಯವರಿಗೆ ಈ ದಿನ ಬಹಳ ಮಹತ್ವದ್ದಾಗಿರುತ್ತದೆ ನಾಗರ ಪಂಚಮಿಯ ದಿನದಂದು ಹಣಕಾಸಿನ ಅವಕಾಶಗಳು ಒದಗಿ ಬರುತ್ತವೆ ಸಂತೋಷ ನಿಮ್ಮ ಮನೆಯಲ್ಲಿ ತುಂಬುತ್ತದೆ ಜೊತೆಗೆ ಅದೃಷ್ಟವೂ ನಿಮ್ಮ ಜೊತೆ ಇರುವುದರಿಂದ ವೃತ್ತಿ ಜೀವನದ ವಿಷಯದಲ್ಲಿ ಧನಾತ್ಮಕ ಫಲಿತಾಂಶವನ್ನು ಪಡೆಯುತ್ತೀರಿ ಹಾಗೂ ಜೀವನದಲ್ಲಿ ಉತ್ತಮ ಯಶಸ್ಸನ್ನ ಸಾಧಿಸುತ್ತೀರಿ ತಮ್ಮ ವ್ಯಾಪಾರವನ್ನು ವಿಸ್ತರಿಸಲು ಹಾಗೂ ಹೊಸ ಉದ್ದಿಮೆಗಳಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿರುವ ಧನು ರಾಶಿಯ ಉದ್ಯಮಿಗಳಿಗೆ ತುಂಬಾ ಒಳ್ಳೆಯ ಕಾಲ ಇದಾಗಿರುತ್ತದೆ.

ನಂತರದಲ್ಲಿ ಮಕರ ರಾಶಿ ಈ ರಾಶಿಯವರಿಗೆ ನಾಗರ ಪಂಚಮಿಯಿಂದ ಉತ್ತಮ ಬದಲಾವಣೆಗಳು ಉಂಟಾಗುತ್ತವೆ ನಿಮ್ಮ ಪ್ರಯತ್ನಗಳಿಗೆ ಮುಂದಿನ ದಿನಗಳಲ್ಲಿ ಫಲ ದೊರೆಯುತ್ತದೆ ಮನೆಯಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗುತ್ತದೆ ಹಾಗೂ ನಿಂತು ಹೋದ ಕೆಲಸಗಳು ಈ ಅವಧಿಯಲ್ಲಿ ಪೂರ್ಣಗೊಂಡು ನೀವು ಮಾಡುವ ಕೆಲಸಗಳಲ್ಲಿ ಯಶಸ್ಸನ್ನ ಪಡೆಯುತ್ತೀರಿ ಜೊತೆಗೆ ನಿಮ್ಮ ಕುಟುಂಬದ ವಾತಾವರಣವೂ ಕೂಡ ಉತ್ತಮವಾಗಿರುತ್ತದೆ.

ನಂತರ ಕುಂಭ ರಾಶಿ ಕುಂಭ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಈ ದಿನವೂ ತುಂಬಾ ಉತ್ತಮವಾಗಿರುತ್ತದೆ ಹಾಗೂ ಮದುವೆಯ ವಿಚಾರದಲ್ಲಿ ಈ ದಿನ ಬಹಳ ಚೆನ್ನಾಗಿರುತ್ತದೆ ನಾಗರ ಪಂಚಮಿಯಿಂದ ಧನಾತ್ಮಕ ಪರಿಣಾಮವನ್ನು ಕುಂಭ ರಾಶಿಯವರು ಪಡೆಯಲಿದ್ದಾರೆ ಕೆಲಸದ ಸ್ಥಳಗಳಲ್ಲಿ ಒತ್ತಡ ಕಡಿಮೆ ಇರುವುದರಿಂದ ನಿಮಗೆ ಸಮಾಧಾನವನ್ನು ಕೊಡುತ್ತದೆ ಇದು ನಿಮ್ಮ ನೆಮ್ಮದಿಗೆ ಕಾರಣವಾಗುತ್ತದೆ ವಿಶೇಷವಾಗಿ ಈ ಅವಧಿಯಲ್ಲಿ ಇದ್ದಕ್ಕಿದ್ದಂತೆ ಹಣವನ್ನ ಪಡೆಯುವ ಸಾಧ್ಯತೆ ಕೂಡ ಇದೆ.

ಈ ವರ್ಷದ ನಾಗರ ಪಂಚಮಿಯು ಇದಿಷ್ಟು ರಾಶಿಗಳಿಗೆ ಅತ್ಯುತ್ತಮ ಫಲವನ್ನು ನೀಡುತ್ತದೆ ಜೊತೆಗೆ ಈ ರಾಶಿಯವರ ಜೀವನದಲ್ಲಿ ಒಳ್ಳೆಯ ಬದಲಾವಣೆಗಳನ್ನು ತರುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: