ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಹಬ್ಬಗಳಲ್ಲಿ ಶಿವರಾತ್ರಿಯು ಒಂದು ಶಿವರಾತ್ರಿ ಎನ್ನುವುದು ಶಿವನಿಗೆ ಅತ್ಯಂತ ಪ್ರಿಯವಾದ ದಿನವಾಗಿದೆ ಶಿವರಾತ್ರಿ ಬಂತೆಂದರೆ ಎಲ್ಲರ ಮನೆಯಲ್ಲಿ ಸಹ ಸಡಗರ ಸಂಭ್ರಮ ಕಂಡು ಬರುತ್ತದೆ ಶಿವರಾತ್ರಿ ಎಂದರೆ ಉಪವಾಸ ಮಾಡುತ್ತಾರೆ ಹಾಗೆಯೇ ರಾತ್ರಿಯೆಲ್ಲಾ ಶಿವನ ಆರಾಧನೆ ಮಾಡುತ್ತಾರೆ ಮಹಾ ಶಿವರಾತ್ರಿಯಂದು ಬಿಲ್ವಪತ್ರೆಯನ್ನು ಶಿವಲಿಂಗದ ಮೇಲಿಟ್ಟು ಪೂಜಿಸಿದರೆ, ಯಾಗ ಮಾಡಿದ ಫಲ ದೊರೆಯುತ್ತದೆ ಎಂದು ಪುರಾಣಗಳು ಹೇಳುತ್ತದೆ ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯೆಂದು ಹೇಳಲಾಗುತ್ತದೆ
ಶಿವರಾತ್ರಿಯಂದು ಎಲ್ಲರೂ ಶಿವನಿಗೆ ಪ್ರಿಯವಾಗ ಬಿಲ್ವಪತ್ರೆಯನ್ನು ಇಟ್ಟು ಶಿವನಿಗೆ ಅಭಿಷೇಕ ಮಾಡಿ ಹೂವು ಹಣ್ಣುಗಳನ್ನು ಅರ್ಪಿಸಿ ಶಿವನಿಗೆ ಪೂಜೆ ಸಲ್ಲಿಸುವ ಮೂಲಕ ಇಷ್ಟಾರ್ಥಗಳನ್ನು ಸಿದ್ದಿಸಿಕೊಳ್ಳಬಹುದು. ಶಿವನು ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಹೇಳಿದ್ದಾನೆಂದು ಪುರಾಣಗಳು ತಿಳಿಸುತ್ತದೆ ಹೀಗಾಗಿ ಶಿವರಾತ್ರಿ ಹಬ್ಬವು ಪ್ರತಿಯೊಬ್ಬ ಹಿಂದುವಿಗು ಇದೊಂದು ಮಹತ್ವಪೂರ್ಣ ಹಬ್ಬ ಇದಾಗಿದೆ ನಾವು ಈ ಲೇಖನದ ಮೂಲಕ ಶಿವರಾತ್ರಿ ಹಬ್ಬವನ್ನು ಯಾವ ದಿನದಂದು ಇದೆ ಹಾಗೂ ಹೇಗೆ ಮತ್ತು ಯಾವ ಸಮಯದಲ್ಲಿ ಪೂಜೆ ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳೋಣ.
ಮಹಾ ಶಿವರಾತ್ರಿಯು ಶಿವನ ಆರಾಧನೆಯ ಅಂಗವಾಗಿದೆ 2024 ರಲ್ಲಿ ಫಾಲ್ಗುಣ ಮಾಸದ ಮಾರ್ಚ್8 ಕೃಷ್ಣ ಪಕ್ಷದ ತ್ರಯೋದಶಿಯಂದು ಶಿವರಾತ್ರಿ ನಡೆಯುತ್ತದೆ ಶಿವಪುರಾಣದ ಪ್ರಕಾರ ಶಿವ ಮತ್ತು ತಾಯಿ ಪಾರ್ವತಿಯ ವಿವಾಹವು ಮಹಾ ಶಿವರಾತ್ರಿಯಂದು ನಡೆಯಿತು ಹಾಗೆಯೇ ಮಹಾ ಶಿವರಾತ್ರಿ ಯಂದು ಶಿವನು ಭೂಲೋಕದ ಎಲ್ಲ ಶಿವ ಲಿಂಗಗಳಲ್ಲಿ ನೆಲೆಸುತ್ತಾನೆ ಇಂತಹ ಸಮಯದಲ್ಲಿ ಶಿವನ ಭಕ್ತಾದಿಗಳ ಇಷ್ಟರ್ಥಗಳು ಪೂರ್ಣಗೊಳ್ಳುತ್ತದೆ 2024 ಮಾರ್ಚ್ 8 ಶುಕ್ರವಾರದಂದು ಶಿವರಾತ್ರಿಯ ಪೂಜೆಯನ್ನು ಆಚರಿಸಲಾಗುತ್ತದೆ ಚತುರ್ದಶಿ ಆರಂಭವಾಗುವುದು ಮಾರ್ಚ್ 8ನೆಯ ತಾರೀಖು ರಾತ್ರಿ 9ಗಂಟೆ 57 ನಿಮಿಷಕ್ಕೆ ಪ್ರಾರಂಭವಾಗುತ್ತದೆ
ಚತುರ್ದಶಿ ತಿಥಿ ಅಂತ್ಯವಾಗುವುದು ಮಾರ್ಚ್ 9 ಸಂಜೆ 6 ಗಂಟೆ 17 ನಿಮಿಷಕ್ಕೆ ಹಾಗೆಯೇ ಮಹಾಶಿವರಾತ್ರಿಯಲ್ಲಿ ರಾತ್ರಿ ವೇಳೆಯಲ್ಲಿ ಶಿವನನ್ನು ಆರಾಧನೆ ಮಾಡಲಾಗುತ್ತದೆ ಹಾಗಾಗಿ ಮಾರ್ಚ್ 8 ನೆಯ ತಾರೀಖಿನಂದು ಆಚರಣೆ ಮಾಡಲಾಗುತ್ತದೆ ಪೂಜೆ ಮಾಡಲು ಯೋಗ್ಯ ವಾದ ಸಮಯವೆಂದರೆ ಮಾರ್ಚ್ 8 ರಾತ್ರಿ 12 ಗಂಟೆ 4 ನಿಮಿಷದಿಂದ 12 ಗಂಟೆ 57 ನಿಮಿಷದ ವರೆಗೆ ಇರುತ್ತದೆ ಶಿವರಾತ್ರಿಯ ನಿಮಿತ್ತ ಉಪವಾಸ ಕೈಗೊಳ್ಳುವುದು ಮಾರ್ಚ್ 9 ಬೆಳಿಗ್ಗೆ 6 ಗಂಟೆ 27 ನಿಮಿಷದಿಂದ ಮಧ್ಯಾಹ್ನ 3 ಗಂಟೆ 34 ನಿಮಿಷದ ವರೆಗೆ ಉಪವಾಸ ಕೈಗೊಳ್ಳಬೇಕು .
ಹೂವು ಬನ್ನಿ ಎಲೆ ಅಭಿಷೇಕಕ್ಕೆ ಗಂಗಾಜಲ ಹಸುವಿನ ಹಾಲು ಮೊಸರು ಸಕ್ಕರೆ ಜೇನುತುಪ್ಪ ಹಾಗೆಯೇ ಪವಿತ್ರ ದಾರ ತಿಲಕಕ್ಕೆಶ್ರೀಗಂಧ ಕುಂಕುಮ ಅರಿಷಿಣ ಸುಗಂಧದ್ರವ್ಯ ಅಕ್ಷತೆ ಲವಂಗ ಏಲಕ್ಕಿ ವೀಳ್ಯದೆಲೆ ಋತುಮಾನದ ಹಣ್ಣುಗಳು ಬಸಂ ಆರತಿಗೆ ದೀಪ ಹಸುವಿನ ತುಪ್ಪ ದುಪ ಮುಂತಾದ ವಸ್ತುಗಳನ್ನು ಪೂಜೆಯ ತಟ್ಟೆಯಲ್ಲಿ ಸಿದ್ದ ಪಡಿಸಿಕೊಳ್ಳಬೇಕು ಶಿವನ ಜೊತೆಗೆ ಪಾರ್ವತಿ ದೇವಿಯನ್ನು ಸಹ ಪೂಜಿಸಬೇಕು ಪಾರ್ವತಿ ದೇವಿಗೆ ಬಳೆಗಳು ಶಿವರಾತ್ರಿಯ ದಿನದಂದು ಶಿವನನ್ನು ಮೆಚ್ಚಿಸಲು ಸ್ನಾನದ ನಂತರ ಶಿವಲಿಂಗಕ್ಕೆ ಗಂಗಾಜಲ ಸಕ್ಕರೆ ಜೇನುತುಪ್ಪ ಮತ್ತು ಹಾಲಿನಿಂದ ಅಭಿಷೇಕ ಮಾಡಬೇಕು
ಇದಾದ ನಂತರದಲ್ಲಿ ಶಿವಲಿಂಗಕ್ಕೆ ನಮಸ್ಕರಿಸಿ ಶಿವಲಿಂಗಕ್ಕೆ ಪ್ರಿಯವಾದ ಹೂವುಗಳು ಬಿಲ್ವಪತ್ರೆ ತುಳಸಿ ಇತ್ಯಾದಿಗಳನ್ನೂ ಅರ್ಪಿಸಬೇಕು .ಶಿವನನ್ನು ಶ್ರದ್ದಾ ಭಕ್ತಿಯಿಂದ ಪೂಜೆ ಸಲ್ಲಿಸಬೇಕು ಹೀಗೆ ಶಿವರಾತ್ರಿಯ ಹಿಂದೂ ಧರ್ಮದಲ್ಲಿ ಪರಮ ಶಿವನ ಆರಾಧನೆ ಮಾಡುವ ಮಹತ್ವಪೂರ್ಣ ಹಬ್ಬ ಇದಾಗಿದೆ ಪ್ರತಿಯೊಬ್ಬರ ಮನೆಯಲ್ಲಿ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ ತುಂಬಾ ಮಹತ್ವಪೂರ್ಣ ಹಬ್ಬ ಇದಾಗಿದೆ .
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು