Kumba Rashi: ರಾಶಿ ಚಕ್ರಗಳಲ್ಲಿ 11ನೇ ರಾಶಿ ಆಗಿರುವ ಕುಂಭ ರಾಶಿಯು ಬಹಳ ಮಹತ್ವವನ್ನು ಪಡೆದಿದೆ. ಪ್ರತಿಯೊಬ್ಬ ಮನುಷ್ಯನು ಕೂಡ ತನ್ನ ರಾಶಿಗಳಿಗೆ ಅನುಗುಣವಾಗಿ ವಿಶೇಷತೆಯನ್ನು ಹೊಂದಿರುತ್ತಾನೆ. ಹಾಗಾದರೆ ಈ ಕುಂಭ ರಾಶಿಯಲ್ಲಿ ಹುಟ್ಟಿರುವವರ ಗುಣ ಧರ್ಮಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವ ಪ್ರಕಾರ ಕುಂಭ ರಾಶಿಯವರು ಬಹಳ ಸಾಹಸ ಪ್ರವೃತ್ತಿಯವರು. ಇವರು ತುಂಬಾ ನಿಗೂಢವಾಗಿರುತ್ತಾರೆ ಯಾವುದನ್ನು ಕೂಡ ಓಪನ್ ಆಗಿ ಹೇಳಿಕೊಳ್ಳುವುದಿಲ್ಲ ತಮ್ಮ ಮನಸ್ಸಿನಲ್ಲೆ ಇಟ್ಟುಕೊಳ್ಳುತ್ತಾರೆ. ಕೆಲ ರಹಸ್ಯಗಳನ್ನು ಮುಚ್ಚಿಡುತ್ತಾರೆ. ಇವರಿಗೆ ಸ್ವಲ್ಪ ತಾವು ಹೇಳಿದ್ದೆ ಕೇಳಬೇಕು ಎನ್ನುವ ಮನೋಭಾವವಿರುತ್ತದೆ. ಬೇರೆಯವರ ಮಾತನ್ನು ಅಷ್ಟು ಸುಲಭವಾಗಿ ಒಪ್ಪುವುದಿಲ್ಲ.
ಇವರು ಸಾಕಷ್ಟು ಸಾಮಾಜಿಕ ಆಕರ್ಷಣೆಯನ್ನು ಹೊಂದಿರುತ್ತಾರೆ. ಇವರು ಭಾವನಾತ್ಮಕ ಜೀವಿಗಳು ಇವರನ್ನು ಯಾರು ಕೂಡ ಪ್ರಶ್ನಿಸುವುದು ಇಷ್ಟವಾಗುವುದಿಲ್ಲ. ಇವರು ಬಹಳ ಸೂಕ್ಷ್ಮಮತಿ ಎಂದೇ ಹೇಳಬಹುದು ಏಕೆಂದರೆ ಯಾರಾದರೂ ಇವರನ್ನು ಪ್ರಶ್ನಿಸಿದ್ದರೆ ಅದನ್ನು ಮನಸ್ಸಿಗೆ ತೆಗೆದುಕೊಳ್ಳುತ್ತಾರೆ. ಸಣ್ಣ ಸಣ್ಣ ವಿಷಯಗಳಲ್ಲಿಯೂ ಕೂಡ ಚಿಂತೆಗೀಡಾಗುತ್ತಾರೆ.
ಇವರು ಸಾಮಾಜಿಕವಾಗಿ ಬಹಳ ಕಳಕಳಿಯುಳ್ಳವರಾಗಿದ್ದಾರೆ. ಇವರು ದೈನಂದಿನ ಜಂಜಾಟದ ವಿಶ್ರಾಂತಿಯನ್ನು ಪಡೆಯಲು ಒಮ್ಮೊಮ್ಮೆ ಒಂಟಿಯಾಗಿ ಇರಲು ಬಯಸುತ್ತಾರೆ. ತಮ್ಮ ಸ್ವಂತದೇ ಯೋಚನೆಯಲ್ಲಿ ಬದುಕುವವರು ಕುಂಭ ರಾಶಿಯವರು. ಇತರರನ್ನು ನೋಡಿ ತಮ್ಮನ್ನು ಯಾವುದಕ್ಕೂ ಹೋಲಿಕೆ ಮಾಡಿಕೊಳ್ಳುವುದಿಲ್ಲ. ತಮ್ಮಿಂದ ಇತರರು ಕಲಿಯಬೇಕೆ ಹೊರತು ಇತರರಿಂದ ನಾವು ಕಲಿಯಬಾರದು ಎನ್ನುವ ಮನೋಭಾವವುಳ್ಳವರು.
ಇನ್ನು ಇವರ ವೃತ್ತಿ ಜೀವನಕ್ಕೆ ಬಂದರೆ ಯಾರ ಕೈ ಕೆಳಗೂ ಕೆಲಸ ಮಾಡಲು ಬಯಸುವುದಿಲ್ಲ. ಇವರು ಕೆಲಸದಲ್ಲಿ ಸ್ವಾತಂತ್ರ್ಯವನ್ನು ಬಯಸುತ್ತಾರೆ. ಯಾರಾದರೂ ಇವರ ಮೇಲೆ ಪ್ರಾಬಲ್ಯವನ್ನು ಹೇರಲು ಬಂದರೆ ಇವರಿಗೆ ಅದು ಇಷ್ಟವಾಗುವುದಿಲ್ಲ. ಏಕೆಂದರೆ ಇವರು ಸ್ವತಂತ್ರ ಜೀವಿಗಳು ಇವರದೇ ಆದ ಯೋಚನೆಯಲ್ಲಿ ಇವರದೇ ಆದ ಕಲ್ಪನೆಯಲ್ಲಿ ಬದುಕನ್ನು ಕಟ್ಟಿಕೊಳ್ಳುವವರು. ಆದ್ದರಿಂದ ಯಾರ ಮಾತನ್ನು ಕೇಳದೆ ತಮಗೆ ಹೇಗೆ ಬೇಕೋ ಹಾಗೆ ತಮ್ಮ ಜೀವನದಲ್ಲಿ ಬದುಕುತ್ತಾರೆ. ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513