KGF-2 ವಿರುದ್ಧ ಮಾತನಾಡಿದ ಅಹೋರಾತ್ರಗೆ ಕ್ಲಾಸ್ ತಗೊಂಡ ಯಶ್ ಅಭಿಮಾನಿ

0

ಕನ್ನಡದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್ 2 ಈಗ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪ್ರಶಾಂತ್ ನೀಲ್ ಅವರ ನಿರ್ದೇಶನಕ್ಕೆ ಹಾಗೂ ರಾಕಿಂಗ್ ಸ್ಟಾರ್ ಯಶ್ ಆರ್ಭಟಕ್ಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ಗೆದ್ದಿದೆ ಎಂದು ಹೇಳಬಹುದು. ಹೌದು ಗೋವಾದಲ್ಲಿ ಇಡೀ ಕೆಜಿಎಫ್ ಚಿತ್ರತಂಡ ಸಿನಿಮಾ ಗೆದ್ದ ಖುಷಿಗಾಗಿ ಪಾರ್ಟಿ ಆಯೋಜನೆ ಮಾಡಿಕೊಂಡಿದ್ದು, ನಿರ್ಮಾಪಕ ವಿಜಯ್ ಕಿರಗಂದೂರು ಅವರ ಸಂಸ್ಥೆಯಲ್ಲಿ ನಿರ್ಮಾಣವಾದ ಕೆಜಿಎಫ್ ಚಾಪ್ಟರ್ ಟು ಇದೀಗ ಗೆದ್ದೇ ಬಿಟ್ಟಿದೆ. ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಅವರು ಯಶ್ ಜೊತೆ ಗೋವಾದಲ್ಲಿ ಕಾಣಿಸಿದ ಫೋಟೋ ಸಹ ವೈರಲ್ ಆಗುತ್ತಿದೆ.

ಯಶ್ ಕೆನ್ನೆಗೆ ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು ಅವರು ಮುತ್ತಿಟ್ಟ ಫೋಟೋ ಇದೀಗ ಬಾರಿ ಹೆಚ್ಚು ವೈರಲ್ ಆಗುತ್ತಿದೆ. ಕಳೆದ ಎರಡು ವಾರದಿಂದ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕೆಜಿಎಫ್ 2 ಸಿನಿಮಾ ಕನ್ನಡದ ಮಹತ್ತರ ಸಿನಿಮಾ ಆಗಿ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಹೆಮ್ಮೆಯ ವಿಷಯ ಎನ್ನಬಹುದು. ಈ ಕೆಜಿಎಫ್ ಸಿನಿಮಾ ಏಪ್ರಿಲ್ 14 ರಿಂದ ತನ್ನ ಆರ್ಭಟ ಆರಂಭಿಸಿದ್ದು ಈಗಲೂ ಕೂಡ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಹೌದು ಅದಿರನ ಪಾತ್ರದ ನಟ ಸಂಜಯ್ ದತ್ ಹಾಗೂ ರವೀನಾ ಟಂಡನ್ ಅವರ ಅಭಿನಯಕ್ಕೆ ಅವರೇ ಸಾಟಿ ಎನ್ನಬಹುದು. ಕೆಜಿಎಫ್ ಸಿನಿಮಾ ಇದೀಗ ಬಿಡುಗಡೆಯಾದ 11 ದಿನಕ್ಕೆ ಸಾವಿರ ಕೋಟಿ ಕಲೆಕ್ಷನ್ ಮುಕ್ತಾಯ ಮಾಡಿರುವುದಾಗಿ ಮೂಲಗಳ ಮೂಲಕ ವರದಿಯಾಗಿದೆ.

ಇಷ್ಟೆಲ್ಲಾ ಕೆ ಜಿ ಯೆಫ್ 2 ದಾಖಲೆ ಮಾಡುತ್ತಿದ್ದರು ಇಲ್ಲೊಬ್ಬರು ಈ ಚಿತ್ರದ ವಿರುದ್ಧ ಮಾತನಾಡಿ ಯಶ್ ಅಭಿಮಾನಿಯ ಕೋಪಕ್ಕೆ ಗುರಿಯಾಗಿದ್ದಾರೆ. ಫೇಸ್‌ಬುಕ್ ಬಳಕೆದಾರರಿಗೆ ಈ ಅಹೋರಾತ್ರ ಎಂಬ ವ್ಯಕ್ತಿಯ ಬಗ್ಗೆ ಕೊಂಚ ಮಟ್ಟಿಗಾದರೂ ಪರಿಚಯವಿರಬಹುದು. ಬರಹಗಾರರು, ಸಾಮಾಜಿಕ ಚಿಂತಕರೂ ಆಗಿರುವ ಅಹೋರಾತ್ರ ಕೆಲವು ಪುಸ್ತಕಗಳನ್ನು ಬರೆದಿದ್ದಾರೆ. ಒಳಗನ್ನಡಿ, ತೃಣಮೂಲ, ಆಯತನ, ಏಳು, ತಿರುಳು, ಮೂರ್ಖನ ಮಾತುಗಳು, ಗಗನಗೋಚರೀ ವಸುಂಧರಾ, ಹತ್ತು ಸಾಕು ಮೆಟ್ಟಿಲು ಹೀಗೆ ಹಲವು ಕೃತಿಗಳನ್ನು ರಚಿಸಿ ಓದುಗರನ್ನು ಸಂಪಾದಿಸಿದ್ದಾರೆ.

ಅಹೋರಾತ್ರ ಆಧ್ಯಾತ್ಮ ಚಿಂತಕರು ಹೌದು. ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಅನುಭವವುಳ್ಳವರು. ಹಲವು ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಸಮಾಜದ ಬಗ್ಗೆ ಹೆಚ್ಚಿನ ಕಾಳಜಿ ತೋರಿರುವ ಅಹೋರಾತ್ರ ”ವೃಕ್ಷ ರಕ್ಷ” ಎಂಬ ಸಂಸ್ಥೆಯ ಮೂಲಕ ಮರಗಡಿಗಳನ್ನು ರಕ್ಷಿಸುವ ಕೆಲಸದಲ್ಲೂ ತೊಡಗಿಕೊಂಡಿದ್ದಾರೆ.

ಫೇಸ್‌ಬುಕ್‌ನಲ್ಲಿ ಅಹೋರಾತ್ರ ಎಂಬ ಕಾವ್ಯನಾಮದಿಂದ ಗುರುತಿಸಿಕೊಂಡಿರುವ ಇವರ ಮೂಲ ಹೆಸರು ನಟೇಶ್. ನಿಮಗೆ ನೆನಪಿರಬಹುದು ಉಪೇಂದ್ರ ಅವರು ಪ್ರಜಾಕೀಯ ಪಕ್ಷದ ಕಾರ್ಯಕರ್ತರು ಆಗಿದ್ದಾರೆ. ಪ್ರಜಾಕೀಯ ಪರಿಕಲ್ಪನೆ ಬಗ್ಗೆ ಹೆಚ್ಚು ನಂಬಿಕೆ ಹೊಂದಿದ್ದ ಅಹೋರಾತ್ರ ಲೋಕಸಭೆ ಚುನಾವಣೆಯಲ್ಲೂ ಸ್ಪರ್ಧೆ ಮಾಡಿದ್ದರು ಎನ್ನಲಾಗಿದೆ.

ಇಷ್ಟೆಲ್ಲಾ ಹಿನ್ನೆಲೆ ಹೊಂದಿರುವ ಅಹೋರಾತ್ರ ಕಿಚ್ಚ ಸುದೀಪ್ ವಿಚಾರದಲ್ಲಿ ಮಾತನಾಡಿ ಚರ್ಚೆಗೆ ಕಾರಣರಾಗಿದ್ದರು. ಕಳೆದ ವರ್ಷದ ಆರಂಭದಲ್ಲಿ ಸುದೀಪ್ ಭಾರತದ ಅತಿದೊಡ್ಡ ಸ್ಕೀಲ್ ಗೇಮಿಂಗ್ ರಮ್ಮಿ ಸರ್ಕಲ್.ಕಾಮ್‌ಗೆ ರಾಯಭಾರಿಯಾಗಿ ನೇಮಕಗೊಂಡರು. ಈ ವೇಳೆ ಸುದೀಪ್ ಅವರ ವಿರುದ್ಧ ಹಲವು ಸಂಘಟನೆಗಳು ಪ್ರತಿಭಟಿಸಿದವು. ಈ ವಿಚಾರದಲ್ಲಿ ಸುದೀಪ್ ಅವರನ್ನು ಖಂಡಿಸಿದ ಪೈಕಿ ಅಹೋರಾತ್ರ ಸಹ ಒಬ್ಬರು.

ಈಗ ಇವರು ಯಶ್ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಅಹೋರಾತ್ರ ಅವರು ಯಶ್ ಅಭಿನಯದ ಕೆ ಜಿ ಫ್ 2 ವಿರುಧ್ದ ಮಾತನಾಡಿ ಯಶ್ ಅಭಿಮಾನಿ ಒಬ್ಬರು ಇವರಿಗೆ ಹಿಗ್ಗಾಮುಗ್ಗ ಕ್ಲಾಸ್ ತಗೊಂಡಿದ್ದಾರೆ. ಇವರು ಹೀಗೆ ಮಾಡುತ್ತಿರುವುದು ಇದೆ ಮೊದಲೇನಲ್ಲ ಈ ಮೊದಲು ಕಿಚ್ಚ ಸುದೀಪ್ ವಿಷಯದಲ್ಲೂ ಮಾತನಾಡಿ ಅಭಿಮಾನಿಗಳ ಕೋಪಕ್ಕೆ ಕಾರಣರಾಗಿದ್ದರು. ಕಿಚ್ಚ ಸುದೀಪ್ ವಿಷಯದಲ್ಲಿ ಅಹೋರಾತ್ರ ಸಹಜವಾಗಿ ಪ್ರತಿಭಟಿಸಿದ್ದರೆ ಎಲ್ಲವೂ ಸಮಾಧಾನವಾಗಿ ಇರುತ್ತಿತ್ತೋ ಏನೋ. ಆದರೆ ಅಹೋರಾತ್ರ ಅವರ ಪ್ರತಿಭಟನೆ ಸ್ವಲ್ಪ ವಿಪರೀತವಾಗಿತ್ತು.

ಸುದೀಪ್ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತೆ ನಿಂದಿಸಿ ಮಾತನಾಡಿದರು. ಸ್ಟಾರ್ ನಟನನ್ನು ವೈಯಕ್ತಿಕವಾಗಿ ಅಪಮಾನಿಸುವಂತೆ ಮಾತನಾಡಿದ್ದರು. ಇದು ಸುದೀಪ್ ಅನುಯಾಯಿಗಳನ್ನು ಕೆರಳಿಸಿತು. ಇಲ್ಲಿಂದ ಕಿಚ್ಚನ ಅಭಿಮಾನಿಗಳು ಹಾಗೂ ಅಹೋರಾತ್ರ ನಡುವೆ ನೇರಾನೇರ ವಾದ-ವಿವಾದಗಳು ಹುಟ್ಟಿಕೊಂಡವು. ಸುದೀಪ್ ಅಭಿಮಾನಿಗಳಿಂದ ಬೆದರಿಕೆ ಕರೆ ಬರುತ್ತಿವೆ, ವಿದೇಶದಿಂದ ಬೆದರಿಕೆ ಹಾಕುತ್ತಿದ್ದಾರೆ ಎಂದು ಅಹೋರಾತ್ರ ಆರೋಪಿಸಿದರು. ಕೆಲವು ಅಭಿಮಾನಿಗಳ ಜೊತೆ ಫೋನ್‌ನಲ್ಲಿ ಮಾತನಾಡುತ್ತಿರುವ ಸಂಭಾಷಣೆಯನ್ನು ಫೇಸ್‌ಬುಕ್, ಯೂಟ್ಯೂಬ್‌ನಲ್ಲಿ ಹರಿಯಬಿಟ್ಟರು.

Leave A Reply

Your email address will not be published.

error: Content is protected !!
Footer code: