WhatsApp Group Join Now
Telegram Group Join Now

ಸನಾತನ ಹಿಂದೂ ಸಂಪ್ರದಾಯದಲ್ಲಿ ದೀಪಕ್ಕೆ ಬಹಳ ಮಹತ್ವವನ್ನು ಕೊಡಲಾಗಿದೆ. ಮನೆಯಲ್ಲಿ ಪ್ರತಿದಿನ ಹೆಣ್ಣುಮಕ್ಕಳು ದೀಪ ಹಚ್ಚುತ್ತಾರೆ. ದೀಪಗಳಲ್ಲಿ ಎಷ್ಟು ವಿಧ ಹಾಗೂ ಕಾಮಾಕ್ಷಿ ದೀಪದ ಪ್ರಾಮುಖ್ಯತೆಯನ್ನು ಈ ಲೇಖನದಲ್ಲಿ ನೋಡೋಣ

ನಮ್ಮ ಸಂಸ್ಕೃತಿಯಲ್ಲಿ ದೀಪಕ್ಕೆ ಮಹತ್ವವಾದ ಸ್ಥಾನವಿದೆ. ದೀಪ ಹಚ್ಚಿದಾಗ ನಮ್ಮ ಮನಸ್ಸು ನಿರಾಳತೆ ಧನಾತ್ಮಕ ಯೋಚನೆಯಿಂದ ಕೂಡಿರುತ್ತದೆ. ದೀಪವನ್ನು ದೇವರಿಗೆ ನಮ್ಮ ಪ್ರಾರ್ಥನೆಯನ್ನು ತಿಳಿಸುವ ವಾಹಕವಾಗಿ ಹಚ್ಚುತ್ತೇವೆ. ದೀಪಗಳಲ್ಲಿ ಹಲವು ರೀತಿಯ ದೀಪಗಳಿವೆ. ನಿಂಬೆಹಣ್ಣಿನ ದೀಪ, ತುಪ್ಪದ ದೀಪ ಕಾಮಾಕ್ಷಿ ದೀಪ ಹಾಗೂ ಉಪ್ಪಿನ ದೀಪ. ಈ ಎಲ್ಲಾ ದೀಪಗಳು ತಮ್ಮದೆ ಆದ ವೈಶಿಷ್ಟತೆಯನ್ನು ಹೊಂದಿದೆ. ದೀಪಗಳಲ್ಲಿ ಕಾಮಾಕ್ಷಿ ದೀಪ ಹೆಚ್ಚು ಮಹತ್ವವನ್ನು ಪಡೆದಿದೆ. ಕಾಮಾಕ್ಷಿ ದೀಪ ಹೆಸರು ಸೂಚಿಸುವಂತೆ ಕಾಮಾಕ್ಷಿ ದೇವಿಯ ಪ್ರತಿರೂಪವಾಗಿದೆ. ಭಕ್ತರ ಆಸೆ ಆಕಾಂಕ್ಷೆಗಳನ್ನು ತನ್ನ ಕಣ್ಣಿನ ಮೂಲಕವೆ ಈಡೇರಿಸುವ ದೇವಿ ತಾಯಿ ಕಾಮಾಕ್ಷಿ. ಕಾಮಾಕ್ಷಿ ದೇವಿ ಎಲ್ಲಾ ದೇವಾನುದೇವತೆಗಳಿಗೆ ಶಕ್ತಿಯನ್ನು ನೀಡುತ್ತಾರೆ ಎಂದು ಪುರಾಣಗಳು ತಿಳಿಸುತ್ತವೆ.

ಕಾಮಾಕ್ಷಿ ದೀಪಕ್ಕೆ ಗಜಲಕ್ಷ್ಮೀ ದೇವಿಯ ಚಿತ್ರವಿರುತ್ತದೆ. ದೀಪದ ಮೇಲ್ಗಡೆ ಎರಡು ಆನೆಗಳ ಜೊತೆ ಇರುವ ಲಕ್ಷ್ಮೀ ದೇವಿಯ ಚಿತ್ರವಿರುತ್ತದೆ, ಆನೆಗಳು ಲಕ್ಷ್ಮೀ ದೇವಿಯ ಅಕ್ಕ ಪಕ್ಕ ಇದ್ದು ತಮ್ಮ ಸೊಂಡಿಲಿನಿಂದ ನೀರನ್ನು ಲಕ್ಷ್ಮೀ ದೇವಿಗೆ ಪ್ರೋಕ್ಷಣೆ ಮಾಡುತ್ತಿದೆ ಈ ದೀಪವನ್ನು ಗಜಲಕ್ಷ್ಮಿ ಕಾಮಾಕ್ಷಿ ದೀಪ ಎಂತಲೂ ಕರೆಯುತ್ತಾರೆ. ಒಂದು ಕಾಮಾಕ್ಷಿ ದೀಪ ಸಹಸ್ರ ದೀಪಗಳಿಗೆ ಸಮಾನ. ಕಾಮಾಕ್ಷಿ ದೀಪವನ್ನು ಬೆಳಿಗ್ಗೆ ಹಾಗೂ ಸಂಜೆ ಪೂಜಾ ಗೃಹದಲ್ಲಿ ಬೆಳಗಿದರೆ ಸಕಲ ಐಶ್ವರ್ಯ ಮನೆಗೆ ಬರುತ್ತದೆ, ದೀಪ ಹಚ್ಚುವುದರಿಂದ ಮನೆಯಲ್ಲಿ ಕಲಹಗಳಾಗುತ್ತಿದ್ದರೆ ಕಡಿಮೆಯಾಗುತ್ತದೆ, ನಕಾರಾತ್ಮಕ ಶಕ್ತಿಗಳು ಕರಗಿ ಹೋಗುತ್ತವೆ. ಕಾಮಾಕ್ಷಿ ದೀಪದಲ್ಲಿ ಕಾಮಾಕ್ಷಿ ಮಾತ್ರ ನೆಲೆಸಿರದೆ ಅಶೋಕ ಸುಂದರಿಯು ನೆಲೆಸಿದ್ದಾಳೆ, ಅಶೋಕ ಸುಂದರಿ ಪರಮೇಶ್ವರ ಪಾರ್ವತಿಯರ ಪುತ್ರಿಯಾಗಿರುತ್ತಾಳೆ.

ಕಾಮಾಕ್ಷಿ ದೀಪವನ್ನು ಹಚ್ಚುವ ಮನೆಯಲ್ಲಿ ಕೆಟ್ಟ ಘಟನೆ, ಶೋಕವಾಗಲಿ ಇರುವುದಿಲ್ಲ. ಮನೆಯಲ್ಲಿ ಚಿನ್ನವನ್ನು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಕೊಡುವಂತೆ ಕಾಮಾಕ್ಷಿ ದೀಪವನ್ನು ಜಾಗೃತೆಯಿಂದ ಇನ್ನೊಂದು ಪೀಳಿಗೆಗೆ ಬಳುವಳಿಯಾಗಿ ಕೊಡಲಾಗುತ್ತದೆ. ಮನೆಯಲ್ಲಿ ವೃತ ಹೋಮ ಹವನ ಗೃಹಪ್ರವೇಶದಂತಹ ಶುಭ ಕಾರ್ಯಗಳಲ್ಲಿ ಹೆಚ್ಚು ದೀಪಗಳನ್ನು ಬೆಳಗುತ್ತಾರೆ ಆಗ ಕಾಮಾಕ್ಷಿ ದೀಪವನ್ನು ಹೆಚ್ಚು ಬಳಸುವುದನ್ನು ನಾವು ನೋಡಿರುತ್ತೇವೆ.

ಕಾಮಾಕ್ಷಿ ದೀಪ ಕಾಮಾಕ್ಷಿ ದೇವಿಯ ಸ್ವರೂಪವಾಗಿರುವುದರಿಂದ ದೀಪ ಹಚ್ಚುವ ಮೊದಲು ಕಾಮಾಕ್ಷಿ ದೀಪಕ್ಕೆ ಕುಂಕುಮ ಹಚ್ಚಿ ಪೂಜೆ ಮಾಡಿದ ನಂತರ ಕಾಮಾಕ್ಷಿ ದೀಪವನ್ನು ಹಚ್ಚಬೇಕು. ದೇವಿಗೆ ಕೆಂಪು ಹೂವುಗಳು ಪ್ರಿಯವಾಗಿದ್ದು ಕಾಮಾಕ್ಷಿ ದೀಪವನ್ನು ಪೂಜಿಸುವಾಗ ಕೆಂಪು ಪುಷ್ಪಗಳನ್ನು ಬಳಸುವುದು ಶ್ರೇಷ್ಠವಾಗಿದೆ. ದೀಪವನ್ನು ಮನೆಯ ಉತ್ತರ ಹಾಗೂ ಪೂರ್ವ ದಿಕ್ಕಿಗೆ ಮುಖ ಇರುವಂತೆ ಇಡಬೇಕು. ದೀಪವನ್ನು ಎಳ್ಳೆಣ್ಣೆ ಅಥವಾ ತುಪ್ಪದಿಂದ ಮಾತ್ರ ಬೆಳಗಿಸಬೇಕು ಹೀಗೆ ಕಾಮಾಕ್ಷಿ ದೀಪವನ್ನು ಬೆಳಗಿಸುವುದರಿಂದ ನಮ್ಮ ಆಸೆ ಆಕಾಂಕ್ಷೆಗಳು ಈಡೇರುತ್ತವೆ.

ಕಾಮಾಕ್ಷಿ ದೀಪವನ್ನು ಬರಿ ನೆಲದ ಮೇಲೆ ಇಡಬಾರದು ಏಕೆಂದರೆ ದೀಪದ ಕೆಳಗೆ ಲಕ್ಷ್ಮೀ ದೇವಿ ವಾಸವಾಗಿರುತ್ತಾಳೆ, ನೆಲದ ಮೇಲೆ ಇಟ್ಟು ಕಾಮಾಕ್ಷಿ ದೀಪ ಹಚ್ಚಿದರೆ ದೀಪಾರಾಧನೆಯ ಬಲ ನಮಗೆ ಬರುವುದಿಲ್ಲ ಸಣ್ಣದಾದ ಹಿತ್ತಾಳೆ ಬಟ್ಟಲಿನಲ್ಲಿ ದೀಪವನ್ನು ಇಟ್ಟು ಹಚ್ಚಬೇಕು. ಕಾಮಾಕ್ಷಿ ದೀಪವನ್ನು ಮಂಗಳವಾರ ಅಥವಾ ಶುಕ್ರವಾರ ತೊಳೆಯಬಾರದು. ಕಾಮಾಕ್ಷಿ ದೀಪ ಹಿತ್ತಾಳೆಯದಾಗಿದ್ದರೆ ಬಹಳ ಒಳ್ಳೆಯದು. ಬೆಳ್ಳಿಯ ಕಾಮಾಕ್ಷಿ ದೀಪ ಬಹಳ ಶ್ರೇಷ್ಠ ಆದರೆ ಸ್ಟೀಲ್ ಕಾಮಾಕ್ಷಿ ದೀಪ ಬಳಸಲೆಬಾರದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಕಾಮಾಕ್ಷಿ ದೀಪವನ್ನು ಹಚ್ಚಿ ಮನೆಯನ್ನು ಬೆಳಗೋಣ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: