ಆಡಳಿತ ಸೇವೆಯಲ್ಲಿ ಆಸಕ್ತಿ ಇರುವವರು ಯುಪಿಎಸ್ ಸಿ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಐಎಎಸ್, ಐಪಿಎಸ್ ಪರೀಕ್ಷೆಗಳನ್ನು ಬರೆದು ಸೇವೆ ಸಲ್ಲಿಸಬಹುದು. ಯುಪಿಎಸ್ ಸಿ ನಡೆಸುವ ಪರೀಕ್ಷೆಗಳಲ್ಲಿ ಮುಖ್ಯ ಪರೀಕ್ಷೆಯಾದ ಐಪಿಎಸ್ ಪರೀಕ್ಷೆಯ ತಯಾರಿಯ ಬಗ್ಗೆ ಕೆಲವು ಮುಖ್ಯ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಐಪಿಎಸ್ ಇಂಡಿಯನ್ ಪೋಲಿಸ್ ಸರ್ವೀಸ್ ಇದೊಂದು ಬಹಳ ದೊಡ್ಡ ಪೋಸ್ಟ್ ಆಗಿದೆ. ಐಪಿಎಸ್ ಪಾಸ್ ಮಾಡಬೇಕೆಂದು ಬಹಳ ಜನರ ಕನಸಾಗಿರುತ್ತದೆ. ಈ ಪರೀಕ್ಷೆ ಬರೆಯಲು ಬಹಳ ಕಷ್ಟ ಪಡುತ್ತಾರೆ ಆದರೂ ಕೆಲವರು ಈ ಪರೀಕ್ಷೆಯಲ್ಲಿ ಆಯ್ಕೆಯಾಗುವುದಿಲ್ಲ.ಐಪಿಎಸ್ ಅಧಿಕಾರಿ ಆಗಲು ಕೆಲವು ಪರೀಕ್ಷೆಗಳನ್ನು ಪಾಸ್ ಮಾಡಬೇಕಾಗುತ್ತದೆ. ಫಿಸಿಕಲ್ ಟೆಸ್ಟ್ ಅಟೆಂಡ್ ಮಾಡಬೇಕಾಗುತ್ತದೆ, ಟ್ರೇನಿಂಗ್ ಇರುತ್ತದೆ ಹಾಗೆಯೆ ಕೆಲವು ಟೆಸ್ಟ್ ಗಳನ್ನು ಮಾಡಲಾಗುತ್ತದೆ. ಇವುಗಳನ್ನು ಪಾಸ್ ಆದ ನಂತರ ಐಪಿಎಸ್ ಅಧಿಕಾರಿ ಆಗಬಹುದು. ಪ್ರತಿವರ್ಷ ಸಾವಿರಾರು ಜನರು ಐಪಿಎಸ್ ಪರೀಕ್ಷೆ ಬರೆಯುತ್ತಾರೆ ಆದರೆ ಕೆಲವರು ಮಾತ್ರ ಪಾಸ್ ಆಗುತ್ತಾರೆ ಇದಕ್ಕೆ ಮುಖ್ಯ ಕಾರಣ ಐಪಿಎಸ್ ಎಕ್ಸಾಮ್ ಬರೆಯಬೇಕಾದರೆ ಯಾವೆಲ್ಲಾ ವಿಷಯಗಳು ಅಗತ್ಯ ಎಂಬುದು ಅವರಿಗೆ ತಿಳಿದಿರುವುದಿಲ್ಲ. ಐಪಿಎಸ್ ಪರೀಕ್ಷೆ ಬರೆಯಲು 21 ವರ್ಷ ವಯಸ್ಸಿನಿಂದ 30 ವರ್ಷ ವಯಸ್ಸಿನೊಳಗಿರಬೇಕು.ಬ್ಯಾಚುಲರ್ ಡಿಗ್ರಿ ಕಂಪ್ಲೀಟ್ ಆಗಿರಬೇಕು.
ಐಪಿಎಸ್ ಪರೀಕ್ಷೆಯನ್ನು ಇಂಡಿಯಾ, ನೇಪಾಳ, ಭೂತಾನ್ ದೇಶದ ಜನರು ಬರೆಯಬಹುದು. ಐಪಿಎಸ್ ಪರೀಕ್ಷೆ ಪಾಸಾಗಲು ಶಾರೀರಿಕ ಅರ್ಹತೆ ಮುಖ್ಯವಾಗಿದೆ. ಜನರಲ್ ಕೆಟಗೆರಿ ಪುರುಷರು 165 ಸೆಂಟಿಮೀಟರ್ ಎತ್ತರವನ್ನು ಹೊಂದಿರಬೇಕು. ಎಸ್ಸಿ, ಎಸ್ಟಿ ಓಬಿಸಿ ಕೆಟಗೆರಿ ಪುರುಷರು 160 ಸೆಂಟಿಮೀಟರ್ ಎತ್ತರ ಹೊಂದಿರಬೇಕು. ಪುರುಷರ ಎದೆಯ ಅಳತೆ 84 ಸೆ.ಮೀ ಇರಬೇಕು. ಜನರಲ್ ಕೆಟಗೆರಿ ಮಹಿಳೆಯರು 150 ಸೆಂಟಿಮೀಟರ್ ಎತ್ತರವಾಗಿರಬೇಕು. ಎಸ್ಸಿ, ಎಸ್ಟಿ, ಓಬಿಸಿ ಕಟಗೆರಿ ಮಹಿಳೆಯರು 145 ಸೆಂಟಿಮೀಟರ್ ಎತ್ತರವನ್ನು ಹೊಂದಿರಬೇಕು. ಮಹಿಳೆಯರ ಎದೆಯ ಅಳತೆ 79 ಸೆಂಟಿಮೀಟರ್ ಇರಬೇಕು. ಸರಿಯಾದ ದೃಷ್ಟಿಯನ್ನು ಹೊಂದಿರಬೇಕು ಎಂಬ ಕಾರಣಕ್ಕೆ ಸರಿಯಾದ ಕಣ್ಣಿಗಾಗಿ ದೃಷ್ಟಿ ಸಿಕ್ಸ್ ಬೈ ಸಿಕ್ಸ್ ಮತ್ತು ಸಿಕ್ಸ್ ಬೈ ನೈನ್ ಇರಬೇಕು. ಈ ಎಲ್ಲಾ ಅರ್ಹತೆಗಳು ಇದ್ದರೆ ಐಪಿಎಸ್ ಪರೀಕ್ಷೆಯನ್ನು ಬರೆಯಬಹುದು. ಈ ಪರೀಕ್ಷೆ ಬರೆಯಲು ಪಿಯುಸಿ ಕಂಪ್ಲೀಟ್ ಮಾಡಿರಬೇಕು, ನಂತರ ಗ್ರಾಜುವೇಷನ್ ಕಂಪ್ಲೀಟ್ ಮಾಡಿರಬೇಕು ಆಗಮಾತ್ರ ಐಪಿಎಸ್ ಪರೀಕ್ಷೆಯನ್ನು ಬರೆಯಬಹುದು.
ಡಿಗ್ರಿ ಕಂಪ್ಲೀಟ್ ಆದನಂತರ ಯುಪಿಎಸ್ ಸಿ ಪರೀಕ್ಷೆ ಗೆ ಅಪ್ಲೈ ಮಾಡಬೇಕು, ಆಸಕ್ತಿ ಇದ್ದರೆ ಡಿಗ್ರಿ ಫೈನಲ್ ಇಯರ್ ಇರುವಾಗಲೂ ಯುಪಿಎಸ್ ಸಿ ಪರೀಕ್ಷೆಯನ್ನು ಬರೆಯಬಹುದು. ಐಪಿಎಸ್ ಪರೀಕ್ಷೆ ಬರೆಯಬೇಕಾದರೆ ಮೊದಲು ಯುಪಿಎಸ್ ಸಿ ಪರೀಕ್ಷೆಗೆ ಅಪ್ಲೈ ಮಾಡಿದ ನಂತರ ಪ್ರಿಲಿಮಿನರಿ ಎಕ್ಸಾಮ್, ಮೇನ್ ಎಕ್ಸಾಮ್ ಮತ್ತು ಇಂಟರ್ವ್ಯೂ ಇರುತ್ತದೆ. ಪ್ರಿಲಿಮಿನರಿ ಎಕ್ಸಾಮ್ ನಲ್ಲಿ 2 ಪೇಪರ್ ಇರುತ್ತದೆ 2 ಪೇಪರ್ ನಲ್ಲಿ ಒಬ್ಜೆಕ್ಟಿವ್ ಟೈಪ್ ಪ್ರಶ್ನೆಗಳು ಇರುತ್ತದೆ. ಪ್ರಿಲಿಮಿನರಿ ಎಕ್ಸಾಮ್ ನಲ್ಲಿ ಪಾಸ್ ಆದರೆ ಮೇನ್ ಎಕ್ಸಾಮ್ ಬರೆಯಬಹುದು. ಮೇನ್ ಎಕ್ಸಾಮ್ ಪ್ರಿಲಿಮಿನರಿ ಎಕ್ಸಾಮ್ ಗಿಂತ ಕಠಿಣವಾಗಿರುತ್ತದೆ ಇದರಲ್ಲಿ 9 ಪೇಪರ್ ಬರೆಯಬೇಕು. ಮೇನ್ ಎಕ್ಸಾಮ್ ನಲ್ಲಿ ಪಾಸಾದರೆ ಇಂಟರ್ವ್ಯೂ ಫೇಸ್ ಮಾಡಬೇಕು. ಇಂಟರ್ವ್ಯೂನಲ್ಲಿ ಕಷ್ಟಕರವಾದ, ಟ್ರಿಕ್ಕಿ ಪ್ರಶ್ನೆಗಳನ್ನು ಕೇಳುತ್ತಾರೆ ಅದಕೆಲ್ಲಾ ಸರಿಯಾಗಿ ತಯಾರು ಮಾಡಿಕೊಳ್ಳಬೇಕು. ಇಂಟರ್ವ್ಯೂನಲ್ಲಿ ಪಾಸಾದರೆ ಟ್ರೇನಿಂಗ್ ಇರುತ್ತದೆ ಟ್ರೇನಿಂಗ್ ನಂತರ ಪೋಸ್ಟಿಂಗ್ ಮಾಡಲಾಗುತ್ತದೆ. ಈ ಮಾಹಿತಿಯನ್ನು ಐಪಿಎಸ್ ಪರೀಕ್ಷೆ ಬರೆಯಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ತಪ್ಪದೆ ತಿಳಿಸಿ.