ಈ 5 ಹವ್ಯಾಸಗಳೆ ಜೀವನದಲ್ಲಿ ಬಡತನ ತರುತ್ತವೆ

0

ದಿನ ಜೀವನದಲ್ಲಿನ ಕೆಲವೊಂದು ಹವ್ಯಾಸಗಳು ಆತನಿಗೆ ಬಡತನವನ್ನು ತಂದುಕೊಡಲು ಕಾರಣವಾಗುತ್ತದೆ ಅಂತಹ ಹವ್ಯಾಸಗಳು ಯಾವವು ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳೋಣ.

ಸನಾತನ ಧರ್ಮದಲ್ಲಿ 18 ಪುರಾಣಗಳಿವೆ ಆ ಎಲ್ಲಾ ಪುರಾಣಗಳಲ್ಲಿ ಗರುಡ ಪುರಾಣ ತುಂಬಾ ಶ್ರೇಷ್ಠವಾದದ್ದು ಈ ಪುರಾಣದಲ್ಲಿ ಭಗವಂತ ಶ್ರೀ ಕೃಷ್ಣ ಮತ್ತು ಗರುಡ ದೇವರ ನಡುವೆ ಯಾವೆಲ್ಲ ವಿಷಯಗಳ ಬಗ್ಗೆ ಚರ್ಚೆ ನಡೆದಿವೆ ಎಂಬುದನ್ನು ಉಲ್ಲೇಖಿಸಲಾಗಿದೆ ಇವುಗಳು ನಮ್ಮ ಜೀವನ ಶೈಲಿಗೆ ದಾರಿದೀಪವಾಗಿ ನಿಲ್ಲುತ್ತವೆ ಹಿಂದೂ ಧರ್ಮದಲ್ಲಿ ಮನುಷ್ಯನ ಜನ್ಮ ಸಾವು ಹಾಗೂ ಅಂತಿಮ ಸಂಸ್ಕಾರ ಹೀಗೆ ಇನ್ನು ಅನೇಕ ವಿಷಯಗಳ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ ಅಷ್ಟೇ ಅಲ್ಲದೆ ನಮ್ಮ ಜೀವನದಲ್ಲಿ ನಾವು ಏನೇ ಮಾಡಿದರು ಅದನ್ನ ಸರಿಯಾದ ದಾರಿಯಲ್ಲಿ ಮಾಡಬೇಕು ಕೆಟ್ಟ ದಾರಿಯನ್ನ ಹಿಡಿಯಬಾರದು ಎಂಬುದರ ಬಗ್ಗೆ ಕೂಡ ತಿಳಿಸಲಾಗಿದೆ.

ನಮಗೆಲ್ಲ ತಿಳಿದಿರುವಂತೆ ಗರುಡ ಒಂದು ಪಕ್ಷಿ ಇದು ವಿಷ್ಣುವಿನ ವಾಹನ ಕೂಡ ಹೌದು ವಿಷ್ಣು ಪುರಾಣದ ಒಂದು ಭಾಗವೇ ಗರುಡ ಪುರಾಣವಾಗಿದೆ ಈ ಗರುಡ ಪುರಾಣದಲ್ಲಿ ಮನುಷ್ಯ ಮಾಡುವ ಯಾವ ಕೆಲಸವೂ ಅವನ ಜೀವನದಲ್ಲಿ ದರಿದ್ರತೆಯನ್ನು ತರುತ್ತದೆ ಎಂದು ಹೇಳಲಾಗಿದೆ ಬರುವ ನಿಯಮಗಳನ್ನ ಮನುಷ್ಯನು ತನ್ನ ಜೀವನದಲ್ಲಿ ಪಾಲಿಸಿದ್ದೆ ಆದರೆ ಆತನು ಜೀವನದಲ್ಲಿ ಸುಖವಾಗಿ ನೆಮ್ಮದಿಯಾಗಿ ಇರುತ್ತಾನೆ ಮತ್ತು ಇಂತಹ ಮನುಷ್ಯರು ಮರಣದ ನಂತರ ಸ್ವರ್ಗಕ್ಕೆ ಹೋಗುತ್ತಾರೆ.

ಕೈತುಂಬ ಸಂಪಾದನೆ ಇದ್ದರೂ ಸಹ ಹಣದ ಕೊರತೆ ತುಂಬಾ ಜನರಿಗೆ ಇರುತ್ತದೆ ಇಂತಹ ಸಮಸ್ಯೆಗಳು ಬರಲು ಕಾರಣ ಮನುಷ್ಯನ ಕೆಟ್ಟ ಅಭ್ಯಾಸಗಳು ಎಂಬುದಾಗಿ ಗರುಡ ಪುರಾಣ ಹೇಳುತ್ತದೆ. ಗರುಡ ಪುರಾಣದಲ್ಲಿ ಮನುಷ್ಯನ 5 ಕೆಟ್ಟ ಅಭ್ಯಾಸಗಳ ಬಗ್ಗೆ ಶ್ರೀ ವಿಷ್ಣು ಹೇಳುತ್ತಾನೆ ಅವು ಯಾವವು ಎಂದರೆ ಮೊದಲನೇದಾಗಿ ಮನೆಯಲ್ಲಿ ಅಡುಗೆ ಮಾಡಿದ ನಂತರ ಅದನ್ನು ಮೊದಲು ದೇವರಿಗೆ ನೈವೇದ್ಯ ಮಾಡಬೇಕು ನೈವೇದ್ಯ ಮಾಡದೆ ತಾವು ಊಟ ಮಾಡುವುದು ಕೆಟ್ಟ ಅಭ್ಯಾಸ ಇದರಿಂದ ಮನೆಯಲ್ಲಿರುವ ಲಕ್ಷ್ಮಿ ಕೋಪಗೊಂಡು ಹೊರಗಡೆ ನಡೆಯುತ್ತಾಳೆ

ಹಾಗಾಗಿ ಮನೆಯಲ್ಲಿ ಮಾಡಿದ ಅಡುಗೆಯನ್ನು ಮೊದಲು ದೇವರಿಗೆ ಸಮರ್ಪಿಸಿ ನಂತರ ಎಲ್ಲರೂ ತಿನ್ನಬೇಕು ಹೀಗೆ ಮಾಡುವುದರಿಂದ ಮನೆಯಲ್ಲಿ ಅನ್ನಪೂರ್ಣೇಶ್ವರಿಯ ಆಶೀರ್ವಾದ ಸದಾ ಇರುತ್ತದೆ. ಆಗಿಯೇ ರಾತ್ರಿ ಮಲಗುವಾಗ ಎಂದಿಗೂ ಎಂಜಲು ತಟ್ಟೆ ಹಾಗೂ ಪಾತ್ರೆಯನ್ನು ತೊಳೆಯದೆ ಹಾಗೆ ಇಟ್ಟು ಮಲಗಬಾರದು ಹೀಗೆ ಮಾಡುವುದರಿಂದ ಶನಿಯ ಕೆಟ್ಟ ಪರಿಣಾಮಗಳನ್ನ ಎದುರಿಸಬೇಕಾಗುತ್ತದೆ ಆದ್ದರಿಂದ ರಾತ್ರಿ ಊಟ ಆದ ನಂತರ ಅಡುಗೆ ಮನೆಯನ್ನು ಸ್ವಚ್ಛ ಮಾಡಿ ಪಾತ್ರೆಯನ್ನೆಲ್ಲ ತೊಳೆದು ಮಲಗುವುದು ಉತ್ತಮ.

ಮನೆಯಲ್ಲಿ ಶಾಂತಿ ನೆಮ್ಮದಿ ಮತ್ತು ಧನಾತ್ಮಕತೆ ಹೆಚ್ಚಾಗಬೇಕು ಎಂದಾದರೆ ಆ ಮನೆಯಲ್ಲಿ ಧರ್ಮ ಗ್ರಂಥಗಳ ಪಠಣವಾಗಬೇಕು ರಾಮಾಯಣ ಮಹಾಭಾರತ ಹೀಗೆ ಅನೇಕ ಧರ್ಮ ಗ್ರಂಥಗಳನ್ನು ಮನೆಯಲ್ಲಿ ಓದುವುದರಿಂದ ನಕಾರಾತ್ಮಕತೆಯನ್ನು ದೂರ ಮಾಡಬಹುದು. ಇನ್ನು ಹಿಂದಿನ ಕಾಲದ ಜನರು ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಏಳು ವಂತಹ ಒಳ್ಳೆಯ ಹವ್ಯಾಸವನ್ನು ಹೊಂದಿದ್ದರು ಆದರೆ ಈಗ ಪ್ರತಿಯೊಬ್ಬರ ದಿನಾಚರಣೆ ಕೂಡ ಬದಲಾಗಿದೆ ರಾತ್ರಿ ತಡವಾಗಿ ಮಲಗಿ ಬೆಳಿಗ್ಗೆ ತಡವಾಗಿ ಹೇಳುವ ಜನರೇ ಹೆಚ್ಚಾಗಿ ಕಂಡು ಬರುತ್ತಾರೆ ಆದರೆ ಧರ್ಮ ಗ್ರಂಥವು ಇದೊಂದು ಕೆಟ್ಟ ಅಭ್ಯಾಸ ಎಂದು ತಿಳಿಸುತ್ತದೆ

ಇದು ನಿಮ್ಮ ಸಾಧನೆಗೆ ಹಿನ್ನಡೆಯನ್ನ ಕೊಡುತ್ತದೆ ಮತ್ತು ನಿಮ್ಮಲ್ಲಿ ಇರುವ ಆಲಸ್ಯತನವನ್ನ ಸೂಚಿಸುತ್ತದೆ. ಮುಂಜಾನೆ ದೇವರನ್ನ ಆರಾಧಿಸುವಂತಹ ಸಮಯ ಆದರಿಂದ ಪ್ರಾರ್ಥನೆ ಮಾಡುವ ಸಮಯದಲ್ಲಿ ಮನುಷ್ಯ ಮಲಗಿಕೊಂಡಿದ್ದರೆ ದೇವರು ಕೋಪಗೊಳ್ಳುತ್ತಾರೆ ಇದು ಜೀವನದಲ್ಲಿ ದರಿದ್ರತೆಗೆದಾರಿ ಮಾಡಿಕೊಡುತ್ತದೆ ಹಾಗಾಗಿ ಯಾವ ವ್ಯಕ್ತಿ ತಾನು ಮಾಡುವ ಕೆಲಸವನ್ನು ಶ್ರದ್ಧೆಯಿಂದ ಪ್ರೀತಿಯಿಂದ ಮಾಡುವುದಿಲ್ಲವೋ ಆತನ ಜೊತೆ ಲಕ್ಷ್ಮಿ ಎಂದಿಗೂ ಇರುವುದಿಲ್ಲ.

ಹಾಗೆಯೇ ಲಕ್ಷ್ಮಿ ದೇವಿಗೆ ಸ್ವಚ್ಛತೆ ಎಂದರೆ ತುಂಬಾ ಇಷ್ಟ ನೀವು ಕೊಳಕು ಬಟ್ಟೆ ಏನಾದರೂ ಸಹ ಲಕ್ಷ್ಮಿದೇವಿ ನಿಮ್ಮಿಂದ ದೂರ ಇರಬಹುದು ನೀವು ಕೊಳಕು ಬಟ್ಟೆ ಧರಿಸಿ ಲಕ್ಷ್ಮೀದೇವಿಯ ಧ್ಯಾನ ಮಾಡಿದರೆ ಆಕೆ ನಿಮಗೆ ಒಲಿಯುವುದಿಲ್ಲ ಆದ್ದರಿಂದ ಬೆಳಿಗ್ಗೆ ಸ್ನಾನ ಮಾಡಿದ ನಂತರ ಸ್ವಚ್ಛವಾದ ಬಟ್ಟೆಯನ್ನ ಧರಿಸಬೇಕು ಯಾರ ಮನೆಯಲ್ಲಿ ಸ್ವಚ್ಛತೆ ಇರುತ್ತದೆಯೋ ಅವರ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಎಂದು ಗರುಡ ಪುರಾಣದಲ್ಲಿ ತಿಳಿಸಲಾಗಿದೆ. ನಿಮ್ಮ ಬಟ್ಟೆಯ ಜೊತೆಗೆ ನೀವು ಮತ್ತು ನಿಮ್ಮ ಮನೆ ಕೂಡ ಸ್ವಚ್ಛವಾಗಿ ಇರಬೇಕು ಆಗ ಮಾತ್ರ ಧನಾತ್ಮಕ ಶಕ್ತಿ ನಿಮ್ಮ ಮನೆಗೆ ಪ್ರವೇಶ ಮಾಡುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: