WhatsApp Group Join Now
Telegram Group Join Now

Gemini Horoscope on September Month 2023: ಸಪ್ಟೆಂಬರ್ ತಿಂಗಳಿನಲ್ಲಿ ರವಿ ಗ್ರಹದ ಸ್ಥಾನ ಬದಲಾವಣೆ ಆಗುತ್ತದೆ. ಹೀಗೆ ಯಾವ ಯಾವ ಗ್ರಹಗಳ ಸ್ಥಾನ ಬದಲಾವಣೆಯಾಗುತ್ತದೆ ಈ ಬದಲಾವಣೆಯಿಂದ ಮಿಥುನ ರಾಶಿಯಲ್ಲಿ ಜನಿಸಿದವರ ಜೀವನದಲ್ಲಿ ಯಾವೆಲ್ಲಾ ಪರಿಣಾಮ ಬೀರುತ್ತದೆ. ಮಿಥುನ ರಾಶಿಯವರ ಗೋಚಾರ ಫಲ ಮಾಸ ಭವಿಷ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೋಡೋಣ.

ಸಪ್ಟೆಂಬರ್ ತಿಂಗಳಿನಲ್ಲಿ ಮಿಥುನ ರಾಶಿಯವರಿಗೆ ಕುಜ ಬಲ, ಗುರು ಬಲ ಅದೆ ರೀತಿಯಾಗಿ ಶುಕ್ರ ಬಲ, ರಾಹು ಬಲ ಇರುತ್ತದೆ. ಈ ರಾಶಿಯವರಿಗೆ ಈ ತಿಂಗಳಿನಲ್ಲಿ ಗ್ರಹಗಳ ಬೆಂಬಲ ಉತ್ತಮವಾಗಿ ಸಿಗಲಿದೆ ಇದರಿಂದ ಅತ್ಯಂತ ಶುಭ ಯೋಗ ಸಿಗಲಿದೆ. ಗುರು ಚಾಂಡಾಲ ಯೋಗದ ಶುಭ ಫಲದಿಂದ ಮಿಥುನ ರಾಶಿಯ ವಿದೇಶದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ವಿದೇಶದಿಂದ ಬಂಡವಾಳ ತರುವವರಿಗೆ ಸಪ್ಟೆಂಬರ್ ತಿಂಗಳು ಉತ್ತಮವಾಗಿದೆ ಉತ್ತಮ ಬೆಂಬಲ ದೊರೆಯುತ್ತದೆ. ವ್ಯಯಾಧಿಪತಿ ಶುಕ್ರ ಧನ ಸ್ಥಾನದಲ್ಲಿ ಇರುವುದರಿಂದ ಆದಾಯ ನಿರೀಕ್ಷೆ ಮಾಡಬಹುದು. ಕೆಲಸ ಕಾರ್ಯಗಳು ಯಶಸ್ಸಿನಿಂದ ನಡೆಯುತ್ತದೆ.

ರವಿ ನಾಲ್ಕನೆ ಮನೆಗೆ ಪ್ರವೇಶ ಮಾಡಿದ ನಂತರ ಮಿಥುನ ರಾಶಿಯವರಿಗೆ ಒಳ್ಳೆಯ ಫಲಗಳು ಲಭಿಸುತ್ತದೆ. ಒಳ್ಳೆಯ ಕೆಲಸ ಸಿಗುತ್ತದೆ, ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶ, ಇರುವ ಉದ್ಯೋಗದಲ್ಲಿ ಅಭಿವೃದ್ದಿ, ಮನಸ್ಸಿಗೆ ಸಂತಸದ ವಾತಾವರಣ ನಿರ್ಮಾಣವಾಗುತ್ತದೆ. ಗುರುವಿನ ನೇರ ದೃಷ್ಟಿ ಮಿಥುನ ರಾಶಿಯವರ ಮೇಲೆ ಇರುವುದರಿಂದ ಗರ್ಭಿಣಿ ಸ್ತ್ರೀಯರಿಗೆ ಒಳ್ಳೆಯ ಫಲ ಸಿಗುತ್ತದೆ ಜಾಗ್ರತೆ ವಹಿಸಬೇಕು ಆದರೆ ಭಯ ಪಡುವ ಅಗತ್ಯವಿಲ್ಲ.

ಈ ರಾಶಿಯ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಸಪ್ಟೆಂಬರ್ ತಿಂಗಳಿನಲ್ಲಿ ಲಾಭ ದೊರೆಯಲಿದೆ. ಶನಿ ಗ್ರಹದ ಸ್ಥಾನ ಬದಲಾವಣೆಯಿಂದ ಶುಭ ಫಲ ನಿಧಾನವಾಗಿ ದೊರೆಯುತ್ತದೆ. ಮಿಥುನ ರಾಶಿಯವರಿಗೆ ಪಿತ್ರಾರ್ಜಿತ ಆಸ್ತಿ ಸಿಗಬಹುದು, ಹೆಂಡತಿಯ ತವರು ಮನೆಯಿಂದ ಆಸ್ತಿಯು ಉಡುಗೊರೆಯಾಗಿ ಸಿಗುವ ಸಾಧ್ಯತೆ ಇದೆ. ಮಿಥುನ ರಾಶಿಯ ಸಂತಾನ ಬಯಸುವವರು ಈ ತಿಂಗಳಿನಲ್ಲಿ ಶುಭ ಫಲವನ್ನು ಪಡೆಯಬಹುದಾಗಿದೆ.

ಮಿಥುನ ರಾಶಿಯವರು ಸಪ್ಟೆಂಬರ್ ತಿಂಗಳಿನಲ್ಲಿ ಆರೋಗ್ಯದ ವಿಚಾರದಲ್ಲಿ ಬಹಳ ಜಾಗರೂಕರಾಗಿ ಇರಬೇಕು. ಹಿಂದಿನ ಕಾಲದಲ್ಲಿ ಸಾಂಕ್ರಾಮಿಕ ರೋಗ ಹರಡಿದರೆ ಮಾತ್ರ ಸಣ್ಣ ವಯಸ್ಸಿಗೆ ಸಾಯುತ್ತಿದ್ದರು ಆದರೆ ಈಗಿನ ದಿನಗಳಲ್ಲಿ ಚಿಕ್ಕ ವಯಸ್ಸಿನವರೂ ಸಹ ಸಾಯುತ್ತಿದ್ದಾರೆ ಇದಕ್ಕೆಲ್ಲ ಕಾರಣ ನಮ್ಮ ಜೀವನ ಶೈಲಿ ಪ್ರಕೃತಿಯನ್ನು ನಾಶ ಮಾಡಿದ್ದರಿಂದ ಇಂದು ಮನುಷ್ಯರ ಜೀವನ ನೀರಿನ ಮೇಲಿನ ಗುಳ್ಳೆಯಂತೆ ಆಗಿದೆ. ಮಿಥುನ ರಾಶಿಯ ಹಿರಿಯರ ಅನಾರೋಗ್ಯ ಸಪ್ಟೆಂಬರ್ ತಿಂಗಳಿನಲ್ಲಿ ನಿವಾರಣೆಯಾಗುವುದು. ಈ ರಾಶಿಯವರ ದಾಂಪತ್ಯ ಜೀವನದಲ್ಲಿ ಏಳಿಗೆ ಕಂಡುಬರುತ್ತದೆ. ಮಿಥುನ ರಾಶಿಯ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಮುನ್ನಡೆ ಕಂಡುಬರುತ್ತದೆ.

Gemini Horoscope on September Month 2023

ಈ ರಾಶಿಯ ಷೇರು ಮಾರುಕಟ್ಟೆ ಮೇಲೆ ಹಣ ಹೂಡಿಕೆ ಮಾಡುವವರಿಗೆ ಉತ್ತಮ ಲಾಭ ದೊರೆಯಲಿದೆ ಆದರೆ ಅದರ ಬಗ್ಗೆ ಸಂಪೂರ್ಣ ಜ್ಞಾನ ಇದ್ದಲ್ಲಿ ಹಣ ಹೂಡಿಕೆ ಮಾಡಬಹುದು. ವ್ಯಾಪಾರಿಗಳಿಗೆ ಲಾಭ ದೊರೆಯಲಿದೆ. ಮಿಥುನ ರಾಶಿಯವರು ದೈವ ನಾಮ ಸ್ಮರಣೆ ಮಾಡುವುದರಿಂದ ಇನ್ನೂ ಹೆಚ್ಚಿನ ಶುಭ ಫಲ ಪಡೆಯುತ್ತಾರೆ. ಮೃಗಶಿರಾ ನಕ್ಷತ್ರದ ಮೂರು ಮತ್ತು ನಾಲ್ಕನೆ ಪಾದದಲ್ಲಿ ಜನಿಸಿದವರು ಬಾಲ ಸುಬ್ರಹ್ಮಣ್ಯನ ಪೂಜೆಯನ್ನು ಮಾಡಿದರೆ ಒಳ್ಳೆಯದಾಗುತ್ತದೆ. ಆರಿದ್ರಾ ನಕ್ಷತ್ರದಲ್ಲಿ ಜನಿಸಿದವರು ಭೀಮೇಶ್ವರನ ಪೂಜೆಯನ್ನು ಮಾಡಬೇಕು ಹಾಗೆಯೆ ಪುನರ್ವಸು ನಕ್ಷತ್ರದಲ್ಲಿ ಜನಿಸಿದವರು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಇಷ್ಟ ದೇವರ ನಾಮ ಜಪವನ್ನು ಮಾಡಬೇಕು.

ಮಿಥುನ ರಾಶಯವರಾಗಿದ್ದು ನಕ್ಷತ್ರ ಗೊತ್ತಿಲ್ಲವೆಂದರೆ ಮೇಲೆ ತಿಳಿಸಿದ ಪರಿಹಾರವನ್ನು ಮಾಡಿಕೊಳ್ಳಬಹುದು ಹಾಗೂ ಪ್ರತಿ ಸೋಮವಾರ ಮತ್ತು ಶನಿವಾರದಂದು ಈಶ್ವರ ಗುಡಿಗೆ ಸಂಜೆಯ ಹೊತ್ತು ಯಥಾನುಶಕ್ತಿ ಹಾಲನ್ನು ಕೊಟ್ಟು ಪ್ರಾರ್ಥನೆ ಮಾಡುವುದರಿಂದ ಒಳ್ಳೆಯದಾಗುತ್ತದೆ. ಈ ಮಾಹಿತಿಯು ಗೋಚಾರ ಫಲವಾಗಿದ್ದು ರಾಶಿ ಫಲದ ಬಗ್ಗೆ ಅನುಮಾನವಿದ್ದಲ್ಲಿ ವಯಕ್ತಿಕ ಜಾತಕವನ್ನು ನುರಿತ ಜ್ಯೋತಿಷ್ಯರ ಬಳಿ ತೋರಿಸಿದರೆ ಹೆಚ್ಚಿನ ಮಾಹಿತಿ ದೊರೆಯುತ್ತದೆ.

ಒಟ್ಟಿನಲ್ಲಿ ಮಿಥುನ ರಾಶಿಯವರಿಗೆ ಹೆಚ್ಚಿನ ಶುಭಫಲಗಳು ಸೆಪ್ಟೆಂಬರ್ ತಿಂಗಳಿನಲ್ಲಿ ದೊರೆಯಲಿದ್ದು ದೈವರಾಧನೆ ಮಾಡುವ ಮೂಲಕ ಸಪ್ಟೆಂಬರ್ ತಿಂಗಳಿನಲ್ಲಿ ಹೆಚ್ಚಿನ ಸಂತಸದಿಂದ ಇರಬಹುದಾಗಿದೆ. ಈ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರಿಗೆ ಹಾಗೂ ಪರಿಚಯದವರಿಗೆ ತಿಳಿಸಿ ಮಿಥುನ ರಾಶಿಯವರು ಉಪಯೋಗವನ್ನು ಪಡೆದುಕೊಳ್ಳಲಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: