ಮೇಷ ರಾಶಿಯವರಿಗೆ ಈ ಸೆಪ್ಟೆಂಬರ್ ತಿಂಗಳು, ಲೈಫ್ ಚೇಂಜ್ ಟರ್ನಿಂಗ್ ಪಾಯಿಂಟ್ ಆಗುತ್ತಾ?

0

Aries Astrology September Month: ಈ ಸೆಪ್ಟೆಂಬರ್ ತಿಂಗಳಿನಲ್ಲಿ ಮೇಷ ರಾಶಿಯ ಫಲ ಹೇಗಿರುತ್ತದೆ ಎಂದು ಇಂದು ತಿಳಿಯೋಣ..ಮೊದಲಿಗೆ ಜಾತಕ ಕಟ್ಟ ನೋಡುವುದಾದರೆ, 1/9/2023, 10/9/2023, 19/9/2023, 19/9/2023, 28/9/2023.. ಈ ನಾಲ್ಕು ರಾಶಿ ಕುಂಡಲಿಯನ್ನು ನೋಡಿದರೆ ಈ ರಾಶಿಯವರಿಗೆ 80% ಚೆನ್ನಾಗಿರುತ್ತದೆ. ಅದು ಹೇಗೆ ಎಂದರೆ, ಮೇಷ ರಾಶಿಗೆ ಯೋಗ ತರುವ ಮೂರು ಗ್ರಹಗಳು. ಮೊದಲನೆಯದು ಗುರು, ಸೂರ್ಯ ಮತ್ತು ರಾಶಿಯ ಅಧಿಪತಿ ಮಂಗಳ ಗ್ರಹ.

ಈಗಾಗಲೇ ಗುರು ಮೇಷ ರಾಶಿಯಲ್ಲೇ ಇದ್ದಾನೆ, ಸೂರ್ಯ ಸೆಪ್ಟೆಂಬರ್ 19ರವರೆಗು ಸ್ವಂತ ಮನೆ ಅಂದರೆ ಸಿಂಹ ರಾಶಿಯಲ್ಲಿರುತ್ತಾನೆ. ಮಂಗಳ ಗ್ರಹ ಬುಧನ ಮನೆಯಲ್ಲಿದೆ. ಶನಿ ಮತ್ತು ಶುಕ್ರದಿಂದ ದೊಡ್ಡದಾಗಿ ಅದೃಷ್ಟ ಸಿಗುವುದಿಲ್ಲ, ಆದರೆ ಶನಿ 11ನೇ ಮನೆಯಲ್ಲಿರುವುದರಿಂದ ಒಳ್ಳೆಯದಾಗುತ್ತದೆ. 2 ಮತ್ತು 7ನೇ ಮನೆಯ ಅಧಿಪತಿ ಶುಕ್ರ ಕರ್ಕಾಟಕ ರಾಶಿಯಲ್ಲಿದ್ದಾನೆ. ಹಾಗಾಗಿ 80% ಈ ರಾಶಿಯವರಿಗೆ ಉತ್ತಮವಾಗಿದೆ.

ಈ ಸಮಯದಲ್ಲಿ ನಿಮಗೆ ಹಣಕಾಸಿನ ವಿಚಾರ ಅದ್ಭುತವಾಗಿರುತ್ತದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರುವರಿಗೆ ಭೂಮಿ ವಿಷಯದಲ್ಲಿ ಸಮಸ್ಯೆ ಇದ್ದರೆ, ಅದನ್ನು ಕೂತು ಮಾತನಾಡಿದರೆ ಸಾಕು ಸರಿ ಹೋಗುತ್ತದೆ. ಭೂಮಿ ವಿಚಾರಕ್ಕೆ ಸಂಬಂಧಿಸಿದ ಹಾಗೆ ಮನೆಯವರ ಜೊತೆಗೆ ತೊಂದರೆ ಇದ್ದರೆ, ಸ್ವಲ್ಪ ಕೂತು ಮಾತನಾಡಿದರು ಎಲ್ಲವೂ ಸರಿಹೋಗುತ್ತದೆ. ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ, ಹಲವು ರೀತಿಯ ಸ್ಕಾಲರ್ಶಿಪ್ ಗಳು ಸರ್ಕಾರದ ಕಡೆಯಿಂದ ಸಿಗಬಹುದು.

ಓದುವುದಕ್ಕೆ ಮಾತ್ರವಲ್ಲದೆ, ಸ್ಪೋರ್ಟ್ಸ್ ನಲ್ಲಿ ಇರುವವರಿಗೆ ಸ್ಪೋರ್ಟ್ಸ್ ಸ್ಕಾಲರ್ಶಿಪ್ ಕೂಡ ಸಿಗಬಹುದು. ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಮದುವೆ ಆಗದೆ ಇರುವವರು ಈ ತಿಂಗಳು ಮದುವೆಗೆ ಪ್ರಯತ್ನ ಮಾಡಬಹುದು. ಸಂತಾನ ಭಾಗ್ಯ ಕೂಡ ಇದೆ. 20% ತೊಂದರೆ ಎಂದರೆ, ನಿಮ್ಮ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು. ಪ್ರಯಾಣ ಮಾಡುವಾಗ ಅಪಘಾತ ಅಥವಾ ಇನ್ನಿತರ ಆರೋಗ್ಯ ಸಮಸ್ಯೆ ಉಂಟಾಗಬಹುದು. ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಆರೋಗ್ಯದಲ್ಲಿ ಹೆಚ್ಚಿನ ಸಮಸ್ಯೆಗಳು ಉಂಟಾಗಬಹುದು..ಫ್ರಾಕ್ಚರ್, ಸಣ್ಣ ಸರ್ಜರಿ ಉಂಟಾಗಬಹುದು.

ಈ ಸಮಸ್ಯೆಯಿಂದ ಪರಿಹಾರ ಪಡೆಯಲು, ಮೇಷ ರಾಶಿಯ ಅಧಿಪತಿ ಆಗಿರುವ ಮಂಗಳ ಗ್ರಹದ ಅಧಿದೇವತೆ ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನದಲ್ಲಿ ಅಭಿಷೇಕ, ಪೂಜೆ, ಅರ್ಚನೆ ಮಾಡಿಸಬಹುದು. ಅಣ್ಣತಮ್ಮಂದಿರ ವಯಸ್ಸಿನಲ್ಲಿ ಇರುವವರಿಗೆ ಅಗತ್ಯ ಇರುವಂಥ ವಸ್ತುಗಳನ್ನು ಕೊಡಿಸಿ. ಜೂಗಳಲ್ಲಿ ಹಾವುಗಳು ಅಥವಾ ನವಿಲುಗಳಿಗೆ ಡೊನೇಷನ್ ಕೊಡಿ. ಇದರಿಂದ ಎಲ್ಲವೂ ಒಳ್ಳೆಯದಾಗುತ್ತದೆ.

Leave A Reply

Your email address will not be published.

error: Content is protected !!
Footer code: